Asianet Suvarna News Asianet Suvarna News

ಮುದ್ದುಮಣಿಗಳು ಸೀರಿಯಲ್‌ನ ಹೊಸ ಸೃಷ್ಟಿಯಾಗಿ ಸೋನಿ ಮುಲೆವಾ ಎಂಟ್ರಿ!

ಸ್ಟಾರ್‌ ಸುವರ್ಣದಲ್ಲಿ ಪ್ರಸಾರ ಆಗ್ತಿರೋ ಸೀರಿಯಲ್‌ಗಳಲ್ಲಿ 'ಮುದ್ದುಮಣಿಗಳು' ಸೀರಿಯಲ್‌ ಸಖತ್ ಫೇಮಸ್. ರೀಸೆಂಟಾಗಿ ಈ ಸೀರಿಯಲ್‌ನಲ್ಲಿ ಮಹತ್ತರ ಬದಲಾವಣೆ ಆಗಿತ್ತು. ಬಹುಮುಖ್ಯ ಪಾತ್ರ ಸೃಷ್ಟಿಯಾಗಿ ನಟಿಸುತ್ತಿದ್ದ ಸಮೀಕ್ಷಾ ಈ ಸೀರಿಯಲ್‌ನಿಂದ ಹೊರ ನಡೆದಿದ್ದರು. ಇದೀಗ ಅವರ ಪಾತ್ರಕ್ಕೆ ಸೋನಿ ಮುಲೆವಾ ಎಂಟ್ರಿ ಕೊಟ್ಟಿದ್ದಾರೆ. ಈ ಸೋನಿ?

Sony entered Muddu manigalu serial of star suvarna
Author
First Published Sep 21, 2022, 12:42 PM IST

ಸ್ಟಾರ್ ಸುವರ್ಣದ ಜನಪ್ರಿಯ ಸೀರಿಯಲ್‌ ಮುದ್ದುಮಣಿಗಳು. ಇದು ಸೃಷ್ಟಿ ಮತ್ತು ದೃಷ್ಟಿ ಅನ್ನೋ ಇಬ್ಬರು ಸಹೋದರಿಯರ ಕಥೆ. ಈ ಅಕ್ಕ ತಂಗಿ ತುಂಬ ಚಿಕ್ಕವರಿದ್ದಾಗ ಆಕ್ಸಿಡೆಂಟ್‌ನಲ್ಲಿ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗುತ್ತಾರೆ. ಜೊತೆಗೆ ಈ ಸಮಯದಲ್ಲೇ ಇಬ್ಬರೂ ಬೇರೆ ಬೇರೆ ಆಗುತ್ತಾರೆ. ಬೇರೆಯವರ ಮನೆಯಲ್ಲಿ ಬೆಳೆಯುತ್ತಾರೆ. ಸೃಷ್ಟಿ ಶ್ರೀಮಂತ ಕುಟುಂಬದಲ್ಲಿ ಬೆಳೆದರೆ ದೃಷ್ಟಿ ಹಳ್ಳಿಯೊಂದರಲ್ಲಿ ಬಡ ಕುಟುಂಬದಲ್ಲಿ ಬೆಳೆದು ದೊಡ್ಡವಳಾಗುತ್ತಾಳೆ. ಸೃಷ್ಟಿ ಚೆನ್ನಾಗಿ ಓದಿ ಡಾಕ್ಟರ್ ಆಗ್ತಾಳೆ. ಇವರಿಬ್ಬರ ಮುಖಾಮುಖಿಯಾದಾಗ ಏನಾಗುತ್ತೆ, ಇವರಿಬ್ಬರೂ ಹೇಗೆ ಮುಖಾಮುಖಿ ಆಗ್ತಾರೆ ಅನ್ನೋದರ ಮೇಲೆ ಕಥೆ ಬೆಳೆಯುತ್ತಾ ಹೋಗಿದೆ. ಇದರಲ್ಲಿ ಸೃಷ್ಟಿ ಪಾತ್ರದಲ್ಲಿ ಈ ಹಿಂದೆ ಸಮೀಕ್ಷಾ ಎಂಬ ನಟಿ ಕಾಣಿಸಿಕೊಂಡಿದ್ದರು. ಆದರೆ ಈ ಸೀರಿಯಲ್‌ ಚೆನ್ನಾಗಿ ಓಡುತ್ತಿದ್ದಾಗಲೇ ಸಮೀಕ್ಷಾ ಸೀರಿಯಲ್‌ ತೊರೆದು ಹೋದರು. ಆ ಪಾತ್ರಕ್ಕೆ ಸೋನಿ ಮುಲೆವಾ ಅನ್ನೋ ಹೊಸ ನಟಿ ಬಂದಿದ್ದಾರೆ. ಈಕೆ ಯಾರು, ಈಕೆಯ ಹಿನ್ನೆಲೆ ಏನು ಅನ್ನೋ ವಿವರ ಇಲ್ಲಿದೆ.

ಮುದ್ದುಮಣಿಗಳು ಸೀರಿಯಲ್‌ನಲ್ಲಿ ಸೃಷ್ಟಿ ಪಾತ್ರದಲ್ಲಿ ನಟಿಸುತ್ತಿದ್ದ ಸಮೀಕ್ಷಾ ಬಿಟ್ಟು ಹೋದಮೇಲೆ ವೀಕ್ಷಕರಿಗೆ ರಸಭಂಗದ ಹಾಗಾಗಿತ್ತು. ಮುಂದೆ ಈ ಪಾತ್ರಕ್ಕೆ ಯಾರು ಬರ್ತಾರೋ ಏನೋ, ಅವರು ಈ ಪಾತ್ರವನ್ನು ಸಮೀಕ್ಷಾ ಅವರಷ್ಟೇ ಪರಿಣಾಮಕಾರಿಯಾಗಿ ನಟಿಸ್ತಾರ ಅನ್ನೋ ಅನುಮಾನಗಳು ವೀಕ್ಷಕರಿದ್ದವು. ಇಲ್ಲೀವರೆಗೆ ಒಬ್ಬರನ್ನು ಒಂದೇ ಪಾತ್ರದಲ್ಲಿ ನೋಡಿ ಆ ಪಾತ್ರಕ್ಕೆ ಎಷ್ಟೇ ಚೆನ್ನಾಗಿ ನಟಿಸೋರು ಬಂದರೂ ಅವರಿಗೆ ವೀಕ್ಷಕರು ಅಡ್ಜೆಸ್ಟ್ ಆಗೋದಕ್ಕೆ ಒಂದಿಷ್ಟು ಸಮಯ ಬೇಕು. ಆರಂಭದಲ್ಲಿ ಈ ಹೊಸ ನಟ, ನಟಿಯರ ಬಗ್ಗೆ ಟೀಕೆ, ಲೇವಡಿಗಳು, ಟ್ರೋಲ್‌ಗಳೆಲ್ಲ ಬರೋದು ಸಾಮಾನ್ಯ. ಕ್ರಮೇಣ ವೀಕ್ಷಕರು ಈ ಕಲಾವಿದರಿಗೆ ಹೊಂದಿಕೊಳ್ಳುತ್ತಾರೆ.

ವೀಕ್ಷಕರ ಮನ ಗೆದ್ದ 'ಹೊಂಗನಸು' ನಾಯಕಿ ರಕ್ಷಾ ಗೌಡ! ಈ ಸೀರಿಯಲ್ ಸಖತ್ ಪಾಪ್ಯುಲರ್

ಇದೀಗ ಸಮೀಕ್ಷಾ ನಿರ್ವಹಿಸುತ್ತಿದ್ದ ಸೃಷ್ಟಿ ಪಾತ್ರಕ್ಕೆ ಸೋನಿ ಮುಲೆವಾ ಎಂಟ್ರಿ ಕೊಟ್ಟಿದ್ದಾರೆ. ಇನ್ನುಮುಂದೆ ಸೋನಿ ಸೃಷ್ಟಿ ಪಾತ್ರದಲ್ಲಿ ವೀಕ್ಷಕರಿಗೆ ಮನೋರಂಜನೆ (Entertainement) ನೀಡಲಿದ್ದಾರೆ. ಈ ಪಾತ್ರಕ್ಕೆ ಸಾಕಷ್ಟು ನಟಿಯರ ಆಡಿಶನ್ ನಡೆದಿದ್ದು ಕೊನೆಗೆ ನಟಿ ಸೋನಿ ಮುಲೆವಾ ಆಯ್ಕೆ ಆಗಿದೆ. ಈಗಾಗಲೇ ಸೋನಿ ಅವರು ಈ ಸೀರಿಯಲ್‌ನ ಶೂಟಿಂಗ್‌ (Serial Shooting)ನಲ್ಲೂ ಭಾಗವಹಿಸಿದ್ದಾರೆ. ಹೊಸ ಸೃಷ್ಟಿ ಸದ್ಯದಲ್ಲೇ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾಳೆ. 'ಮುದ್ದುಮಣಿಗಳು' ಸೀರಿಯಲ್‌ ಈಗಾಗಲೇ ಇನ್ನೂರು ಎಪಿಸೋಡ್‌ಗಳನ್ನು ಪೂರೈಸಿದೆ. ಇನ್ನುಮೇಲೆ ಸೋನಿ ಈ ಸೀರಿಯಲ್‌ ಕಥೆಗೆ ಇನ್ನಷ್ಟು ಶಕ್ತಿ ತುಂಬಲಿದ್ದಾರೆ. ಅಂದಹಾಗೆ ಈ ಸೋನಿ ಕಿರುತೆರೆಯ ಜೊತೆಗೆ ಸಿನಿಮಾಗಳಲ್ಲೂ ನಟಿಸುತ್ತಿರುವ ಆಕ್ಟರ್‌.

 
 
 
 
 
 
 
 
 
 
 
 
 
 
 

A post shared by Sony Mulewa (@sony_mulewa)

ಸದ್ಯಕ್ಕೀಗ ಇವರು 'ಒಂದಂಕೆ ಕಾಡು' ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ(Movie) ಕನ್ನಡ ಮಾತ್ರವಲ್ಲ, ತೆಲುಗಿನಲ್ಲೂ ಪ್ರಸಾರವಾಗಲಿದೆ. ಇದರ ಜೊತೆಗೆ 'ಬೆಂಗಳೂರು ಬಾಯ್ಸ್' ಅನ್ನೋ ಸಿನಿಮಾದಲ್ಲೂ ಇವರು ನಟಿಸುತ್ತಿದ್ದಾರೆ. ಸೀರಿಯಲ್‌(Serial) ಪ್ರಿಯರಿಗೆ ಇವರು 'ಗಟ್ಟಿಮೇಳ' ಸೀರಿಯಲ್‌ನ ಮೂಲಕ ಪರಿಚಿತರು. ಅಲ್ಲಿ ಸೋನಿ ಅಹಲ್ಯಾ ಅನ್ನೋ ಪಾತ್ರ ಮಾಡ್ತಿದ್ದರು. ಮಾಡೆಲಿಂಗ್‌(Model)ನಲ್ಲೂ ಮಿಂಚುತ್ತಿರುವ ಈ ನಟಿಗೆ ಸೋಷಿಯಲ್‌ ಮೀಡಿಯಾದಲ್ಲೂ ತುಂಬ ಜನ ಪಾಲೋವರ್ಸ್ ಇದ್ದಾರೆ. ಅವರೆಲ್ಲ ಈಕೆ ಸೃಷ್ಟಿ ಪಾತ್ರದಲ್ಲಿ ಮಿಂಚೋದನ್ನೇ ಎದುರು ನೋಡುತ್ತಿದ್ದಾರೆ.

ಗಟ್ಟಿಮೇಳ: ವೇದಾಂತ್ ಅಮ್ಮ ಇರೋ ಸಿಡಿ ಸಿಕ್ತು, ಆದ್ರೆ ಅಮ್ಮ ಸಿಕ್ತಾಳಾ?

ಇದೀಗ ಮುದ್ದಮಣಿಗಳು ಸೀರಿಯಲ್‌ನಲ್ಲಿ ಹೈ ಡ್ರಾಮಾ ನಡೆಯುತ್ತಿದ್ದು ದೃಷ್ಟಿ ಮತ್ತು ಸೃಷ್ಟಿ ಒಂದೇ ಮನೆಗೆ ಸೊಸೆಯರಾಗಿ ಬಂದಿದ್ದಾರೆ. ಸೃಷ್ಟಿಗೆ ತನ್ನ ತಂಗಿಯೇ ದೃಷ್ಟಿ ಅನ್ನೋದು ಗೊತ್ತಾಗಿದೆ. ಆದರೆ ದೃಷ್ಟಿ ನಿಧಾನಕ್ಕೆ ವಿಲನ್‌(Villon) ಆಗಿ ಬದಲಾಗಿದ್ದಾಳೆ. ಇದಕ್ಕೆ ಸೃಷ್ಟಿಯ ರಿಯಾಕ್ಷನ್ ಹೇಗಿರುತ್ತೆ, ಬಾಲ್ಯದಲ್ಲಿ ತುಂಬು ಮಮತೆಯ ಸಹೋದರಿಯಾಗಿದ್ದವರು ದೊಡ್ಡವರಾಗಿ ಮತ್ತೆ ಒಂದೇ ಮನೆ ಸೇರಿದ ಮೇಲೆ ಬದ್ಧ ವೈರಿಗಳಾಗ್ತಿದ್ದಾರಾ ಅನ್ನೋದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios