Asianet Suvarna News Asianet Suvarna News

ಒಂದು ರಾತ್ರಿ ಕಳೆಯುವಂತೆ ಮಹಿಳೆಗೆ ಒತ್ತಾಯ; 'ಬಿಗ್ ಬಾಸ್' ಖ್ಯಾತಿಯ ಮಂಜು ಪಾವಗಡ ಸಹೋದರ ಅರೆಸ್ಟ್

ಬ್ಲಾಕ್‌ಮೇಲ್ ಪ್ರಕರಣದಲ್ಲಿ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಅವರ ಸಹೋದರ ಪ್ರವೀಣ್ ಪಾವಗಡಗೆ ಸರಿಯಾ ಧರ್ಮದೇಟು ಬಿದ್ದಿದೆ. 

bigg boss fame manju pavagada brother praveen pavagada arrested for blackmail case sgk
Author
First Published Oct 1, 2022, 12:31 PM IST

ಬ್ಲಾಕ್‌ಮೇಲ್ ಪ್ರಕರಣದಲ್ಲಿ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಅವರ ಸಹೋದರ ಪ್ರವೀಣ್ ಪಾವಗಡಗೆ ಸರಿಯಾ ಧರ್ಮದೇಟು ಬಿದ್ದಿದೆ. ತುಮಕೂರು ಮಹಾನಗರ ಪಾಲಿಕೆ ಸಿಬ್ಬಂದಿಗೆ ಬ್ಲಾಕ್‌ಮೇಲ್ ಮಾಡಿ ತಗಲಾಕ್ಕೊಂಡ ಪ್ರವೀಣ್ ಅವರಿಗೆ ಸರಿಯಾಗಿ ಥಳಿಸಿದ್ದಾರೆ, ಬಳಿಕ ತಮಕೂರಿನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸದ್ಯ ಅರೆಸ್ಟ್ ಆಗಿರುವ ಪ್ರವೀಣ್ ಪಾವಗಡ ಅವರ ಸಹೋದರ ಮಂಜು ವಾಪಗಡ ಅವರು ಹಾಸ್ಯ ಕಲಾವಿದನಾಗಿ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಖ್ಯಾತಿಗಳಿಸಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮತ್ತಷ್ಟು ಖ್ಯಾತಿಗಳಿಸಿದ್ದರು. 

ಸೆಕ್ಸ್‌ ನಿರಾಕರಿಸಿದ ರೆಸೆಪ್ಶನಿಸ್ಟ್ ಹತ್ಯೆ, ಪುತ್ರನ ಕರ್ಮಕಾಂಡಕ್ಕೆ ಬಿಜೆಪಿ ನಾಯಕನ ತಲೆದಂಡ!

ಏನಿದು ಪ್ರಕರಣ?

ಪ್ರವೀಣ್ ಪಾವಗಡ ಪತ್ರಕರ್ತರ ಸೋಗಿನಲ್ಲಿ ವಸೂಲಿಗೆ ಇಳಿದಿದ್ದ. ತುಮಕೂರಿನ ಜೀವನೋಪಾಯ ಕೇಂದ್ರದಲ್ಲಿ ಸಿ ಆರ್ ಪಿ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಬ್ಲಾಕ್‌ಮೇಲ್ ಮಾಡಿ ವಸೂಲಿಗೆ ಇಳಿದಿದ್ದ ಎನ್ನುವ ಆರೋಪ ಕೇಳಿಬಂದಿದೆ. ಮಹಿಳೆ ಜೊತೆ ಮಾತನಾಡುತ್ತ ಲಂಚದಾಸೆ ತೋರಿಸಿ  ಪ್ರವೀಣ್ ಪಾವಗಡ ವಿಡಿಯೋ ಮಾಡಿಕೊಂಡು ಬ್ಲಾಕ್‌ಮೇಲ್ ಮಾಡಿದ್ದರು ಎನ್ನಲಾಗಿದೆ. ವಿಡಿಯೋ ತೋರಿಸಿ ಬರೋಬ್ಬರಿ 4 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದ ಪ್ರವೀಣ್. ಹಣ ಕೊಡದ ಮಹಿಳೆಗೆ ಹಣ ಕೊಟ್ಟಿಲ್ಲ ಎಂದರೆ ಒಂದು ರಾತ್ರಿ ಕಳಿಯಬೇಕು ಎಂದು ಒತ್ತಡ ಏರುತ್ತಿದ್ದ ಎನ್ನುವ ಆರೋಪವಿದೆ. 

ಶಾಲಾ ವಿದ್ಯಾರ್ಥಿನಿಯರಿಗೆ Porn ವಿಡಿಯೋ ತೋರಿಸಿದ ಶಿಕ್ಷಕ; ಪೋಷಕರು ಏನು ಮಾಡಿದ್ರು ಗೊತ್ತಾ

ಖಾಸಗಿ ಪತ್ರಿಕೆಯ ಸಂಪಾದಕ ಎಂದು ಹೇಳಿಕೊಂಡು ಮಹಿಳೆ ಕೆಲಸ ಮಾಡುವ ಜಾಗಕ್ಕೆ ಬಂದು ಬೆದರಿಕೆ ಹಾಕುದ್ದ ಪ್ರವೀಣ್ ಪಾವಗಡ ಅವರನ್ನು ಹಿಡಿದು ಸರಿಯಾಗಿ ಧರ್ಮದೇಟು ನೀಡಿದ್ದಾರೆ. ಪ್ರವೀಣ್ ಜೊತೆ ಇದ್ದ ನಾಲ್ಕು ಮಂದಿಗೂ ಸರಿಯಾಗಿ ಗೂಸ ಬಿದ್ದಿದ್ದು ಬಳಿಕ ಅವರನ್ನು ತುಮಕೂರಿನ ಪೊಲೀಸಿಗೆ ಒಪ್ಪಿಸಿದ್ದಾರೆ. ಸದ್ಯ ಪ್ರವೀಣ್ ಪಾವಗಡ ಸೇರಿದಂತೆ ನಾಲ್ಕು ಮಂದಿ ಪೊಲೀಸರ ವಶದಲ್ಲಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಇವರ ಹಿಂದೆ ಇನ್ಯಾರು ಇದ್ದಾರೆ ಎನ್ನುವ ತನಿಖೆ ನಡೆಯುತ್ತಿದೆ. ಈ ಬಗ್ಗೆ ಮಂಜು ಪಾವಗಡ ಕಡೆಯಿಂದ ಇನ್ನು ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.  

Follow Us:
Download App:
  • android
  • ios