ಹಿಟ್ಲರ್ ಕಲ್ಯಾಣ ಸೀರಿಯಲ್‌ನ ವೀಕ್ಷಕರಿಗೆ ಹೊಸ ಅನುಮಾನ ಶುರುವಾಗಿದೆ. ಅಂತರಾ ಮತ್ತು ಏಜೆ ನಡುವಿನ ಲವ್‌ಸ್ಟೋರಿ ತೋರಿಸೋ ಭರದಲ್ಲಿ ಅವರಿಗೆ 2006ರಲ್ಲಷ್ಟೇ ಮದುವೆ ಆಗಿದ್ದು ಅನ್ನೋ ಹಾಗೆ ಬಿಂಬಿಸಲಾಗಿದೆ. ಇದರಿಂದ ಏಜೆ ಬಗ್ಗೆ ಈಗಿರುವ ಲೆಕ್ಕಾಚಾರಗಳೆಲ್ಲ ತಲೆ ಕೆಳಗಾಗಿದೆ.
ಹಿಟ್ಲರ್ ಕಲ್ಯಾಣ ಸೀರಿಯಲ್‌ನಲ್ಲಿ ಹಿಟ್ಲರ್ ಸ್ವಭಾವದ ಏಜೆ ಮತ್ತು ಸಿಕ್ಕಾಪಟ್ಟೆ ಒಳ್ಳೆಯವಳಾದ ಲೀಲಾ ನಡುವಿನ ಎಪಿಸೋಡ್‌ಗಳ ನಡುವೆ ಇದೀಗ ಏಜೆ ಅಂತರಾ ಲವ್‌ಸ್ಟೋರಿ ಬರ್ತಿದೆ. ಅಂತರಾಳ ಸಹೋದರನಿಗೆ ಏಜೆಯೇ ತನ್ನ ತಂಗಿ ಅಂತರಾಳನ್ನು ಕೊಂದಿದ್ದು ಅನ್ನೋದು ಮನಸ್ಸಲ್ಲಿದೆ. ಹೀಗಾಗಿ ಆತ ಏಜೆಯನ್ನು ಹೇಗಾದರೂ ಮಾಡಿ ಕೊಲ್ಲುವ ಪ್ಲಾನ್ ಮಾಡ್ತಿದ್ದಾನೆ. ಆತ ಮೊದಲೇ ಲೀಲಾಗೆ ಕಾಲ್ ಮಾಡಿ ಏಜೆ ನೀವೆಲ್ಲ ತಿಳಿದಿರುವ ಹಾಗೆ ಒಳ್ಳೆಯವನಲ್ಲ, ನನ್ನ ಸೋದರಿ ಅಂತರಾಳ ಸಾವಿಗೆ ಅವನೇ ಕಾರಣ ಎನ್ನುತ್ತಾ ಲೀಲಾಳ ಮನಸ್ಸು ತಿರುಗಿಸುವ ಪ್ರಯತ್ನ ಮಾಡುತ್ತಾನೆ. ಆದರೆ ಲೀಲಾ ಏಜೆಯನ್ನು ನಂಬುತ್ತಾಳೆ. ಹೇಗಾದರೂ ಆತನಿಂದ ಏಜೆಯನ್ನು ರಕ್ಷಿಸಬೇಕು ಅಂತ ಎಚ್ಚರಿಕೆಯಿಂದ ಇರುತ್ತಾಳೆ. ಆತ ಕೊಲೆಯ ಹುನ್ನಾರ ತಪ್ಪಿಸೋ ಪ್ಲಾನ್ ಮಾಡ್ತಾಳೆ. ಆದರೆ ಈ ನಡುವೆ ಏಜೆ ಅಂತರಾ ನಡುವಿನ ಪ್ರೇಮದ ದ್ಯೋತಕದಂತಿದ್ದ ಗಿಫ್ಟ್ ಅನ್ನೇ ಕೆಳಗೆ ಬೀಳಿಸುತ್ತಾಳೆ. ಇದರಿಂದ ಸಿಟ್ಟಾದ ಏಜೆ ಲೀಲಾಳ ಕತ್ತು ಹಿಸುಕುತ್ತಾನೆ. ಶಾಂತನಾದ ಬಳಿಕ ಆತ ತನಗೆ ಅಂತರಾ ಮೇಲಿರುವ ಪ್ರೀತಿಯನ್ನು ಹೇಳುತ್ತಾ ಅಂತರಾ ಸಹೋದರನೂ ತನಗೆ ಅಂತರಾಳಷ್ಟೇ ಪ್ರಿಯನಾದವನು ಎನ್ನುತ್ತಾ ಆತನ ಮೇಲಿನ ನಂಬಿಕೆ ಬಗ್ಗೆ ಹೇಳ್ತಾನೆ. ಇತ್ತ ಏನು ಮಾಡಲೂ ತೋಚದ ಲೀಲಾ ಏಜೆ ತಾಯಿಗೆ ಫೋನ್ ಮಾಡುತ್ತಾಳೆ. ಅಜ್ಜಿ ಬಾಯಿಂದ ಏಜೆ ಅಂತರಾ ಲವ್‌ಸ್ಟೋರಿ ಓಪನ್ ಆಗುತ್ತೆ.
ಏಜೆ ಅಂತರಾ ನಡುವಿನ ಲವ್ ಸ್ಟೋರಿಯನ್ನು ವೀಕ್ಷಕರೂ ಎನ್‌ಜಾಯ್ ಮಾಡುತ್ತಿದ್ದಾರೆ. ಆದರೆ ಈಗಿಂದ ಇಪ್ಪತ್ತು ವರ್ಷ ಹಿಂದಿನ ಲವ್‌ಸ್ಟೋರಿ ಇದು ಅಂದುಕೊಂಡಿರುವ ವೀಕ್ಷಕರಿಗೆ ಕನ್‌ಫ್ಯೂಶನ್ಸ್ ಶುರುವಾಗಿದೆ. ಏಜೆ ನಲವತ್ತೈದರ ಆಸುಪಾಸಿನ ಮಧ್ಯ ವಯಸ್ಕ ಅಂದುಕೊಂಡವರಿಗೆ ಆತ ಇನ್ನೂ ನಲವತ್ತರ ಪ್ರಾಯವನ್ನೇ ತಲುಪಿಲ್ಲವೇನೋ ಅನ್ನೋ ಅನುಮಾನ ಶುರುವಾಗಿದೆ. ಇದಕ್ಕೆ ಕಾರಣ ಕಾಲೇಜಿನ ಪದವಿ ಪ್ರದಾನ ಸಮಾರಂಭದ ಬೋರ್ಡ್‌ನಲ್ಲಿರೋ ಇಸವಿ. ಅದರಲ್ಲಿ 2006-07ನೇ ಸಾಲಿನ ಕಾನ್ವಕೇಶನ್ ಅಂತಿದೆ. ಆ ಹೊತ್ತಿಗೆ ಏಜೆ ವಯಸ್ಸನ್ನು ಇಪ್ಪತ್ತೈದರ ಆಸುಪಾಸಿನ ಯುವಕನ ಹಾಗೆ ತೋರಿಸಲಾಗಿದೆ. ಏಜೆ ಇಷ್ಟು ಚಿಕ್ಕವನಾದರೆ ಅಷ್ಟು ದೊಡ್ಡ ಸೊಸೆಯರಿರುವುದು ಹೇಗೆ ಅಂತ ವೀಕ್ಷಕರು ಪ್ರಶ್ನೆ ಮಾಡಿದ್ದಾರೆ. ಆದರೆ ಅವರ್ಯಾರೂ ಏಜೆಯ ನೇರ ಸೊಸೆಯರಲ್ಲ ಅನ್ನೋದು ಈ ಹಿಂದಿನ ಸಂಚಿಕೆಯಲ್ಲೆ ತೋರಿಸಲಾಗಿದೆ. ಆದರೂ ಸದ್ಯಕ್ಕೆ ಏಜೆ ವಯಸ್ಸಿನ ಬಗೆಗಿನ ಗೊಂದಲ ಮುಂದುವರಿದಿದೆ.
ಜೊತೆ ಜೊತೆಯಲಿ: ಆರ್ಯವರ್ಧನ್ ಸುಳಿವು ಕೊಟ್ಟ ಜೋಗವ್ವ
ಆದರೆ ಅಂತರಾಳನ್ನು ಹುಚ್ಚನಂತೆ ಪ್ರೇಮಿಸುವ ಏಜೆ ಅವಳ ಸಣ್ಣ ಅನುಪಸ್ಥಿತಿಯನ್ನೂ ಸಹಿಸದ ಏಜೆಗೆ ಅವಳನ್ನೇ ಕಳೆದುಕೊಂಡರೆ ಎಷ್ಟರ ಮಟ್ಟಿನ ನೋವಾಗಬಹುದು ಅನ್ನೋದನ್ನು ಕಥೆ ಸೊಗಸಾಗಿ ರಿವೀಲ್(Reveal) ಮಾಡಿದೆ. ಇದರಲ್ಲೊಂದು ಸೀನ್(Scene) ಬರುತ್ತೆ, ಅದರಲ್ಲಿ ಈತನ ಅತಿ ಪ್ರೀತಿಯಿಂದ ಆದ ಮುಜುಗರದ ಬಗ್ಗೆ ಬೇಸರದಿಂದಿರುವ ಅಂತರಾಗೆ ಅವಳ ಅತ್ತೆಯೇ ಒಂದು ಪರಿಹಾರ ಸೂಚಿಸುತ್ತಾರೆ. ಏಜೆ ಬಳಿ ಆಕೆ ಮನೆ ಬಿಟ್ಟು ಹೋಗ್ತಿದ್ದಾಳೆ ಅಂತ ಏಜೆ ಅಮ್ಮ ಹೇಳ್ತಾರೆ. ಇದರಿಂದ ಕಂಗಾಲಾಗಿ ಕೈ ಕಾಲೇ ಆಡದ ಸ್ಥಿತಿಗೆ ಬಂದ ಏಜೆ ಅಂತರಾ ಬಳಿ ಅತ್ತು ಕರೆದು ಗೋಗರೆಯುತ್ತಾನೆ, ನನ್ನ ಬಿಟ್ಟು ಹೋಗ್ಬೇಡ ಅಂತ. ಕೊನೆಗೆ ಅಂತರಾ ಆಡ್ತಿರೋದು ನಾಟಕ ಅಂತ ಗೊತ್ತಾದಾಗ ಭಾವನೆಗೆ ಹರ್ಟ್(Hurt) ಆಗಿ ಸಿಟ್ಟು ಮಾಡಿಕೊಳ್ತಾನೆ.
ಒಂದು ಕಡೆ ಅತ್ತಿಗೆಯ ಚಿಂತಾಜನಕ ಸ್ಥಿತಿ, ಇನ್ನೊಂದು ಕಡೆ ಚಾರು 15 ಲಕ್ಷದ ಪಾರ್ಟಿ
ಇಷ್ಟು ಪ್ರೀತಿಸುತ್ತಿದ್ದ(Love) ಅಂತರಾ ಬೇರೆ ಆದಾಗ ಏಜೆಗೆ ಎಷ್ಟು ನೋವಾಗಿರಬಹುದು ಅನ್ನೋದನ್ನು ವೀಕ್ಷಕರು ಊಹೆ ಮಾಡಬಹುದು. ದಿಲೀಪ್ ರಾಜ್ ನಿರ್ದೇಶನದ ಸೀರಿಯಲ್ ಇದು. ಯಂಗ್(Young) ಮತ್ತು ಮಧ್ಯ ವಯಸ್ಕ ಏಜೆಯಾಗಿ ದಿಲೀಪ್ ರಾಜ್ ಅವರೇ ನಟಿಸಿದ್ದಾರೆ. ಅಂತರಾ ಪಾತ್ರದಲ್ಲಿ ರಜನಿ, ಲೀಲಾ ಪಾತ್ರದಲ್ಲಿ ಮಲೈಕಾ ವಸುಪಾಲ್‌ನಟಿಸಿದ್ದಾರೆ. ಏಜೆ ತಾಯಿ ಪಾತ್ರದಲ್ಲಿ ವಿದ್ಯಾಮೂರ್ತಿ ನಟಿಸಿದ್ದಾರೆ. ಜೀ ಕನ್ನಡದಲ್ಲಿ ಈ ಸೀರಿಯಲ್(Serial) ಪ್ರಸಾರವಾಗುತ್ತಿದೆ.

