ಕನ್ನಡತಿ: ರತ್ನಮಾಲಾ ಕೊಟ್ಟ ಮೊದಲ ಹೊಡೆತಕ್ಕೆ ತತ್ತರಿಸಿದ ಸಾನಿಯಾ! ಅಮ್ಮಮ್ಮ ಮುಂದಿನ ಹೆಜ್ಜೆ ಏನು
ಕನ್ನಡತಿ ಸೀರಿಯಲ್‌ನಲ್ಲಿ ಅಮ್ಮಮ್ಮನ ಎಂಟ್ರಿಯಾಗಿದ್ದೇ ಮತ್ತೆ ಕಳೆಯೇರುತ್ತಿದೆ. ಇದೀಗ ರತ್ನಮಾಲಾ ಕೊಟ್ಟ ಮೊದಲ ಹೊಡೆತಕ್ಕೆ ಸಾನಿಯಾ ತತ್ತರಿಸಿ ಹೋಗಿದ್ದಾಳೆ. ಅವಳಿಗೆ ಅಮ್ಮಮ್ಮ ಕೊಟ್ಟ ಮೊದಲ ಹೊಡೆತಕ್ಕೇ ಸಾನಿಯಾ ತತ್ತರಿಸಿದ್ದಾಳೆ. ಅಮ್ಮಮ್ಮ ಮುಂದಿನ ಆಟ ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ.
ಕನ್ನಡತಿ ಸೀರಿಯಲ್‌ನಲ್ಲಿ ಅಮ್ಮಮ್ಮನ ಎಂಟ್ರಿಯಾದ ಕೂಡಲೇ ಸೀರಿಯಲ್‌ಗೆ ಹೊಸ ಕಳೆ ಬಂದಿದೆ. ರತ್ನಮಾಲಾ ಎಂಟ್ರಿಯನ್ನು ಕನ್ನಡತಿ ಫ್ಯಾನ್ಸ್ ಸೆಲೆಬ್ರೇಟ್ ಮಾಡಿದ್ದಾರೆ. ಅವರಿಗೆ ಅಮ್ಮಮ್ಮನೂ ನಿರಾಸೆ ಮಾಡಿಲ್ಲ. ಬಂದ ಕೂಡಲೇ ಬಾಂಡ್ ಲೇಡಿ ಥರ ಸಾನಿಯಾಗೆ ಒಂದು ಹೊಡೆತ ಕೊಟ್ಟಿದ್ದಾರೆ. ಅವರು ಕೊಟ್ಟಿರುವ ಆ ಒಂದು ಹೊಡೆತಕ್ಕೇ ಸಾನಿಯಾಗೆ ಯಾವ ಲೆವೆಲ್‌ಗೆ ನಡುಕ ಹುಟ್ಟಿದೆ ಅಂದರೆ ಇನ್ನವಳು ಸದ್ಯಕ್ಕೆ ಉಸಿರೆತ್ತುವುದು ಕಷ್ಟ ಅನಿಸುತ್ತೆ. ಹಾಗಂತ ಇದು ಸೀರಿಯಲ್ ಕತೆಯಲ್ಲಿ ಏರಿಳಿತ ಇರಲೇಬೇಕು. ಸಾನಿಯಾ ಪ್ಲಾನ್, ವರೂಧಿನಿಯ ಚಾಣಾಕ್ಷತನದಲ್ಲಿ ಅಮ್ಮಮ್ಮ, ಭುವಿ ಮತ್ತೆ ಮತ್ತೆ ಸಿಕ್ಕಿ ಹಾಕಿಕೊಳ್ಳಲೇ ಬೇಕು. ಆದರೆ ಭುವಿಯಂಥಾ ಪಾತ್ರ ಇಂಥಾ ಕುಲುಮೆಯಲ್ಲಿ ಕಾದು ಕಾದು ಬಂಗಾರವಾಗಲೇ ಬೇಕು. ಆಗ ತಾನೇ ಅವಳಿಗೆ ಅಮ್ಮಮ್ಮ ಕಟ್ಟಿದ ಮಾಲಾ ಕೆಫೆಗೆ ಒಡತಿಯಾಗುವ ಯೋಗ್ಯತೆ ಬರುವುದು. ಇದನ್ನು ಸೀರಿಯಲ್‌ನಲ್ಲಿ ತರಲಾಗುತ್ತಿದೆ. ಸದ್ಯಕ್ಕೀಗ ಅಮ್ಮಮ್ಮ ತಾನು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಗ ಸಾನಿಯಾ ಮಾಡಿದ ನೀಚ ಕೆಲಸವನ್ನು ಬಯಲು ಮಾಡಿದ್ದಾಳೆ. ಅಮ್ಮಮ್ಮ ಮಾಡಿರುವ ಮುಂದಿನ ಪ್ಲಾನ್ ಕತೆ ಕೇಳಿದರೆ ಸಾನಿಯಾ, ವರೂ ಸ್ಥಿತಿ ಹೇಗಾಗುತ್ತೋ ಗೊತ್ತಿಲ್ಲ.
ಕನ್ನಡತಿ ಸೀರಿಯಲ್‌ನಲ್ಲಿ ಅಮ್ಮಮ್ಮ ಒಂದು ದಿನ ಮೊದಲೇ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಮನೆಗೆ ಬರುವ ಹೊತ್ತಿಗೆ ಮನೆಯಲ್ಲಿ ದೊಡ್ಡ ಗಂಡಾಂತರವೇ ನಡೆದಿತ್ತು. ಭುವಿ ಮನೆಯಲ್ಲಿ ಶ್ರಾವಣ ಶುಕ್ರವಾರದ ಪೂಜೆ ಮಾಡಿದ್ಲು. ಈ ವೇಳೆ ಚಿಕ್ಕಪ್ಪ ಮಾಡಿದ ಅವಾಂತರದಿಂದ ಭುವಿಗೆ ದೊಡ್ಡ ಆಘಾತವಾಗಿತ್ತು. ಆ ವ್ಯಕ್ತಿ ಭುವಿಯ ಮೇಲೆ ಕೈ ಮಾಡಲು ಬಂದಿದ್ದು ಅವರ ಪತ್ನಿ ಪ್ರತಿಭಾ, ಮನೆ ಮಕ್ಕಳಿಗೆಲ್ಲ ನೋವಾಗಿತ್ತು. ಪ್ರತಿಭಾ ತಾನಿನ್ನು ಈ ಮನೆಯಲ್ಲಿ ಇರೋದಿಲ್ಲ, ನೀವೂ ಬನ್ನಿ ಅಂತ ಗಂಡನಿಗೆ ಹೇಳಿ ಮನೆಯಿಂದ ಹೊರ ಹೋಗಿದ್ದಳು. ಆದರೆ ಅವಳು ಹೊರ ಹೋಗುವ ಹೊತ್ತಿಗೆ ಮನೆಯವರೆಲ್ಲ ಅವಳನ್ನು ತಡೆಯಲು ಹೊರಬಂದ ಹೊತ್ತಿಗೆ ಅಮ್ಮಮ್ಮನನ್ನು ನೋಡ್ತಾರೆ. ಅವರ ಮುಖದಲ್ಲಿರುವ ಕಣ್ಣೀರು ನೋಡಿ ಅಮ್ಮಮ್ಮ ಅವರೆಲ್ಲ ತನ್ನನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ ಅಂತಲೇ ಭಾವಿಸಿದ್ದಾರೆ. ಇತ್ತ ಇದನ್ನೆಲ್ಲ ನೋಡಿ ಖುಷಿಯಲ್ಲಿ ಹೊರಬಂದ ಸಾನಿಯಾಗೆ ಅಮ್ಮಮ್ಮನ್ನು ಕಂಡು ದುಃಸ್ವಪ್ನ ನೋಡಿದಂತಾಗಿದೆ.
ಇದನ್ನೂ ಓದಿ: ಹಿಟ್ಲರ್ ಕಲ್ಯಾಣ: ಕೆಲಸಗಾರರಿಗೆ ಹೊಡೆಯೋ ಏಜೆ ಮೇಲೆ ವೀಕ್ಷಕರಿಗೆ ಸಿಟ್ಟು
ಅಮ್ಮಮ್ಮನಿಗೆ ಮನೆಯಲ್ಲಿ ಏನೋ ಸರಿಯಿಲ್ಲ ಅನ್ನೋದು ಗೊತ್ತಾಗಿದೆ. ಈ ನಡುವೆ ಅವರು ಸಾನಿಯಾಗೂ ಒಳ್ಳೆ ಚಮಕ್ ಕೊಟ್ಟಿದ್ದಾರೆ. ಅಮ್ಮಮ್ಮ ಅಸ್ವಸ್ಥತೆಯಿಂದ ಬಳಲುತ್ತಿರುವಾಗ ಅವರನ್ನು ಹೀನವಾಗಿ ನಿಂದಿಸಿ, ಬಾಯಿಗೆ ಬಂದ ಹಾಗೆ ಮಾತಾಡಿದ್ದನ್ನು ಅಮ್ಮಮ್ಮ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಆ ವೀಡಿಯೋವನ್ನು ಅವರು ಸಾನಿಯಾ ಮೊಬೈಲ್‌ಗೆ ಫಾರ್ವರ್ಡ್ ಮಾಡಿದ್ದಾರೆ. ಸಾನಿಯಾಗೆ ತಾನೇ ತಂದ ಯಿಯರ್ ಫೋನ್ ಗಿಫ್ಡ್ ಮಾಡಿ ಅವಳ ಮಾತನ್ನು ಅವಳೇ ಇನ್ನಷ್ಟು ಸ್ಪಷ್ಟವಾಗಿ ಕೇಳುವ ಹಾಗೆ ಮಾಡಿದ್ದಾಳೆ.
ಇದು ಸಾನಿಯಾಗೆ ದೊಡ್ಡ ಆಘಾತ. ಅವಳು ಇದರಿಂದ ಸದ್ಯಕ್ಕಂತೂ ಹೊರಬರೋದು ಸಾಧ್ಯವಿಲ್ಲ. ಜೊತೆಗೆ ಅಮ್ಮಮ್ಮ ಅವಳಿಗೆ ಒಂದು ಪಾಠವನ್ನೂ ಮಾಡಿದ್ದಾರೆ. ಅದು ನಮ್ಮೆಲ್ಲರಿಗೂ ಪಾಠದ ಹಾಗಿದೆ. ಯಾವುದೇ ವ್ಯಕ್ತಿ ದುರ್ಬಲನಾಗಿದ್ದಾಗ ನಾವು ಅವನಿಗಿಂತ ಉತ್ತಮ ಸ್ಥಿತಿಯಲ್ಲಿದ್ದಾಗ ವಿನಯವಂತರಾಗಿರಬೇಕೇ ಹೊರತು ಅವರ ಸ್ಥಿತಿಯನ್ನು ಆಡಿಕೊಳ್ಳಬಾರದು, ಕಾಲ ಇವತ್ತಿದ್ದ ಹಾಗೆ ನಾಳೆ ಇರೋದಿಲ್ಲ ಅನ್ನೋ ಮಾತು ಎಲ್ಲರಿಗೂ ಅನ್ವಯವಾಗುವಂತಿದೆ.
ಇದನ್ನೂ ಓದಿ: ಕುತೂಹಲಕರ ಘಟ್ಟ ತಲುಪಿದ ಪವಾಡ ಪುರುಷ; ನೋಡಲು ಮರೆಯದಿರಿ
ಅಮ್ಮಮ್ಮ ಮುಂದಿನ ಹೆಜ್ಜೆ ಅಂದರೆ ಅವರ ವೀಲ್. ಈಗಾಗಲೇ ಅವರು ಈ ಕೆಲಸ ಮಾಡಿ ಮುಗಿಸಿದ್ದಾರೆ. ಆ ಸುದ್ದಿ ವರೂಗೆ ಶಾಕ್ ತಂದಿದೆ.