ಇತ್ತ ಮಗಳು ತನ್ವಿ ಪ್ರಾಣಾಪಾಯದಲ್ಲಿದ್ದರೆ ಅತ್ತ ಶ್ರೇಷ್ಠಾ ಜೊತೆಗೆ ಎಂಗೇಜ್‌ಮೆಂಟ್ ಮಾಡ್ಕೊಳ್ತಿದ್ದ ತಾಂಡವ್. ಯಾರೋ ನೀನು? ಎನ್ನುವ ಕುಸುಮಾ ಪ್ರಶ್ನೆಗೆ ತಾಂಡವ್ ಬಳಿ ಉತ್ತರ ಇದೆಯಾ?

ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ವೀಕ್ಷಕರಿಂದ ಹೊಡೆಸಿಕೊಳ್ಳೋ ಲೆವೆಲ್‌ಗೆ ಸೃಷ್ಟಿಯಾಗಿರೋ ಪಾತ್ರ ತಾಂಡವ್‌ನದು. ಇದೊಂಥರ ನಮ್ಮ ನಡುವೆ ಇರುವ ಕೆಲವು ಅಹಂಕಾರದ, ಉಡಾಫೆಯ ಗಂಡಸರನ್ನು ಪ್ರತಿನಿಧಿಸೋ ಪಾತ್ರ. ಈ ಕಾರಣಕ್ಕೋ ಏನೋ ಹೆಚ್ಚು ಮಂದಿಗೆ ಇಂಥಾ ಪಾತ್ರವನ್ನು ತಮ್ಮ ಸುತ್ತಮುತ್ತಲೇ ನೋಡಿದ ಫೀಲ್ ಆಗುತ್ತೆ. ಸದ್ಯ ಭಾಗ್ಯಲಕ್ಷ್ಮೀ ಸೀರಿಯಲ್ ವೀಕ್ಷಕರಲ್ಲಿ ತಾಂಡವ್‌ ಮೇಲೆ ಕೆಂಡ ಕಾರದವರಿಲ್ಲ. ಆ ಲೆವೆಲ್‌ಗೆ ಈ ಪಾತ್ರ ನೆಗೆಟಿವ್‌ ಶೇಡ್‌ನಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದೆ. ನೆಗೆಟಿವ್ ಪಾತ್ರ ಸೃಷ್ಟಿಸಿ ವಿಷ ಹಾಕೋ ಹಾಗೋ, ಸುಪಾರಿ ಕೊಟ್ಟು ಕೊಲೆ ಮಾಡಿಸೋ ಹಾಗೋ ಕಥೆ ಹೆಣೆಯೋದು ಸುಲಭ. ಆದರೆ ಅಂಥ ಪಾತ್ರಗಳಲ್ಲಿ ಸಹಜತೆ ಆಗಲೀ, ಗಟ್ಟಿತನ ಆಗಲೀ ಇರೋದಿಲ್ಲ. ಆದರೆ ತಾಂಡವ್ ರೀತಿಯ ಮನುಷ್ಯ ಸಹಜ ನಡವಳಿಕೆಯ ಸಹಜತೆಗೆ ಹತ್ತಿರವಿರುವ ಪಾತ್ರ ಹೆಚ್ಚು ಎಫೆಕ್ಟಿವ್ ಅನಿಸೋ ಜೊತೆಗೆ ವೀಕ್ಷಕರ ಮೇಲೆ ನೇರ ಪರಿಣಾಮ ಬೀರುತ್ತವೆ.

ತಾಂಡವ್ ಪಾತ್ರವನ್ನು ಸುದರ್ಶನ್ ರಂಗಪ್ರಸಾದ್ ಚೆನ್ನಾಗಿ ನಟಿಸುತ್ತಿದ್ದಾರೆ. ಪರಿಣಾಮ ಮನೆಯಿಂದ ಆಚೆ ಬಿದ್ದರೆ ಸಾಕು ಅವರು ಉಗಿಸಿಕೊಳ್ಳೋ ಹಾಗಾಗಿದೆ. ಇರಲಿ, ಸೀರಿಯಲ್ ವಿಚಾರಕ್ಕೆ ಬಂದರೆ ಶ್ರೇಷ್ಠಾ ಜೊತೆಗೆ ತಾಂಡವ್ ಎಂಗೇಜ್‌ಮೆಂಟ್ ಆಗಿದೆ. ಆ ಹೊತ್ತಿಗೆ ಆತನ ಮಗಳು ತನ್ವಿಗೆ ದೊಡ್ಡ ಆಕ್ಸಿಡೆಂಟ್ ಆಗಿದೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಅವಳಿಗೆ ರಕ್ತದ ಅವಶ್ಯಕತೆ ಬಿದ್ದು ಭಾಗ್ಯ, ಕುಸುಮಾ ಆಕಾಶವೇ ಕಳಚಿ ತಲೆಮೇಲೆ ಬಿದ್ದವರ ಹಾಗೆ ರಕ್ತಕ್ಕಾಗಿ ಒದ್ದಾಡುತ್ತಿದ್ದರೆ ಸೇಮ್ ಬ್ಲಡ್ ಗ್ರೂಪ್‌ನ ತಾಂಡವ್ ಆರಾಮವಾಗಿ ಎಂಗೇಜ್‌ಮೆಂಟ್ ಮಾಡಿಸಿಕೊಳ್ಳುತ್ತಿದ್ದ. ನಿಶ್ಚಿತಾರ್ಥ ಮುಗಿಸಿ ಬೆಂಗಳೂರಿಗೆ ವಾಪಸಾಗುವ ತಾಂಡವ್‌ ಈಗ ಶ್ರೇಷ್ಠಾ, ಸುಂದರಿ ಹಾಗೂ ಮಹೇಶನ ಕಂಟ್ರೋಲ್‌ನಲ್ಲಿದ್ದಾನೆ.

ಮಕ್ಕಳು ಬೇಕಾ- ಕಟ್ಟಿಕೊಂಡವಳೇ ಸಾಕಾ? ಇಬ್ಬರ ನಡುವೆ ಸಿಲುಕಿರುವಾಗ ಆಯ್ಕೆ ಯಾವುದು?

 ಶ್ರೇಷ್ಠಾ ಬೆಂಗಳೂರಿಗೆ ಹೊರಡುವ ಹಾದಿಯಲ್ಲಿ ಸುಂದರಿಗೆ ಕರೆ (call) ಮಾಡಿ ತಾಂಡವ್‌ಗೆ ಕೊಡುವಂತೆ ಹೇಳುತ್ತಾಳೆ. ನಿಮ್ಮ ಮನೆಯಿಂದ ಬಹಳ ಮಿಸ್ಡ್‌ ಕಾಲ್‌ ಇತ್ತು, ಏಕೆ ಅಂತ ನೋಡಿದರೆ ತನ್ವಿಗೆ ಆಕ್ಸಿಡೆಂಟ್‌ ಆಗಿರುವ ವಿಚಾರ ಗೊತ್ತಾಯ್ತು ಎಂದು ಹೇಳುತ್ತಾಳೆ. ಎಲ್ಲಾ ವಿಚಾರ ಮೊದಲೇ ಗೊತ್ತಿದ್ದರೂ ಶ್ರೇಷ್ಠಾ ನಾಟಕ (drama) ಮಾಡುತ್ತಾಳೆ. ಆದರೆ ಅದು ತಾಂಡವ್‌ಗೆ ಮಾತ್ರ ತಿಳಿಯುತ್ತಿಲ್ಲ.

ತನ್ವಿ, ಅಂದು ನಡೆದ ಘಟನೆಯನ್ನು ಯೋಚಿಸುತ್ತಾ ಕುಳಿತಿರುವಾಗ ತಾಂಡವ್‌ ಕಾರ್‌ ಬಂದಿದ್ದನ್ನು ಕಿಟಕಿ ಮೂಲಕ ನೋಡುತ್ತಾಳೆ. ಇವರೇಕೆ ಇಲ್ಲಿ ಬಂದರು? ನನಗೆ ಇವರನ್ನು ನೋಡಲು ಇಷ್ಟ ಇಲ್ಲ ಎಂದು ಡಿಪ್ರೆಷನ್‌ಗೆ (depression) ಹೋದವಳಂತೆ ವರ್ತಿಸುತ್ತಾಳೆ. ಆಸ್ಪತ್ರೆಯಲ್ಲಿ ಕೂಡಾ ತನ್ವಿ, ಅಪ್ಪನನ್ನು ನೆನೆದು ಹಿಂಸೆ ಪಟ್ಟಿದ್ದನ್ನು ಕಂಡು ಭಾಗ್ಯಾ, ಅವಳನ್ನು ಸಮಾಧಾನ ಮಾಡಿ ಕೆಳಗೆ ಬರುತ್ತಾಳೆ. ತಾಂಡವ್‌ ಮನೆಗೆ ಬಂದಿದ್ದನ್ನು ನೋಡಿ ಕುಸುಮಾ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಮಗಳನ್ನು ನೋಡಲು ಬಿಡುವುದಿಲ್ಲ ಎಂದು ಹೇಳಿದರೂ ಕುಸುಮಾಳನ್ನು ಪಕ್ಕಕ್ಕೆ ತಳ್ಳಿ ತಾಂಡವ್‌, ನಾನು ಇಂದು ತನ್ವಿಯನ್ನು ನೋಡದೆ ಹೋಗುವುದಿಲ್ಲ ಎಂದು ಜೋರು ಮಾಡುತ್ತಾನೆ. ಅಷ್ಟರಲ್ಲಿ ಭಾಗ್ಯಾ ಅವನನ್ನು ತಡೆಯುತ್ತಾಳೆ. ಅತ್ತೆ ನಿಮಗೆ ಮೂರನೆಯವರಾಗಿರಬಹುದು, ಆದರೆ ನಾನು ತನ್ವಿ ಅಮ್ಮ. ನಾನಂತೂ ನಿಮ್ಮನ್ನು ನನ್ನ ಮಗಳನ್ನು ನೋಡಲು ಬಿಡುವುದಿಲ್ಲ ಎನ್ನುತ್ತಾಳೆ. ಎಲ್ಲದಕ್ಕೂ ನೀನೇ ಕಾರಣ ಎಂದು ತಾಂಡವ್‌ ಭಾಗ್ಯಾಳನ್ನು ದೂರುತ್ತಾನೆ. ಆದರೆ ತಾಳ್ಮೆ ಕಳೆದುಕೊಳ್ಳುವ ಭಾಗ್ಯಾ, ಕಣ್ಣೀರು (tears) ಹಾಕುತ್ತಾ ತಾಂಡವ್‌ ಬಾಯಿ ಮುಚ್ಚಿಸುತ್ತಾಳೆ.

ಎದ್ದು ಬಂದ ಮಹೇಶ್​? ಶಾರ್ವರಿಯ ಗುಟ್ಟು ರಟ್ಟಾಗುತ್ತಾ? ಮಹಾ ತಿರುವಿನ ಮೆಗಾ ಸಂಚಿಕೆ!

ಸದ್ಯದ ಸ್ಥಿತಿಯಲ್ಲಿ ತಾಂಡವ್ ಬಳಿ ಮಾತನಾಡಲು ಏನೂ ಉಳಿದಿಲ್ಲ. ಯಾರೋ ನೀನು ಎಂಬ ಸ್ವಂತ ತಾಯಿಯ ಪ್ರಶ್ನೆಗೂ ಉತ್ತರ ಇಲ್ಲ. ಆತನ ಮೊಂಡುತನ ನೋಡಿದರೆ ಆತ ಇದರಿಂದ ಬುದ್ಧಿ ಕಲಿತಿರೋದಂತೂ ಸುಳ್ಳು. ಸೋ, ಮುಂದೇನಾಗಬಹುದು ಅನ್ನೋ ಕುತೂಹಲ ವೀಕ್ಷಕರಲ್ಲಿದೆ.