ಲೇಡಿ ಬಾಸ್ ಆಗಿ ಜೊತೆಜೊತೆಯಲಿಯ ಮೀರಾ ಎಂಟ್ರಿ, ಒಲವಿನ ನಿಲ್ದಾಣ ಹುಡುಗ ಸಿದ್ಧಾಂತ್ ಗಡ ಗಡ!
ಇಲ್ಲೀವರೆಗೆ ಮಲೆನಾಡು, ಸಿಟಿ, ಮುಗ್ಧ ಹುಡುಗಿ, ಬುದ್ಧಿವಂತ ಹುಡುಗ, ಲವ್ವು, ಲೈಫು, ಮೆಸೇಜ್ ಮೇಲೆ ಮೆಸೇಜ್ ಅಂತೆಲ್ಲ ಸಾಗ್ತಿದ್ದ ಸೀರಿಯಲ್‌ನಲ್ಲಿ ಸಡನ್ನಾಗಿ ಇದೇನು ಬದಲಾವಣೆ. ಅಷ್ಟಕ್ಕೂ ಈ ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ಏನಾಗ್ತಿದೆ..
ಒಲವಿನ ನಿಲ್ದಾಣ ಸೀರಿಯಲ್ ಶುರುವಾದ ಆರಂಭದಲ್ಲಿ ಇದೊಂದು ಮಲೆನಾಡ ಹುಡುಗಿ, ಸಿಟಿ ಹುಡುಗ ನಡುವಿನ ರಮ್ಯ ಪ್ರೇಮಕಥೆ ಅಂತ ಎಲ್ಲರೂ ತಿಳ್ಕೊಂಡಿದ್ರು. ಶುರುವಲ್ಲಿ ಒಂಥರ ಹಾಗೆ ಇತ್ತು. ಆದರೆ ಯಾಕೋ ಗೊತ್ತಿಲ್ಲ, ಶುರುವಲ್ಲಿ ಲವಲವಿಕೆ, ಜೋಶ್‌ಫುಲ್ ಆಗಿ ಶುರುವಾಗೋ ಸೀರಿಯಲ್‌ಗಳು ಆಮೇಲೆ ಯಾಕೋ ಒಂದೇ ಪ್ಯಾಟರ್ನ್ ಗೆ ಹಿಂತಿರುಗುತ್ತವೆ. ಹೆಚ್ಚುಕಮ್ಮಿ 'ಒಲವಿನ ನಿಲ್ದಾಣ' ಸೀರಿಯಲ್ ಕಥೆಯೂ ಹೀಗೇ ಆಗುತ್ತಿದೆ. ಒಂದು ಹಂತದ ಬಳಿ ಬರೀ ಸಮಸ್ಯೆಗಳು, ಸೀರಿಯಸ್ ಮುಖಗಳು, ಕಣ್ಣೀರೇ ಮುಖ್ಯವಾಗಿ ಖುಷಿ, ನಗುವೆಲ್ಲ ಮಲೆನಾಡಿನ ಮಳೆಗಾಲದ ಬಿಸಿಲಿನ ಹಾಗಿರುತ್ತವೆ. ಅದೆಲ್ಲ ಪಕ್ಕಕ್ಕಿಟ್ಟರೆ ಎಲ್ಲಿಂದಲೋ ಶುರುವಾದ 'ಒಲವಿನ ನಿಲ್ದಾಣ' ಸೀರಿಯಲ್ ಎಲ್ಲೋ ಬಂದು ನಿಂತಿದೆ. ಸ್ಟ್ರಗಲಿಂಗ್ ಲೇಡಿ ಆಗಿ ಗುರುತಿಸಿಕೊಂಡಿದ್ದ ನಾಯಕ ಸಿದ್ಧಾಂತ್ ಅಮ್ಮ ನಿರುಪಮಾ ಸದ್ಯಕ್ಕೆ ಪಕ್ಕಾ ಸೀರಿಯಲ್ ಅತ್ತೆ ಆಗಿದ್ದಾರೆ. ಯಾವುದೋ ಉದ್ದೇಶ ಇಟ್ಟುಕೊಂಡು ಪಾಪದ ಸೊಸೆ ಮೇಲೆ ಸೇಡು ತೀರಿಸಿಕೊಳ್ಳುವ, ಚುಚ್ಚಿ ನೋಯಿಸುವ ಅತ್ತೆ. ಆದರೆ ಈ ನಡುವೆ ಸೀರಿಯಲ್ಲಿನಲ್ಲಿ ಮತ್ತೊಂದು ಡ್ರಾಮಾ ಶುರುವಾಗಿದೆ.
ಅದು ಮತ್ತೇನೂ ಅಲ್ಲ, ಸಿದ್ಧಾಂತ್‌ಗೆ ಕೆಲಸ ಸಿಕ್ಕಿ, ಆತ ಕೆಲಸ ಮಾಡೋ ಕಂಪನಿಗೆ ಒಬ್ರು ಲೇಡಿ ಬಾಸ್ ಬಂದಿದ್ದಾರೆ. ಮೊದಲ ದಿನವೇ ಇಡೀ ಆಫೀಸನ್ನು ಗಡಗಡ ನಡುಗಿಸಿದ ಆ ಲೇಡಿ ಬಾಂಡ್ ಮತ್ಯಾರೂ ಅಲ್ಲ, 'ಜೊತೆ ಜೊತೆಯಲಿ' ಸೀರಿಯಲ್‌ನಲ್ಲಿ ಆರ್ಯವರ್ಧನ್ ಗೆ ಆಫೀಸು ಕೆಲಸಗಳಲ್ಲಿ ರೈಟ್‌ಹ್ಯಾಂಡ್‌ನಂತಿದ್ದ ಮೀರಾ. ಎಸ್ ಮೀರಾ ಪಾತ್ರಧಾರಿ ಮಾನಸಿ ಮನೋಹರ್ ಲೇಡಿ ಬಾಸ್ ಪ್ರಾಚಿ ಪಾತ್ರದಲ್ಲಿ ಎಂಟ್ರಿಕೊಟ್ಟಿದ್ದಾರೆ. ಫಸ್ಟ್ ಡೇನೆ ಸಿದ್ಧಾಂತ್‌ನ ಗೆಟ್‌ಲಾಸ್ಟ್ ಅಂದಿದ್ದಾಳೆ. ಮುಗೀತು, ಅವಳೂ ವಿಲನ್ನಾ.. ಈ ಸಿದ್ಧಾಂತ್‌ಗೆ ಮನೇಲಿ ಅಮ್ಮ ವಿಲನ್, ಹೆಂಡ್ತಿ ಮನೇಲಿ ಅವಳ ಅತ್ತೆ ಸುಮತಿ ವಿಲನ್, ಆಫೀಸ್‌ನಲ್ಲಾದ್ರೂ ನೆಮ್ಮದಿ ಆಗಿರ್ತಾನೆ ಅಂದುಕೊಂಡರೆ ಅಲ್ಲೂ ಸೈಕೋ ಬಾಸ್ ಆಗಮನವಾಗಿದೆ ಅಂದುಕೊಳ್ಳಬಹುದು. ಆದರೆ ಈ ಪಾತ್ರ ಒಂಥರಾ ನಮ್ ಕನ್ನಡತಿ ವರೂಧಿನಿ ಥರದ ಪಾತ್ರ ಅಂತ ಮೇಲ್ನೋಟಕ್ಕೆ ಅನಿಸುತ್ತೆ. ಈ ಪಾತ್ರಕ್ಕೆ ಒಂದಿಷ್ಟು ಶೇಡ್‌ಗಳಿವೆ. ಮೂಡ್ ಬಂದ ಹಾಗೆ ನಡೆದುಕೊಳ್ಳೋ ಟಫ್ ಹುಡುಗಿಯಂತೆ ಪ್ರಾಚಿ ಕಾಣ್ತಿದ್ದಾಳೆ.
ಸೀರಿಯಲ್ ಡಾಕ್ಟರ್ ಇಂದುಮತಿ ರಿಯಲ್ಲಾಗೋ ಡಾಕ್ಟರೇನಾ?
ಸೀರಿಯಲ್ ಪಂಟರು ಹೇಳೋ ಪ್ರಕಾರ ಇವಳಿಂದಲೇ ಸಿದ್ಧಾಂತ್ ಮತ್ತು ತಾರಿಣಿ ಮಧ್ಯೆ ಬಿರುಕು ಮೂಡೋ ಸಾಧ್ಯತೆ ಇದೆ. ಮೊನ್ನೆ ಬಿರುಗಾಳಿ ಥರ ಎಂಟ್ರಿ ಕೊಟ್ಟು ಸಿದ್ಧಾಂತ್ ಮೇಲೆ ಹರಿಹಾಯ್ದ ಪ್ರಾಚಿ ಮರುಕ್ಷಣ ಕಂಪ್ಲೀಟ್ ಚೇಂಜ್ ಆಗಿದ್ದಾಳೆ. ಸಿದ್ಧಾಂತ್‌ನ ಕರೆದು ಆತನಿಗೆ ಸ್ಪೆಷಲ್ ಪ್ರಾಜೆಕ್ಟ್ ಕೊಟ್ಟಿದ್ದಾಳೆ. ಅವನ ಹಿಂಜರಿಕೆಯನ್ನು ದೂರ ಮಾಡೋ ಪ್ರಯತ್ನ ಮಾಡಿದ್ದಾಳೆ. ಅಷ್ಟೇ ಅಲ್ಲ, ಕೆಲಸದ ಜಾಗದಲ್ಲಿ ನಾವು ಹೇಗಿದ್ದರೆ ಮೇಲೆ ಹೋಗಬಹುದು ಅನ್ನೋ ಬಗ್ಗೆ ಸಿದ್ಧಾಂತ್ ಮನಸ್ಸು ಮುಟ್ಟುವಂಥಾ ಮಾತನ್ನಾಡಿದ್ದಾಳೆ. ಸರಿ ಈಕೆ ಒಳ್ಳೆಯವಳೂ ಹೌದು ಅನ್ನೋ ಹೊತ್ತಿಗೆ ಎಸ್ ಅನ್ನೋ ಹೆಸರಿಂದ ಒಂದು ಫೋನ್ ಕಾಲ್. ಸಿಕ್ಕಾಪಟ್ಟೆ ಟೆನ್ಶನ್‌ನಲ್ಲಿ ಆಕಾಲ್ ಅಟೆಂಡ್ ಮಾಡಿ ಆಮೇಲೆ ಸಿಟ್ಟಲ್ಲಿ ನಡುಗುತ್ತ ಆ ಫೋನನ್ನೇ ಎಸೆದು ಬಿಡ್ತಾಳೆ ಪ್ರಾಚಿ. ಇವಳಿಗೆ ಏನಾಗ್ತಿದೆ ಅನ್ನೋದೂ ಗೊತ್ತಾಗದೇ ನಮ್ ಸೈಲೆಂಟ್ ಹೀರೋ ಸಿದ್ಧಾಂತ್ ತಲೆ ಕೆರೆದುಕೊಂಡಿದ್ದಾನೆ.
ಸೋ ಪ್ರಾಚಿ ಪಾತ್ರದ ಎಂಟ್ರಿ ನಂತರ ಈ ಸೀರಿಯಲ್ ಮತ್ತೊಂದು ಟರ್ನ್ ತೆಗೆದುಕೊಂಡಿದೆ. ಇದೆಲ್ಲ ಎಲ್ಲಿ ಹೋಗಿ ನಿಲ್ಲುತ್ತೋ ಕಾದುನೋಡಬೇಕು. ಸಿದ್ಧಾಂತ್ ಪಾತ್ರದಲ್ಲಿ ಅಕ್ಷಯ್ ನಾಯಕ್, ನಾಯಕಿ ತಾರಿಣಿ ಪಾತ್ರದಲ್ಲಿ ಅಮಿತಾ ಸದಾಶಿವ ಮೊದಲಾದವರು ನಟಿಸುತ್ತಿದ್ದಾರೆ.
ರಿಯಲ್ ಪತ್ನಿ ವಯಸ್ಸು ಬಿಚ್ಚಿಟ್ಟ 'ಭಾಗ್ಯಲಕ್ಷ್ಮಿ' ತಾಂಡವ್'; ಕಾಮೆಂಟ್ ಮಾಡಿ ಕ್ಲಾಸ್ ತೆಗೆದುಕೊಂಡ ಸಂಗೀತಾ!