ಬ್ರಾ ಮಾತ್ರ ಹಾಕೋ, ನನ್ನನ್ನು ಆಶ್ಲೀಲವಾಗಿ ಯೂಟ್ಯೂಬ್‌ಗೆ ಬಳಸಿಕೊಳ್ಳುತ್ತಿದ್ದಾರೆ; ನಟಿ ಸ್ವಾತಿ ಆರೋಪ

ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ ಯೂಟ್ಯೂಬರ್ ಶ್ರೀಕಾಂತ್ ಮತ್ತು ಸ್ವಾತಿ ನಾಯ್ಡು ಕೇಸ್‌. ದೂರು ಸಲ್ಲಿಸಿ ಶಾಕಿಂಗ್ ಹೇಳಿಕೆ ಕೊಟ್ಟ ನಟಿ...

Youtuber Swathi Naidu files complaint against youtuber Srikanth vcs

ತೆಲುಗು ಜನಪ್ರಿಯ ಯೂಟ್ಯೂಬರ್ (Telugu Youtuber), ಮಾಜಿ ಬಿಗ್ ಬಾಸ್ ಸ್ಪರ್ಧಿ ಶ್ರೀಕಾಂತ್ ರೆಡ್ಡಿ (Srikanth Reddy) ವಿರುದ್ಧ ಮತ್ತೊಬ್ಬ ಮಾಜಿ ಬಿಗ್ ಬಾಸ್ ಸ್ಪರ್ಧಿ ಕರಾಟೆ ಕಲ್ಯಾಣಿ (Karate Kalyani) ತಿರುಗಿ ಬಿದ್ದಿದ್ದಾರೆ.  ರಸ್ತೆಯಲ್ಲಿ ಒಬ್ಬರನ್ನೊಬ್ಬರು ಹೊಡೆದಾಡಿಕೊಂಡು ಗುದ್ದಾಡಿರುವ ವಿಚಾರ ಬಿಗ್ ಹೆಡ್‌ಲೈನ್ಸ್‌ ಆಗಿತ್ತು. ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ ವಿಚಾರಣೆ ನಡೆಸಿ ಎಲ್ಲಾ ಕೂಲ್ ಅಗುತ್ತಿದೆ ಎನ್ನುವಷ್ಟರಲ್ಲಿ ಶ್ವಾತಿ ನಾಯ್ಡು (Swathi Naidu) ಎಂಟ್ರಿ ಕೊಟ್ಟಿದ್ದಾರೆ.

ಹೌದು! ಶ್ರೀಕಾಂತ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಹೆಣ್ಣು ಮಕ್ಕಳ ಮೇಲೆ ಪ್ರ್ಯಾಂಕ್ (Prank) ಮಾಡಲಾಗುತ್ತದೆ. ಹೆಣ್ಣು ಮಕ್ಕಳನ್ನು ಫೂಲ್ ಮಾಡಿ ಕೋಟಿಯಲ್ಲಿ ವೀಕ್ಷಣೆ ಪಡೆದುಕೊಂಡು ಹಣ ಮಾಡುತ್ತಿರುವುದು ತಪ್ಪು ಎಂದು ಕರಾಟೆ ಕಲ್ಯಾಣಿ ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಶ್ರೀಕಾಂತ್‌ ಜೊತೆ ಚರ್ಚೆ ಮಾಡಲು ಅವರ ನಿವಾಸಕ್ಕೆ ತೆರಳಿದ್ದಾರೆ. ಆದರೆ ಅಲ್ಲಿ ನಡೆದ ಕಥೆನೇ ಬೇರೆ. ಶ್ರೀಕಾಂತ್ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಹಣ ಕೊಟ್ಟು ಒಂದು ದಿನ ಸಹಕರಿಸು ಎಂದು ಹೇಳಿದ್ದಾನೆ ಎಂದು ಕರಾಟೆ ಕಲ್ಯಾಣಿ ಹೇಳಿದ್ದಾರೆ. ಅಷ್ಟರಲ್ಲಿ ಶ್ರೀಕಾಂತ್ ಪೊಲೀಸ್‌ ಠಾಣೆಗೆ ತೆರಳಿ ಕಲ್ಯಾಣಿ ಮತ್ತು ತಂಡ ನನಗೆ ವಿಡಿಯೋ ಮಾಡುವುದನ್ನು ನಿಲ್ಲಿಸು ಇಲ್ಲವಾದರೆ ನನಗೆ ಇಷ್ಟು ಹಣ ಕೊಡಬೇಕು ಎಂದು ಡಿಮ್ಯಾಂಡ್ ಮಾಡಿದ್ದರು ಎಂದು ದೂರು ಸಲ್ಲಿಸಿದ್ದಾರೆ. ನಾನು ನಿರಾಕರಿಸಿದಕ್ಕೆ ಅವರ ತಂಡ ನನ್ನ ಮೇಲೆ ಹಲ್ಲೆ ಮಾಡಿತ್ತು ಎಂದು ದೂರು ಸಲ್ಲಿಸಿದ್ದಾರೆ.

Youtuber Swathi Naidu files complaint against youtuber Srikanth vcs

ಇವರಿಬ್ಬರ ಜಗಳ ಜೋರಾಗುತ್ತಿದ್ದಂತೆ ನಟಿ ಕಮ್ ಯೂಟ್ಯೂಬರ್ ಸ್ವಾತಿ ನಾಯ್ಡು ಎಂಟ್ರಿ ಕೊಟ್ಟಿದ್ದಾರೆ. ಶ್ರೀಕಾಂತ್‌ ಮತ್ತು ಅವರ ಯೂಟ್ಯೂಬ್ ತಂಡದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 

ಕೋಲ್ಕತ್ತಾದ ಫೇಕ್‌ ಕಾಲ್‌ ಸೆಂಟರ್‌ ಮುಚ್ಚಿಸಿದ ಅಮೆರಿಕಾದ ಯೂಟ್ಯೂಬರ್ ಮಾರ್ಕ್ ರಾಬರ್: ಹೇಗಿತ್ತು ಕಾರ್ಯಾಚರಣೆ?

ಸ್ವಾತಿ ಹೇಳಿಕೆ:

'ನನ್ನನ್ನು ಅಶ್ಲೀಲವಾಗಿ ಕೆಲವೊಂದು ಯೂಟ್ಯೂಬ್‌ ಚಾನೆಲ್‌ಗಳು ಬಳಸಿಕೊಂಡು ವೀವ್ಸ್‌ ಪಡೆದುಕೊಂಡಿದ್ದಾರೆ. ಎಕ್ಸ್‌ಪೋಸ್‌ ಮಾಡು, ಆ ಡ್ರೆಸ್‌ ಹಾಕಿಕೋ ಇದು ಬೇಡ ಶಾರ್ಟ್ಸ್ ಹಾಕಿಕೋ ಬ್ರಾ ಹಾಕೋ ಎಂದೆಲ್ಲಾ ಹೇಳಿ ಎಪಿಕ್ ಮೀಡಿಯಾದವರು, ಯೂಟ್ಯೂಬರ್ ವೆಂಕಟ್‌ ಎಲ್ಲ ನನ್ನನ್ನು ಬಳಸಿಕೊಂಡರು. ಇನ್ನೂ ಶ್ರೀಕಾಂತ್ ಏನೂ ಕಡಿಮೆ ಇಲ್ಲ ಅವರು ಕೂಡ ನನ್ನನ್ನು ಬಳಸಿಕೊಂಡಿದ್ದಾರೆ. ಆತ ನನನ್ನು ಹಗ್ (Hug) ಮಾಡುವುದು, ಕಿಸ್ (Kiss) ಮಾಡುವುದು ಎಲ್ಲವನ್ನೂ ಮಾಡಿದ್ದಾನೆ. ಇದೆಲ್ಲಾ ಚಾನೆಲ್‌ಗೆ ಅಲ್ವಾ ಎಂದು ನಾನು ಮಾಡಿದೆ. ನನ್ನನ್ನು ಚೆನ್ನಾಗಿ ಬಳಸಿಕೊಂಡು ಕೊನೆಗೆ ನನ್ನ ವಿರುದ್ಧವೇ ಮಾತನಾಡುತ್ತಿದ್ದಾರೆ' ಎಂದು ಸ್ವಾತಿ ಹೇಳಿರುವುದಾಗಿ ಖಾಸಗಿ ವೆಬ್ ವರದಿ ಮಾಡಿದೆ.

ವಿಡಿಯೋಗಾಗಿ ವಿಮಾನ ಅಪಘಾತಕ್ಕೀಡು ಮಾಡಿದ ಯೂಟ್ಯೂಬರ್

'ಶ್ರೀಕಾಂತ್ ಮತ್ತು ತಂಡ ನನ್ನನ್ನು ಬೇಕಾದಂತೆ ಬಳಸಿಕೊಂಡಿದೆ. ಸಾವಿರ, ಐದು ಸಾವಿರ ಹಣವನ್ನುಷ್ಟೆ ಅವರು ನನಗೆ ಕೊಡುತ್ತಿದ್ದರು. ಹಣದ ವಿಚಾರದಲ್ಲಿ ಮೋಸ ಮಾಡಿದ್ದಾರೆ. ಆದರೆ ಕೊನೆಗೆ ನನ್ನ ಕರಿಬೇವಿನ ರೀತಿ ಪಕ್ಕಕ್ಕೆ ಬಿಸಾಡಿದರು. ನನ್ನಿಂದ ಉಪಯೋಗವಿಲ್ಲ ಎಂದಮೇಲೆ ನನ್ನಿಂದ ವಿಡಿಯೋ ಯಾಕೆ ಮಾಡಿಸಿಕೊಂಡಿದ್ದು? ನನ್ನ ವಿಡಿಯೋಗಳನ್ನು ನಿಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಏಕೆ ಹಾಗೆ ಬಿಟ್ಟಿದ್ದೀರಿ? ಅದನ್ನು ಡಿಲೀಟ್ ಮಾಡಬೇಕು' ಎಂದಿದ್ದಾರೆ ಸ್ವಾತಿ.

Latest Videos
Follow Us:
Download App:
  • android
  • ios