ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಮತ್ತೆ ಜೋಗವ್ವನ ಎಂಟ್ರಿ ಆಗಿದೆ. ಜೋಗವ್ವನೇ ಮುಂದೆ ನಿಂತು ಆರ್ಯ ಅನುವನ್ನು ಒಂದು ಮಾಡಿಸಲು ಮುಂದಾದ ಹಾಗಿದೆ. ಆದರೆ ಅದು ಅಂದುಕೊಂಡಷ್ಟು ಸುಲಭ ಅಲ್ಲ. ಸದ್ಯಕ್ಕಂತೂ ಈ ಕತೆ ಕುತೂಹಲ ಹೆಚ್ಚಿಸುವ ಹಾಗಿದೆ.
ಜೊತೆ ಜೊತೆಯಲಿ ಸೀರಿಯಲ್ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಇದರಲ್ಲೀಗ ಸಾವು ಬದುಕಿನ ಕಣ್ಣಾಮುಚ್ಚಾಲೆ ಆಟ ನಡೀತಿದೆ. ಒಂದು ಕಡೆ ಆರ್ಯವರ್ಧನ್ ಸಾವಿಗೆ ಹೊಂಚು ಹಾಕುತ್ತಿರುವವರು ಇನ್ನೊಂದು ಕಡೆ ಅನುವಿನ ಸಾವನ್ನೇ ಎದುರು ನೋಡುತ್ತಿರುವವರು. ಆರ್ಯವರ್ಧನ್ ತಾಯಿ, ತಂದೆ ಸಂಜುವೇ ಆರ್ಯವರ್ಧನ ಅನ್ನೋದನ್ನು ಮುಚ್ಚಿಡೋದು, ಸಂಜು ವರ್ತನೆಗಳು, ಆತನ ಸ್ವಭಾವ ಮನೆಯವರಿಗೆ ಅನುಮಾನ ತರಿಸೋದು.. ಹೀಗೆ ಪಾತ್ರಗಳ ಜೊತೆಗೆ ವೀಕ್ಷಕರನ್ನೂ ಕನ್‌ಫ್ಯೂಸ್ ಮಾಡುವ ಒಂದಿಷ್ಟು ಸರ್ಕಸ್ ಇಲ್ಲಿ ನಡೀತಿದೆ. ಸದ್ಯಕ್ಕೀಗ ಅನು ತನ್ನ ತವರಲ್ಲಿ ಬೆಡ್ ರೆಸ್ಟ್ ಮಾಡುತ್ತಿದ್ದಾಳೆ. ಅವಳ ಅಪ್ಪ ಅಮ್ಮನ ಬೇಡಿಕೆಗೆ ಮಣಿದು ಅವಳು ತನ್ನ ಮನೆಗೆ ಮರಳಿದ್ದಾಳೆ. ಆದರೆ ಆರಂಭದಲ್ಲಿ ಅವಳಿಗೆ ತನ್ನಿಂದ ಆರ್ಯ ಸರ್ ದೂರ ಆಗಿದ್ದಾರೆ ಅನ್ನೋದನ್ನು ನಂಬೋದಕ್ಕೇ ಆಗಿಲ್ಲ. ಮನೆಯವರೆಲ್ಲ ಆರ್ಯನ ಫೋಟೋಗೆ ಹೂ ಮಾಲೆ ಹಾಕೋದನ್ನು, ದೀಪ ಉರಿಸಿಡೋದನ್ನು ಅನು ವಿರೋಧಿಸುತ್ತಾಳೆ. ದೇವರಿಗೆ ಪೂಜೆಯನ್ನೂ ಮಾಡುತ್ತಾಳೆ. ಇದನ್ನು ಪ್ರಶ್ನಿಸಿದವರಿಗೆ ತನ್ನ ಪಾಲಿಗೆ ಆರ್ಯ ಸಾರ್ ಬದುಕಿದ್ದಾರೆ ಅಂತಲೇ ಹೇಳುತ್ತಾಳೆ. ಆದರೆ ಈಗೀಗ ಅವಳಿಗೆ ಆರ್ಯ ಸರ್ ಅನುಪಸ್ಥಿತಿ ತೀವ್ರವಾಗಿ ಕಾಡುತ್ತದೆ.
ಇನ್ನೊಂದೆಡೆ ವಿಶ್ವಾಸನ ಮುಖ ಟ್ರಾನ್ಸ್‌ಪ್ಲಾಂಟ್ ಮಾಡಿಸಿರೋ ಜೊತೆಗೆ ಹಳೇ ನೆನಪುಗಳನ್ನೂ ಕಳೆದುಕೊಂಡಿರುವ ಸಂಜು ಅರ್ಥಾತ್ ಆರ್ಯವರ್ಧನ್ ಹಳೆಯ ನೆನಪುಗಳ ಹಿಂದೆ ಬಿದ್ದಿದ್ದಾನೆ. ಡಾಕ್ಟರ್ ಜೊತೆಗೆ ಮಾತಾಡುವಾಗ ಆತನಿಗೆ ಮಸುಕು ಮಸುಕಾಗಿ ಘಟನೆಗಳು ನೆನಪಾಗುತ್ತವೆ. ಆದರೆ ಯಾವೊಂದು ವಿಚಾರವೂ ಸ್ಪಷ್ಟ ಇಲ್ಲ. ಡಾಕ್ಟರ್ ಹತ್ರದಿಂದ ನೇರ ರಾಜನಂದಿನಿ ನಿವಾಸಕ್ಕೆ ಹೋಗದೇ ಅನು ಮನೆಯ ಬಳಿ ಆರ್ಯ ಬಸ್ ಇಳಿದಿದ್ದಾನೆ. ಆ ಕಮಲಮ್ಮನ ವಠಾರ ಆತನಿಗೆ ಪರಿಚಿತ ಅನಿಸಿದೆ. ನೇರ ಅಲ್ಲಿಗೇ ಹೋಗಿ ಅನು ಅಪ್ಪ ಸುಬ್ಬು ಕಣ್ಣಿಗೆ ಬಿದ್ದಿದ್ದಾನೆ. ಅವರು ಆತನನ್ನು ತಮ್ಮ ಮನೆಗೆ ಕರೆದೊಯ್ದಿದ್ದಾರೆ.
ಹೊಂಗನಸು: ರಿಷಿ ಸಾರ್ ಹತ್ರ ಬಂದ್ರೆ ವಸುಂಧರಾ ಎದೆಯಲ್ಲಿ ಢವ ಢವ
ಇದೀಗ ಅಚ್ಚರಿಯ ಬೆಳವಣಿಯೊಂದರಲ್ಲಿ ಜೋಗ್ದವ್ವನ ಮಧ್ಯ ಪ್ರವೇಶವಾಗಿದೆ. ಆಕೆ ರಾಜನಂದಿನಿ ನಿವಾಸಕ್ಕೆ ಬಂದು ಅಸಲಿ ಸಂಗತಿ ಬಿಚ್ಚಿಟ್ಟಿದ್ದಾಳೆ. ‘ಮಗಳು ಇಲ್ಲದ ಮನೆ ಮನೆ ಹೇಗೆ ಆಗ್ತದೆ? ಆಕೆಗೆ ಇಲ್ಲಿಗೆ ಬರೋಕೆ ಹೇಳಿ. ಆಕೆಯ ಸಂತೋಷ ಆಕೆಯ ಕಣ್ಣೆದುರೇ ಇದೆ. ಅದನ್ನು ಗುರುತಿಸೋಕೆ ಹೇಳಿ’ ಎಂದು ಜೋಗ್ದವ್ವ ಹೇಳಿದ್ದಾಳೆ. ಆದರೆ ಹೀಗೆ ಒಗಟಾಗಿ ಹೇಳಿರುವ ಜೋಗದವ್ವನ ಮಾತು ಅನುಗೆ ಅರ್ಥವಾಗುತ್ತಾ, ಶಾರದಾ ದೇವಿ ಅವರಿಗೆ ಸತ್ಯದ ಅರಿವಾಗುತ್ತಾ ಅನ್ನೋದು ಸದ್ಯದ ಪ್ರಶ್ನೆ.
ಇನ್ನೊಂದೆಡೆ ಇರುವ ಸತ್ಯದ ವಿಚಾರವನ್ನು ತಿಳಿಸೋದಕ್ಕೆ ಆರ್ಯನ ಅಮ್ಮ ಪ್ರಿಯದರ್ಶಿನಿ ಮುಂದಾಗಿದ್ದರೂ ಡಾಕ್ಟರ್ ಮಾತು ಅವಳನ್ನು ಸತ್ಯ ಹೇಳದ ಹಾಗೆ ತಡೆಯುತ್ತದೆ. ಆರ್ಯವರ್ಧನ್ ಅವರ ಪ್ರಾಣಕ್ಕೆ ಕಂಟಕವಿದೆ. ಮನೆಯಲ್ಲೇ ಅವರಿಗೆ ಜೀವ ಬೆದರಿಕೆ ಇದೆ. ಹೀಗಿರುವಾಗಿ ಆರ್ಯನಿಗೆ ನೆನಪು ಮರಳುವ ಮೊದಲೇ ಆತನ ಬಗೆಗಿನ ಸತ್ಯ ವಿಚಾರಗಳನ್ನು ತಿಳಿಸಿದರೆ ಕೊಲೆಗಾರರಿಗೆ ಹಾದಿ ಸುಲಭವಾಗಬಹುದು, ಹೀಗಾಗಿ ಆರ್ಯನಿಗೆ ನೆನಪು ಬರುವುದು ಕೊಂಚ ತಡವಾದರೂ ತೊಂದರೆಯಿಲ್ಲ. ಆದರೆ ಆತನಿಗೆ ನೆನಪು(Memory) ಬರುವ ಮೊದಲೇ ಈ ವಿಚಾರ ತಿಳಿಸೋದು ಬೇಡ ಅಂತ ವೈದ್ಯ(Doctor)ರು ಹೇಳಿದ್ದಾರೆ. ಈಗಾಗಲೇ ಒಬ್ಬ ಮಗನನ್ನು ಕಳೆದುಕೊಂಡ ನೋವ(Pain)ಲ್ಲಿರುವ ದಂಪತಿ ಈ ಮಗನನ್ನೂ ಕಳೆದುಕೊಳ್ಳುವ ಭೀತಿಯಿಂದ ಸತ್ಯ(Truth)ವನ್ನು ಸದ್ಯದ ಮಟ್ಟಿಗೆ ಮುಚ್ಚಿಡಲು ತೀರ್ಮಾನಿಸಿದ್ದಾರೆ.
ಹಿಟ್ಲರ್ ಕಲ್ಯಾಣದಲ್ಲಿ ಏಜೆ - ಅಂತರಾ ಲವ್‌ಸ್ಟೋರಿ: ದಿಲೀಪ್ ರಾಜ್ ಯಂಗ್ ಲುಕ್‌ಗೆ ವೋವ್ ಎಂದ ಫ್ಯಾನ್ಸ್!
ಮತ್ತೊಂದು ಕಡೆ ಸಂಜುವೇ ಆರ್ಯ ಅನ್ನೋ ವಿಚಾರದ ಬಗ್ಗೆ ಅನುವಿಗೆ ಸುಳಿವು ಸಿಕ್ಕರೂ ಅವಳಿಗೆ ಇದನ್ನು ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ. ಅವಳಿಗದು ಅರ್ಥ ಆಗುತ್ತಾ ಅನ್ನೋದೆ ಪ್ರಶ್ನೆ(Question). ಆದರೆ ಸಂಜುವನ್ನು ನೋಡಿದಾಗ ಅವಳಿಗೆ ಆರ್ಯ ಸರ್ ಪದೇ ಪದೇ ನೆನಪಾಗ್ತಾರೆ. ಆರ್ಯನ ಹೊಸ ಮುಖವನ್ನು ಅನು ಯಾವಾಗ ಗುರುತಿಸುತ್ತಾಳೆ ಅನ್ನೋದು ಸದ್ಯದ ಪ್ರಶ್ನೆ.
