Asianet Suvarna News Asianet Suvarna News

Kannadathi :ಕನ್ನಡತಿಯಲ್ಲಿ ಕನ್ನಡದ ಮದುವೆ! ವೆಡ್ಡಿಂಗ್ ಪ್ಲಾನರ್ ವರೂ ಇದಕ್ಕೆ ರೆಡಿನಾ?

Kannadathi Serial News: ಕನ್ನಡತಿ ಸೀರಿಯಲ್‌ನಲ್ಲಿ ಹರ್ಷ ಭುವಿ ಮದುವೆ ಸಿದ್ಧತೆ ಜೋರಾಗಿ ನಡೀತಿದೆ. ಕನ್ನಡ ಮದ್ವೆ ಆಗೋಣ ಅಂತ ಭುವಿ ಹೇಳ್ತಿದ್ದಾಳೆ. ಇದಕ್ಕೆ ವರೂ ರೆಡಿ ಇದ್ದಾಳಾ, ಇನ್ನೊಂದು ಕಡೆ ಸಾನಿಯಾ ಮತ್ತು ಭುವಿ ನಡುವೆ ಚೆಸ್‌ ನಡೀತಿದೆ. ಭುವಿ ಸಾನಿಯಾನ ಸೋಲಿಸ್ತಾಳಾ?

Kannada marriage concept in Kannadathi serial
Author
Bengaluru, First Published May 21, 2022, 3:38 PM IST

ಕಲರ್ಸ್ ಕನ್ನಡ (Colors Kannada)ದ ಜನಪ್ರಿಯ ಧಾರಾವಾಹಿ 'ಕನ್ನಡತಿ'(Kannadathi)ಯಲ್ಲಿ ಮದುವೆ ಸಂಭ್ರಮ. ಭುವಿ ಹರ್ಷನ ಮದುವೆ ಪ್ರೀ ವೆಡ್ಡಿಂಗ್ ಶೂಟ್(Pre wedding shoot), ಲಗ್ನ ಪತ್ರಿಕೆ ಎಲ್ಲ ರೆಡಿ ಆಯ್ತು. ಈಗ ವೆಡ್ಡಿಂಗ್‌ ಪ್ಲಾನ್‌(Wedding Plan)ಗೆ ಬಂದು ನಿಂತಿದೆ. 'ಸಪ್ತಪದಿ' ಅನ್ನೋ ವೆಡ್ಡಿಂಗ್‌ ಪ್ಲಾನರ್ ಕಂಪನಿ ಒಡತಿ ವರೂಧಿನಿ(Varudhini) ಮದುವೆಯ ಕಾಂಸೆಪ್ಟ್ ಹಿಡಿದು ಹರ್ಷ ಭುವಿ(Harsha Bhuvi) ಮಧ್ಯೆ ನಿಂತಿದ್ದಾಳೆ. ಲೇಟೆಸ್ಟಾಗಿ ಟ್ರೆಂಡಲ್ಲಿರೋ ರಾಯಲ್ ವೆಡ್ಡಿಂಗ್ ಬಗ್ಗೆ ವರೂ ಹೇಳ್ತಿದ್ದಾಳೆ. ಮೈಸೂರು ಅರಸರ ಥೀಮ್ ವೆಡ್ಡಿಂಗ್, ನವಾಬ್ ವೆಡ್ಡಿಂಗ್, ಗ್ರೀನ್ ವೆಡ್ಡಿಂಗ್‌, ಆಸ್ಟ್ರೇಲಿಯನ್‌ ರೋಸ್‌ ಪೆಟಲ್ ವೆಡ್ಡಿಂಗ್ ಮೊದಲಾದ ವೆಡ್ಡಿಂಗ್ ಕಾಂಸೆಪ್ಟ್‌ಗಳನ್ನು ಮುಂದಿಡುತ್ತಾಳೆ. ಅದರಲ್ಲಿ ಒಂದನ್ನು ಹರ್ಷ ಭುವಿ ಆರಿಸ್ಕೊಳ್ಳಬೇಕು. ಭುವಿ ಆರಂಭದಲ್ಲಿ ಇದರ ಆಯ್ಕೆಯನ್ನು ಹರ್ಷನಿಗೆ ಬಿಟ್ಟರೂ ಕೊನೆಯಲ್ಲಿ ತನ್ನ ಕನಸಿನ ಮದುವೆ ಬಗ್ಗೆ ಹೇಳಿದ್ದಾಳೆ. ಅದು ಕನ್ನಡದ ಮದುವೆ ಆಗಿರಬೇಕು ಅಂತ ಹೇಳಿದ್ದಾಳೆ.

ಬ್ರಾ ಮಾತ್ರ ಹಾಕೋ, ನನ್ನನ್ನು ಆಶ್ಲೀಲವಾಗಿ ಯೂಟ್ಯೂಬ್‌ಗೆ ಬಳಸಿಕೊಳ್ಳುತ್ತಿದ್ದಾರೆ; ನಟಿ ಸ್ವಾತಿ ಆರೋಪ

ವರೂ ಈವರೆಗೆ ಕೇಳದ ಕಾಂಸೆಪ್ಟ್ ಈ ಕನ್ನಡದ ಮದುವೆ. ಆರಂಭದಲ್ಲಿ ಏನೂ ಅರ್ಥ ಆಗದಿದ್ದರೂ ಬಿಡಿಸಿ ಕೇಳಿದಾಗ ಹರ್ಷ ಈ ಕಾಂಸೆಪ್ಟ್ ಬಗ್ಗೆ ಹೇಳ್ತಾನೆ. ಏನಾದ್ರೂ ತಪ್ಪಿದ್ರೆ ಹೇಳಿ ಅಂತ ಭುವಿಯಲ್ಲಿ ಹೇಳಿ ತನ್ನ ವಿವರಣೆ ಶುರು ಮಾಡ್ತಾನೆ. ಅದು ಹೀಗಿದೆ -

'ಕನ್ನಡದಲ್ಲಿ ಮದುವೆ ಆಗೋದು ಅಂದರೆ ನಮ್ ಭಾಷೆಲಿ ನಮ್ಗೆ ಅರ್ಥ ಆಗೋ ಥರ ಮಂತ್ರ ಹೇಳೋದು, ಶಾಸ್ತ್ರನ ನಮ್ಗೆ ಅರ್ಥ ಆಗೋ ಥರ ಮಾಡೋದು. ನಾವೇನು ಮಾಡ್ತಿದ್ದೀವಿ ಅಂತ ನಮಗೆ ಅರ್ಥ ಆದರೆ ನಾವದನ್ನು ಮನಸ್ಸಿಟ್ಟು ಮಾಡ್ತೀವಿ ಅಲ್ವಾ?

ಮದುವೆ ಆದ್ಮೇಲೂ ಮದುವೆ ಮನೇಲಿ ಏನ್ ನಡೀತು ಅಂತ ಫೋಟೋ ನೋಡ್ದೇ 50 ವರ್ಷ ಆದ್ರೂ ನೆನಪಿರ್ಬೇಕು. ಹಾಗಾಗ್ಬೇಕು ಅಂದ್ರೆ ನಮ್ ಮದುವೆ ಕನ್ನಡದಲ್ಲಿ ನಡೀಬೇಕು, ಕನ್ನಡದಲ್ಲಿ ಮಾತ್ರ ನಡೀಬೇಕು. ಮದುವೆ ಫೋಟೋ ತುಂಬಿಸುವಷ್ಟು ಮೆಮೊರಿ ನಮ್ಮ ಫೋನಲ್ಲೇ ಇರುತ್ತೆ. ಆದರೆ ಮದುವೆಗೆ ಬಂದವರು ಎದುರು ಸಿಕ್ಕಾಗ ಗುರುತು ಹಿಡಿಯುವಷ್ಟು ಮೆಮೊರಿ ನಮಗಿಲ್ಲ. ನಮ್ಮ ಮದುವೆ ಪ್ರತಿಯೊಬ್ಬರ ಆತ್ಮೀಯ ಸೇರುವಿಕೆ ಆಗಬೇಕು.'

ಎಕ್ಸರ್‌ಸೈಜ್‌ ಮೂಲಕವೇ 25 ಕೆಜಿ ತೂಕ ಇಳಿಸಿದ ಗೀತಾ ಭಟ್, ಸಾವಿಗೀಡಾದ ಚೇತನಾ ಅಂಥವರಿಗೆ ಯಾಕೆ ಸ್ಫೂರ್ತಿ ಆಗಲ್ಲ?

ಇದು ಹರ್ಷ ಭುವಿ ಮದುವೆ ಕಾಂಸೆಪ್ಟ್. ಅಲ್ಲಿಗೆ ಎಂಗೇಜ್‌ಮೆಂಟ್‌ಅನ್ನು(Engagement) ಸರಳವಾಗಿ ಹಸಿರು ಹಿನ್ನೆಲೆಯಲ್ಲಿ ಹಸಿರುಪೇಟೆಯಲ್ಲಿ ಮಾಡಿರುವ ಈ ಜೋಡಿ ಮದುವೆಯನ್ನೂ ಅಷ್ಟೇ ವಿಭಿನ್ನವಾಗಿ ಮಾಡಿಕೊಳ್ತಾರಾ ಅನ್ನೋದು ಇದೀಗ ಕುತೂಹಲ ಮೂಡಿಸಿದೆ.

 

ಇನ್ನೊಂದು ಕಡೆ ಭುವಿ ಮತ್ತು ಸಾನಿಯಾ ಮತ್ತೊಂದು ವಿಚಾರಕ್ಕೆ ಮುಖಾಮುಖಿ ಆಗಿದ್ದಾರೆ. ಅದು ಮಾಲಾ ಕೆಫೆ (Mala caffe)ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಚೆನ್ನಾಗಿ ಕೆಲಸ ಮಾಡಿರುವ ಉದ್ಯೋಗಿಗಳನ್ನು ಗುರುತಿಸಿ ಅವರನ್ನು ಗೌರವಿಸಲು ರತ್ನಮಾಲಾ ಹೇಳ್ತಾರೆ. ಅದರಂತೆ ಮೂವರು ಈ ಗೌರವಕ್ಕೆ ಆಯ್ಕೆ ಆಗುತ್ತಾರೆ. ಅದರಲ್ಲಿ ಭುವಿಯೂ ಒಬ್ಬರು. ಇಲ್ಲಿ ಅವರ ಹೆಸರನ್ನು ಸೌಪರ್ಣಿಕಾ ನಂಜುಂಡ(Souparnika Nanjunda) ಎಂದೇ ಕರೆಯುತ್ತಾರೆ.

Kannadathi: ಭುವಿ ಅಮ್ಮಮ್ಮ ಮಧ್ಯೆ ಸಿಕ್ಕಾಕ್ಕೊಂಡ ಹರ್ಷನ್ನ ದೇವ್ರೇ ಕಾಪಾಡ್ಬೇಕು!

ಇದೊಂಥರ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತೆ. ಭುವಿಗೆ ಅವಾರ್ಡ್ ಕೊಡುವ ಮೊದಲು ತಾನು ಮಾತಾಡಲು ಹೊರಡುವ ಸಾನಿಯಾ ಮಾತಿನಲ್ಲೇ ಭುವಿಯನ್ನು ತಿವಿಯುತ್ತಾಳೆ, ಆಕೆಯನ್ನು ಕೆಳಕ್ಕಿಳಿಸುವಂಥಾ ಮಾತು ಹೇಳುತ್ತಾಳೆ. ತಾನು ಚೆಸ್‌ನಲ್ಲಿ ಭುವಿಯನ್ನು ಸೋಲಿಸಿದ್ದಾಗಿಯೂ ಹೇಳುತ್ತಾಳೆ. ಈ ಮೂಲಕ ಭುವಿ ಯಾವುದರಲ್ಲೂ ತನಗಿಂತ ಮೇಲಿಲ್ಲ, ತನ್ನ ಸರಿಸಮವಾಗಿ ನಿಲ್ಲುವ ಅರ್ಹತೆ ಅವಳಿಗಿಲ್ಲ ಅನ್ನೋ ಮಾತನ್ನು ಹೇಳುತ್ತಾಳೆ. ಇದು ಅಮ್ಮಮ್ಮನಿಗೆ ಸಿಟ್ಟು ತರಿಸಿದರೂ ಹರ್ಷ ಭುವಿಯ ಮೇಲಿರುವ ಈ ಸಣ್ಣ ಮಾತನ್ನು ಅಲ್ಲೇ ಸರಿ ಮಾಡಲು ನಿರ್ಧರಿಸುತ್ತಾನೆ. ಎಲ್ಲರ ಮುಂದೆ ಭುವಿ ಮತ್ತು ಸಾನಿಯಾ ಚೆಸ್ ಆಡಬೇಕು, ಇದರಲ್ಲಿ ಯಾರು ಸೋಲುತ್ತಾರೆ ಅಂತ ನೋಡ್ಬೇಕು ಅಂತ. ಇದೀಗ ಆಟಕ್ಕೆ ಇಬ್ಬರು ಆಟಗಾರ್ತಿಯರೂ ಎದುರು ಬದುರು ಕೂತಿದ್ದಾರೆ. ಇಡೀ ಆಫೀಸ್‌ನವರು ಇವರಿಬ್ಬರ ಮುಂದೆ ನಿಂತಿದ್ದಾರೆ. ಹರ್ಷ ಆಟಕ್ಕೆ ಮಜಾ ಬರಲಿ ಅಂತ 1 ರುಪಾಯಿ ಬೆಟ್‌ಅನ್ನೂ ಇಟ್ಟಿದ್ದಾನೆ. ಭುವಿ ಮೊದಲ ಕಾಯಿನ್ ಮೂವ್ ಮಾಡಿದ್ದಾಳೆ. ಇದರಲ್ಲಿ ಸಾನಿಯಾನ ಭುವಿ ಸೋಲಿಸ್ತಾಳಾ ಅನ್ನೋ ಕುತೂಹಲಕ್ಕೆ ಸೋಮವಾರ ಉತ್ತರ ಸಿಗಲಿದೆ.

Follow Us:
Download App:
  • android
  • ios