ತಾಂಡವ್‌ಗೆ ಡಿವೋರ್ಸ್ ಬೇಕಂತೆ! ಬಿಡಬೇಡಿ, ಗಲ್ಲಿಗೇರಿಸಿ ಅಂತಿದ್ದಾರೆ ವೀಕ್ಷಕರು

ನನ್ನ ಮದುವೆ ಆಗಿ ಹದಿನೈದು ವರ್ಷ ಆಯ್ತು, ನಂಗೆ ಡಿವೋರ್ಸ್ ಬೇಕು ಅಂತಿದ್ದಾನೆ ತಾಂಡವ್. ಮಗಳಿಗೆ ಆಗ್ಲೇ ಹದಿನಾರು ದಾಟಿತಲ್ಲೋ ಅಂತಿದ್ದಾರೆ ವೀಕ್ಷಕರು. ಜೊತೆಗೆ ಡಿವೋರ್ಸ್ ಬೇಡ ಗಲ್ಲಿಗೇರಿಸಿ ಈ ಮುಠಾಳನ್ನ ಅಂತ ಸಿಟ್ಟಲ್ಲಿ ಹೇಳ್ತಿದ್ದಾರೆ.

In Bhagyalakshmi serial Tandav talks about divorce Bni

ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ತಾಂಡವ್‌ ಮತ್ತೊಂದು ಡ್ರಾಮಾ ಶುರುವಿಟ್ಟುಕೊಂಡಿದ್ದಾನೆ. 'ನಂಗೆ ಡಿವೋರ್ಸ್ ಬೇಕು' ಅಂತ ತನ್ನ ಭಾವೀ ಹೆಂಡತಿ ಜೊತೆಗೆ ಲಾಯರ್ ಆಫೀಸಿಗೆ ಹೋಗಿದ್ದಾನೆ. ಅಲ್ಲಿ ಲಾಯರ್ ಹತ್ರ, 'ನಂಗೆ ಮದುವೆ ಆಗಿ ಹದಿನೈದು ವರ್ಷ ಆಯ್ತು, ನಮ್ಮ ಸಂಬಂಧ ಚೆನ್ನಾಗಿಲ್ಲ. ನಂಗೆ ಡಿವೋರ್ಸ್ ಬೇಕು' ಅಂತ ಕೇಳ್ತಿದ್ದಾನೆ. ಮಾಡೋ ಘನಂದಾರಿ ಕೆಲಸ ಎಲ್ಲ ಮಾಡಿಬಿಟ್ಟು ಈಗ ಡಿವೋರ್ಸ್‌ ಬೇಕು ಅಂತಿರೋ ತಾಂಡವ ಮೂರ್ತಿಗೆ ಜನ ಬಾಯಿಗೆ ಬಂದಂಗೆ ಕಾಮೆಂಟ್ ಮಾಡ್ತಿದ್ದಾರೆ. ಫಸ್ಟ್ ಆಫ್ ಆಲ್ ಈತ, ಮದುವೆ ಆಗಿ ಹದಿನೈದು ವರ್ಷ ಆಯ್ತು ಅಂದಿರೋದೇ ನಗೆಪಾಟಲಿಗೆ ಗುರಿಯಾಗಿದೆ. ಏಕೆಂದರೆ ಈತನ ಮಗಳು ತನ್ವಿ ಹತ್ತನೇ ಕ್ಲಾಸಲ್ಲಿ ಓದುತ್ತಿದ್ದಾಳೆ. ಅವಳಿಗೆ ಆಗಲೇ ಹದಿನಾರು ವರ್ಷ. ಈ ಪುಣ್ಯಾತ್ಮ ನಮಗೆ ಮದುವೆ ಆಗಿ ಹದಿನೈದು ವರ್ಷ ಆಯ್ತು ಅನ್ನೋದು ಫ್ಯಾಕ್ಚುವಲ್ ಎರರ್. ಅದನ್ನು ಹೇಗೆ ಬೇಕಾದ್ರೂ ಟರ್ನ್ ಮಾಡಬಹುದು.

ಬರೀ ಸುಳ್ಳಿಗೆ ಹೆಸರಾದ ಈ ಪಾತ್ರ ಎಂಥಾ ತಪ್ಪು ಮಾತಾಡಿದ್ರೂ ಆ ಮಾತಿಗೆ ಅಂಥಾ ಸೀರಿಯಸ್ ನೆಸ್ ಇರೋದಿಲ್ಲ. ಇದಕ್ಕೂ ಮೊದಲಷ್ಟೇ ತಾಂಡವ್ ತನ್ನ ತಾಯಿ, ಹೆಂಡತಿ, ಮಗಳ ಮುಂದೆ ದೊಡ್ಡ ಡ್ರಾಮವನ್ನೇ ಆಡಿದ್ದಾನೆ. ಮಗಳು ತನ್ವಿ ಪ್ರಾಣಾಪಾಯದಲ್ಲಿದ್ದರೂ ಬರಲಾಗದ ತಾಂಡವ್ ಇದೀಗ ತನ್ನ ಮಗಳ ಮೇಲೆಯೇ ಎಲ್ಲ ತಪ್ಪು ಹೊರೆಸಿ ನುಣುಚಿಕೊಳ್ಳಲು ನೋಡಿದ್ದಾನೆ. 'ಎಲ್ಲರೂ ಕಣ್ಣಾರೆ ನೋಡಿರುವಂತೆ ಮಾತನಾಡುತ್ತಿದ್ದೀರಿ. ತನ್ವಿ ಆಫೀಸಿಗೆ ಬಂದು ಅರಚಾಡಿದಳು, ಆದ್ದರಿಂದ್ಲೇ ಅಲ್ಲಿ ಎಲ್ಲರಿಗೂ ವಿಚಾರ ತಿಳಿದದ್ದು, ನಾನು ಯಾರಿಗೂ ಹೇಳಲಿಲ್ಲ. ತನ್ವಿ ಎಷ್ಟು ಸುಳ್ಳು ಹೇಳುತ್ತಾಳೆ ನಿಮಗೆಲ್ಲಾ ಗೊತ್ತು. ಶ್ರೇಷ್ಠಾಳನ್ನು ತನ್ನ ತಾಯಿ ಎಂದು ಸುಳ್ಳು ಹೇಳಿಕೊಂಡು ಒಮ್ಮೆ ಸ್ಕೂಲ್‌ಗೆ ಕರೆದೊಯ್ದಿದ್ದಳು, ಜಂಕ್‌ ಫುಡ್‌ ತಿಂದು ಸುಳ್ಳು ಹೇಳಿದ್ದಳು, ಅದೇ ರೀತಿ ಈಗಳೂ ಅವಳು ಹೇಳುತ್ತಿರುವುದು ಸುಳ್ಳು' ಎಂದು ಮಗಳನ್ನು ದೂರುತ್ತಾನೆ.

ಯಾರೋ ನೀನು? ನೀನು ಮಗಾ ಏನೋ: ಕುಸುಮಾ ಪ್ರಶ್ನೆಗೆ ತಾಂಡವ್‌ ಬಳಿ ಉತ್ತರ ಇದೆಯಾ?

ಅಪ್ಪನ ವರ್ತನೆ ಕಂಡ ತನ್ವಿ ನಾನಾ ಸುಳ್ಳು ಹೇಳಿದ್ದು, ಹಾಗಿದ್ರೆ ಈ ಮೆಸೇಜ್‌ ಮಾಡಿದ್ದು ಯಾರು? ಎಂದು ತಾಂಡವ್‌ ಮೊಬೈಲ್‌ನಿಂದ ಬಂದ ಮೆಸೇಜ್‌ ತೋರಿಸುತ್ತಾಳೆ. ಅದರನ್ನು ನೋಡಿ ತಾಂಡವ್‌ ಶಾಕ್‌ ಆಗುತ್ತಾನೆ. ನನ್ನ ಮೊಬೈಲ್‌ನಿಂದ ಈ ರೀತಿ ಮೆಸೇಮ್‌ ಮಾಡಿದ್ದು ಯಾರು? ಎಂದು ಯೋಚಿಸುತ್ತಾನೆ. ಆ ಮೆಸೇಜ್‌ (message) ಬಗ್ಗೆ ತಿಳಿದ ನಂತರ ಭಾಗ್ಯಾ ಹಾಗೂ ಕುಸುಮಾ ಬೇಸರಗೊಳ್ಳುತ್ತಾರೆ. ತನ್ವಿಗೆ ದುಡ್ಡು ಕೊಡಬೇಡ ಎಂದು ನಾವು ನಿಮ್ಮ ಬಳಿ ಯಾವಾಗ ಹೇಳಿದ್ದೆವು ಎಂದು ಪ್ರಶ್ನಿಸುತ್ತಾರೆ. ಇದೇ ಕಾರಣಕ್ಕೆ ನನಗೆ ನಿಮ್ಮನ್ನು ಕಂಡರೆ ಆಗುವುದಿಲ್ಲ, ಇನ್ಮುಂದೆ ನಮ್ಮನ್ನು ನೋಡಲು ಬರಬೇಡಿ ಎಂದು ತನ್ವಿ ಅಪ್ಪನಿಗೆ ಹೇಳುತ್ತಾಳೆ. ಇಷ್ಟೆಲ್ಲಾ ಆದರೂ ತಾಂಡವ್‌, ತನ್ನ ತಪ್ಪನ್ನು ಒಪ್ಪಿಕೊಳ್ಳದೆ , ಇದೆಲ್ಲದಕ್ಕೂ ನೀನೇ ಕಾರಣ ಎಂದು ಮತ್ತೆ ಭಾಗ್ಯಾಳನ್ನು ದೂರುತ್ತಾನೆ.

ಇನ್ನೊಂದೆಡೆ ಇದೆಲ್ಲ ಡ್ರಾಮಾ ಆದಮೇಲೆ ತಾಂಡವ್ ನೇರ ಲಾಯರ್ ಆಫೀಸಿಗೆ ಹೋಗುತ್ತಾನೆ. ಅಲ್ಲಿ ತನಗೆ ಡಿವೋರ್ಸ್ ಬೇಕು ಎಂದು ಲಾಯರ್ (lawyer) ಹತ್ರ ಕೇಳುತ್ತಾನೆ. ತಾಂಡವ್ ಈ ಮಾತಿಗೆ ಉಳಿದವರು ಏನು ಹೇಳ್ತಾರೋ ಗೊತ್ತಿಲ್ಲ. ಆದರೆ ವೀಕ್ಷಕರು ಮಾತ್ರ ನಖಶಿಖಾಂತ ಉರಿದುಹೋಗಿದ್ದಾರೆ. ಯಾವ ಲೆವೆಲ್‌ಗೆ ಅಂದರೆ 'ಈತನಿಗೆ ಡಿವೋರ್ಸೇ (divorce) ಬೇಡ, ನೇರ ಗಲ್ಲಿಗೇರಿಸಿ' ಅಂತಿದ್ದಾರೆ. 'ಮಗಳಿಗೆ ಹದಿನಾರು ವರ್ಷ, ಇವ್ನಿಗೆ ಮದುವೆ ಆಗಿ ಹದಿನೈದು ವರ್ಷ ಅಂತೆ. ಕರ್ಮಕಾಂಡ' ಅಂತಿದ್ದಾರೆ. ಇನ್ನೂ ಕೆಲವರು ಕೊನೆಗೂ ತನ್ವಿಗೆ ಒಳ್ಳೆ ಬುದ್ಧಿ ಬಂತಲ್ಲಾ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಈ ವಾರದ 'ಕಳಪೆ' ಪಟ್ಟ ತಾಂಡವ್‌ಗೆ ಸಿಗಬೇಕು ಅಂತ ಒಂದಿಷ್ಟು ಜನ ತೀರ್ಪು ಕೊಟ್ಟಿದ್ದಾರೆ.

RIP Star Maa Trend: ಚೆನ್ನಾಗಿ ನಡೀತಿರೋ ಚಾನೆಲ್‌ಗೆ ಜನ ಶ್ರದ್ಧಾಂಜಲಿ ಸಲ್ಲಿಸುತ್ತಿರೋದ್ಯಾಕೆ?

ತಾಂಡವ್ ಪಾತ್ರದಲ್ಲಿ ಸುದರ್ಶನ್ ರಂಗಪ್ರಸಾದ್, ಭಾಗ್ಯಾ ಪಾತ್ರದಲ್ಲಿ ಸುಷ್ಮಾ ರಾವ್, ಕುಸುಮಾ ಪಾತ್ರದಲ್ಲಿ ಪದ್ಮಜಾ ರಾವ್ ನಟಿಸಿದ್ದಾರೆ. ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ ಏಳಕ್ಕೆ ಈ ಸೀರಿಯಲ್ ಪ್ರಸಾರವಾಗುತ್ತಿದೆ.

Latest Videos
Follow Us:
Download App:
  • android
  • ios