Asianet Suvarna News Asianet Suvarna News

ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ಅತ್ತೆ ಸೊಸೆ ಬಾಂಡಿಂಗ್‌ಗೆ ಸೂಪರ್ ಅಂದ್ರು ವೀಕ್ಷಕರು

ಜೀ ಕನ್ನಡದಲ್ಲಿ ಸುಧಾರಾಣಿ ನಟನೆಯಲ್ಲಿ ಮೂಡಿ ಬರ್ತಿರೋ ಇಂಟರೆಸ್ಟಿಂಗ್ ಸೀರಿಯಲ್ 'ಶ್ರೀರಸ್ತು ಶುಭಮಸ್ತು'. ಇದರಲ್ಲಿ ಮುದ್ದಿನ ಅತ್ತೆಯಾಗಿ ಸುಧಾರಾಣಿ ಕಾಣಿಸಿಕೊಂಡಿದ್ದಾರೆ. ಅತ್ತೆ ಸೊಸೆ ಜಗಳವನ್ನು ನೋಡಿ ಬೇಸತ್ತು ಹೋಗಿರುವ ವೀಕ್ಷಕರಿಗೆ ಇದರಲ್ಲಿ ಅತ್ತೆ ಸೊಸೆ ಫ್ರೆಂಡ್ಸ್ ಥರ ಇರೋದು ನೋಡಿ ಸಖತ್ ಖುಷಿ ಆಗಿದೆ.

In Srirasthu Shubhamasthu serial fans likes Mother in law and daughter in law bonding
Author
First Published Dec 1, 2022, 3:15 PM IST

ಶ್ರೀರಸ್ತು ಶುಭಮಸ್ತು ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸೀರಿಯಲ್. ಸೋಮವಾರದಿಂದ ಶುಕ್ರವಾರ ರಾತ್ರಿ ೮.೩೦ಕ್ಕೆ ಪ್ರಸಾರವಾಗುತ್ತೆ. ಇದರಲ್ಲಿ ತುಳಸಿ ಪಾತ್ರದಲ್ಲಿ ಖ್ಯಾತ ನಟಿ ಸುಧಾರಾಣಿ ಅಭಿನಯಿಸಿದ್ದಾರೆ. ಗಂಡ ಮಕ್ಕಳು ಅತ್ತೆ ಮಾವನ ಸೇವೆಗಾಗಿ ತನ್ನೆಲ್ಲ ಆಸೆ ಕನಸುಗಳನ್ನು ಸೈಡಿಗಿಟ್ಟು ದುಡಿಯುವ ಹೆಣ್ಣಿನ ಪಾತ್ರದಲ್ಲಿ ಸುಧಾರಾಣಿ ಕಾಣಿಸಿಕೊಂಡಿದ್ದಾರೆ. ತಾನು ಎಲ್ಲರಿಗಾಗಿ ದುಡಿಯುತ್ತಿದ್ದರೂ, ತನಗೆ ಎಲ್ಲರೂ ಇದ್ದರೂ ತಾನೆಲ್ಲೋ ಒಂಟಿ ಆಗ್ತಿದ್ದೇನೆ ಅಂತನಿಸುವ ಬಹಳ ಸೆನ್ಸಿಟಿವ್ ಪಾತ್ರವಿದು. ಅಪ್ಪಟ ಮಧ್ಯಮ ವರ್ಗದ ಗೃಹಿಣಿಯರನ್ನು ಈ ಪಾತ್ರ ಪ್ರತಿನಿಧಿಸುತ್ತೆ. ನಮ್ಮನೆ ಯುವರಾಣಿ ಖ್ಯಾತಿಯ ನಟ ದೀಪಕ್ ರೊಮ್ಯಾಂಟಿಕ್ ಹೀರೋ ಸಮರ್ಥ್ ಪಾತ್ರದಲ್ಲಿದ್ದಾರೆ. ಇವರಿಗೆ ಸುಧಾರಾಣಿ ಮಗನ ಪಾತ್ರ. ಸೊಸೆ ಸಿರಿಯಾಗಿ ನಟಿ ಚಂದನಾ ಕಾಣಿಸಿಕೊಂಡಿದ್ದಾರೆ.

ಸದಾ ಮನೆ ಮಕ್ಕಳ ಸೇವೆಯಲ್ಲೇ ತೊಡಗಿಸಿಕೊಂಡಿರುವ ತುಳಸಿ ಅಚಾನಕ್ ಮಾಲ್‌ಗೆ ಹೋಗಬೇಕಾಗುತ್ತದೆ. ಅಂಥಾ ಟೈಮಲ್ಲಿ ಆಕೆಗೆ ಸಹಾಯ ಮಾಡಿ ಆಕೆಯ ಪರವಾಗಿ ನಿಲ್ಲುವವಳು ಸಿರಿ. ಆ ಹುಡುಗಿ ತುಳಸಿಗೆ ಕ್ಲೋಸ್ ಆಗ್ತನೇ ಹೋಗ್ತಾಳೆ. ಅವರಿಬ್ಬರ ಬಂಧ ಫ್ರೆಂಡ್ಸ್ ಥರ ಮುಂದುವರಿಯುತ್ತೆ. ಇಂಥಾ ಟೈಮಲ್ಲಿ ಸಿರಿ ತನ್ನ ಪ್ರೇಮಕಥೆಯನ್ನು ಅವಳ ಬಳಿ ಹೇಳಿಕೊಳ್ಳುತ್ತಾಳೆ. ಸಿರಿ ಪ್ರೀತಿಸುತ್ತಿರುವುದು ತನ್ನ ಮಗ ಸಮರ್ಥನನ್ನು ಅನ್ನೋದನ್ನು ತಿಳಿಯದೇ ತುಳಸಿ ಆಕೆಯ ಪ್ರೀತಿ ಉಳಿಸುವಂಥಾ ಪ್ಲಾನ್ ಹೇಳುತ್ತಾಳೆ. ಮೊದಲು ನಿನ್ನ ಭಾವಿ ಅತ್ತೆಯನ್ನು ಭೇಟಿ ಮಾಡಿ ಮಾತಾಡು ಅನ್ನೋ ಪ್ಲಾನ್ ಕೊಟ್ಟಿದ್ದಾಳೆ. ಜೊತೆಗೆ ಹೂವು, ಹಣ್ಣು ಕೊಟ್ಟು ಇದನ್ನು ಅತ್ತೆ ಮಾವನಿಗೆ ಕೊಟ್ಟರೆ ಖುಷಿ ಪಡ್ತಾರೆ ಅಂತನೂ ಹೇಳ್ತಾಳೆ. ತುಳಸಿ ಹೇಳಿದಂತೆ ಸಿರಿ ಸಮರ್ಥನ ಮನೆಗೆ ಬಂದಿದ್ದಾಳೆ.

ನಿವೇದಿತಾ ಗೌಡ ಬಿಕಿನಿ ಲುಕ್‌ ಟ್ರೋಲ್‌, ಶೆಟ್ರೇ ಹುಷಾರು ಅಂತಿದ್ದಾರೆ ನೆಟ್ಟಿಗರು!

ಆತನ ಮನೆಯ ಬೆಲ್ ರಿಂಗ್ ಮಾಡ್ತಾಳೆ. ಬಂದು ಡೋರ್ ತೆಗೆಯುವ ತುಳಸಿಗೆ ಸಿರಿಯನ್ನು ಕಂಡು ಶಾಕ್. ಸ್ನೇಹಿತೆಯಂಥಾ ಸಿರಿಯನ್ನು ತನ್ನ ಸೊಸೆಯಾಗಿ ತುಳಸಿ ಒಪ್ಪಿಕೊಳ್ಳುತ್ತಾಳೆ. ಆದರೆ ತುಳಸಿಯ ಮಾವ, ಸಮರ್ಥನ ತಾತನಿಗೆ ಸಮರ್ಥನಿಗೆ ತಾನೇ ಹುಡುಗಿ ನೋಡಿ ಮದುವೆ ಮಾಡಬೇಕು ಅನ್ನೋದು ಮನಸ್ಸಲ್ಲಿದೆ. ಏನೇನೋ ತಿರುವುಗಳಾಗಿ ಕೊನೆಗೂ ಸಿರಿ ಮತ್ತು ಸಮರ್ಥ ಮದುವೆ ಆಗಿದ್ದಾರೆ. ಇವರಿಬ್ಬರ ಮದುವೆ ತಾತ ಮೊಮ್ಮಗನನ್ನು ಒಂದು ಮಾಡಿದೆ. ಇನ್ನೊಂದೆಡೆ ಅತ್ತೆ ಸೊಸೆ ಬಾಂಡಿಂಗ್ ಸಖತ್ತಾಗಿ ಮುಂದುವರಿದಿದೆ. ಸೊಸೆ ಅತ್ತೆ ತುಳಸಿಯನ್ನು ಅಮ್ಮ ಅಂತಲೇ ಕರೆಯುತ್ತಿದ್ದಾಳೆ.

ಮದುವೆಯ ಮರುದಿನವೇ ಅತ್ತೆ ತುಳಸಿಗೆ ರೆಸ್ಟ್ (Rest) ಕೊಡಲು ಸೊಸೆ ಸಿರಿ ನಿರ್ಧರಿಸಿದ್ದಾಳೆ. ಅಡುಗೆ ಮನೆಗೆ ಬಂದು ತಾನೇ ಅಡುಗೆ(Cooking) ಮಾಡೋದಾಗಿ ಪಟ್ಟು ಹಿಡಿದಿದ್ದಾಳೆ. ಅತ್ತೆ ತುಳಸಿಗೆ ಈಗಷ್ಟೇ ಮದುವೆ ಆದ ಆಕೆಗೆ ಯಾಕೆ ಕಷ್ಟ ಅನ್ನೋ ಕಾಳಜಿ ಆದರೆ ಸೊಸೆ ಪಟ್ಟು ಬಿಡುತ್ತಿಲ್ಲ. ಕೊನೆಗೂ ಬಹಳ ಫನ್ನಿ(funny)ಯಾಗಿ ಸೌಟನ್ನೇ ನಾಟಕೀಯವಾಗಿ ಅವಳ ಕೈಗಿತ್ತು ಅಡುಗೆಮನೆ ಸಾಮ್ರಾಜ್ಯವೆಲ್ಲ ನಿನ್ನದು ಅಂದಿದ್ದಾಳೆ ತುಳಸಿ.

BBK9 ಬೆಂಗಳೂರು ಬಿಟ್ಟು ಮೈಸೂರಿಗೆ ಹೋಗೋ ಪ್ಲ್ಯಾನ್ ಮಾಡಿದ ಅಮೂಲ್ಯ ಗೌಡ

ಈ ಸೀರಿಯಲ್‌ನಲ್ಲಿ ಅತ್ತೆ ಸೊಸೆ ಬಾಂಡಿಂಗ್‌ 9Bonding)ಅನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. 'ಅತ್ತೆ ಸೊಸೆ ಜಗಳ, ಕಾದಾಟಗಳನ್ನೆಲ್ಲ ನೋಡಿ ಸಾಕು ಸಾಕಾಯ್ತು. ಇದೊಂದು ಹೊಸಬಗೆಯ ಪ್ರಯತ್ನ' ಅಂತ ಶ್ಲಾಘಿಸಿದ್ದಾರೆ. ಇನ್ನೂ ಕೆಲವರು, 'ಅತ್ತೆ ಸೊಸೆ ಹೇಗಿರ್ಬೇಕು ಅನ್ನೋದಕ್ಕೆ ಮಾದರಿ ಥರ ಈ ಸೀರಿಯಲ್ ಬರ್ತಿದೆ' ಎಂದಿದ್ದಾರೆ. 'ಹಳೇ ಕಾಲದ ಕಥೆ ಬದಲಿಗೆ ಇಂಥಾ ಲವಲವಿಕೆಯ ಕಥೆ(Story) ನಮಗಿಷ್ಟವಾಗುತ್ತೆ' ಅಂತನೂ ವೀಕ್ಷಕರು ಕಮೆಂಟ್ ಮಾಡ್ತಿದ್ದಾರೆ. ಇಂಡಿಯನ್ ಫ್ಯಾಮಿಲಿಯನ್ನು ಸಹಜವಾಗಿ ಕಟ್ಟಿಕೊಡೋ ಈ ಸೀರಿಯಲ್ ಟೀಮ್ ಪ್ರಯತ್ನಕ್ಕೆ ವೀಕ್ಷಕರ ಬೆಂಬಲ ಸಿಕ್ಕಿದೆ.

Follow Us:
Download App:
  • android
  • ios