ಅಬ್ಬಬ್ಬಾ, ವಿನಯಾ ಪ್ರಸಾದ್ ಮಗಳು ನೀವಂದುಕೊಂಡ ಹಾಗಲ್ಲ!
ಸಾಕಷ್ಟು ಸಿನಿಮಾ ಸೀರಿಯಲ್‌ಗಳಲ್ಲಿ ನಟಿಸಿ ಹೆಸರು ಮಾಡಿದವರು ನಟಿ ವಿನಯಾ ಪ್ರಸಾದ್. ಅವರು ಈಗಲೂ 'ಪಾರು' ಸೀರಿಯಲ್‌ನಲ್ಲಿ ಪ್ರಮುಖವಾದ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ವಿನಯಾ ಅವರ ಏಕೈಕ ಪುತ್ರಿ ಪ್ರಥಮಾ ಪ್ರಸಾದ್.'ಒಲವಿನ ನಿಲ್ದಾಣ' ಸೀರಿಯಲ್‌ನಲ್ಲಿ ನಾಯಕಿ ತಾರಿಣಿಯ ಪ್ರೀತಿಯ ಅತ್ತೆ. ಆದರೆ ಈಕೆ ನೀವಂದುಕೊಂಡ ಹಾಗಲ್ವೇ ಅಲ್ಲ.
ನಟಿ ವಿನಯಾ ಪ್ರಸಾದ್ ಮಗಳು ಪ್ರಥಮಾ ಪ್ರಸಾದ್. ಹೆಚ್ಚಿನವರಿಗೆ ತಿಳಿಯದ ಸತ್ಯ ಏನು ಅಂದರೆ ವಿನಯಾ ಪ್ರಸಾದ್ ಅವರು ನಾಯಕಿಯಾಗಿ ಪ್ರಸಿದ್ಧಿಗೆ ಬಂದದ್ದು ಮಗಳು ಪ್ರಥಮಾ ಪ್ರಸಾದ್ ಹುಟ್ಟಿದ ಮೇಲೆಯೇ. ಒಂದು ಹಂತದಲ್ಲಿ ವಿನಯಾ ಅವರ ಮೇಲೆ ಮಗಳ ವಿಚಾರ ಬಚ್ಚಿಡುವಂತೆ ಒತ್ತಡ ಬಂದಂತೆ. ಆಗ ವಿನಯಾ ಅವರು, ಬೇಕಿದ್ದರೆ ಸಿನಿಮಾ ಬಿಡುತ್ತೇನೆ, ನನ್ನ ಮಗಳನ್ನು ಮಗಳಲ್ಲ ಅಂತ ಹೇಳೋ ಪ್ರಮೇಯವೇ ಇಲ್ಲ ಅಂತ ನೇರವಾಗಿ ಹೇಳಿದರಂತೆ. ಹಾಗೆ ನೋಡಿದರೆ ಬೇರೆಲ್ಲಾ ನಟಿಯರು ಮಕ್ಕಳಾದ ಮೇಲೆ ಸಿನಿಮಾ ರಂಗ ತೊರೆಯೋದುಂಟು. ಆದರೆ ವಿನಯಾ ಪ್ರಸಾದ್ ಬದುಕಲ್ಲಿ ಆಗಿದ್ದೇ ಬೇರೆ. ಅವರು ಜನಪ್ರಿಯರಾಗುತ್ತಾ ಹೋದದ್ದು ಮಗಳು ಹುಟ್ಟಿದ ಮೇಲೆಯೇ. ಅಂಥಾ ಮಗಳು ಇದೀಗ ಕಿರುತೆರೆಯ ಪ್ರಸಿದ್ಧ ನಟಿಯಾಗುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ತನ್ನ ವಯಸ್ಸಿಗೆ ಮೀರಿದ ಪಾತ್ರಗಳನ್ನು ಮಾಡುತ್ತಿದ್ದಾರೆ. ಇನ್ನೂ ಮೂವತ್ತರ ಆಸುಪಾಸಿನಲ್ಲಿರುವ ಈ ನಟಿ ಆರಂಭದಲ್ಲಿ ನಾಯಕಿಯಾಗಿ ಕಿರುತೆರೆಗೆ ಬಂದರೂ ಇದೀಗ ತನ್ನ ವಯಸ್ಸಿಗೆ ಮೀರಿದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇಷ್ಟಕ್ಕೆ ಇವರ ವಿವರ ಮುಗಿಯೋದಿಲ್ಲ. ಅಷ್ಟಕ್ಕೂ ಈಕೆ ನಾವಂದುಕೊಂಡ ಹಾಗಲ್ವೇ ಅಲ್ಲ.
ಪ್ರಥಮಾ ಈ ಮೊದಲು ದೇವಿ ಪಾತ್ರದ ಮೂಲಕ ಹೆಸರುವಾಸಿ ಆದವರು. ಮನಸೆಲ್ಲಾ ನೀನೇ ಧಾರವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಸಹ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಮೇಶ್ ಇಂದಿರಾ ನಿರ್ದೇಶನದ ಒಲವಿನ ನಿಲ್ದಾಣ ಎನ್ನುವ ಧಾರಾವಾಹಿಯಲ್ಲಿ ಸಹ ಪ್ರಥಮಾ ಅವರು ಬಹಳ ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿಯ ಜೀವನದಲ್ಲಿ ಇವರಿಗೆ ಬಹಳ ಮಹತ್ವವಿದೆ. ನಾಯಕಿಯ ಸೋದರ ಅತ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸುಂದರ, ಸರಳ ಗೃಹಿಣಿಯಾಗಿ ಜನರಿಗೆ ಈಗಾಗಲೇ ಇಷ್ಟವಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಪ್ರಸಾರವಾಗಿದ್ದ ಬಹು ಪ್ರಸಿದ್ದ ಧಾರಾವಾಹಿಯಲ್ಲಿ ದೇವಿಯ ಪಾತ್ರದಲ್ಲಿ ಇವರು ಮಿಂಚಿದ್ದರು. ದೇವಿಯ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ ನಟಿಗೆ ನಂತರ ಹಲವಾರು ದೇವಿಯ ಪಾತ್ರಗಳು ಒಲಿದು ಬಂದಿದೆ.
kannadathi serial: ಹರ್ಷ ಭುವಿ ಫಸ್ಟ್‌ನೈಟಲ್ಲಿ ಮತ್ತೆ ಅಡ್ಡ ಬಂತು ತುರಿಮಣೆ!
ನಂತರ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದ ನಟಿ, ಕುಟುಂಬದ ಜೊತೆ ಸಮಯ ಕಳೆದಿದ್ದಾರೆ. ಮತ್ತೆ ಕಿರುತೆರೆಗೆ ಮರಳಿದ ನಟಿ, ಮತ್ತೆ ಬಣ್ಣ ಹಚ್ಚಿದ್ದು ಸಹ ಮಹಾದೇವಿ ಧಾರಾವಾಹಿಯಲ್ಲಿ ದೇವಿಯ ಪಾತ್ರಕ್ಕೆ. ಜನ ಹೆಚ್ಚಾಗಿ ಇವರನ್ನು ದೇವಿಯ ಪಾತ್ರದಲ್ಲಿ ನೋಡಿದ್ದಾರೆ. ಮೆಚ್ಚಿದ್ದಾರೆ ಸಹ. ಆದರೆ ಇವರಿಗೆ ದೊಡ್ಡ ಬ್ರೇಕ್ ಕೊಟ್ಟ ಪಾತ್ರ ಎಂದರೆ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, ಬ್ರಹ್ಮಗಂಟು ಧಾರಾವಾಹಿ. ಇದರಲ್ಲಿ ನಾಯಕಿಯ ಸೋದರ ಅತ್ತೆಯ ಪಾತ್ರ ಮಾಡಿದ್ದ ಇವರು, ಜನರ ಮನಸ್ಸಿನಲ್ಲಿ ಅದ್ಭುತ ಅಭಿನಯದ ಮೂಲಕ ಅಚ್ಚೊತ್ತಿದ್ದಾರೆ. ನಟಿ ಹೇಳುವಂತೆ ಜನರು ಹೊರಗಡೆ ಸಹ ಈ ಅತ್ತೆಯ ಪಾತ್ರದ ಮೂಲಕ ಅವರನ್ನು ಗುರುತಿಸುತ್ತಾರಂತೆ. ಈ ಧಾರಾವಾಹಿಯಲ್ಲಿ ನಟಿಸಿ ವರ್ಷಗಳೇ ಕಳೆದರೂ ಸಹ ಜನ ಇನ್ನೂ ಇವರ ನಟನೆಯನ್ನು ಮರೆತಿಲ್ಲ.ಇದೀಗ ಇವರ ನಟನೆಯನ್ನು 'ಒಲವೇ ನಿಲ್ದಾಣ' ದಲ್ಲೂ ಜನ ಮೆಚ್ಚಿದ್ದಾರೆ.
ಹಿಟ್ಲರ್ ಕಲ್ಯಾಣ: ಪವಿತ್ರಾಗೆ ಮಾತು ಬಂತು, ಆಮೇಲೆ ನಡೆದದ್ದು ಶಾಕಿಂಗ್ ಘಟನೆ!
ಪ್ರಥಮಾ ಬರೀ ನಟಿ ಅಷ್ಟೇ ಅಲ್ಲ. ಈಕೆ ಅದ್ಭುತ ಕಥಕ್ ನೃತ್ಯಗಾರ್ತಿ. ಕಥಕ್‌ನಲ್ಲಿ ವಿದ್ವತ್ ಮಾಡಿರುವ ಪ್ರತಿಭಾವಂತೆ. ನಟನೆಯ ಜೊತೆಗೆ ನೃತ್ಯದಲ್ಲೂ ಗಮನ ಸೆಳೆಯುತ್ತಿರುವ ಈ ಬಹುಮುಖ ಪ್ರತಿಭೆಯನ್ನು ಜನರೂ ಮೆಚ್ಚಿಕೊಂಡಿದ್ದಾರೆ.
ನಟಿ ವಿನಯಾ ಪ್ರಸಾದ್ ಅವರೂ ಪಾರು ಸೀರಿಯಲ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಕಿರುತೆರೆಯಲ್ಲಿ ಅಮ್ಮ ಮಗಳ ಕಮಾಲ್ ಮುಂದುವರಿದಿದೆ. ಜೊತೆಗೆ ಪೋಷಕ ಪಾತ್ರದಲ್ಲಿ ಗುರುತಿಸಿಕೊಳ್ಳುವ ನಟ ರವಿ ಭಟ್ ವಿನಯಾ ಪ್ರಸಾದ್ ಅವರ ತಮ್ಮ. ಅವರ ಮಗಳು ಕೃಷ್ಣಾ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಹೀಗೆ ಒಂದಿಡಿ ಕುಟುಂಬವೇ ಪ್ರತಿಭಾವಂತರಿಂದ ಕೂಡಿದ್ದು, ಕಲಾ ಸೇವೆಯನ್ನು ಮಾಡುತ್ತಿದೆ. ಇವರನ್ನು ವೀಕ್ಷಕರೂ ಮೆಚ್ಚಿಕೊಂಡಿದ್ದಾರೆ.