Asianet Suvarna News Asianet Suvarna News

ಗಟ್ಟಿಮೇಳ: ಡುಪ್ಲಿಕೇಟ್ ವೈದೇಹಿ ಹೈ ಡ್ರಾಮಾ ಶುರು, ರಿಯಲ್ ವೈದೇಹಿ ಹೊರಟೇ ಹೋಗ್ತಾಳಾ?

ಗಟ್ಟಿಮೇಳ ಸೀರಿಯಲ್‌ನಲ್ಲಿ ವಸಿಷ್ಠ ಫ್ಯಾಮಿಲಿಗೆ ಡುಪ್ಲಿಕೇಟ್ ಅಮ್ಮ ಬಂದು ಬಿಟ್ಟಿದ್ದಾಳೆ. ಅವಳ ಹೈ ಡ್ರಾಮಾ ಶುರುವಾಗಿದೆ. ರಿಯಲ್ ಅಮ್ಮ ಜೊತೆಯಲ್ಲೇ ಇದ್ದರೂ ಯಾವೊಬ್ಬ ಮಕ್ಕಳಿಗೂ ಗೊತ್ತಾಗ್ತಿಲ್ಲ. ಗೊತ್ತಿರುವ ಧ್ರುವ ಮಾತಾಡೋ ಸ್ಥಿತಿಯಲ್ಲೇ ಇಲ್ಲ.

 

In Gattimela serial Duplicate Vaidehi enterd Vasista family
Author
First Published Sep 26, 2022, 4:32 PM IST

ಗಟ್ಟಿಮೇಳ ಸೀರಿಯಲ್‌ನಲ್ಲಿ ವೇದಾಂತ್‌ ವಸಿಷ್ಠ ಹಾಗೂ ಕುಟುಂಬ ಹೊಸತೊಂದು ಖುಷಿಯಲ್ಲಿ ತೇಲ್ತಾ ಇದೆ. ಈ ಮನೆಗೆ ಅಮ್ಮನ ಆಗಮನವಾಗಿದೆ. ವಿಲನ್ ಚಂದ್ರಕಲಾಳನ್ನೇ ವೈದೇಹಿ ಅಂತ ಸುಹಾಸಿನಿ ಮನೆಗೆ ಕರೆತಂದಿದ್ದಾಳೆ. ಮನೆಯಲ್ಲಿ ಈಕೆಯ ಹೈಡ್ರಾಮಾ ಶುರುವಾಗಿದೆ. ಮಕ್ಕಳೂ ಅಮ್ಮ ಬಂದ ಖುಷಿಯಲ್ಲಿದ್ದಾರೆ. ವೇದಾಂತ್, ವಿಕ್ರಾಂತ್, ಧ್ರುವ ಮತ್ತು ಅವರ ಮುದ್ದಿನ ತಂಗಿ ಆದ್ಯಾ ತಂದೆ, ತಾಯಿಯಿಲ್ಲದೇ ಚಿಕ್ಕಮ್ಮನ ಆಶ್ರಯದಲ್ಲಿ ತಮ್ಮದೇ ಮನೆಯಲ್ಲಿ ಬೆಳೆಯುತ್ತಿರುತ್ತಾರೆ. ಆಸ್ತಿಗಾಗಿ ಅವರ ಕುಟುಂಬವನ್ನೇ ಸರ್ವನಾಶ ಮಾಡಲು ಹವಣಿಸಿದ ಸುಹಾಸಿನಿ ಮಕ್ಕಳನ್ನು ತಾನೇ ಸಾಕಿ ಬೆಳೆಸುತ್ತಿದ್ದಾಳೆ. ಮಕ್ಕಳೂ ಅವಳನ್ನೇ ತಾಯಿ ಎಂದುಕೊಂಡು ಬದುಕುತ್ತಿದ್ದರು. ಈ ನಡುವೆ ಕಿರಿಯ ತಮ್ಮ ಧ್ರುವನಿಗೆ ತನ್ನ ರಿಯಲ್ ಅಮ್ಮನನ್ನು ಹುಡುಕುವ ಹಠ ಬಂದು ಆತ ವೈದೇಹಿಯನ್ನು ಪತ್ತೆ ಮಾಡಿದಾಗಲೇ ಸುಹಾಸಿನಿ ತನ್ನ ಬಾಸ್ ಮಾತಿನಂತೆ ಆತನಿಗೆ ಆಕ್ಸಿಡೆಂಟ್ ಮಾಡಿ ಆತ ಎಂದೂ ಮಾತನ್ನೇ ಆಡದ ಹಾಗೆ ಮಾಡಿದ್ದಾಳೆ. ಇನ್ನೊಬ್ಬ ಮಗ ವಿಕ್ರಾಂತ್ ಮತ್ತು ತಂಗಿ ಆದ್ಯಾ, ಮನೆಯ ಸೊಸೆ ವೇದಾಂತ ಮಡದಿ ಅಮೂಲ್ಯ ಜೊತೆ ಸೇರಿಕೊಂಡು ಅಮ್ಮನ ಹುಡುಕಾಟದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದಳು. ಆದರೆ ಅವರನ್ನು ಅವರ ದಾರಿಯಲ್ಲೇ ಹೋಗಿ ಯಾಮಾರಿಸಿದ್ದಾಳೆ ಸುಹಾಸಿನಿ,

ಹಳೇ ಸಿಡಿಯಲ್ಲಿ ಅಮ್ಮನ ಮುಖ ಇದೆ ಅಂತ ಮಕ್ಕಳಿಗೆ ಗೊತ್ತು. ಇಷ್ಟು ಸಮಯ ಹಾಳಾದಂತಿದ್ದ, ನಾಪತ್ತೆಯಾಗಿದ್ದ ಸಿಡಿಯನ್ನು ಮನೆ ಮಕ್ಕಳ ಕಣ್ಣಿಗೆ ಬೀಳುವಂತೆ ಸುಹಾಸಿನಿ ಇಟ್ಟಿದ್ದಾಳೆ. ಅದರಲ್ಲಿ ಅಮ್ಮನ ಜಾಗದಲ್ಲಿ ಚಂದ್ರಕಲಾ ಮುಖ ಪೇಸ್ಟ್ ಮಾಡಿದ್ದಾಳೆ. ಆಗ ಆಕೆಯನ್ನೇ ಎಲ್ಲರೂ ತಮ್ಮ ತಾಯಿ ವೈದೇಹಿ ಅಂದುಕೊಂಡಿದ್ದಾರೆ. ಹೀಗಾಗಿ ಚಂದ್ರಕಲಾಳೇ ಈಗ ವೈದೇಹಿಯಾಗಿ ವೇದಾಂತ್ ಎದುರಿಗೆ ಬಂದಿದ್ದಾಳೆ. ವೇದಾಂತ್ ಹಾಗೂ ಮನೆಯವರೆಲ್ಲರೂ ಚಂದ್ರಕಲಾಳನ್ನೇ ವೈದೇಹಿ ಎಂದು ನಂಬಿದ್ದಾರೆ. ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾನೆ. ವೇದಾಂತ್ ವೈದೇಹಿಯನ್ನು ಒಂದೇ ಸಮನೆ ಪ್ರಶ್ನೆ ಮಾಡಲು ಶುರು ಮಾಡುತ್ತಾನೆ. ಬದುಕಿದ್ದರೂ ಯಾಕೆ ನಮ್ಮಿಂದ ಇಷ್ಟು ವರ್ಷ ದೂರವಿದ್ದೆ. ನಿನಗೆ ನಾವು ಬೇಕಿರಲಿಲ್ವಾ? ಒಂದು ಸಾರಿಯೂ ನಿನಗೆ ನಮ್ಮನ್ನು ನೋಡಬೇಕು ಎಂದು ಅನಿಸಲಿಲ್ವಾ? ಯಾಕಮ್ಮ ಹೀಗೆ ಮಾಡಿದೆ ಎಂದು ವೇದಾಂತ್ ಒಂದೇಸವನೆ ಪ್ರಶ್ನೆ ಮಾಡುತ್ತಾನೆ. ಆಗ ವೈದೇಹಿ, 'ನನಗೂ ಆಸೆ ಇತ್ತು ವೇದಾಂತ್. ನಿತ್ಯ ದೇವರಿಗೆ ಅದನ್ನೇ ಕೇಳಿಕೊಳ್ಳುತ್ತಿದ್ದೆ, ಹೇಗಾದರೂ ನನಗೆ ನನ್ನ ಮಕ್ಕಳು ಸಿಗುವಂತಾಗಲಿ ಅಂತ' ಎಂದು ಹೇಳುತ್ತಾಳೆ. ಅಷ್ಟರಲ್ಲಿ ತೇಜಸ್, ವೇದಾಂತ್ ಸರ್ ಒಂದೇ ಸಲಕ್ಕೆ ಅವರಿಗೆ ಇಷ್ಟೊಂದು ಪ್ರಶ್ನೆ ಕೇಳಿದರೆ ಹೇಗೆ.? ಬನ್ನಿ ಎಲ್ಲರೂ ಕಾಯುತ್ತಿದ್ದಾರೆ ಬನ್ನಿ ಎಂದು ಹೇಳಿ ಕರೆದುಕೊಂಡು ಹೋಗುತ್ತಾರೆ.

ಮುದ್ದುಮಣಿಗಳು ಸೀರಿಯಲ್‌ನ ಹೊಸ ಸೃಷ್ಟಿಯಾಗಿ ಸೋನಿ ಮುಲೆವಾ ಎಂಟ್ರಿ!

ಮನೆಯಲ್ಲಿ ಎಲ್ಲರೂ ವೈದೇಹಿಗಾಗಿ ಕಾಯುತ್ತಾ ಕುಳಿತಿದ್ದಾರೆ. ವೈದೇಹಿ ಮನೆಗೆ ಬರುತ್ತಿದ್ದಂತೆ ಎಲ್ಲರೂ ತುಂಬಾ ಖುಷಿ ಪಡುತ್ತಾರೆ. ವೈದೇಹಿಯನ್ನು ನೋಡುತ್ತಿದ್ದಂತೆ ಸುಹಾಸಿನಿ ತಬ್ಬಿಕೊಂಡು ಅಳುತ್ತಾಳೆ. ಸುಹಾಸಿನಿ ಅಕ್ಕ ನಿನ್ನನ್ನು ಎಷ್ಟು ಹುಡುಕಿದರೂ ಸಿಗಲಿಲ್ಲ ಎಂದೆಲ್ಲಾ ಎಮೋಷನಲ್(Emotional) ಅಗಿ ಮಾತನಾಡುತ್ತಾಳೆ. ಬಳಿಕ ವೈದೇಹಿ ಅವರ ತಾಯಿ ಬಳಿ ಹೋಗಿ ತಬ್ಬಿಕೊಂಡು ಅಳುತ್ತಾಳೆ. ಆಗ ಅವರ ತಾಯಿ 25 ವರ್ಷದಿಂದ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೆ. ಆ ದೇವರಿಗೆ ನನ್ನ ಕೂಗು ಕೇಳಿಸಿ ನೀನು ಮನೆಗೆ ಬರುವಂತೆ ಮಾಡಿದ್ದಾರೆ. ಆದರೆ ನನ್ನ ದುರಾದೃಷ್ಟ ನೋಡು ನನಗೆ ನಿನ್ನನ್ನು ನೋಡುವುದಕ್ಕೆ ಕಣ್ಣೇ ಕಾಣಿಸುತ್ತಿಲ್ಲವಲ್ಲ ಎಂದು ಹೇಳುತ್ತಾಳೆ. ಆಗ ವೈದೇಹಿ ಇದೇನಾಯ್ತು ಎಂದಾಗ, ಅಜ್ಜಿ ತಲೆಗೆ ಏಟು ಬಿದ್ದು, ಕಣ್ಣು ಹೋಗಿದೆ ಎನ್ನುತ್ತಾರೆ.

ಮತ್ತೆ ವೈದೇಹಿ, ಸುಹಾಸಿನಿಯನ್ನು ತಬ್ಬಿಕೊಂಡು ಅಳುತ್ತಾಳೆ. ಸುಹಾಸಿನಿ ಇಷ್ಟು ವರ್ಷ ನಿನ್ನ ಮಕ್ಕಳ ಜವಾಬ್ದಾರಿ(Resposibility)ಯನ್ನು ಹೊತ್ತಿದ್ದೆ. ಅವರನ್ನು ಈ ಮಟ್ಟಕ್ಕೆ ಬೆಳೆಸಿದ್ದೇನೆ. ಇನ್ನು ನಿನಗೆ ಬಿಟ್ಟಿದ್ದು. ನಾನಿನ್ನು ಹೊರಡುತ್ತೀನಿ ಎಂದು ನಾಟಕ ಮಾಡುತ್ತಾಳೆ. ಆಗ ವೇದಾಂತ್ ಮಾತನಾಡಿ, ಹಾಗೆಲ್ಲ ಯಾಕೆ ಹೇಳ್ತೀರಾ. ಈ ಮೊದಲು ಈ ಮನೆಯಲ್ಲಿ ಹೇಗಿತ್ತೋ ಹಾಗೆಯೇ ಇನ್ನು ಮುಂದೆಯೂ ಇರುತ್ತದೆ. ನೀವು ಎಲ್ಲಿಗೂ ಹೋಗುವುದು ಬೇಡ ಎಂದು ಹೇಳುತ್ತಾನೆ. ಬಳಿಕ ವೈದೇಹಿ, ವಿಕ್ರಾಂತ್ ಮತ್ತು ಆದ್ಯರನ್ನು ತಬ್ಬಿಕೊಂಡು ಮುದ್ದಾಡುತ್ತಾಳೆ. ನಂತರ ಎಲ್ಲರೂ ತಮ್ಮ ತಮ್ಮ ಪರಿಚಯ ಮಾಡಿಕೊಳ್ಳುತ್ತಾರೆ. ಕೊನೆಗೆ ಧ್ರುವ ಕಾಣಿಸದೆ ಇದ್ದಾಗ ವೈದೇಹಿ ಧ್ರುವ ಎಲ್ಲಿ ಕಾಣಿಸುತ್ತಿಲ್ಲ. ಅವನಿಗೆ ನಾನು ಬರುವ ವಿಚಾರ ಗೊತ್ತಿಲ್ವಾ? ನೀವ್ಯಾರು ಹೇಳಿಲ್ವಾ ಎಂದು ಕೇಳುತ್ತಾಳೆ. ಆಗ ಧ್ರುವನ ಸ್ಥಿತಿ ಬಗ್ಗೆ ತಿಳಿದು ವೈದೇಹಿ ಕಣ್ಣೀರು ಹಾಕುತ್ತಾಳೆ.

Jothe jotheyali: ರಾಜನಂದಿನಿಗೆ ಹೊಸ ಆರ್ಯವರ್ಧನ್! ಒಪ್ಪಿಕೊಳ್ಳದ ವೀಕ್ಷಕರು..

ಇತ್ತ ವೈದೇಹಿ ಧ್ರುವನ ಬಳಿ ಹೋಗಿ ನನ್ನ ನಿನ್ನ ಪರಿಸ್ಥಿತಿ ಒಂದೇ. ಇಬ್ಬರಿಗೂ ನಿಜವಾದ ವೈದೇಹಿ ಯಾರು ಅಂತ ಗೊತ್ತಿದ್ದರೂ ಬಾಯಿ ಬಿಡಲಾಗದೇ ಸುಮ್ಮನೇ ಇರಬೇಕಾಗಿದೆ. ಸುಹಾಸಿನಿ ಎಲ್ಲವನ್ನೂ ಹಾಳು ಮಾಡಿದಳು ಎಂದು ಕಣ್ಣೀರು ಹಾಕುತ್ತಿರುತ್ತಾಳೆ. ಇನ್ನು ಡುಪ್ಲಿಕೇಟ್(Duplicate) ವೈದೇಹಿ ಮಕ್ಕಳಿಗೆ ಅಡುಗೆ ಮಾಡಿ ಊಟ ಬಡಿಸುತ್ತಾಳೆ. ಸದ್ಯಕ್ಕೀಗ ಆ ಮನೆಯಲ್ಲಿ ವೈಜಯಂತಿ ರಿಯಲ್(Real) ವೈದೇಹಿ ಕಥೆ ಏನು, ಆಕೆಯನ್ನು ಈ ಚಂದ್ರಕಲಾ ಮನೆಯಿಂದ ಓಡಿಸ್ತಾಳಾ, ಈಗಾಗಲೇ ಸುಹಾಸಿನಿಯಲ್ಲಿ ಮಾತಾಡ್ತಾ ನಾವೆಷ್ಟು ಹುಷಾರಾಗಿದ್ರೂ ಸಾಲಲ್ಲ ಅನ್ನೋ ಮಾತು ಬೇರೆ ಹೇಳಿದ್ದಾಳೆ. ಮುಂದೇನಾಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

ವೇದಾಂತ್ ಪಾತ್ರದಲ್ಲಿ ರಕ್ಷ್, ಅಮೂಲ್ಯ ಪಾತ್ರದಲ್ಲಿ ನಿಶಾ ರಾಮಕೃಷ್ಣ, ಸುಹಾಸಿನಿಯಾಗಿ ಅರ್ಚನಾ ಕೃಷ್ಣಪ್ಪ, ರಿಯಲ್ ವೈದೇಹಿಯಾಗಿ ಸ್ವಾತಿ ನಟಿಸಿದ್ದಾರೆ.

Follow Us:
Download App:
  • android
  • ios