BBK9 ಬೆಂಗಳೂರು ಬಿಟ್ಟು ಮೈಸೂರಿಗೆ ಹೋಗೋ ಪ್ಲ್ಯಾನ್ ಮಾಡಿದ ಅಮೂಲ್ಯ ಗೌಡ
ಬಿಗ್ ಬಾಸ್ ವೇದಿಕೆಯಲ್ಲಿ ತಂದೆ- ಅಣ್ಣನಿಗೆ ಥ್ಯಾಂಕ್ಸ್ ಹೇಳಿದ ಅಮೂಲ್ಯ ಗೌಡ. ತ್ಯಾಗ ದೊಡ್ಡದು ಎಂದ ನಟಿ...
ಬಿಗ್ ಬಾಸ್ ರಿಯಾಲಿ ಶೋ ಸೀಸನ್ 9ರಲ್ಲಿ ಸ್ಪರ್ಧಿಸುತ್ತಿರುವ ಅಮೂಲ್ಯ 60 ದಿನಗಳನ್ನು ಪೂರೈಸಿದ್ದಾರೆ. ವಾರವಾರವೂ ನಾಮಿನೇಟ್ ಆದ್ದರೂ ಅತಿ ಹೆಚ್ಚು ವೋಟ್ ಪಡೆದು ಸೇಫ್ ಆಗುತ್ತಿರುವ ಮೊದಲ ಸ್ಪರ್ಧಿ ಅಮೂಲ್ಯ ಗೌಡ. ರಾಕೇಶ್ ಅಡಿ ಮತ್ತು ಅಮೂಲ್ಯ ಗೌಡರನ್ನು ನ್ಯೂ ಲವ್ ಬರ್ಡ್ಸ್ ಎಂದು ರೇಗಿಸುತ್ತಿದ್ದಾರೆ. ಶೋ ಆರಂಭದಿಂದಲ್ಲೂ ಫ್ಯಾಮಿಲಿ ಬಗ್ಗೆ ಮಾತನಾಡುವ ಅಮೂಲ್ಯ ಅಣ್ಣ ಮತ್ತು ತಂದೆ ಥ್ಯಾಂಕ್ಸ್...
'ತಂದೆ ಮತ್ತು ಅಣ್ಣ ಎಷ್ಟು ನೋವು ಬೇಕಿದ್ದರೂ ತೆಗೆದುಕೊಳ್ಳುತ್ತಾರೆ ಆದರೆ ನನಗೆ ನೋವು ಗೊತ್ತಾಗ ಬಾರದು ಎಂದು ನೋಡಿಕೊಂಡರು. ಯಾಕೆ ಈ ರೀತಿ ಅಂತ ಗೊತ್ತಿಲ್ಲ..ಆದರೆ ನಾನು ಇವತ್ತು ತುಂಬಾನೇ ಲಕ್ಕಿ. ಈ ಕ್ಷಣನೂ ನನಗೆ ನೋವು ಗೊತ್ತಾಗಬಾರದು ಎಂದು ನೋಡಿಕೊಳ್ಳುತ್ತಿದ್ದಾರೆ. ಅಮ್ಮ ತೀರ್ಕೊಂಡಿರುತ್ತಾರೆ ನಾನು ಬೆಂಗಳೂರಿಗೆ ಬರ್ತೀನಿ ಸೀರಿಯಲ್ ಮಾಡ್ತೀನಿ ಅಪ್ಪ ಅಣ್ಣ ಮೈಸೂರಿನಲ್ಲಿ ಇರುತ್ತಾರೆ. ಒಂದು ಸಂದರ್ಭ ಬರುತ್ತೆ...ನಾನು ಮೈಸೂರಿಗೆ ಹೋಗಬೇಕು ಏಕೆಂದರೆ ಅಣ್ಣನಿಗೆ ಬೆಂಗಳೂರಿನ ಕೆಲಸ ಫಿಕ್ಸ್ ಆಗುತ್ತೆ. ನಾನು ಮೈಸೂರಿಗೆ ಹೋದರೆ ನನ್ನ ಕೆಲಸ ಹೋಗುತ್ತೆ ಅವನು ಬೆಂಗಳೂರಿಗೆ ಬರಬೇಕು ಅನ್ನೋ ಆಸೆ ತುಂಬಾ ಇತ್ತು. ತಾಯಿ ಹೋದ ನಂತರ ಮನೆ ಜವಾಬ್ದಾರಿ ಹೆಣ್ಣು ಮಗಳ ಕೈ ಸೇರುತ್ತದೆ ಆಗ ಅಣ್ಣ ಕಾಲ್ ಮಾಡಿ ಸಂಪೂರ್ಣ ವಿವರ ಕೊಡುತ್ತಾನೆ ನಾನು ಸರಿ ನನಗೆ ಆಯ್ಕೆ ಇಲ್ಲ ಮೈಸೂರಿಗೆ ಬರ್ತೀನಿ ಅಂತ ಹೇಳುತ್ತೀನಿ.' ಅಮೂಲ್ಯ ಮಾತನಾಡಿದ್ದಾರೆ.
'ಒಂದು ದಿನ ಅಣ್ಣ ಸಂಜೆ ಬೆಂಗಳೂರಿಗೆ ಬರ್ತಾನೆ ಅಂದು ರಾತ್ರಿ ನಾನು ಮೈಸೂರಿಗೆ ಹೊರಡಬೇಕಿತ್ತು...ಎಂದೂ ಅಣ್ಣನಿಗೆ ಥ್ಯಾಂಕ್ಸ್ ಹೇಳಿರಲಿಲ್ಲ ಈ ಬಿಗ್ ಬಾಸ್ ವೇದಿಕೆ ಮೂಲಕ ಹೇಳುತ್ತೀನಿ ಜೀವನದಲ್ಲಿ ಈ ಮಟ್ಟಕ್ಕೆ ಬಂದಿದ್ದೀನಿ ಅಂದ್ರೆ ಅದಕ್ಕೆ ಮೂರ್ನಾಲ್ಕು ಜನ ಕಾರಣ ಅದರಲ್ಲಿ ನೀನು ಒಬ್ಬ. ಅಂದು ರಾತ್ರಿ ಅಣ್ಣ ಬೆಂಗಳೂರಿಗೆ ಬರುವುದಿಲ್ಲ...ಕರೆ ಮಾಡಿ ನಾನು ಮೈಸೂರಿನಲ್ಲಿ ಕೆಲಸ ಹುಡುಕಿ ಅಲೇ ಜೀವನ ಕಟ್ಟಿಕೊಳ್ಳುತ್ತೇನೆ ನಿನಗೆ ತೊಂದರೆ ಆಗುವುದು ಬೇಡ ಎನ್ನುತ್ತಾನೆ. ಬೇರೆ ಅವರ ಜೀವನದಲ್ಲಿ ಈ ರೀತಿ ನಡೆದಿದ್ಯಾ ಅಂತ ನನಗೆ ಗೊತ್ತಿಲ್ಲ..ಅಣ್ಣ ಮತ್ತು ತಂದೆ ಪ್ರತಿ ಸಲವೂ ನನಗೋಸ್ಕರ ಅವರ ಕೆಲವ ಅವರ ಜೀವನದ ಮುಖ್ಯ ಗಳಿಗೆಗಳನ್ನು ಬಿಟ್ಟು ಕೊಡುತ್ತಿದ್ದರು. ಜೀವನದಲ್ಲಿ ಕಷ್ಟ ಅನುಭವಿಸಲು ಬಿಡಲಿಲ್ಲ. ತಂದೆ 60 ವರ್ಷದ ಮೇಲೆ ಆಗಿದೆ ಇವತ್ತಿಗೂ ನಾನು ಅವರಿಗೆ ಕರೆ ಮಾಡಿದ್ದರೆ ಎಷ್ಟೇ ನೋವಿದ್ದರೂ ವಾಯ್ಸ್ ಬದಲಾಯಿಸಿಕೊಂಡು ಮಾತನಾಡುತ್ತಾರೆ ಏಕೆಂದರೆ ನನ್ನ ವಾಯ್ಸ್ ಹೇಗಿದೆ ಎಂದು ತಿಳಿದುಕೊಳ್ಳುತ್ತಾರೆ ಸಮಸ್ಯೆ ಅನಿಸಿದ್ದರೆ ಇರು ಇರು ಬೆಂಗಳೂರಿಗೆ ಬರುತ್ತೀನಿ ಅಂತಾರೆ. ಅಷ್ಟು ಕೇರ್ ಮಾಡ್ತಾರೆ ನನ್ನ ಫ್ಯಾಮಿಲಿ ಅವರು' ಎಂದು ಹೇಳಿದ್ದಾರೆ.
BBK9 ಅಮ್ಮಾ ಅಂದಾಗ ರೆಸ್ಪಾಂಡ್ ಮಾಡಲು ಯಾರೂ ಇಲ್ಲ, ಈ ನೋವು ಯಾರಿಗೂ ಬೇಡ: ಅಮೂಲ್ಯ ಗೌಡ
ಕಳ್ಳತನ ಮಾಡುತ್ತಿದ್ದ ಅಮೂಲ್ಯ ಗೌಡ:
'ಅಣ್ಣ ನಾನು ಅವಾಗವಾಗ ಮನೆಯಲ್ಲಿ ದುಡ್ಡು ಎತ್ತುತ್ತಿದ್ವಿ. ನಮ್ಮ ಮನೆಯಲ್ಲಿ ಜಾಸ್ತಿ ಹಣ ಕದ್ರೆ ಅದು ನಮ್ಮ ಅಣ್ಣ ಮಾಡಿದ್ದಾನೆ ಅಂತ. 100 ರೂಪಾಯಿ ಕಡಿಮೆ ಕದ್ದರೆ ಅದು ನಾನು ಮಾಡಿದೆ ಅಂತ. ಅವನೇ ಮಾಡಿದ್ದರೂ ಅದು ನನ್ನ ಮೇಲೆ ಬರುತ್ತಿತ್ತು. ಇದೆಲ್ಲಾ ಕಾಲೇಜ್ ಟೈಂನಲ್ಲಿ ಆಗಿರುವುದು. ಅಮ್ಮಂಗೂ ಗೊತ್ತು ನಾವು ದುಡ್ಡು ಎತ್ತುತ್ತಿದ್ವಿ ಅಂತ ಅವರು ಬಿಡು ಮಕ್ಕಳು ಅಲ್ವಾ ಅಂತ ಸುಮ್ಮನಿದ್ದರು. ಒಂದು ದಿನ ಅಣ್ಣ 6 ಸಾವಿರ ರೂಪಾಯಿ ಎತ್ಕೊಂಡಿದ್ದಾನೆ. ನಮ್ಮ ಮನೆಯಲ್ಲಿ ಹೇಗೆ ಅಂದ್ರೆ ಒಂದು ತಿಂಗಳು ಆ ಹಣದ ಬಗ್ಗೆ ಮಾತನಾಡುತ್ತಿರಲಿಲ್ಲ ಆಮೇಲೆ ನಾವು ಅವತ್ತು ಅಲ್ಲಿ ಹುಡುಕುತ್ತಿದ್ದ ಹಣ ನಾನೆ ಎತ್ಕೊಂಡಿದ್ದು ಅಂತಿದ್ವಿ. ಆ 6 ಸಾವಿರ ರೂಪಾಯಿ ಅಣ್ಣನ ಪ್ಯಾಂಟ್‌ನಲ್ಲಿತ್ತು. ಹೊರಗಡೆ ಹೋಗಿ ಬಂದಿದ್ದ. ಅವತ್ತು ಅವನ ಜೇಬಿಗೆ ಕೈ ಹಾಕಿದ್ದರೆ ಹಣ ಜಾಸ್ತಿ ಇದೆ...ಮನೆಯಲ್ಲಿ ಯಾರೇ ಕದ್ದಿದ್ದರು ಅದು ನಮಗೆ ಗೊತ್ತಿರುತ್ತೆ ಏಕೆಂದರೆ ಒಂದು ಅವನು ಮಾಡಬೇಕು ಇಲ್ಲ ನಾನು ಮಾಡಬೇಕು. ನಾನು ಏನ್ ಮಾಡಿದೆ... ಅವನೇ ಪಿಕ್‌ಪಾಕೆಟ್ ಮಾಡಿರುವುದು. ನಾನು ಅವನ ಪಾಕೆಟ್‌ನಿಂದ ತೆಗೆದುಕೊಂಡೆ. ಗೊತ್ತಾದರೆ ಬೈಯುತ್ತಾನೆ ಎಂದು ಸಣ್ಣದಾಗಿ ಜೇಬಿಗೆ ತೂತು ಮಾಡಿದೆ ಅಂದ್ರೆ ಎಲ್ಲೂ ತೂತಾಗಿ ಬಿದಿತ್ತು ಅಂದುಕೊಳ್ಳಬೇಕು ಅಂತ. ಒಂದು ವಾರ ಅವನು ನನ್ನ ಜೊತೆ ಮಾತನಾಡಲಿಲ್ಲ. ಒಂದು ತಿಂಗಳು ಆದಮೇಲೆ ಅಮ್ಮಂಗೆ ಹೇಳಿದ. ಅಮ್ಮ ನಿನ್ನ ಮಗಳು ಎಷ್ಟು ಛತ್ರಿ ಅಂದ್ರೆ ನಾನೇ ನಿಮ್ಮ ಲಾಕರ್‌ನಿಂದ ಹಣ ಎತ್ತಿರುವುದು ...ಅವಳು ನನ್ನ ಪಾಕೆಟ್‌ನಿಂದ ತೆಗೆದುಕೊಂಡು ಪಾಕೆಟ್ ತೂತು ಮಾಡಿಟ್ಟಿದ್ದಾಳೆ' ಎಂದು ಸತ್ಯ ಹೇಳಿದ.