ಸೋಷಿಯಲ್‌ ಮೀಡಿಯಾ ಸದ್ಯ ಸಖತ್ ಪವರ್‌ಫುಲ್ ಮಾಧ್ಯಮ. ಆದರೆ ಜನ ಸೋಷಿಯಲ್ ಮೀಡಿಯಾದಲ್ಲಿ ಚಾನೆಲ್‌ ಒಂದಕ್ಕೆ ಶ್ರದ್ದಾಂಜಲಿ ಅಂತಿದ್ದಾರೆ. ಇದಕ್ಕೆ ಏನು ಕಾರಣ?  

ಸೋಷಿಯಲ್ ಮೀಡಿಯಾಗಳು ಪವರ್‌ಫುಲ್ ಆಗ್ತಿದ್ದ ಹಾಗೆ ಜನ ಈ ಮಾಧ್ಯಮವನ್ನು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿದ್ದಾರೆ. ನಿರ್ಭೀತಿಯಿಂದ ತಮ್ಮ ಅಭಿಪ್ರಾಯವನ್ನು ನೇರ ಹಂಚಿಕೊಳ್ಳುತ್ತಿದ್ದಾರೆ. ಈ ಹೈಪ್ ಯಾವ ಲೆವೆಲ್‌ಗೆ ಇದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರನೇ. ಸ್ಟಾರ್ ನಟರೂ ಸೋಷಿಯಲ್ ಮೀಡಿಯಾ ಮೂಲಕ ನೇರವಾಗಿ ಜನರ ಜೊತೆಗೆ ಮಾತುಕತೆ ನಡೆಸೋದು, ಅವರ ಪ್ರಶ್ನೆಗಳಿಗೆ ಉತ್ತರಿಸೋದು ತುಂಬ ನಾರ್ಮಲ್ ಆಗ್ತಿದೆ. ಹೀಗಿರುವಾಗ ಜನ ಟಿವಿ ಪ್ರೋಗ್ರಾಂ, ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ನೇರ ಕಾಮೆಂಟ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಾರೆ. ಅನೇಕ ಸೆಲೆಬ್ರಿಟಿಗಳು ತಮಗೆ ಈ ಮಾತು ನೋವನ್ನುಂಟು ಮಾಡಿದಾಗ ನೇರವಾಗಿ ಸೋಷಿಯಲ್ ಮೀಡಿಯಾದಲ್ಲೇ ಅಂಥವರನ್ನು ತರಾಟೆಗೆ ತೆಗೆದುಕೊಂಡಿದ್ದೂ ಇದೆ. ತಮ್ಮ ನೋವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದೂ ಇದೆ.

ಇಷ್ಟೆಲ್ಲ ಪೀಠಿಕೆ ಏಕೆ ಅಂದರೆ ಜನ ಈಗ ಚಾನೆಲ್‌ ಒಂದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಶ್ರದ್ಧಾಂಜಲಿ ಮೆಸೇಜ್ ಕಳಿಸುತ್ತಿದ್ದಾರೆ. ಅಷ್ಟಕ್ಕೂ ಆ ಚಾನೆಲ್ ಯಾವ್ದು ಅಂದರೆ ಖಂಡಿತಾ ಅದು ಕನ್ನಡ ಚಾನೆಲ್ ಅಲ್ಲ. ತೆಲುಗು ಚಾನೆಲ್. ಆದರೆ 'ರಿಪ್ ಸ್ಟಾರ್‌ ಮಾ' ಅಂತ ಕಾಮೆಂಟ್ ಮಾಡೋರಲ್ಲಿ ಕನ್ನಡಿಗರೂ ಇದ್ದಾರೆ. ಇದಕ್ಕೆ ಬಲವಾದ ಕಾರಣವೂ ಇದೆ. 'ಗುಪ್ಪೆಡಂಥಾ ಮನಸು' ಅನ್ನೋ ಸೀರಿಯಲ್ ತೆಲುಗಿನ ಸ್ಟಾರ್ ಮಾದಲ್ಲಿ ಪ್ರಸಾರವಾಗುತ್ತಿದೆ. ಕನ್ನಡ ಕಲಾವಿದರಾದ ಮುಖೇಶ್ ಹಾಗೂ ರಕ್ಷಾ ಈ ಸೀರಿಯಲ್‌ನ ನಾಯಕ, ನಾಯಕಿ. ಈ ಹಿಂದೆ ಕನ್ನಡ ನಟಿ ಜ್ಯೋತಿ ರೈ ಅವರೂ ಈ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಸ್ಟಾರ್‌ ಸುವರ್ಣದಲ್ಲಿ ' ಹೊಂಗನಸು' ಎಂಬ ಹೆಸರಲ್ಲಿ ಇದು ಕನ್ನಡ ಡಬ್ಬಿಂಗ್ ಸೀರಿಯಲ್ ಆಗಿ ಪ್ರಸಾರವಾಗ್ತಿದೆ. ಆರಂಭದಲ್ಲಿ ಬಹಳ ಸೊಗಸಾಗಿ ಬರುತ್ತಿದ್ದ ಈ ಸೀರಿಯಲ್ ಮನೆ ಮಾತಾಯ್ರು. ಸಖತ್ ಟಿಆರ್‌ಪಿಯನ್ನೂ ಗಿಟ್ಟಿಸಿಕೊಂಡಿತ್ತು. ಶಿಕ್ಷಣ ವ್ಯವಸ್ಥೆ, ಕ್ರಿಯೇಟಿವ್ ಐಡಿಯಾಗಳೊಂದಿಗೆ ನವಿರಾದ ಪ್ರೇಮಕಥೆ ಹೊಂದಿದ್ದ ಈ ಸೀರಿಯಲ್‌ಗೆ ಅಪಾರ ಅಭಿಮಾನಿ ಬಳಗವಿತ್ತು. ಆದರೆ ಒಂದು ಹಂತದಲ್ಲಿ ಸಂಭಾಷಣೆ ಬರೀತಿದ್ದವರು ಬದಲಾದರು. ಸೀರಿಯಲ್‌ನ ಸಂಭಾಷಣೆಯ ಲವಲವಿಕೆ ಮಾಯವಾಯ್ತು. ಕತೆಯಲ್ಲೂ ಮಾಮೂಲಿ ಆಗಿರುವ ಕೊಲೆ ಯತ್ನ, ಕೆಟ್ಟ ಮನಸ್ಥಿತಿಗಳೇ ವಿಜೃಂಭಿಸಿದವು. ಇದು ಎಮೋಶನಲೀ ಕನೆಕ್ಟ್ ಈ ಸೀರಿಯಲ್‌ ವೀಕ್ಷಕರಿಗೆ ಕೊಂಚವೂ ಇಷ್ಟವಾಗಲಿಲ್ಲ. ಜನ ತಮ್ಮ ಅಭಿಪ್ರಾಯವನ್ನು ನೇರವಾಗಿ ಹಂಚಿಕೊಂಡರು.

ಯಾರೋ ನೀನು? ನೀನು ಮಗಾ ಏನೋ: ಕುಸುಮಾ ಪ್ರಶ್ನೆಗೆ ತಾಂಡವ್‌ ಬಳಿ ಉತ್ತರ ಇದೆಯಾ?

ಕೇವಲ ಕಥೆಗೋಸ್ಕರ ಜನ ಈ ಸೀರಿಯಲ್ ನೋಡಲಾರಂಭಿಸಿದರು. ಅಷ್ಟರಲ್ಲಿ ಈ ಸೀರಿಯಲ್‌ನ ಟೈಮಿಂಗ್‌ ಅನ್ನೇ ಬದಲಾಯಿಸಿಬಿಟ್ಟರು. ಜನ ಸಿಟ್ಟಾದರು. ಜನರಿಗೆ ಸರಿಹೊಂದದ ಸಮಯದಲ್ಲಿ ಸೀರಿಯಲ್ ಪ್ರಸಾರವಾಗತೊಡಗಿತು. ಈ ವೇಳೆ ಟಿಆರ್‌ಪಿ ಜರ್ರನೆ ಇಳಿದರೂ ಒಂದು ಹಂತದಲ್ಲಿ ಮತ್ತೆ ಚೇತರಿಸಿಕೊಂಡಿತು. ಇಷ್ಟು ಹೊತ್ತಿಗೆ ನಾಯಕಿಗೆ ಡಬ್ಬಿಂಗ್ ಮಾಡುತ್ತಿದ್ದವರು ಬದಲಾದರು. ಹೊಸ ಡಬ್ಬಿಂಗ್ ದನಿ ಕೊಂಚವೂ ಸರಿಹೊಂದದೇ ಜನರಿಗೆ ಈ ಪಾತ್ರವನ್ನು ನೋಡುವುದೇ ಕಷ್ಟವಾಯ್ತು. ಜನಪ್ರಿಯ ಸೀರಿಯಲ್‌ ನಾಯಕಿ ಧ್ವನಿಯನ್ನೇ ಈ ರೀತಿ ಮಾಡಿದ್ದು ಜನರಿಗೆ ಅರ್ಥವೇ ಆಗಲಿಲ್ಲ. ಅದಕ್ಕೆ ಇನ್ನೂ ವಿರೋಧ ಬರುತ್ತಲೇ ಇದೆ. ಈ ನಡುವೆ ಗಾಯದ ಸಮಸ್ಯೆ, ಸಿನಿಮಾ ಶೂಟಿಂಗ್ ನೆವದಲ್ಲಿ ನಾಯಕ ನಟನೇ ಸೀರಿಯಲ್‌ನಿಂದ ನಾಪತ್ತೆಯಾದದ್ದು ಈ ಸೀರಿಯಲ್ ವೀಕ್ಷಕರಿಗೆ ಮತ್ತೂ ಕಷ್ಟವಾಯ್ತು.

ಈ ನಡುವೆ ಚಾನೆಲ್ ಮತ್ತೆ ಸೀರಿಯಲ್ ಸಮಯವನ್ನು ಬದಲಾಯಿಸಿತು. ಆರಂಭದಲ್ಲಿ ಒಂದೂವರೆಗೆ ಸೀರಿಯಲ್ ಪ್ರಸಾರ ಎಂದು ಘೋಷಿಸಿತು. ಆಮೇಲೆ ಹನ್ನೆರಡೂವರೆಗೆ ಪ್ರಸಾರ ಎಂದುಬಿಟ್ಟಿತು!

ಸೀತಾರಾಮ: ಲವ್‌ಗೆ ಸಪೋರ್ಟ್ ಮಾಡೋ ಗೆಳೆಯಾ ಅಂದ್ರೆ, ಲವರ್ ಫ್ರೆಂಡ್‌ನ ಬುಟ್ಟಿಗಾಕೊಂಡ ಅಶೋಕ!

ಜನರ ಭಾವನೆಗಳ ಜೊತೆಗೆ ಚಾನೆಲ್ ಆಟ ಆಡುತ್ತಿದೆ ಎಂದು ಅಭಿಮಾನಿಗಳೀಗ ರೊಚ್ಚಿಗೆದ್ದಿದ್ದಾರೆ. 'ರಿಪ್ ಸ್ಟಾರ್ ಮಾ' ಎಂದು ನೂರಾರು ಮಂದಿ ಕಳೆದೆರಡು ದಿನಗಳಿಂದ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ರಿಪ್ ಸ್ಟಾರ್ ಮಾ ಅನ್ನೋದೇ ಟ್ರೆಡಿಂಗ್ ಆಗಿದೆ. ಚಾನೆಲ್‌ನ ಈ ವರ್ತನೆ ಜನರಿಗೆ ಸಿಕ್ಕಾಪಟ್ಟೆ ಬೇಸರ ತಂದ ಹಾಗಿದೆ. ಜನ ಎಷ್ಟೇ ರಿಕ್ವೆಸ್ಟ್ ಮಾಡಿದರೂ ಸ್ಪಂದಿಸದ ಚಾನೆಲ್‌ಗೆ ಜನ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

View post on Instagram