Hitler Kalyana: ಏಜೆ ವಿರುದ್ಧ ಲೀಲಾಗೆ ಸಿಕ್ತು ಸಾಕ್ಷಿ, ಏಜೆ ಕಂಬಿ ಎಣಿಸೋದು ಗ್ಯಾರಂಟಿ!
ಹಿಟ್ಲರ್ ಕಲ್ಯಾಣ ಸೀರಿಯಲ್‌ನಲ್ಲಿ ಏಜೆ ವಿರುದ್ಧ ಲೀಲಾಗೆ ಬಲವಾದ ಸಾಕ್ಷ್ಯವೊಂದು ಸಿಕ್ಕಿದೆ. ಈ ಸಾಕ್ಷಿ ಎಷ್ಟು ಬಲವಾಗಿದೆ ಅಂದರೆ ಯಾವ ಕ್ಷಣದಲ್ಲೂ ಏಜೆ ಕಂಬಿ ಎಣಿಸೋ ಮಾಡಬಹುದು. ಅಷ್ಟಕ್ಕೂ ಅದರಲ್ಲೇನಿದೆ? ಅದು ಲೀಲಾ ಕೈಗೆ ಸಿಕ್ಕಿದ್ದು ಹೇಗೆ ಅನ್ನೋದೇ ಸಖತ್ ಇಂಟರೆಸ್ಟಿಂಗ್.
ಹಿಟ್ಲರ್ ಕಲ್ಯಾಣ ಸೀರಿಯಲ್‌ನಲ್ಲಿ ಕಥೆಯ ಫ್ಲೋನಲ್ಲಿ ಎಳೆದಾಟ ಕಡಿಮೆ. ಈ ಹಿಂದೆ ದೇವ್ ಎಪಿಸೋಡ್ ಮಾತ್ರ ಚ್ಯುಯಿಂಗ್ ಗಮ್ ಥರ ಎಳೆದಿದ್ರು. ಅದನ್ನು ನೋಡಿ ಬೇಸತ್ತ ಜನಕ್ಕೆ ಈಗೊಂದು ಹೊಸ ಕಥೆಯ ಎಳೆ ಸಿಕ್ಕಿದೆ. ಅದು ಏಜೆ ವಿರುದ್ಧದ ಸಾಕ್ಷ್ಯ. ಆತನ ಹೆಂಡತಿ ಸಾವಿನ ಬಗ್ಗೆ ಲೀಲಾಗೆ ಸಾಕ್ಷಿ ಸಿಕ್ಕಿದೆ. ಅದರಲ್ಲಿ ಇರೋ ವಿಷ್ಯ ಎಷ್ಟು ಗಂಭೀರವಾದದ್ದು ಅಂದರೆ ಲೀಲಾ ಅದನ್ನೇನಾದ್ರೂ ಪೊಲೀಸರಿಗೆ ನೀಡಿದ್ರೆ ಏಜೆ ಪರ್ಮನೆಂಟಾಗಿ ಕಂಬಿ ಎಣಿಸೋದು ಗ್ಯಾರಂಟಿ. ಏಜೆ ಈ ಸೀರಿಯಲ್‌ನ ನಾಯಕ. ತನಗಿಂತ ಅರ್ಧಕ್ಕಿಂತ ಕಡಿಮೆ ವಯಸ್ಸಿನ ಲೀಲಾಳನ್ನು ಆತ ಮದುವೆ ಆಗಿದ್ದಾನೆ. ಆಕೆಯ ಜೊತೆಗೆ ಬಹಳ ಒರಟಾಗಿ ನಡೆದುಕೊಳ್ತಿದ್ದಾನೆ. ಆದರೆ ಆಳದಲ್ಲಿ ಏಜೆಗೆ ಲೀಲಾ ಬಗ್ಗೆ ಪ್ರೀತಿ ಇರೋದು ಸುಳ್ಳಲ್ಲ. ಅದೇ ರೀತಿ ಅವಳ ಎಡವಟ್ಟಿನ ಬಗ್ಗೆ ಸಿಟ್ಟೂ ಇದೆ. ಶ್ರದ್ಧೆ ಇಟ್ಟು ಕೆಲಸ ಮಾಡಿದರೆ ಎಡವಟ್ಟು ಆಗೋದಿಲ್ಲ. ಏನೇ ಸಾಧಿಸಬೇಕು ಅಂದರೂ ಗಮನವೆಲ್ಲ ಅದರಲ್ಲೇ ಇರಬೇಕು, ಮಾಡುವ ಕೆಲಸದಲ್ಲಿ ಗಡಿಬಿಡಿ ಇರಬಾರದು, ತನ್ಮಯತೆ ಇರಬೇಕು ಅನ್ನೋದನ್ನು ತಿಳಿಸಿ ಹೇಳಿದ್ದಾನೆ. ಅದರಂತೆ ಲೀಲಾ ಬದಲಾಗಲು ಪ್ರಯತ್ನಿಸಿದ್ದಾಳೆ. ಈ ನಡುವೆ ಏಜೆ ಮಾಡಿದ ದೊಡ್ಡ ಅವಾಂತರದಿಂದ ಲೀಲಾಗೆ ಆತನನ್ನು ಬಿಟ್ಟು ಹೋಗಬೇಕೆಂದು ಮನಸ್ಸು ತುಡಿಯುತ್ತಿದೆ. ಇದೀಗ ಆತನ ವಿರುದ್ಧ ಲೀಲಾಗೆ ಬಲವಾದ ಸಾಕ್ಷ್ಯವೂ ಸಿಕ್ಕಿದ್ದು, ಲೀಲಾ ಅದನ್ನ ಬಳಸಿಕೊಂಡು ಏಜೆ ಸಂಬಂಧದಿಂದ ಹೊರಬರ್ತಾಳಾ ಅನ್ನೋ ಪ್ರಶ್ನೆ ಎದುರಾಗಿದೆ.
ಕಳೆದ ವಾರ ಪ್ರಸಾರವಾದ ಎಪಿಸೋಡ್‌ನಲ್ಲಿ ಏಜೆ ಲೀಲಾಳನ್ನು ಟೆರೇಸ್ ಗೆ ಕರೆದುಕೊಂಡು ಹೋಗಿದ್ದಾನೆ. ಅದಲ್ಲಿ ಅವಳನ್ನು ಎಳೆದಾಡಿ ಬಿಲ್ಡಿಂಗಿನಿಂದ ಕೆಳಗೆ ತಳ್ಳುವ ಪ್ರಯತ್ನ ಮಾಡಿದ್ದಾನೆ. ಅಷ್ಟರಲ್ಲಿ ಲೀಲಾಳ ತಂದೆಯ ಫೋನ್ ಬಂದು ಅವಳು ಉಳಿದುಕೊಂಡಿದ್ದಾಳೆ. ಆದರೆ ಅಂದು ಏಜೆ ಅವಳಲ್ಲಿ ಹುಟ್ಟಿಸಿದ ಭಯ ಹೇಗಾದರೂ ಮಾಡಿ ಅವಳು ಏಜೆ ಸಂಬಂಧದಿಂದ ಆಚೆ ಬರಬೇಕು ಅನ್ನೋ ಹಾಗೆ ಮಾಡಿದೆ. ಏಜೆ ಮನೆ ಬಿಟ್ಟು ಹೋಗುವ ತೀರ್ಮಾನಕ್ಕೂ ಅವಳು ಬಂದಿದ್ದಾಳೆ. ಆದರೆ ಏಜೆ ತಂಗಿ, ಮಲಗಿದಲ್ಲಿಂದ ಏಳೋದಕ್ಕೂ ಆಗದ ಸ್ಥಿತಿಯಲ್ಲಿರುವ ಪವಿತ್ರಾ ಅವಳ ಈ ಪ್ರಯತ್ನಕ್ಕೆ ತಡೆ ಒಡ್ಡಿದ್ದಾಳೆ. ಅವಳ ಬಳಿ ತಾನು ಈ ಮನೆ ಬಿಟ್ಟು ಹೋಗೋದಾಗಿ ಹೇಳಿದಾಗ ಬಹಳ ಎಮೋಶನಲ್ ಆಗಿದ್ದಾಳೆ. ಅದನ್ನು ನೋಡಿ ಗಾಬರಿಯಾದ ಲೀಲಾ ತಾನು ಮನೆ ಬಿಟ್ಟು ಹೋಗೋ ನಿರ್ಧಾರದಿಂದ ಹಿಂದೆ ಸರಿದಿದ್ದಾಳೆ. ಇನ್ನೊಂದೆಡೆ ಏಜೆ ಅಮ್ಮ ಸರೋಜಿನಿ ಬಲವಂತದಿಂದ ಅವಳನ್ನು ಏಜೆ ಜೊತೆಗೆ ಮಲಗುವ ಹಾಗೆ ಮಾಡಿದ್ದಾಳೆ. ಏಜೆ ವಿಧಿಯಿಲ್ಲದೇ ಸೋಫಾದ ಮೇಲೇ ಮಲಗಿದ್ದಾನೆ. ಇಬ್ಬರನ್ನು ಪರೀಕ್ಷಿಸಲು ಸರೋಜಿನಿ ಒಳಬಂದಾಗ ಲೀಲಾ ಬೆಡ್ ಶೀಟ್ ಒಳಗೆ ಸೇರಿಕೊಂಡು ಬೇರೆ ಅರ್ಥ ಬರುವ ಹಾಗೆ ನಟಿಸಿದ್ದಾನೆ. ಇದನ್ನು ನೋಡಿ ಸರೋಜಿನಿ ಬೇರೆ ಥರ ಯೋಚಿಸಿದ್ರೆ ಲೀಲಾಗೆ ಬಹಳ ಗಾಬರಿಯಾಗಿದೆ.
ಹಿಟ್ಲರ್ ಕಲ್ಯಾಣ: ಕೆಲಸಗಾರರಿಗೆ ಹೊಡೆಯೋ ಏಜೆ ಮೇಲೆ ವೀಕ್ಷಕರಿಗೆ ಸಿಟ್ಟು
ಈ ನಡುವೆ ಲೀಲಾಗೆ ಒಂದು ಕೊರಿಯರ್ ಬಂದಿದೆ. ತನಗ್ಯಾರು ಕೊರಿಯರ್ ಕಳಿಸ್ತಾರೆ ಅನ್ನೋ ಅನುಮಾನದಲ್ಲೇ ಅವಳು ಕೊರಿಯರ್ ಓಪನ್ ಮಾಡಿ ನೋಡಿದಾಗ ಅದರಲ್ಲೊಂದು ಲೆಟರ್ ಇರುತ್ತೆ. ಆ ಲೆಟರ್ ನಲ್ಲಿ ಏಜೆಯಿಂದ ನೀನು ಅನುಭವಿಸುತ್ತಿರುವ ಕಷ್ಟ ನನಗೆ ಗೊತ್ತು. ಅವನಿಂದ ಪಾರಾಗಲು ಮಹತ್ವದ ಸಾಕ್ಷಿ ಕಳಿಸುತ್ತಿದ್ದೇನೆ. ಅದನ್ನು ಬಳಸಿ ಏಜೆಗೆ ತಕ್ಕ ಬುದ್ಧಿ ಕಲಿಸಬಹುದು ಎಂದು ಬರೆದಿರುತ್ತದೆ. ಜೊತೆಗೊಂದು ಪೆನ್ ಡ್ರೈವ್ ಇರುತ್ತೆ. ಆ ಮನೆಯಲ್ಲಿ ಇರೋದು ಏಜೆಯ ಲ್ಯಾಪ್ ಟಾಪ್. ಅದರಲ್ಲೇ ಪೆನ್‌ಡ್ರೈವ್ ಹಾಕಿ ಅದರಲ್ಲಿರೋ ವಿಚಾರ ತಿಳ್ಕೊಳ್ಬೇಕು. ಲೀಲಾ ಆ ಪೆನ್‌ಡ್ರೈವ್‌ನ ಲ್ಯಾಪ್‌ಟಾಪ್ ಗೆ ಹಾಕಿದ್ರೆ ಅದು ಪಾಸ್‌ವರ್ಡ್ ಕೇಳ್ತಿದೆ. ಯಾವ್ಯಾವುದೋ ಪಾಸ್‌ವರ್ಡ್ ಹಾಕಿ ವರ್ಕೌಟ್ ಆಗದೇ ಕೊನೆಗೆ ಆತನ ದಿವಂಗತ ಪತ್ನಿ ಅಂತರಾ ಹೆಸರು ಹಾಕ್ತಾಳೆ. ಆಗ ಓಪನ್ ಆಗುತ್ತೆ. ಅದರಲ್ಲಿ ಪೆನ್‌ಡ್ರೈವ್ ಹಾಕಿ ನೋಡಿದಾಗ ಅದರಲ್ಲಿರುವ ವೀಡಿಯೋ ನೋಡಿ ಲೀಲಾ ಬೆಚ್ಚಿ ಬೀಳ್ತಾಳೆ.
ಕನ್ನಡತಿ: ರತ್ನಮಾಲಾ ಕೊಟ್ಟ ಮೊದಲ ಹೊಡೆತಕ್ಕೆ ತತ್ತರಿಸಿದ ಸಾನಿಯಾ! ಅಮ್ಮಮ್ಮ ಮುಂದಿನ ಹೆಜ್ಜೆ ಏನು
ಆ ವೀಡಿಯೋದಲ್ಲಿ ಲೀಲಾಳನ್ನು ಏಜೆ ಮಹಡಿ ಮೇಲಿಂದ ಬೀಳಿಸಲು ಪ್ರಯತ್ನಿಸಿದ ವೀಡಿಯೋವಿದೆ. ಇದನ್ನು ನೋಡಿ ಲೀಲಾಗೆ ಶಾಕ್ ಆದರೂ ಏಜೆಯ ವಿರುದ್ಧ ತನಗೆ ಬಲವಾದ ಸಾಕ್ಷಿ ಸಿಕ್ಕಿದ್ದಕ್ಕೆ ಅವಳು ಖುಷಿ ಪಡ್ತಾಳೆ. ನಡುವೆ ಅವಳ ಎಡವಟ್ಟಿನಿಂದ ಏಜೆ ಹತ್ರ ಸಿಕ್ಕಾಕೊಳ್ಳುವ ಅಪಾಯವಿದ್ದರೂ ಸ್ವಲ್ಪದರಲ್ಲೇ ಬಚಾವ್ ಆಗ್ತಾಳೆ. ಏಜೆಗೆ ಅವಳಲ್ಲಿ ಇರೋದು ನಿಜಕ್ಕೂ ಗೊತ್ತಾಗ್ತಿಲ್ವಾ ಅಥವಾ ಆತ ಗೊತ್ತಾಗದ ಹಾಗೆ ನಾಟಕ ಮಾಡಿ ಸತ್ಯ ತಿಳಿಯುವ ಪ್ರಯತ್ನ ಮಾಡ್ತಾನಾ ಅನ್ನೋದು ಪ್ರಶ್ನೆ. ಲೀಲಾಳಿಗೆ ಈ ಪೆನ್ ಡ್ರೈವ್ ಕಳಿಸಿದ್ಯಾರು, ಪವಿತ್ರಾಳನ್ನು ಕೊಲೆ ಮಾಡಲು ಪ್ರಯತ್ನಿಸದ ದೇವ್ ಕಳಿಸಿರಬಹುದಾ ಅಥವಾ ಏಜೆಗೆ ಅಗದವರು ಬೇರೆ ಯಾರಾದರೂ ಇದ್ದಾರಾ ಅನ್ನೋದು ಒಂದು ಪ್ರಶ್ನೆಯಾದರೆ, ಈ ಸಾಕ್ಷಿಯನ್ನಿಟ್ಟು ಲೀಲಾ ಏನೆಲ್ಲ ಮಾಡಬಹುದು ಅನ್ನೋದು ಇನ್ನೊಂದು ಪ್ರಶ್ನೆ.
ಲೀಲಾ ಪಾತ್ರದಲ್ಲ ಮಲೈಕಾ ವಸುಪಾಲ್, ಏಜೆ ಪಾತ್ರದಲ್ಲಿ ದಿಲೀಪ್ ರಾಜ್ ನಟಿಸಿದ್ದಾರೆ. ಇದು ದಿಲೀಪ್ ಅವರ ನಿರ್ಮಾಣದ ಸೀರಿಯಲ್.