ಅತ್ತೆ ಮನೆಯಲ್ಲಿ ಅತಿಯಾದ ಒಳ್ಳೆತನವೂ ವಿಷವಾಗುತ್ತೆ ಹುಷಾರ್​! ನೀವೂ ಪೂರ್ಣಿ ಆಗದಿರಿ... ಹೆಣ್ಮಕ್ಕಳಿಗೆ ಕಿವಿಮಾತು

ಹೆಣ್ಣುಮಕ್ಕಳಿಗೆ ಸಹನೆಯ ಗುಣ ಹುಟ್ಟಿನಿಂದಲೂ ಇರುವುದು ನಿಜ. ಆದರೆ ಸಹನೆ, ಒಳ್ಳೆಯತನ ಅತಿಯಾದರೆ ಅದೂ ವಿಷವಾಗುತ್ತದೆ ಎನ್ನುವುದಕ್ಕೆ ಪೂರ್ಣಿಯೇ ಸಾಕ್ಷಿ ಎನ್ನುವುದು ನೆಟ್ಟಿಗರ ಅಭಿಮತ. ಏನಿದು ವಿಷಯ?
 

if tolerance and kindness are too much it becomes poison like Poorni of shreerashtu Shubhamastu suc

ಹೆಣ್ಣು... ಅಬ್ಬಾ! ಈಕೆಗೆ ಎಷ್ಟೊಂದು ಬಿರುದುಗಳು ಅಲ್ವಾ? ಭೂಮಿತಾಯಿ, ಸಂಸಾರದ ಕಣ್ಣು, ಮಾತೃ ಹೃದಯಿ, ಕ್ಷಮಯಾಧರಿತ್ರಿ, ಸಹನೆಯ ಪ್ರತೀಕ... ಹೀಗೆ ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತದೆ. ಹೆಣ್ಣಿಗೆ ಹಲವು ವಿಶೇಷಣೆಗಳನ್ನು ಕೊಟ್ಟು  ಖುಷಿ ಪಡಿಸಲಾಗಿದೆ. ಹೆಣ್ಣನ್ನು ಸರ್ವಶ್ರೇಷ್ಠ ಸ್ಥಾನದಲ್ಲಿ ಹಿಂದೂ ಸಂಪ್ರದಾಯದಲ್ಲಿ ನೋಡುವುದು ಇದೆ, ಆಕೆಗೆ ದೇವಿಯ ಸ್ಥಾನವನ್ನೂ ಕೊಡಲಾಗಿದೆ. ಹಲವು ಮನೆಗಳಲ್ಲಿ ಹುಟ್ಟಿನಿಂದಲೇ ಆಕೆಗೆ ಹೇಳುವ ಕಿವಿಮಾತು ಎಂದರೆ ಹೆತ್ತ ಮನೆಗೂ, ಕೊಟ್ಟ ಮನೆಗೂ ಕೀರ್ತಿ ತಾ ಎಂದೇ... ಏಕೆಂದರೆ ಆಕೆ ಸಹನೆಯ ಪ್ರತೀಕ! ಆದರೆ...? ಈ ಬಿರುದು ಬಾವಲಿಗಳು ಇದ್ದರೂ ಇಂದು ಎಲ್ಲಾ ಹೆಣ್ಣುಮಕ್ಕಳು ಇದನ್ನು ಪಾಲಿಸುತ್ತಿದ್ದಾರೆ ಎಂದರ್ಥವಲ್ಲ, ಅದೇ ಇನ್ನೊಂದೆಡೆ, ತಮ್ಮ ಮೇಲೆ ಗಂಡಿನ ಮನೆಯಲ್ಲಿ ಆಗುತ್ತಿರುವ ದೌರ್ಜನ್ಯಗಳನ್ನು ಸಹಿಸಿಕೊಂಡು ಹೋಗುತ್ತಿರುವವರು ಇಲ್ಲವೆಂದೇನೂ ಅಲ್ಲ! ಆದರೆ ಅತ್ತೆ ಮನೆಯಲ್ಲಿಯೇ ಆಗಲಿ, ಇನ್ನೆಲ್ಲಿಯೇ ಆಗಲಿ ಅಗತ್ಯಕ್ಕಿಂತ ಹೆಚ್ಚು ಸಹನೆ, ಒಳ್ಳೆಯತನ ಒಳ್ಳೆಯದಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ. ಎಷ್ಟೆಂದರೂ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂದು  ಹೆಣ್ಣುಮಕ್ಕಳಿಗೆ ಕಿವಿ ಮಾತು ಹೇಳುತ್ತಿದ್ದಾರೆ ನೆಟ್ಟಿಗರು!

ಹೌದು. ಹೆಣ್ಣನ್ನು ದೇವತೆಗೆ ಹೋಲಿಸಲಾಗಿದೆ.  ಆ ದೇವಿಯೊಳಗೆ  ಕಾಳಿಮಾತೆಯೂ ಇದ್ದಾಳೆ ಎನ್ನುವುದನ್ನೂ ಹೆಣ್ಣುಮಕ್ಕಳು ಅರಿಯಬೇಕು. ದುಷ್ಟ ಶಕ್ತಿಗಳು ನಿಮ್ಮ ಮುಂದೆ ಇದ್ದಾಗಲೂ ಒಳ್ಳೆಯತನ ಪ್ರದರ್ಶಿಸಲು ಹೋದರೆ ಪೂರ್ಣಿಗೆ  ಆದ ಗತಿಯೇ ನಿಮಗೂ ಆಗುತ್ತದೆ ಎನ್ನುವುದು ನೆಟ್ಟಿಗರ ಮಾತು. ಅಷ್ಟಕ್ಕೂ ಈ ಪೂರ್ಣಿ, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು ಸೀರಿಯಲ್​ ನಾಯಕಿ. ಸಾಮಾನ್ಯವಾಗಿ ಸೀರಿಯಲ್​ಗಳಲ್ಲಿ ಹೀಗೆಯೇ ಬಿಡಿ. ಒಬ್ಬಳು ಅಗತ್ಯಕ್ಕಿಂತ ಹೆಚ್ಚು ಮುಗ್ಧೆ, ಒಳ್ಳೆಯವರು, ಇನ್ನೊಬ್ಬಳು ಅಗತ್ಯಕ್ಕಿಂತ ಒಂದುಕೈ ಹೆಚ್ಚು ದುಷ್ಟಬುದ್ಧಿಯವಳು. ಇಲ್ಲಿ ಓರ್ವ ಸೊಸೆ ಪೂರ್ಣಿ ಒಳ್ಳೆಯವಳಾಗಿದ್ದರೆ, ಇನ್ನೊಬ್ಬ ಸೊಸೆ ದೀಪಿಕಾ ವಿಲನ್​!

ಗಣೇಶ್​ ಚಿತ್ರಕ್ಕೆ ನಮ್ದೂ ಒಂದಿರ್ಲಿ... ಮಗಳು ಹಿತಾ ಜೊತೆ 'ಮೀನ ಕಣ್ಣೋಳೆ...' ಎಂದ ಸಿಹಿಕಹಿ ಚಂದ್ರು

ಈಗ ಪೂರ್ಣಿ ಮನೆಬಿಟ್ಟು ಹೋಗುವ ಸಂದರ್ಭ ಬಂದಿದೆ. ಆಕೆಯ ಒಳ್ಳೆಯತನವೇ ಆಕೆಗೆ ಮುಳುವಾಗಿದೆ. ಅಣ್ಣ ಮತ್ತು ತಮ್ಮನನ್ನು ಬೇರೆ ಮಾಡಿಯೇ ತೀರುತ್ತೇನೆ ಎಂದಿದ್ದ ದೀಪಿಕಾ ಕೈ ಮೇಲಾಗಿದೆ. ಅವರಿಬ್ಬರನ್ನೂ ಒಂದುಮಾಡುತ್ತೇನೆ ಅಂದುಕೊಂಡಿದ್ದ ಪೂರ್ಣಿ ಮನೆಬಿಟ್ಟು ಹೋಗುವ ಹಾಗಾಗಿದೆ. ಇದಕ್ಕೆ ಕಾರಣ ದೀಪಿಕಾ ಮತ್ತು ಅತ್ತೆ ಶಾರ್ವರಿ ಮಾಡಿರುವ ಪ್ಲ್ಯಾನ್​. ಅಡುಗೆ ಮನೆಯಲ್ಲಿ ತಾನೇ ಗ್ಯಾಸ್​ಸ್ಟೋವ್​ನ ಗ್ಯಾಸ್​ ಬಿಟ್ಟು, ಪೂರ್ಣಿ ಸಾಯಿಸಲು ಹೊರಟಳು ಎಂದಿದ್ದಾಳೆ ದೀಪಿಕಾ. ಇದಕ್ಕೂ ಮೊದಲು ಹಲವಾರು ರೀತಿಯಲ್ಲಿ ಪೂರ್ಣಿಯ ಮೇಲೆ ಗೂಬೆ ಕುಳ್ಳರಿಸಿದ್ದಾಳೆ. ಆದರೆ ಪೂರ್ಣಿ ತನ್ನ ತಪ್ಪು ಇಲ್ಲ ಎನ್ನುವುದನ್ನು ಸಾಬೀತು ಮಾಡಿಕೊಳ್ಳಲು ಹೋಗಲೇ ಇಲ್ಲ. ದೀಪಿಕಾಳನ್ನು ಕ್ಷಮಿಸುತ್ತಲೇ ಬಂದಿದ್ದಾಳೆ. ಇದೇ ಕಾರಣಕ್ಕೆ ಈಗ ಆಕೆ ಮನೆ ಬಿಟ್ಟು ಹೋಗುವ ಸ್ಥಿತಿ ಬಂದಿದೆ.

ಹೇಳಿ-ಕೇಳಿ ಈತ ಅಭಿ. ಸ್ವಂತ ಬುದ್ಧಿ ಇಲ್ಲದವ. ಪತ್ನಿ ದೀಪಿಕಾಳ ಮಾತನ್ನೇ ನಂಬಿ ಅತ್ತಿಗೆ ಪೂರ್ಣಿಗೆ ಅನ್ನಬಾರದ್ದನ್ನೆಲ್ಲಾ ಅಂದಿದ್ದಾನೆ. ಅನಾಥೆ ಅದೂ ಇದೂ ಎಲ್ಲಾ ಹೇಳಿದರೂ ಪೂರ್ಣಿ ಸಹಿಸಿಕೊಂಡಿದ್ದಾಳೆ. ಇದೇ  ಕಾರಣಕ್ಕೆ ನಿಮಗೆ ಮಕ್ಕಳಾಗಲಿಲ್ಲ, ಇನ್ನು ಮಕ್ಕಳು ಆಗುವುದೂ ಇಲ್ಲ ಎಂದುಬಿಟ್ಟಿದ್ದಾನೆ ಅಭಿ. ಇದನ್ನು ಕೇಳಿ ಪೂರ್ಣಿ ಕುಸಿದು ಹೋಗಿದ್ದಾಳೆ. ತುಳಸಿಗೆ ಪೂರ್ಣಿಯ ಗುಣ ಗೊತ್ತು. ಅವಿಗೆ ಬಿಟ್ಟು ಎಲ್ಲರಿಗೂ ಆಕೆ ಒಳ್ಳೆಯವಳು ಎನ್ನುವುದು ಗೊತ್ತು. ಇದೇ ವಿಷಯ ಮಾತಿಗೆ ಮಾತು ಬೆಳೆದು ತುಳಸಿ ಮತ್ತು ಮಾಧವ್​ ನಡುವೆಯೂ ಜಗಳ ತರಿಸಿದೆ. ಒಂದು ಹಂತದಲ್ಲಿ ಮನೆಬಿಟ್ಟು ಹೋಗುವಂತೆ ಮಾಧವ್  ಮಾತನಾಡಿಬಿಟ್ಟಿದ್ದಾನೆ. ನೊಂದುಕೊಂಡ ತುಳಸಿ ಅವಿ ಮತ್ತು ಪೂರ್ಣಿಯನ್ನು ಕರೆದುಕೊಂಡು ಮನೆಬಿಟ್ಟು ಹೋಗಿದ್ದಾಳೆ. ಅದಕ್ಕೇ ಹೇಳುವುದು, ಪೂರ್ಣಿಯನ್ನಾಗಲೀ, ತುಳಸಿಯನ್ನಾಗಲೀ ನೋಡಿ ಹೆಣ್ಣುಮಕ್ಕಳು ಬೇಕಾದಷ್ಟು ಕಲಿಯುವುದು ಇದೆ. ಹಾಗೆಂದು ಶಾರ್ವರಿ ಮತ್ತು ದೀಪಿಕಾಳಂತೆ  ಕುತಂತ್ರಿಗಳಾಗಬೇಡಿ ಎಂದು ಬುದ್ಧಿಮಾತು ಹೇಳುತ್ತಿದ್ದಾರೆ. 

ಪ್ರೀತಿಸುವಾಗ ರನ್ನಾ... ಚಿನ್ನಾ... ಮದ್ವೆಯಾದ್ಮೇಲೆ? ಅಮೃತಧಾರೆ ನಟಿಯರು ಏನಂದ್ರು ನೋಡಿ...

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios