Asianet Suvarna News Asianet Suvarna News

Jothe jotheyali : ತನ್ನ ಹೆಸರನ್ನು ಆರ್ಯವರ್ಧನ್ ಎಂದು ಎಂಟ್ರಿ ಮಾಡೇಬಿಟ್ಟ ಸಂಜು!

ಸಂಜು ಅನ್ನೋ ಹೆಸರಿನಲ್ಲಿ ಸದ್ಯಕ್ಕೆ ಗುರುತಿಸಿಕೊಳ್ತಿರೋ ಆರ್ಯವರ್ಧನ್ 'ವರ್ಧನ್' ಕಂಪನಿಗೆ ಎಂಟ್ರಿ ಕೊಟ್ಟಿದ್ದಾನೆ. ಕಂಪನಿ ರಿಜಿಸ್ಟರ್ ಬುಕ್‌ನಲ್ಲಿ ತನ್ನ ಹೆಸರನ್ನು ಆರ್ಯವರ್ಧನ ಎಂದೇ ಬರೆದಿದ್ದಾನೆ. ಒಂದೊಂದಾಗಿ ಆರ್ಯನಿಗೆ ಎಲ್ಲವೂ ನೆನಪಾಗುತ್ತಾ?

In Jothe jotheyali serial Sanju wrote his name as Aryavardhan
Author
First Published Oct 14, 2022, 4:14 PM IST

ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಹೊಸ ಆರ್ಯವರ್ಧನ್ ವರ್ಧನ್‌ ಗ್ರೂಪ್‌ ಆಫ್‌ ಕಂಪನೀಸ್‌ಗೆ ಎಂಟ್ರಿ ಕೊಟ್ಟಾಯ್ತು. ಆದರೆ ಎಂಟ್ರಿ ಕೊಡ್ತಿದ್ದ ಹಾಗೆ ಇಲ್ಲೊಂದು ಮ್ಯಾಜಿಕ್‌ ಆಗಿದೆ. ಅದೇನು ಅಂದರೆ ಕಂಪನಿಯ ರಿಜಿಸ್ಟರ್‌ ಬುಕ್‌ನಲ್ಲಿ ರಿಸೆಪ್ಶನಿಸ್ಟ್‌ ವಿಸಿಟರ್‌ ಹೆಸರು ನಂಬರ್‌ ಎಂಟ್ರಿ ಮಾಡ್ಕೊಳ್ಳೋದು ರೂಢಿ. ಹೀಗೆ ಎಂಟ್ರಿ ಮಾಡ್ಕೊಂಡಾಗ ಅದರಲ್ಲಿ ತನ್ನ ಹೆಸರನ್ನು 'ಆರ್ಯವರ್ಧನ್‌' ಎಂದು ನಮೂದಿಸಿದ್ದಾನೆ. ಇದು ಎಷ್ಟು ಸಹಜವಾಗಿತ್ತು ಅಂದರೆ ಆ ಹೆಸರನ್ನು ಅಭ್ಯಾಸ ಬಲದಂತೆ ಆತ ಬರೆದಿರ್ತಾನೆ. ಅವನ ಅರಿವಿಗೇ ಬರದ ಹಾಗೆ ನಡೆದು ಹೋದ ಕೆಲಸ. ಆದರೆ ಇದು ಆತನ ಗಮನಕ್ಕೆ ಬಂದಾಗ ಆತನಿಗೇ ಶಾಕ್‌ ಆಗಿ ಬಿಡುತ್ತೆ. ಇಷ್ಟಕ್ಕೂ ಸಂಜು ಆಫೀಸಿಗೆ ಹಿಂದೊಮ್ಮೆ ಬಂದಿದ್ದಾನೆ. ತನ್ನ ಪಾಡಿಗೆ ತಾನು ನೇರ ಆಫೀಸಿಗೆ ಬಂದಿದ್ದು ನೋಡಿ ಮೀರಾ ಗಾಬರಿಯಾಗಿದ್ದಾಳೆ. ತಾನೇ ಆತನನ್ನು ಮನೆಗೆ ಕರೆದುಕೊಂಡು ಹೋಗೋದಾಗಿ ಹೇಳಿದ್ದಾಳೆ. ಆಮೇಲೆ ಅವರಿಬ್ಬರೂ ಅನು ಮನೆಗೆ ಬಂದಿದ್ದಾರೆ. ಅಕ್ಷತೆ ಹಾಕುವ ಸಮಯಕ್ಕೆ ಸರಿಯಾಗಿ ಸಂಜುವನ್ನು ಕಂಡು ಆತನ ತಾಯಿ ಪ್ರಿಯಾ ಮನಸ್ಸಲ್ಲೇ ತಾಯಿ ಯಲ್ಲಮ್ಮನಿಗೆ ನಮಿಸಿದ್ದಾಳೆ. ಬೇಗ ಎಲ್ಲವನ್ನೂ ಸರಿ ಮಾಡು ಎಂದು ದೇವಿಯಲ್ಲಿ ಬೇಡಿಕೊಂಡಿದ್ದಾಳೆ.

ಇನ್ನೊಂದು ಕಡೆ ಆನು ಉಡಿತುಂಬುವ ಶಾಸ್ತ್ರ ನಡೀತಿದೆ. ಮಗಳ ಹಣೆಗೆ ಕುಂಕುಮ ಇಡಲು ಅವಳ ತಾಯಿ ಹಿಂದೆ ಮುಂದೆ ನೋಡಿದಾಗ ಅನು ಸ್ವತಃ ತಾನೇ ಕುಂಕುಮ ಇಡುವಂತೆ ಹೇಳಿದ್ದಾಳೆ. ಆರ್ಯ ಸರ್‌ ಮನಸ್ಸಲ್ಲಿ ಇರುವವರೆಗೂ ತಾನು ಗಂಡ ಇಲ್ಲದವಳಲ್ಲ ಅನ್ನೋ ಮಾತನ್ನು ಹೇಳಿದ್ದಾಳೆ. ಕಣ್ಣೀರು ಹಾಕುತ್ತಲೇ ತಾಯಿ ಆಕೆಯ ಉಡಿ ತುಂಬಿದ್ದಾಳೆ. ಮನೆಯವರೆಲ್ಲ ಅಕ್ಷತೆ ಹಾಕಿ ಉಡಿ ತುಂಬಿದ್ದಾರೆ. ಅದೇ ಹೊತ್ತಿಗೆ ರಿಯಲ್‌ ಆರ್ಯವರ್ಧನ ಎಂಟ್ರಿ ಆಗಿದೆ. ಆತನ ಎಂಟ್ರಿ ಮುಖ್ಯವಾಗಿ ಆತನ ತಾಯಿ ಪ್ರಿಯ ಕಣ್ಣಲ್ಲಿ ಹೊಳಪು ತಂದಿದೆ. ಕಾರಣ ಆತನೇ ಆರ್ಯವರ್ಧನ ಎಂಬ ಸತ್ಯ ತಿಳಿದಿರೋದು ಆಕೆಗೆ ಮತ್ತು ಸಂಜು ತಂದೆಗೆ ಮಾತ್ರ. ಒಂದು ಹಂತ ಸಂಜು ತಾನೂ ಅಕ್ಷತೆ ಹಾಕಬಹುದಾ ಅಂತ ಕೇಳಿದ್ದಾನೆ. ಶಾರದಾ ದೇವಿಯೂ ಸೇರಿ ಮನೆಯವರು ಇದಕ್ಕೆ ಸಮ್ಮತಿಸಿದ್ದಾರೆ. ಆದರೆ ಪ್ರತೀ ಹಂತದಲ್ಲೂ ಸಂಜು ನಡೆ ನುಡಿಯಲ್ಲಿ ಆರ್ಯ ಸಾರ್ ಲಕ್ಷಣವನ್ನೇ ನೋಡುತ್ತಿರುವ ಅನು ಕಣ್ಣಲ್ಲಿ ನೀರು ಹರಿದಿದೆ.

ಹೊಂಗನಸು: ರಿಷಿ ಸಾರ್ ಹತ್ರ ಬಂದ್ರೆ ವಸುಂಧರಾ ಎದೆಯಲ್ಲಿ ಢವ ಢವ

ಮನೆಯವರೆಲ್ಲ ಹೊರಟಾಗ ಸಂಜು ತಂದೆ ತಾಯಿ ಊರಿಗೆ ಹೊರಡೋ ವಿಚಾರ ತಿಳಿಸ್ತಾರೆ. ಹೇಗಿದ್ದರೂ ಸಂಜು ಆಫೀಸಿಗೆ ಹೋಗೋ ಕಾರಣ ತಾವು ಊರಿಗೆ ಹೊರಡೋದಾಗಿ ತಿಳಿಸಿದ್ದಾರೆ. ಈವೇಳೆ ಅನುಗೆ ಸಂಜುನೂ ಆಫೀಸಿಗೆ ಬರ್ತಿದ್ದಾನೆ ಅನ್ನೋದು ಗೊತ್ತಾಗಿದೆ. ಆಕೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಸಂಜು ಆರ್ಯನ ತಮ್ಮ ಅನ್ನೋ ಕಾರಣಕ್ಕಾಗಿ, ಅನುಕಂಪ(Simpathy)ದ ಆಧಾರದಲ್ಲಿ ಆತನನ್ನು ಆಫೀಸಿ(Offive)ಗೆ ಕರೆಸಿಕೊಂಡರೆ ಉದ್ಯೋಗಿಗಳೆಲ್ಲ ಬೇರೆ ರೀತಿ ಭಾವಿಸಬಹುದು, ಅವರನ್ನು ಆಫೀಸಿಗೆ ಸೇರಿಸೋದು ಬೇಡ ಅಂತಲೇ ಹೇಳ್ತಾಳೆ. ಆದರೆ ಮಾನ್ಸಿಯೂ ಆತನಿಗೆ ನಾವೆಲ್ಲ ಗೈಡ್‌(Guide) ಮಾಡ್ತೀವಿ ಅಂದಾಗ ಅನು ಅನಿವಾರ್ಯವಾಗಿ ಸುಮ್ಮನಾಗಬೇಕಾಗುತ್ತದೆ.

Hitler Kalyana: ಏಜೆ ಅಂತರಾ ಮದ್ವೆ ಆಗಿ ಬರೀ ಹದಿನಾಲ್ಕು ವರ್ಷವೇ ಆಗಿದ್ದಾ? ವೀಕ್ಷಕರ ಪ್ರಶ್ನೆ!

ಮತ್ತೊಂದು ಕಡೆ ಅನು ತಾನೂ ಆಫೀಸಿಗೆ ಬರೋದಾಗಿ ಹೇಳಿದ್ದಾಳೆ. ಬೆಡ್‌ರೆಸ್ಟ್‌(Bed rest) ಹೇಳಿದ್ದರೂ ಮನೆಯಲ್ಲಿ ಇರಲಿಕ್ಕಾಗದ ಕಾರಣ ತಾನು ಆಫೀಸಿಗೆ ಬರ್ತಿರೋದಾಗಿ ತಿಳಿಸಿದ್ದಾಳೆ. ಇನ್ಮೇಲೆ ಅನು-ಆರ್ಯ ಮತ್ತೆ ಆಫೀಸಲ್ಲಿ ಮೀಟ್(Meet) ಮಾಡ್ತಾರೆ. ಯಾವುದೋ ಒಂದು ಘಳಿಗೆಯಲ್ಲಿ ಈತನಿಗೆ ತನ್ನ ಹಿಂದಿನ ವಿಚಾರಗಳೆಲ್ಲ ತಿಳಿಯಬಹುದಾ ಅನ್ನೋದನ್ನು ಕಾದು ನೋಡಬೇಕು. ಹರೀಶ್‌ ರಾಜ್ ಆರ್ಯವರ್ಧನ್ ಪಾತ್ರದಲ್ಲಿ, ಮೇಘಾ ಶೆಟ್ಟಿ ಅನು ಸಿರಿಮನೆ ಪಾತ್ರದಲ್ಲಿ, ವಿಜಯಲಕ್ಷ್ಮೀ ಸಿಂಗ್ ಶಾರದಾ ದೇವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

 

In Jothe jotheyali serial Sanju wrote his name as Aryavardhan

 

Follow Us:
Download App:
  • android
  • ios