Actress Saathvika: ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿರುವ ಸಾತ್ವಿಕಾ ಅವರು ತಂದೆ ಓಂ ಪ್ರಕಾಶ್‌ ರಾವ್‌ ಹಾಗೂ ತಾಯಿ ರೇಖಾ ದಾಸ್‌ ಅವರನ್ನು ಒಂದು ಮಾಡಬೇಕು ಎಂದು ಯೋಚಿಸಿದ್ದರಂತೆ. ಈ ಬಗ್ಗೆ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.

Actress Saathvika Father: ಅಪ್ಪ-ಅಮ್ಮನ ಪ್ರೀತಿ ಪ್ರತಿಯೊಬ್ಬ ಮಗುವಿನ ಹಕ್ಕು. ಆದರೆ, ಕೆಲವರಿಗೆ ಈ ಪ್ರೀತಿ ಸಿಗದೇ ಹೋದರೆ ಅವರ ಜೀವನ ಎಷ್ಟೊಂದು ಕಷ್ಟವಾಗುತ್ತದೆ ಎಂಬುವುದಕ್ಕೆ ಕನ್ನಡ ನಟಿ ಸಾತ್ವಿಕಾ ಅವರ ಕಥೆ ಬೆಸ್ಟ್ ಎಕ್ಸಾಂಪಲ್. ಸ್ಯಾಂಡಲ್‌ವುಡ್ ನಟಿ ಸಾತ್ವಿಕಾ ಇತ್ತೀಚಿನ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿರುವ ಮಾತುಗಳು ಎಲ್ಲರನ್ನೂ ಭಾವುಕರನ್ನಾಗಿಸುತ್ತದೆ.

ಅಪ್ಪ-ಅಮ್ಮ ಬದುಕಿದ್ದರೂ ಅನಾಥೆ

"ಅಪ್ಪ-ಅಮ್ಮ ಬದುಕಿದ್ದರೂ ನಾನು ಅನಾಥೆಯಂತೆ ಬಾಳಿದ್ದೇನೆ. ನನಗೆ ಚಿಕ್ಕ ವಯಸ್ಸಿನಲ್ಲೇ ಅಪ್ಪ-ಅಮ್ಮನ ಪ್ರೀತಿ ಸಿಗಲಿಲ್ಲ. ಇಬ್ಬರೂ ಬೇರೆ ಬೇರೆಯಾಗಿದ್ದರು. ಇದರಿಂದಾಗಿ ನಾನು ತುಂಬಾ ನೊಂದಿದ್ದೇನೆ" ಎಂದು ಸಾತ್ವಿಕಾ ಸಂದರ್ಶನದಲ್ಲಿ ಹೇಳಿದ್ದಾರೆ.

ಆತ್ಮ*ಹತ್ಯೆ ಯೋಚನೆ

ಜೀವನದ ಕಷ್ಟಗಳನ್ನು ಎದುರಿಸಲಾಗದೇ ಸಾತ್ವಿಕಾ ಅವರಿಗೆ ಹಲವು ಬಾರಿ ಆತ್ಮ*ಹತ್ಯೆ ಯೋಚನೆ ಬಂದಿವೆಯಂತೆ. "ಜೀವನವೇ ಸಾಕಾಗಿದೆ ಅನಿಸಿತ್ತು. ಎಷ್ಟೋ ಬಾರಿ ಸಾಯಬೇಕು ಅನ್ನೋ ಥಾಟ್ಸ್ ಬಂದಿತ್ತು. ಆದರೆ, ನನ್ನಲ್ಲಿರುವ ಧೈರ್ಯ ನನ್ನನ್ನು ಬದುಕಿಸಿದೆ" ಎಂದು ಅವರು ಕಣ್ಣೀರು ಹಾಕುತ್ತಾ ಹೇಳಿದ್ದಾರೆ.

ಸ್ವಯಂ ಪ್ರೀತಿಯಿಂದ ಬದಲಾದ ಜೀವನ

ಕಷ್ಟಗಳ ನಡುವೆಯೂ ಸಾತ್ವಿಕಾ ತಮ್ಮನ್ನು ತಾವು ಪ್ರೀತಿಸಲು ಕಲಿತ್ತಿದ್ದಾರೆ. "ಇವತ್ತು ನನಗೆ ಯಾರು ಬೇಕಾಗಿಲ್ಲ. ಐ ಜಸ್ಟ್ ಲವ್ ಮೈಸೆಲ್ಫ್. ನಾನು ನನ್ನನ್ನು ತುಂಬಾ ಪ್ರೀತಿ ಮಾಡ್ತೀನಿ. ಅದೊಂದೇ ನನ್ನನ್ನು ಬದುಕಿಸಿದೆ" ಎಂದು ಸಾತ್ವಿಕಾ ಹೇಳಿದ್ದಾರೆ.

ಮೆಚುರಿಟಿಯಿಂದ ಬದಲಾದ ನಿರ್ಧಾರ

ಸಾತ್ವಿಕಾ ತಮ್ಮ ಅಪ್ಪ-ಅಮ್ಮ ಒಂದಾಗಲಿ ಎಂದು ಚಿಕ್ಕ ವಯಸ್ಸಿನಲ್ಲಿ ತುಂಬಾ ಬಯಸಿದ್ದರು. ಆದರೆ, ಮೆಚುರಿಟಿ ಬಂದ ನಂತರ ಅವರ ನಿರ್ಧಾರ ಬದಲಾಗಿದೆ. "ಅವರಿಗೆ ಮೆಚುರಿಟಿ ಇರ್ಲಿಲ್ಲ. ಆದರೆ, ನನಗಂತೂ ಅಷ್ಟು ಮೆಚುರಿಟಿ ಇದೆ ದಟ್ ಫ್ಯಾಮಿಲಿಸ್ ನ ಬ್ರೇಕ್ ಮಾಡಬಾರದು. ಅದಕ್ಕೆ ನಾನು ಈಗ ಅದರ ಬಗ್ಗೆ ಯೋಚನೆ ಮಾಡಲ್ಲ" ಎಂದು ಅವರು ಹೇಳಿದ್ದಾರೆ.

ಅಪ್ಪ-ಅಮ್ಮ ಬದುಕಿದ್ದರೂ ಅನಾಥೆಯಂತೆ ಬಾಳಿದ ಸಾತ್ವಿಕಾ ಅವರ ಕಥೆ ಪ್ರತಿಯೊಬ್ಬರಿಗೂ ಸ್ಪೂರ್ತಿ ನೀಡುವಂತಿದೆ. ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ, ನಮಗೆ ನಾವೇ ಧೈರ್ಯ ನೀಡಬೇಕು. ಸ್ವಯಂ ಪ್ರೀತಿಯಿಂದ ಜೀವನವನ್ನು ಸುಂದರವಾಗಿಸಬಹುದು ಎಂಬುದಕ್ಕೆ ಇವರ ಕಥೆ ಬೆಸ್ಟ್ ಎಕ್ಸಾಂಪಲ್.