ಹೊಂಗನಸು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗ್ತಿರೋ ಸೀರಿಯಲ್. ಇದರಲ್ಲಿ ಒಂದು ಕ್ಯೂಟ್ ಲವ್ ಸ್ಟೋರಿ ಇದೆ. ಅದು ಎಲ್ಲರಿಗೂ ಇಷ್ಟ ಆಗುವ ರೀತಿ ಇದೆ. ರಿಷಿ ಸಾರ್‌ಗೆ ತನ್ನ ಸ್ಟೂಡೆಂಟ್ ವಸುಂಧರಾಗೆ ಮ್ಯಾತ್ಸ್ ಪ್ರಾಬ್ಲಂ ಹೇಳಿಕೊಡುವಾಗ ವಸು ಎದೆಯಲ್ಲಿ ಢವ ಢವ, ಮನಸ್ಸು ಎಲ್ಲೆಲ್ಲೋ ಹೋಗ್ಬಿಟ್ಟಿದೆ.

ಹೊಂಗನಸು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್. ಪ್ರೀತಿಯ ಕಚಗುಳಿ ಈ ಸೀರಿಯಲ್‌ನ ಹೈಲೈಟ್. ಇದರಲ್ಲಿ ವಸುಧರಾ ಮತ್ತು ರಿಷಿ ಸಾರ್ ಲವ್‌ ಸ್ಟೋರಿಗಾಗಿ ಕಾಲೇಜ್ ಹುಡುಗ್ರು ಈ ಸೀರಿಯಲ್‌ನ ಹೆಚ್ಚು ಆಸಕ್ತಿಯಿಂದ ನೋಡ್ತಾರೆ. ರಿಷಿ ಸರ್ ಮತ್ತು ವಸುಂಧರಾ ನಡುವಿನ ಪ್ರೀತಿಯನ್ನು ಎಲ್ಲರ ಗಮನ ಸೆಳೆಯೋ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ರಿಷಿ ಗೆಳೆಯ ಗೌತಮ್ ಕೂಡ ವಸುಗೆ ಕಾಳು ಹಾಕ್ತಿದ್ದಾನೆ. ಆದರೆ ಈ ಹುಡುಗನಿಗೆ ಹುಡುಗಿಯನ್ನು ಒಲಿಸಿಕೊಳ್ಳೋದಕ್ಕೆ ಸ್ವಂತ ಟ್ಯಾಲೆಂಟ್ ಇಲ್ಲ. ಅದಕ್ಕಾಗಿ ಆತ ಫ್ರೆಂಡ್ ರಿಷಿಯ ಕೆಲಸವನ್ನು ತನ್ನದೇ ಅಂತ ಹೇಳ್ಕೊಳ್ತಾನೆ ಮತ್ತು ಎಡವಟ್ಟನ್ನೂ ಮಾಡ್ಕೊಳ್ತಾನೆ. ಈ ಹಿಂದೆ ರಿಷಿ ಹತ್ರ ತನಗೊಂದು ಲವ್‌ ಲೆಟರ್ ಬರೆದುಕೊಡು, ಇದನ್ನು ಕಾಂಪಿಟೀಷನ್‌ಗೆ ಕಳಿಸ್ತೀನಿ ಅಂತಾನೆ. ಅದರಂತೆ ರಿಷಿ ಗೌತಮ್‌ಗೆ ಲವ್‌ ಲೆಟರ್ ಬರೀತಾನೆ. ಆದರೆ ಆ ಲೆಟರನ್ನು ರಿಷಿ ಬರ್ದಿದ್ದು ತನ್ನ ಮನಸ್ಸಲ್ಲಿ ಹೃದಯದಲ್ಲಿ ಕೂತಿರುವ ವಸುಗಾಗಿ. ಆದರೆ ಕಳ್ಳ ಗೌತಮ್ ಇದರಲ್ಲಿ ವಸುಧರಾ ಹೆಸರು ಬರೆದು ಅದನ್ನು ಮತ್ತೆಲ್ಲೋ ಬೀಳಿಸಿ ಎಡವಟ್ಟು ಮಾಡಿಕೊಳ್ಳುತ್ತಾನೆ. ಆ ಲೆಟರ್ ಜಗತಿ ಕೈ ಸೇರುತ್ತೆ. ಈ ಲೆಟರ್ ನೋಡಿ ಕೆಂಡಾಮಂಡಲವಾಗುವ ಜಗತಿ ಲೆಟರನ್ನು ಹರಿದು ಪೀಸ್ ಪೀಸ್ ಮಾಡಿ ಹಾಕ್ತಾಳೆ. ಎಲ್ಲರೆದುರು ಲೆಟರ್ ಬರೆದವರಿಗೆ ಛೀಮಾರಿ ಹಾಕ್ತಾಳೆ. ಆಕೆ ಹೋದ ಮೇಲೆ ರಿಷಿ ಆ ಹರಿದ ಚೂರುಗಳನ್ನು ತನ್ನ ಜೋಬಿಗೆ ಹಾಕಿಕೊಳ್ತಾನೆ.

ಹಿಟ್ಲರ್ ಕಲ್ಯಾಣದಲ್ಲಿ ಏಜೆ - ಅಂತರಾ ಲವ್‌ಸ್ಟೋರಿ: ದಿಲೀಪ್‌ ರಾಜ್ ಯಂಗ್ ಲುಕ್‌ಗೆ ವೋವ್ ಎಂದ ಫ್ಯಾನ್ಸ್!

ಅದನ್ನು ಮತ್ತೆ ಅಂಟಿಸಿ ಇಡುತ್ತಾನೆ. ಆದರೆ ಇನ್ನೊಮ್ಮೆ ಕ್ಲಾಸಿನಲ್ಲಿ ವಸು ಪುಸ್ತಕದಿಂದ ಆ ಲೆಟರ್ ಕೆಳಬೀಳುತ್ತದೆ. ಅದ್ಯಾವ ಮಾಯದಲ್ಲೋ ಲೆಟರ್ ಮತ್ತೆ ವಸು ಕೈ ಸೇರಿರುತ್ತೆ. ಅವಳಿಗೆ ಇದನ್ನು ಬರೆದದ್ದು ರಿಷಿ ಸರ್ ಅಂತ ಗೊತ್ತಿದೆ. ತನಗೆ ಈ ಲೆಟರ್ ಬರೆದವನನ್ನು ಕಂಡು ಹಿಡಿದೇ ಹಿಡೀತೀನಿ ಅಂತ ಅವಳು ರಿಷಿ ಎದುರಿಗೇ ಚಾಲೆಂಜ್ ಹಾಕ್ತಾಳೆ. ಇನ್ನೊಂದೆಡೆ ರಿಷಿ ತಂದೆ ಮಹೇಂದ್ರನಿಗೆ ಹೃದಯಾಘಾತವಾಗಿದೆ. ಬೇರೆಯಾಗಿ ನೆಲೆಸುತ್ತಿರುವ ಮಹೇಂದ್ರನ ಪತ್ನಿ, ತನ್ನ ತಾಯಿ ಜಗತಿಯನ್ನು ಕಂಡರೆ ರಿಷಿಗೆ ಸಿಟ್ಟು. ಅದಕ್ಕಾಗಿ ಆತ ಜಗತಿ ಬಳಿ ಮುಖ ಕೊಟ್ಟು ಮಾತಾಡೋದಿಲ್ಲ. ಆದರೆ ತನ್ನ ಅಪ್ಪನಿಗಾಗಿ ಹಬ್ಬದ ನೆವದಲ್ಲಿ ಜಗತಿಯನ್ನು ರಿಷಿ ಮನೆಗೆ ಕರೆಸಿದ್ದಾನೆ. ವಸುನೂ ಜೊತೆ ಬಂದಿದ್ದಾಳೆ. ಸದಾ ಮನೆಯವರ ದುಃಖವನ್ನೇ ಬಯಸುವ ರಿಷಿ ದೊಡ್ಡಮ್ಮನಿಗೆ ಇದು ಇಷ್ಟವಾಗಲಿಲ್ಲ. ಆದರೆ ಮನೆಯವರೆಲ್ಲ ಈ ವಿಚಾರಕ್ಕೆ ಖುಷಿ ಪಟ್ಟರು. ಜಗತಿ ಜೊತೆಯಲ್ಲೇ ಇರುವ ವಸುಧರಾನೂ ಇದರಿಂದ ಖುಷಿ ಆದ್ಲು. ಆದರೆ ಜಗತಿ ಮ್ಯಾಡಂನ ಉಳಿದುಕೊಳ್ಳಲೂ ಹೇಳದೇ ವಾಪಾಸ್ ಕಳಿಸಿದ್ದಕ್ಕೆ ವಸುಗೆ ರಿಷಿ ಮೇಲೆ ಅಸಮಾಧಾನವಾಗಿದೆ. ಆತ ತನ್ನ ಮನೆಯಲ್ಲಿ ವ್ಯವಸ್ಥೆ ಹೇಗಿತ್ತು ಅಂತ ಕೇಳಿದಾಗ ವಸು, ವ್ಯವಸ್ಥೆ ಏನೋ ಚೆನ್ನಾಗಿತ್ತು, ಆದರೆ.. ಅಂತ ರಿಪ್ಲೈ ಮಾಡ್ತಾಳೆ. ಇದಕ್ಕೆ ರಿಷಿ ಗುಡ್ ನೈಟ್ ಅಂತಷ್ಟೇ ಕಳಿಸಿ ಸುಮ್ಮನಾಗ್ತಾನೆ.

ಇನ್ನೊಂದೆಡೆ ಕ್ಲಾಸಿನಲ್ಲಿ ವಸು ತನಗೆ ಅರ್ಥವಾಗದ ಮ್ಯಾತ್ಸ್ ಸಮಸ್ಯೆಯನ್ನು ಬಿಡಿಸಲು ಒದ್ದಾಡುತ್ತಿದ್ದಾಳೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ರಿಷಿಯನ್ನೂ ಗಮನಿಸೋದಿಲ್ಲ. ಅವಳಿಗೆ ತೀರ ಹತ್ತಿರದಲ್ಲಿ ನಿಂತ ರಿಷಿ ಅವಳ ಸಮಸ್ಯೆ ಕೇಳ್ತಾನೆ. ಸ್ವಲ್ಪ ಕೊಂಕು ತೆಗೆದರೂ ಆಮೇಲೆ ಅವಳ ಪಕ್ಕ ಕೂತು ಲೆಕ್ಕ ಹೇಳಿಕೊಡಲು ಮುಂದಾಗುತ್ತಾನೆ. ಆತ ಅಷ್ಟು ಹತ್ತಿರ ಕೂತಿದ್ದು ವಸು ಎದೆಯಲ್ಲಿ ಢವ ಢವ. ಆಕೆಗೆ ರಿಷಿ ಹೇಳಿಕೊಡುವ ಮ್ಯಾತ್ಸ್‌(Maths)ನಲ್ಲಿ ಕಾನ್ಸನ್‌ಟ್ರೇಟ್ (Concentrate)ಮಾಡೋದಕ್ಕೇ ಆಗೋದಿಲ್ಲ. ಅವಳ ಮನಸ್ಸು ಎಲ್ಲೆಲ್ಲೋ ಹೋಗುತ್ತೆ. ರಿಷಿ ಸಾರ್‌ ಗಮನಕ್ಕೂ ಇದು ಬರುತ್ತೆ. ಇದೇ ಲೆಕ್ಕವನ್ನು ಮತ್ತೆ ಸಂಜೆ ಹೇಳಿಕೊಡೋದಾಗಿ ಆತ ಹೇಳಿದ್ದಾನೆ.

ಜೊತೆ ಜೊತೆಯಲಿ: ಸಂಜುವೇ ಆರ್ಯ ಅನ್ನೋದು ಗೊತ್ತಾದ್ರೆ ಆರ್ಯನ ಪ್ರಾಣಕ್ಕೇ ಅಪಾಯ! ಕೊಲೆಗಾರರು ಯಾರು?

ಹೊಂಗನಸು ಸೀರಿಯಲ್ ತೆಲುಗಿನ 'ಗುಪ್ಪೆದಂಥಾ ಮನಸು' ಸೀರಿಯಲ್‌ನ ಡಬ್ಬಿಂಗ್ (Dubbing). ಮೂಲದಲ್ಲಿ ಸ್ಟಾರ್ ಜಲ್ಸಾದಲ್ಲಿ ಪ್ರಸಾರವಾಗ್ತಿದ್ದ 'ಮೊಹರ್' ಸೀರಿಯಲ್ ಇದು. ಇದು ಡಬ್ಬಿಂಗ್ (Dubbing) ಸೀರಿಯಲ್ ಆದ್ರೂ ಕನ್ನಡಿಗರು ಇದರಲ್ಲಿನ ಕಥೆಯನ್ನು ಎನ್‌ಜಾಯ್(Enjoy) ಮಾಡ್ತಿದ್ದಾರೆ. ಇದರಲ್ಲಿ ನಟಿಸ್ತಿರೋ ಪ್ರಮುಖ ಕಲಾವಿದರೆಲ್ಲ ಕನ್ನಡದವರೇ. ಹೀರೋ ಮುಖೇಶ್ ಗೌಡ, ನಾಯಕಿ ರಕ್ಷಾ ಗೌಡ, ಜಗತಿ ಪಾತ್ರ ನಿರ್ವಹಿಸುವ ಜ್ಯೋತಿ ರೈ ಎಲ್ಲ ಕನ್ನಡದ ಕಲಾವಿದರು ಅನ್ನೋದು ವಿಶೇಷ. ಈ ಸೀರಿಯಲ್‌ನಿಂದಾಗಿ ಇವರಿಗೆ ತೆಲುಗು ಭಾಷೆಯಲ್ಲೂ ಅತ್ಯುತ್ತಮ ಫ್ಯಾನ್(Fans) ಫಾಲೊವಿಂಗ್‌ ಇದೆ.