Asianet Suvarna News Asianet Suvarna News

ನಿವೇದಿತಾ ಗೌಡ ಬಿಕಿನಿ ಲುಕ್‌ ಟ್ರೋಲ್‌, ಶೆಟ್ರೇ ಹುಷಾರು ಅಂತಿದ್ದಾರೆ ನೆಟ್ಟಿಗರು!

ನಿವೇದಿತಾ ಗೌಡ ಬಿಕಿನಿ ಲುಕ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಭರಪೂರ ಕಮೆಂಟ್ಸ್ ಹರಿದುಬರ್ತಿದೆ. ಕೆಲವರು ಇದೆಲ್ಲ ಗಂಡನ ಮುಂದೆ ಇಟ್ಕೋ ಅಂತ ಸಲಹೆ ಕೊಟ್ರೆ ಕೆಲವರು ಶೆಟ್ರೇ ಹುಷಾರು ಅಂತ ಚಂದನ್‌ಗೆ ಚುಚ್ಚಿ ಕೊಡೋ ಕೆಲ್ಸ ಮಾಡ್ತಿದ್ದಾರೆ.

 

niveditha gowda wears bikini and trolled
Author
First Published Nov 29, 2022, 6:35 PM IST

ನಿವೇದಿತಾ ಗೌಡ (niveditha gowda) ಅಂದ್ರೆ ಕರ್ನಾಟಕದಲ್ಲಿ ವರ್ಲ್ಡ್ ಫೇಮಸ್. ಸುಮ್ನೆ ನೋಡಿದ್ರೆ ಕೊಂಚ ಥಳಕು ಬಳಕಿನ ಹುಡುಗಿ ಅನಿಸಬಹುದು. ಆದರೆ ತಾನು ಎಂಥವಳು ಅನ್ನೋದನ್ನು ಈ ಹಿಂದೆ ಬಿಗ್‌ಬಾಸ್‌ನಲ್ಲೇ (big boss) ಪ್ರೂವ್ ಮಾಡಿದ್ದಳು. ಅಲ್ಲೇ ಈಕೆಗೆ ತನಗಿಂದ ಕೆಲವು ವರ್ಷ ದೊಡ್ಡ ಚಂದನ್‌ ಶೆಟ್ಟಿ (chandan shetty) ಪರಿಚಯ ಆಯ್ತು. ಪರಿಚಯ ಸ್ನೇಹ ಆಗಿ, ಸ್ನೇಹ ಪ್ರೇಮವಾಗಿ, ದಸರಾದಲ್ಲಿ ಪ್ರೊಪೋಸ್ ಮಾಡಲು ಹೋಗಿ ಬಾಯಿಗೆ ಬಂದಂಗೆ ಬೈಸಿಕೊಂಡು ಕೊನೆಗೂ ಈ ಜೋಡಿ ಮದುವೆ ಆಯ್ತು. ಚಂದನ್‌ ದಸರಾ ವೇದಿಕೆಯಲ್ಲಿ ಪ್ರೊಪೋಸ್ ಮಾಡಿದಾಗ ಬಾಯಿಗೆ ಬಂದ ಹಾಗೆ ಶಾಪ ಹಾಕಿದವರಿಗೆ ಸೆಡ್ಡು ಹೊಡೆಯುವಂತೆ ಇವರ ದಾಂಪತ್ಯ ಕಲರ್ ಫುಲ್ ಆಗಿಯೇ ಸಾಗುತ್ತಿದೆ. ಚಿಕ್ಕ ವಯಸ್ಸಿನ ಲೈಫು ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿರೋ ನಿವೇದಿತಾ ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಗ್ಲಾಮರಸ್ ಉಡುಪುಗಳಲ್ಲಿ ಕಾಣಿಸಿಕೊಳ್ತಾರೆ. ಯಡವಟ್ಟು ಡೈಲಾಗ್ ಹೊಡ್ದು ಫಚೀತಿ ಪಟ್ಕೊಳ್ತಾಳೆ. ಈಗ ತಾನು ಬಿಕಿನಿಯಲ್ಲಿ ಮಿಂಚುತ್ತಿರುವ ಫೋಟೋ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದು ಟ್ರೋಲಿಗರಿಗೆ ಹಬ್ಬದಂತಾಗಿದೆ. 

 

'ಮದುವೆ ಆದ್ಮೇಲೆ ಎಲ್ಲದಕ್ಕೂ ಒಂದು ಬಾರ್ಡರ್ ಅಂತಿರುತ್ತೆ. ರಾಧಿಕಾ ಪಂಡಿತ್ (Radhika pandith) ಟಾಪ್ ಹೀರೋಯಿನ್ ಆಗಿದ್ದವರು. ಮದುವೆ ಆದಮೇಲೆ ಆಕೆ ಹೇಗಿದ್ದಾರೆ ನೋಡಿ. ನಿಮ್ಮ ದೇಹಸಿರಿಯನ್ನು ಗಂಡನೆದುರು ಪ್ರದರ್ಶಿಸಿ, ಸಾರ್ವಜನಿಕವಾಗಿ ಅಲ್ಲ!' ಹೀಗೊಬ್ಬರು ನೆಟ್ಟಿಗರು ನಿವೇದಿತಾ ಗೌಡ ಬಿಕಿನಿ ಲುಕ್‌ಗೆ ಕಮೆಂಟ್ ಮಾಡಿದ್ದಾರೆ. ಆದರೆ ಈ ಕಮೆಂಟ್‌ ಅನ್ನು ಬಹಳ ಮಂದಿ ಒಪ್ಪಿಲ್ಲ. ನಿವೇದಿತಾ ಎಂಥಾ ಬಟ್ಟೆ ಹಾಕ್ಬೇಕು ಅಂತ ಸಲಹೆ ಕೊಡೋದಕ್ಕೆ ನೀನ್ಯಾರು? ಅವಳ ಉಡುಗೆ, ಅವಳ ಬದುಕು ಅವಳ ಇಷ್ಟ. ನಿಂಗಿಷ್ಟ ಆದ್ರೆ ನೋಡು, ಇಲ್ಲಾಂದ್ರೆ ಸುಮ್ನಿರು ಅಂತ ಕೆಲವರು, 'ಎಷ್ಟು ಸಣ್ಣ ಮನಸ್ಸು ನಿನ್ನದು' ಅಂತ ಇನ್ನೂ ಕೆಲವರು, 'ಅವಳ ಗಂಡನಿಗೂ ಇದರಿಂದ ಏನೂ ಪ್ರಾಬ್ಲೆಂ ಇಲ್ಲ ಅಂದ್ಮೇನೆ ನೀನ್ಯಾಕೆ ಕಡ್ಡಿ ಆಡಿಸ್ತಿದ್ದೀಯಾ' ಅಂತ ಒಂದಿಷ್ಟು ಜನ ಈ ನೆಟ್ಟಿಗನಿಗೆ ಬಹಳ ಮಂದಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ಈತನಿಗೆ ಕೆಲವೊಬ್ಬರು ಸಪೋರ್ಟ್ ಮಾಡಿಯೂ ಕಮೆಂಟ್ ಮಾಡಿದ್ದಾರೆ. ಆದರೆ ಹೆಚ್ಚಿನವರು ನಿವೇದಿತಾಗೆ ಸಪೋರ್ಟ್ ಮಾಡಿದ್ದಾರೆ. ಇದು ನಿಜಕ್ಕೂ ಪಾಸಿಟಿವ್ ಮೂವ್. 

ಮಗಳಿಗೆ ಹೆಚ್ಚಿಗೆ ಹೊಡೆದಿರುವುದಾಗಿ ಒಪ್ಪಿಕೊಂಡ ಜಯಾ ಬಚ್ಚನ್; ಅಭಿಷೇಕ್ ಶಾಕಿಂಗ್ ಹೇಳಿಕೆ....

ಸೋಷಿಯಲ್ ಮೀಡಿಯಾದಲ್ಲಿ ನಟಿಯರು ಫೋಟೋ ಹಾಕಿದ ತಕ್ಷಣ ಕೆಟ್ಟದಾಗಿ, ಸಂಕುಚಿತ ಮನಸ್ಸಿಂದ ಕಮೆಂಟ್ ಮಾಡೋದು ತೀರಾ ಮಾಮೂಲಿ ಅಂತಾಗಿದೆ. ಬಹಳಷ್ಟು ನಟಿಯರು ಈ ಬಗ್ಗೆ ಸಿಟ್ಟಿಂದ ನೋವಿಂದ ತನ್ನ ಅನುಭವ ಬರೆದುಕೊಂಡಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ನಟಿ ಶಾನ್ವಿ ಶ್ರೀವತ್ಸ ಇಂಥವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಹೆಚ್ಚಿನ ಸೆಲೆಬ್ರಿಟಿಗಳು ಹೀಗೆಲ್ಲ ಕಮೆಂಟ್ ಮಾಡೋರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳೋದಿಲ್ಲ. ಆದರೆ ನಿವೇದಿತಾ ಹಾಗಲ್ಲ. ಆಕೆ ಹೆಚ್ಚಿನ ಕಮೆಂಟ್ಸ್ ಓದುತ್ತಾರೆ. ಸಣ್ಣ ಮನಸ್ಸಿಂದ ಕಮೆಂಟ್ ಮಾಡೋರಿಗೂ ಸಮಾಧಾನವಾಗಿ ಉತ್ತರಿಸುತ್ತಾರೆ. ಕೆಲವೊಮ್ಮೆ ತನಗಾಗುವ ನೋವನ್ನು ನೇರವಾಗಿ ಹೇಳುತ್ತಾರೆ. 

ಈ ಪೋಸ್ಟ್ ನೋಡಿದರೆ ಮೀನ್‌ ಮೈಂಡೆಡ್ ಜನರನ್ನು ಪ್ರಜ್ಞಾವಂತರು ನೇರವಾಗಿ ತರಾಟೆಗೆ ತೆಗೆದುಕೊಳ್ಳೋದು ಸ್ವಾಗತಾರ್ಹ ಬೆಳವಣಿಗೆ ಅನ್ನೋದು ಇನ್ನೂ ಕೆಲವರು ಅಭಿಪ್ರಾಯ. 'ಜನ ಏನೇ ಮಾತಾಡ್ಲಿ, ನೀನು ಬೆಳೆಯುತ್ತ ಹೋಗು' ಅಂತ ಜನ ನಿವಿಗೆ ವಿಶ್ ಮಾಡಿದ್ದಾರೆ. ಇನ್ನೂ ಕೆಲವರು 'ಶೆಟ್ರೇ ಹುಷಾರು, ಮತ್ತೆ ಹೇಳ್ಲಿಲ್ಲ ಅನ್ಬೇಡಿ' ಅಂತ ನಿವೇದಿತಾ ಗಂಡ ಚಂದನ್ ಶೆಟ್ಟಿ ಕಾಲೆಳೆದಿದ್ದಾರೆ. ನಿವಿ ಹೆಚ್ಚಿನ ಫೋಟೋವನ್ನು ಚಂದನ್ ಅವರೇ ಕ್ಲಿಕ್ಕಿಸೋ ಕಾರಣ ಇಂಥದ್ದಕ್ಕೆಲ್ಲ ಅವ್ರದ್ದು ನೋ ಕಮೆಂಟ್ಸ್. 

ಏರ್ಪೋರ್ಟ್‌ನಲ್ಲಿ ಕೈ ಕೈ ಹಿಡಿದು ಕಾಣಿಸಿಕೊಂಡ ಪ್ರಣಯ ಪಕ್ಷಿಗಳು; ವಿದೇಶಕ್ಕೆ ಹಾರಿದ ಹರಿಪ್ರಿಯಾ-ವಸಿಷ್ಠ

Follow Us:
Download App:
  • android
  • ios