Asianet Suvarna News Asianet Suvarna News

ಸೀರಿಯಲ್ ಡಾಕ್ಟರ್ ಇಂದುಮತಿ ರಿಯಲ್ಲಾಗೋ ಡಾಕ್ಟರೇನಾ?

ಕನ್ನಡ ಸೀರಿಯಲ್‌ಗಳ ಪರ್ಮನೆಂಟ್ ಡಾಕ್ಟರ್ ಒಬ್ಬರಿದ್ದಾರೆ. ಅವರ ಹೆಸರು ಗೊತ್ತಿದೆಯೋ ಇಲ್ವೋ, ಆದ್ರೆ ಮುಖ ನೋಡಿದ್ರೆ ಖಂಡಿತಾ ಗುರುತು ಹಿಡೀತೀರ. ಸೋ ಮೀಟ್ ಮಿಸೆಸ್ ಇಂದುಮತಿ.

 

Serial artist Indumathi real life profession and lifestyle bni
Author
First Published Jul 5, 2023, 1:19 PM IST

ಸೀರಿಯಲ್, ಸಿನಿಮಾಗಳಲ್ಲಿ ಕೆಲವರು ಕೆಲವು ಪಾತ್ರಗಳಿಗೆ ಫಿಕ್ಸ್ ಆಗಿರ್ತಾರೆ. ಪೊಲೀಸ್ ಪಾತ್ರ ಅಂದಕೂಡಲೇ ನೆನಪಾಗೋ ಕೆಲವು ಫೇಸ್‌ಕಟ್‌ಗಳಿವೆ. ಹಾಗೇ ಲಾಯರ್‌ ಪಾತ್ರಗಳಲ್ಲೇ ಹೆಚ್ಚೆಚ್ಚು ಕಾಣಿಸಿಕೊಂಡೋರಿದ್ದಾರೆ. ಹಾಗೇ ಕನ್ನಡ ಸೀರಿಯಲ್‌ಗಳ ಪರ್ಮನೆಂಟ್‌ ಡಾಕ್ಟರ್ ಥರ ಇರೋರು ಇಂದುಮತಿ. ರೀಸೆಂಟಾಗಿ ಕೆಂಡಸಂಪಿಗೆ ಸೀರಿಯಲ್‌ನಲ್ಲಿ ಇವರು ಡಾಕ್ಟರ್ ಪಾತ್ರವನ್ನು ಎಷ್ಟು ಚೆನ್ನಾಗಿ ನಿಭಾಯಿಸಿದರು ಅಂದರೆ, ತಾನು ಡಾಕ್ಟರಲ್ಲ ಅಂತ ಹೇಳಿದ್ರೂ ಜನ ನಂಬದಷ್ಟು. ಕೆಂಡ ಸಂಪಿಗೆ ಸೀರಿಯಲ್‌ನಲ್ಲಿ ಸುಮನಾ ಗರ್ಭಿಣಿ. ಆಕೆಯ ಗಂಡ ಎಂಎಲ್‌ಎ ತೀರ್ಥಂಕರ್ ಎಲೆಕ್ಷನ್‌ನಲ್ಲಿ ವಿನ್‌ ಆಗೋ ದುರಾಸೆಗೆ ಬಿದ್ದು ಸುಮನಾಳಿಗೆ ತಾಳಿ ಕಟ್ಟಿ ಬಿಡ್ತಾನೆ. ನಂತರ ಏನಾಗುತ್ತೆ ಅನ್ನೋದು ಈ ಸೀರಿಯಲ್ ಒನ್‌ಲೈನ್. ಮದುವೆ ಆದಾಗಿಂದ ಒನ್‌ ಫೀಟ್ ಡಿಸ್ಟೆನ್ಸ್ ಮೆಂಟೇನ್ ಮಾಡ್ತಾ ಬಂದಿದ್ದ ತೀರ್ಥಂಕರ ಪಾರ್ಟೀಲಿ ಎಣ್ಣೆ ಹೊಡ್ಕೊಂಡು ಬಂದಾಗ ಮಾತ್ರ ಎಡವಟ್ಟಾಗಿ ಬಿಡುತ್ತೆ. ಪರಿಣಾಮ ಸುಮನಾ ಪ್ರೆಗ್ನೆಂಟ್ ಆಗ್ತಾಳೆ. ಅವಳನ್ನು ಟ್ರೀಟ್ ಮಾಡೋ ಪಾತ್ರದಲ್ಲೂ ಈ ನಮ್ಮ ಸೀರಿಯಲ್ ಡಾಕ್ಟರ್ ಇಂದುಮತಿ ನಟಿಸಿದ್ದಾರೆ.

ಈ ಸೀರಿಯಲ್‌ನಲ್ಲಿ ಇಂದುಮತಿ ಬಹಳ ಕಾಳಜಿಯಿಂದ ಸುಮನಾ ದೇಖಾರೇಖಿ ನೋಡಿಕೊಳ್ಳುತ್ತಾರೆ. ಮಾತ್ರವಲ್ಲ, ಸುಮನಾಳನ್ನು ಈಗ ಹೇಗೆ ನೋಡಿಕೊಳ್ಳಬೇಕು ಅನ್ನೋದರ ಬಗ್ಗೆ ತೀರ್ಥನಿಗೂ ತಿಳಿ ಹೇಳ್ತಾರೆ. ಅವರು ಪಾತ್ರ ನಿರ್ವಹಿಸಿದ ರೀತಿಯನ್ನು ಜನ ಮೆಚ್ಚಿಕೊಂಡಿದ್ದಾರೆ.

ಇಷ್ಟು ಸಖತ್ತಾಗಿ ಡಾಕ್ಟರ್ ಪಾತ್ರವನ್ನು ನಿಭಾಯಿಸುತ್ತಿರೋ ನಟಿ ಇಂದುಮತಿ ರಿಯಲ್‌ ಲೈಫ್‌ನಲ್ಲೂ ಡಾಕ್ಟರಾ ಅನ್ನೋದು ಹಲವರ ಪ್ರಶ್ನೆ. ಅಂದಹಾಗೆ 70ಕ್ಕೂ ಅಧಿಕ ಧಾರಾವಾಹಿಗಳಲ್ಲಿ ವೈದ್ಯೆಯಾಗಿ ಇಂದುಮತಿ ಕಾಣಿಸಿಕೊಂಡಿದ್ದಾರೆ. ಆದರೆ ಎಲ್ಲರೂ ಭಾವಿಸಿರುವ ಹಾಗೆ ರಿಯಲ್‌ ಲೈಫಿನಲ್ಲಿ ಅವರು ಡಾಕ್ಟರ್ ಅಲ್ಲ ಟೀಚರ್!

ಕುಸುಮ ಬೆಸ್ಟ್ ಅತ್ತೆ ಅಂತಿದ್ರು, ಈಗ ಇಂಥ ಅತ್ತೆ ಯಾರಿಗೂ ಬೇಡಪ್ಪಾ ಅಂತಿರೋದ್ಯಾಕೆ?

ಹೌದು, ಶಿಕ್ಷಕಿಯಾಗಿ(teacher) ಇಂದುಮತಿ ಕೆಲಸ ಮಾಡ್ತಿದ್ದಾರೆ. ಹಾಗಂತ ಸೀರಿಯಲ್‌ಗಳಲ್ಲೆಲ್ಲ ಡಾಕ್ಟರ್ ಪಾತ್ರ ನಿಭಾಯಿಸೋದಕ್ಕೆ ಅವರಿಗೆ ಬೇಜಾರಿಲ್ಲ, ಬದಲಿಗೆ ಹೆಮ್ಮೆ ಇದೆ. ಎಷ್ಟೋ ಜನರ ಜೀವ ಉಳಿಸೋ ವೈದ್ಯೆಯ ಪಾತ್ರದಲ್ಲಿ ಆಣಿಸಿಕೊಳ್ಳೋದು ಖುಷಿ ಕೊಡುತ್ತೆ ಅಂತಾರವರು. ಹೀಗಾಗಿ ಪದೇ ಪದೇ ಒಂದೇ ರೀತಿಯ ಪಾತ್ರ ಸಿಕ್ಕರೂ ಬೇಜಾರು ಮಾಡದೇ ಆಕ್ಟ್ (act)ಮಾಡ್ತಾರಂತೆ. ಕನ್ನಡದಲ್ಲಿ ಸುಮಾರು 100ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಇಂದುಮತಿ ನಟಿಸಿದ್ದಾರೆ. ಅದರಲ್ಲಿ 70ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ವೈದ್ಯೆಯ ಪಾತ್ರದಲ್ಲೇ ಅಭಿನಯಿಸಿದ್ದಾರೆ. ಶಿಕ್ಷಕಿಯಾದ ಕಾರಣ ವೈದ್ಯರ(doctor) ಭಾಷೆ ಬಹಳ ಚೆನ್ನಾಗಿ ಅರ್ಥವಾಗುತ್ತದೆ, ಸ್ಪಷ್ಟವಾಗಿ, ಆತ್ಮವಿಶ್ವಾಸದಿಂದ ಮಾತನಾಡುವುದರಿಂದ ಇದೇ ರೀತಿಯ ಪಾತ್ರಗಳು ನನ್ನನ್ನು ಹುಡುಕಿಕೊಂಡು ಬರುತ್ತಿವೆ ಎನ್ನುತ್ತಾರೆ ಇಂದುಮತಿ.

'ಜೋಗುಳ', 'ಚಿ.ಸೌ. ಸಾವಿತ್ರಿ', 'ಶುಭಮಂಗಳ', 'ಪುಟ್ಟಗೌರಿ ಮದುವೆ', 'ಮಂಗಳ ಗೌರಿ ಮದುವೆ', 'ಚರಣದಾಸಿ', 'ನನ್ನರಸಿ ರಾಧೆ', 'ಚಿತ್ರಲೇಖ', 'ನಾ ನಿನ್ನ ಬಿಡಲಾರೆ', 'ಕುಲವಧು', 'ಜೊತೆ ಜೊತೆಯಲಿ', 'ಲಕ್ಷ್ಮಿ ಬಾರಮ್ಮ', 'ಸಿಲ್ಲಿ ಲಲ್ಲಿ', 'ಪಾಪಪಾಂಡು', 'ಮರಳಿ ಬಂದಳು ಸೀತೆ', 'ಸಿಂಧೂರ', 'ಲಕುಮಿ', 'ಚಿಟ್ಟೆ ಹೆಜ್ಜೆ', 'ಬೆಟ್ಟದ ಹೂ', 'ಕನ್ನಡತಿ', 'ಮುಂಗಾರು ಮಳೆ', 'ಶಾಂತಂ ಪಾಪಂ', 'ಕೆಂಡಸಂಪಿಗೆ', 'ಗಿಣಿರಾಮ', 'ಶ್ರೀರಸ್ತು ಶುಭಮಸ್ತು', 'ಗಟ್ಟಿಮೇಳ' ಸೇರಿದಂತೆ ಸಾಕಷ್ಟು ಜನಪ್ರಿಯ ಧಾರಾವಾಹಿಗಳಲ್ಲಿ(serial) ವೈದ್ಯೆಯ ಪಾತ್ರ ನಿರ್ವಹಿಸಿದ ಹೆಗ್ಗಳಿಕೆ ಇವರದ್ದು. ಎಂಬಿಬಿಎಸ್ ಓದದೆಯೇ ಡಾಕ್ಟರ್ ಆಗಿರೋದು ತನ್ನ ಅದೃಷ್ಟ(luck) ಅಂತಲೇ ಈ ನಟಿ ಭಾವಿಸಿದ್ದಾರೆ. ಹೊರಗೆ ಹೋದಾಗ ನೀವು ಡಾಕ್ಟರ್ ಅಲ್ವಾ ಎಂದು ಎಷ್ಟೋ ಅಭಿಮಾನಿಗಳು ಪ್ರಶ್ನಿಸುತ್ತಾರಂತೆ. 'ಇಲ್ಲ ನಾನು ಶಿಕ್ಷಕಿ' ಎಂದರೆ ಆಶ್ವರ್ಯ ಪಡುತ್ತಾರಂತೆ. ಜನ ಹೀಗೆಲ್ಲ ಹೇಳುವಾಗ ತಾನು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ ಅನ್ನೋ ತೃಪ್ತಿ ಅವರಿಗೆ ಸಿಗುತ್ತಂತೆ.

ಒಂದು ಕಾಲಿಗೆ ಸಾಕ್ಸ್‌ ಹಾಕೋದು ಮರೆತ ನಿವೇದಿತಾ ಗೌಡ; ಚಂದನ್ ಮಡಿಲಿನಲ್ಲಿ ಪತ್ನಿ, ಹಿಗ್ಗಾಮುಗ್ಗಾ ಟ್ರೋಲ್!

Follow Us:
Download App:
  • android
  • ios