Asianet Suvarna News Asianet Suvarna News

Jothe jotheyali: ಅನು ಜೀವ ತೆಗೆಯುವ ಝೇಂಡೆ ಪ್ರಯತ್ನ ವಿಫಲ, ಅನು ಜೀವ ಉಳಿಸಿದ ಆರ್ಯ

ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಅನು ಜೀವ ತೆಗೆಯುವ ಝೇಂಡೆ ಪ್ರಯತ್ನ ವಿಫಲವಾಗಿದೆ. ಉರಳಲ್ಲಿ ಕಾಲು ಸಿಕ್ಕಾಕಿಕೊಂಡು ನೀರಿಗೆ ಬಿದ್ದ ಅನುವನ್ನು ಆರ್ಯ ರಕ್ಷಿಸಿದ್ದಾನೆ. ಆದರೆ ಆರತಿಗೆ ಹೊಸ ಆರ್ಯನ ಮೇಲೆ ಅನುಮಾನ ಹೆಚ್ಚಿದೆ.

 

In Jothe jotheayali serial new twist
Author
First Published Oct 1, 2022, 12:43 PM IST

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಸೀರಿಯಲ್‌ ಅನೇಕ ಕಾರಣಗಳಿಗೆ ಇತ್ತೀಚೆಗೆ ಸುದ್ದಿಯಲ್ಲಿತ್ತು. ಆರ್ಯವರ್ಧನ ಪಾತ್ರ ಮಾಡುತ್ತಿದ್ದ ಅನಿರುದ್ಧ ಜತ್ಕರ್ ಅವರನ್ನು ಈ ಸೀರಿಯಲ್‌ನಿಂದ ಹೊರಗಿಟ್ಟಿದ್ದು ಇದಕ್ಕೆ ಕಾರಣ. ಅವರ ಬಳಿಕ ಈ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋದೇ ಕುತೂಹಲ ಮೂಡಿಸಿತ್ತು. ವಿಕ್ರಾಂತ್ ರೋಣ ಸಿನಿಮಾ ನಿರ್ದೇಶಕ ಅನೂಪ್‌ ಭಂಡಾರಿ ಸೇರಿ ಹಲವರ ಹೆಸರು ಲಿಸ್ಟ್‌ನಲ್ಲಿತ್ತು. ಆದರೆ ಫೈನಲ್‌ ಆಗಿ ಅನಿರುದ್ಧ ಪಾತ್ರಕ್ಕೆ ಆಯ್ಕೆ ಆದದ್ದು ಹರೀಶ್ ರಾಜ್. ಇದೀಗ ಹೊಸ ಅನಿರುದ್ಧ ಬಂದಾಗಿದೆ. ರಾಜ ನಂದಿನಿಯನ್ನು ಪ್ರವೇಶಿಸಿದ್ದೂ ಆಗಿದೆ. ಆದರೆ ಈತನೇ ಆರ್ಯವರ್ಧನ ಅನ್ನೋದು ಮಾತ್ರ ಮನೆಯಲ್ಲಿ ಯಾರಿಗೂ ತಿಳಿದಿಲ್ಲ. ಪ್ರಿಯದರ್ಶಿನಿ ಇದನ್ನು ಮನೆಯವರಿಂದ ವಿನಾಕಾರಣ ಮುಚ್ಚಿಟ್ಟಿದ್ದಾಳೆ. ವಿಶ್ವಾಸನ ಚಿತಾ ಭಸ್ಮವನ್ನೇ ಆರ್ಯವರ್ಧನನ ಹೆಸರಲ್ಲಿ ನದಿಗೆ ಬಿಡಲಾಗಿದೆ. ಮನೆಯವರೆಲ್ಲ ಸೇರಿ ಅಸ್ಥಿ ಹಾಗೂ ಚಿತಾ ಭಸ್ಮ ವಿಸರ್ಜನೆಗೆ ನದೀ ತೀರಕ್ಕೆ ಬಂದಿದ್ದಾರೆ. ಅಲ್ಲಿ ಝೇಂಡೆ ಕಳಿಸಿರುವ ಸುಪಾರಿ ಹಂತಕರೂ ಇದ್ದಾರೆ. ಅವರು ನೀರಲ್ಲಿ ನಿಂತಿರುವ ಅನು ಪ್ರಾಣ ತೆಗೆಯಲು ಹೊಂಚು ಹಾಕುತ್ತಿದ್ದಾರೆ.

ಅನುವನ್ನು ಕಂಡರೆ ಝೇಂಡೆಗೆ ದ್ವೇಷ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಆರ್ಯವರ್ಧನ್​ನ ಸಾಯಿಸಲು ಅನುವೇ ಸಂಚು ರೂಪಿಸಿದ್ದಳು ಅನ್ನೋ ಝೇಂಡೆ ನಂಬಿಕೆ. ಈ ಕಾರಣದಿಂದ ಆತ ಅನುನ ಕೊಲ್ಲೋಕೆ ನಿರ್ಧರಿಸಿದ್ದಾನೆ. ಯಾವುದೇ ಅನುಮಾನ ಬರದ ಹಾಗೆ ಅನು ಹತ್ಯೆ ಮಾಡಲು ಆತ ಸುಪಾರಿ ಕೂಡ ನೀಡಿದ್ದಾನೆ. ಆರ್ಯವರ್ಧನ್ ಅಸ್ಥಿ ಹಾಗೂ ಚಿತಾ ಭಸ್ಮ ಬಿಡೋಕೆ ನದಿಗೆ ಅನು ಇಳಿಯುವಾಗಲೇ ಅನುವನ್ನು ಸಾಯಿಸಬೇಕು ಎಂಬುದು ಝೇಂಡೆ ಆಲೋಚನೆ. ಆದರೆ, ಝೇಂಡೆಯ ಈ ಪ್ರಯತ್ನವೂ ವಿಫಲವಾಗಿದೆ. ನದಿಗೆ ಬಿದ್ದು ಅನು ಕೂಗಿಕೊಳ್ಳುತ್ತಿರುವಾಗಲೇ ಆರ್ಯವರ್ಧನ ನದಿಗೆ ಹಾರಿ ಅನುವನ್ನು ಬದುಕಿಸಿದ್ದಾನೆ. ಝೇಂಡೆಯ ಕೋಪ ಇದರಿಂದ ಮತ್ತಷ್ಟು ಹೆಚ್ಚಾಗಿದೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

ಇತ್ತ ಆರ್ಯವರ್ಧನ ಬದುಕಿದ್ದರೂ ಅನು ದೃಷ್ಟಿಯಲ್ಲಿ, ಅವರ ಕುಟುಂಬದ ದೃಷ್ಟಿಯಲ್ಲಿ ಆತ ಸತ್ತಿದ್ದಾನೆ. ಅವನ ಅಸ್ಥಿ ಬಿಡೋಕೆ ಎಲ್ಲರೂ ನದಿ ತೀರಕ್ಕೆ ಬಂದಿದ್ದರು. ಇವರ ಜತೆ ಸಂಜು ಎಂದು ಕರೆಸಿಕೊಳ್ಳುವ ಹೊಸ ಆರ್ಯವರ್ಧನ್ ಕೂಡ ಬಂದಿದ್ದ. ಅನು ಬಿಸಿಲಿನಲ್ಲಿ ಹೆಚ್ಚು ಹೊತ್ತು ನಿಂತಿದ್ದರಿಂದ ಆಕೆಗೆ ತಲೆಸುತ್ತು ಬಂದಿದೆ. ಅನು ಇನ್ನೇನು ನೆಲಕ್ಕೆ ಬೀಳುವವಳಿದ್ದಳು. ಆಗ ಆಕೆಯನ್ನು ಸಂಜು ಹಿಡಿದಿದ್ದಾನೆ. ಇದರಿಂದ ಅನು ನೆಲಕ್ಕೆ ಬೀಳೋದು ತಪ್ಪಿದೆ. ಇದೇ ಸಂದರ್ಭದಲ್ಲಿ ಝೇಂಡೆಯಿಂದ ಸುಪಾರಿ ತೆಗೆದುಕೊಂಡವರು ತಮ್ಮ ಕೆಲಸ ಶುರು ಹಚ್ಕೊಳ್ತಾರೆ. ಸುಪಾರಿ ಪಡೆದವರು ಅನುನ ಕೊಲ್ಲಲು ಮೀನುಗಾರರ ವೇಷದಲ್ಲಿ ನದಿ ಸಮೀಪ ಎಂಟ್ರಿ ಕೊಟ್ಟಿದ್ದರು. ಸರಿಯಾದ ಸಮಯ ನೋಡಿ ಆಕೆಯನ್ನು ನೀರಿಗೆ ತಳ್ಳಬೇಕು ಎಂಬುದು ಅವರ ಆಲೋಚನೆ. ಇದಕ್ಕಾಗಿ ಅವರು ಮೀನಿನ ಬಲೆ ಸಿದ್ಧಪಡಿಸಿಕೊಂಡಿದ್ದರು. ಅನು ನೀರಿಗೆ ಇಳಿಯುತ್ತಿದ್ದಂತೆ ಆಕೆಯ ಕಾಲು ಬಲೆಗೆ ಸಿಗುವಂತೆ ಮಾಡಿದ್ದಾರೆ ಸುಪಾರಿ ಕಿಲ್ಲರ್ಸ್​​. ಇದರಿಂದ ಅನು ನೀರಿಗೆ ಬಿದ್ದಿದ್ದಾಳೆ. ಅನು ಕುಟುಂಬದವರು ನದಿಯ ದಂಡೆಯಿಂದ ದೂರ ತೆರಳಿದ್ದರು. ಅನು ಬಿದ್ದಿದ್ದನ್ನು ನೋಡಿದ ಎಲ್ಲರೂ ನದಿಯ ಬಳಿ ಓಡಿ ಬಂದಿದ್ದಾರೆ. ಸಂಜು ಮಾತ್ರ ಒಂದು ಕ್ಷಣವೂ ಯೋಚಿಸದೆ ನದಿಗೆ ಜಿಗಿದಿದ್ದಾನೆ. ಆಕೆಯನ್ನು ರಕ್ಷಣೆ ಮಾಡಿ ದಂಡೆಗೆ ಕರೆ ತಂದಿದ್ದಾನೆ. ಆದರೆ, ಅನು ಪ್ರಜ್ಞೆ ತಪ್ಪಿದ್ದಾಳೆ. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ಅನು ಬದುಕಿದ್ದು ನೋಡಿ ಝೇಂಡೆಗೆ ಕೋಪ ಹೆಚ್ಚಾಗಿದೆ. ಆದರೆ ಅನು ನಿಜವಾದ ಗಂಡ ಆರ್ಯವರ್ಧನ ಇಲ್ಲೂ ಆಕೆಯ ಜೀವ ಕಾಯ್ದಿದ್ದಾನೆ.

ಒಂದು ರಾತ್ರಿ ಕಳೆಯುವಂತೆ ಮಹಿಳೆಗೆ ಒತ್ತಾಯ; 'ಬಿಗ್ ಬಾಸ್' ಖ್ಯಾತಿಯ ಮಂಜು ಪಾವಗಡ ಸಹೋದರ ಅರೆಸ್ಟ್

ಇನ್ನೊಂದೆಡೆ ಮಾನ್ಸಿಗೆ ಅನುಮಾನಗಳು ಹೆಚ್ಚಾಗುತ್ತಲೇ ಇವೆ. ಸಂಜು ಮೇಲೆ ಮಾನ್ಸಿಗೆ ತೀವ್ರ ಅನುಮಾನ ಮೂಡಿದೆ. ಇದಕ್ಕೆ ಕಾರಣ ಆಗಿದ್ದು ಆತನ ನಡೆ. ಸಂಜು ಈ ಮನೆಗೆ ಬಂದಿದ್ದು ಏಕೆ ಎಂಬ ಪ್ರಶ್ನೆ ಆಕೆಯನ್ನು ಬಹುವಾಗಿ ಕಾಡಿದೆ. ಅಸ್ಥಿ ಬಿಡಲು ನದಿಯ ಬಳಿ ಹೋದಾಗ ಅನುನ ಸಂಜು ದಿಟ್ಟಿಸಿ ನೋಡುತ್ತಿದ್ದ. ಈ ಬಗ್ಗೆ ಪತಿ ಹರ್ಷನಿಗೆ ಮಾನ್ಸಿ ಪ್ರಶ್ನೆ ಮಾಡಿದ್ದಾಳೆ. ಮಾನ್ಸಿಗೆ ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎಂಬುದೂ ಗೊತ್ತಾಗುವುದಿಲ್ಲ ಎಂದು ಸಿಡುಕಿದ್ದಾನೆ ಹರ್ಷ. ಅನುನ ಸಂಜು ಕಾಪಾಡಿದಾಗಲೂ ಇದೇ ರೀತಿಯ ಮಾತು ಮಾನ್ಸಿ ಬಾಯಿಂದ ಬಂದಿದೆ.

ಅರ್ಧಾಂಗಿ: ಬನಶಂಕರಿ ಪವಾಡ, ದೇವಿ ಅವತಾರದಲ್ಲಿ ರಾಧಿಕಾ ನಾರಾಯಣ್!

ಆರ್ಯವರ್ಧನ್ ಹಾಗೂ ಝೇಂಡೆ ಸಾಕಷ್ಟು ಆಪ್ತರು. ಆರ್ಯವರ್ಧನ್​ನ ಎಲ್ಲ ಸೀಕ್ರೆಟ್​​ಗಳು ಝೇಂಡೆಗೆ ತಿಳಿದಿತ್ತು. ಆದರೆ, ಈಗ ಆರ್ಯವರ್ಧನ್​ ಇಲ್ಲ. ಈ ಕಾರಣಕ್ಕೆ ರಾಜನಂದಿನಿ ವಿಲಾಸಕ್ಕೆ ಬರೋಕೆ ಝೇಂಡೆಗೆ ಅವಕಾಶವೇ ಸಿಗುತ್ತಿಲ್ಲ. ಜತೆಯಲ್ಲೇ ಇದ್ದು ಆರ್ಯವರ್ಧನ್​ ರಕ್ಷಣೆ ಮಾಡಿಲ್ಲ ಎಂಬುದು ಅನು ಕುಟುಂಬದ ಆರೋಪ. ಇತ್ತ, ಆರ್ಯವರ್ಧನ್​ನ ಕೊಲ್ಲಿಸಿದ್ದು ಅನು ಎಂದು ಝೇಂಡೆ ಭಾವಿಸಿದ್ದಾನೆ. ‘ನನ್ನ ಆಪ್ತ ಮಿತ್ರನನ್ನು ನನ್ನಿಂದ ದೂರ ಕಳುಹಿಸಿ ಈಗ ನಿಮ್ಮಿಂದ ನನ್ನನ್ನು ದೂರ ಇಟ್ಟಿದ್ದೀರಿ. ಈ ಕುಟುಂಬವನ್ನು ನಾನು ಎಂದಿಗೂ ಖುಷಿಯಿಂದ ಇರೋಕೆ ಬಿಡಲ್ಲ’ ಎಂದು ಝೇಂಡೆ ಶಪಥ ಮಾಡಿದ್ದಾನೆ.

Follow Us:
Download App:
  • android
  • ios