Asianet Suvarna News Asianet Suvarna News

ನನ್ನ ಮಗುವಿಗೋಸ್ಕರ ಬದುಕಬೇಕು; ಡಿಪ್ರೆಶನ್‌ಗೆ ಜಾರಿದ ನಟಿ ಪ್ರಥಮ್ ಪ್ರಸಾದ್ ಕಿವಿ ಮಾತು

ತಮಾಷೆ ಮಾಡಬೇಡಿ ಡಿಪ್ರೆಶನ್ ಇರುವವರಿಗೆ ಸಹಾಯ ಮಾಡಿ ಎಂದು ಕಿವಿ ಮಾತು ಹೇಳಿದ ಪ್ರಥಮಾ ಪ್ರಸಾದ್. ಸರಿಯಾದ ಸಮಯಕ್ಕೆ ತಾಯಿ ಕೊಟ್ಟ ಸಾಥ್...
 

Kannada actress Prathama Prasad talk about Depression vcs
Author
First Published Jan 3, 2023, 11:30 AM IST

ಕನ್ನಡ ಚಿತ್ರರಂಗ ಅದ್ಭುತ ನಟಿ ವಿನಯ ಪ್ರಸಾದ್ ಅವರ ಪುತ್ರಿ ಪ್ರಥಮಾ ಪ್ರಸಾದ್ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ನೃತ್ಯ ಕಲಾವಿದೆ ಆಗಿರುವ ಪ್ರಥಮಾ ಡಿಪ್ರೆಶನ್‌ಗೆ ಜಾರಿದಾಗ ಸರಿಯಾದ ಸಮಯಕ್ಕೆ ಸಹಾಯಕ್ಕೆ ನಿಂತವರು ತಾಯಿ ವಿನಯ. ಹೀಗಾಗಿ ಡಿಪ್ರೆಶನ್‌ಗೆ ಜಾರಿದವರ ಬಗ್ಗೆ ಹಾಸ್ಯ ಮಾಡದೆ ಅವರಿಗೆ ಸರಿಯಾದ ಚಿಕಿತ್ಸೆ ಸೂಚಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. 

'ನಾನು ತುಂಬಾ ಓಪನ್ ಆಗಿ ಹೇಳಿಕೊಳ್ಳುವೆ ನಾನು ಡಿಪ್ರೆಶನ್ ಸರ್ವೈವರ್. ತುಂಬಾ ಗಂಭೀರವಾಗಿ ತುಂಬಾ ಕೆಟ್ಟ ಮಟ್ಟಕ್ಕೆ ಡಿಪ್ರೆಶನ್‌ಗೆ ಜಾರಿ ಜೀವನನೇ ಬೇಡ ಜೀವನೂ ಬೇಡ ಅಂತೆಲ್ಲಾ ಆಗಿದೆ. ಒಂದು ವಿಚಾರ ಏನೆಂದರೆ ಸರಿಯಾದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕಿದೆ. ಆ ಕಾರಣಕ್ಕೆ ಏನೇ ಬರಲಿ ನಾನು ಮುನ್ನುಗಿ ಹೋಗುತ್ತೀನಿ ಅನ್ನೋ ಧೈರ್ಯವಿದೆ. ನನಗೆ ಸ್ಪೂರ್ತಿ ತುಂಬುವವರು ಚೇತನ ತುಂಬುವವರು ಸರಿಯಾದ ಸಮಯದಲ್ಲಿ ಸರಿ ಚಿಕಿತ್ಸೆ ಕೊಡಿಸಿದವರು ನನ್ನ ತಾಯಿ. ನನ್ನ ತಾಯಿ ಎಲ್ಲನೂ ನೋಡಿದ್ದಾರೆ.' ಎಂದು ನಟ ಕಮ್ ನಿರ್ದೇಶಕ ರಘುರಾಮ್‌ ಯೂಟ್ಯೂಬ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Kannada actress Prathama Prasad talk about Depression vcs

'ಬಾಲ್ಯದಿಂದ ನಾನು ಇರುವುದು ಹೀಗೆ ಎಲ್ಲಾನೂ ನುಂಗಿಕೊಂಡು ನಗು ಮುಖದಲ್ಲಿ ಇರುತ್ತಿದ್ದೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ನಿರ್ಲಕ್ಷ್ಯ ಮಾಡಿರುವ ಸಮಸ್ಯೆ ಅಂದ್ರೆ ಅದು ಡಿಪ್ರೆಶನ್. ಜನರಿಗೆ ಇದು ಅರ್ಥ ಆಗುವುದಿಲ್ಲ ಅವಳಿಗೆ ಏನು ಕಡಿಮೆ ಆಗಿದೆ ಎಲ್ಲನೂ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ. ಮಕ್ಕಳಿಗೂ ಡಿಪ್ರೆಶನ್ ಬರುತ್ತೆ ಅದನ್ನ ಸರಿಯಾದ ಸಮಯಕ್ಕೆ ಯಾಕೆ ಈ ರೀತಿ ಅಗಿದೆ ಎಂದು ಗುರುತಿಸಿ ಚಿಕಿತ್ಸೆ ಕೊಡಿಸಬೇಕು. ಬಹಳ ವರ್ಷಗಳ ಕಾಲ ನನ್ನೊಳಗಿನ ವಿಚಾರಗಳನ್ನು ಹಿಡಿದಿಟ್ಟುಕೊಂಡು ಒಂದೇ ಸತಿ ಬರ್ಸ್ಟ್‌ ಆಗಿ ಪೋಸ್ಟ್ ಪಾರ್ಟಮ್ ಡಿಪ್ರೆಶನ್ ಎಲ್ಲಾ ಸೇರಿಕೊಂಡು ಕೆಟ್ಟ ಮಟ್ಟದಲ್ಲಿ ಬ್ಲಾಸ್ಟ್‌ ಆಗಿತ್ತು.' ಎಂದು ಪ್ರಥಮಾ ಹೇಳಿದ್ದಾರೆ.

ಅಬ್ಬಬ್ಬಾ, ವಿನಯಾ ಪ್ರಸಾದ್ ಮಗಳು ನೀವಂದುಕೊಂಡ ಹಾಗಲ್ಲ!

'ತಾಯಿತನ ಅಂತ ಬಂದಾಗ ನಮ್ಮ ದೇಹವಾಗಲಿ ಮನಸ್ಸಾಗಲಿ ನಮ್ಮ ಮೆದುಳು ನಮ್ಮ ಕಂಟ್ರೋಲ್‌ನಲ್ಲಿ ಇರುವುದಿಲ್ಲ. ನನಗೆ ಚಾಲೆಂಜಿಂಗ್ ಡೆಲಿವರಿ ಆಗಿದ್ದ ಕಾರಣ ಇನ್ನೂ ಕಷ್ಟ ಅಯ್ತು. ನನ್ನ ಸುತ್ತ ಜನರು ಇರುತ್ತಿದ್ದರು ಮನೆಯಲ್ಲಿ ಸದಾ ಜನರು ಇರುತ್ತಿದ್ದರು ಆದರೂ ಹೇಗೆ ಟ್ರಿಗರ್ ಆಯ್ತು ಏನೂ ನನಗೆ ಗೊತ್ತಿಲ್ಲ ಆದರೆ ಪರಿಣಾಮ ಹೆಚ್ಚಿತ್ತು. ಸರಿಯಾಗಿ ಚಿಕಿತ್ಸೆ ಕೊಡಿಸಿದ್ದರು. ಇವತ್ತಿನವರೆಗೂ ನನಗೆ ಡಿಪ್ರೆಶನ್‌ ಕಾಡುತ್ತದೆ anxity ಬರುತ್ತೆ ಹೇಗೆ ಅಂದ್ರೆ ಕೈ ಕಾಲುಗಳು ನಡುಕ ಬರುತ್ತದೆ. ಆದರಿಂದ ಹೇಗೆ ಹೊರ ಬರಬೇಕು? ಈ ವಿಚಾರನ ನನ್ನ ಮನಸ್ಸಿನಿಂದ ತೆಗೆದಿರುವ ಏಕೆಂದರೆ ಇದು auto pilot mode. ನನ್ನ ಮಗುವಿಗೋಸ್ಕರ ನಾನು ಇರಬೇಕು ಡಿಪ್ರೆಶನ್‌ಗೆ ತುತ್ತಾಗುವುದಕ್ಕೆ ಸಾಧ್ಯವಿಲ್ಲ. ನನ್ನ ತಂದೆ ಅವರು ನನ್ನನ್ನು ಬಿಟ್ಟು ಹೋಗಿದ್ದು ನಮ್ಮ ಇಡೀ ಜೀವನ ಬಿಟ್ಟು ಹೋಗಿದ್ದು ಎಷ್ಟ ಮಟ್ಟಕ್ಕೆ ನೋವಿದೆ ಅಂದರೆ ಆ ನೋವು ಈಗಲೂ ಕಾಡುತ್ತದೆ. ತಾಯಿ ಆಗಲಿ ತಂದೆ ಆಗಲಿ ಅವರ ಮಕ್ಕಳನ್ನು ಈ ಪರಿಸ್ಥಿತಿಯಲ್ಲಿ ಬಿಡಬಾರದು. ಕೈ- ಕಾಲು ಮುರಿದುಕೊಂಡಿರುವ ಡಿಪ್ರೆಶನ್ ಎದುರಿಸಿರುವೆ ಏನ್ ಏನೋ ಆಗಿದೆ ಆದರೆ ನನ್ನ ತಲೆಯಲ್ಲಿ ಇರುವುದು ಒಂದೇ ವಿಚಾರ ದೇವರೇ ನನ್ನನ್ನು ಬದುಕಿಸು. ಯಾವ ಪರಿಸ್ಥಿತಿಯಲ್ಲಿ ಬೇಕಿದ್ದರು ಬಿಡು ಆದರೆ ನನ್ನನ್ನು ಬದುಕಿಸು ನನ್ನ ಮಗುವಿಗಾಗಿ ನಾನು ಇರಬೇಕು.' ಎಂದಿದ್ದಾರೆ ಪ್ರಥಮಾ ಪ್ರಸಾದ್.

'ಡಿಪ್ರೆಶನ್ ಅನ್ನೋದು ಕಾಯಿಲೆ ಅಲ್ಲ ಒಂದು ಮನಸ್ಥಿತಿ ಅದನ್ನು ವೀಕ್‌ನೆಸ್‌ ಅಂತಾನೂ ನಾನು ಹೇಳುವುದಿಲ್ಲ ಯಾರಿಗಾದ್ದರೂ ಈ ಪರಿಸ್ಥಿತಿ ಬಂದರೆ  ಸಹಾಯ ಮಾಡಿ ತಮಾಷೆ ಮಾಡಬೇಡಿ ಅವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಿ' ಎಂದು ಮನವಿ ಮಾಡಿಕೊಂಡಿದ್ದಾರೆ.
 

Follow Us:
Download App:
  • android
  • ios