ಪ್ರೀತಿಸುವಾಗ ರನ್ನಾ... ಚಿನ್ನಾ... ಮದ್ವೆಯಾದ್ಮೇಲೆ? ಅಮೃತಧಾರೆ ನಟಿಯರು ಏನಂದ್ರು ನೋಡಿ...
ಅಮೃತಧಾರೆ ನಟಿಯರಾದ ಅಪ್ಪಿ, ಅಪರ್ಣಾ ಮತ್ತು ಮಲ್ಲಿ ಚಿತ್ರಾನ್ನ ಚಿತ್ರಾನ್ನಕ್ಕೆ ಡಾನ್ಸ್ ಮಾಡಿದ್ದಾರೆ. ನೆಟ್ಟಿಗರು ಏನಂದ್ರು ನೋಡಿ...
ಮದುವೆಗೆ ಸಂಬಂಧಿಸಿದಂತೆ ಇದಾಗಲೇ ಹಲವಾರು ಮೀಮ್ಸ್, ಜೋಕ್ಸ್ಗಳು ಹರಿದಾಡುತ್ತಲೇ ಇವೆ. ಜಗತ್ತಿನ ಯಾವುದೇ ವಿಷಯಕ್ಕಿಂತಲೂ ಹೆಚ್ಚಾಗಿ ಜೋಕ್ಸ್ ಹುಟ್ಟುವುದು ಮದುವೆ, ದಾಂಪತ್ಯ, ದಂಪತಿ ವಿಷಯದಲ್ಲಿಯೇ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದರಲ್ಲಿಯೂ ಮದುವೆಗೂ ಮುನ್ನ ಖುಷಿಯಿಂದ ಇರುವ ಜೋಡಿ, ಮದುವೆಯಾದ ಮೇಲೆ ಜಗಳವಾಡುವುದು ಮಾಮೂಲು. ಇದೇ ವಿಷಯವಾಗಿಯೂ ಹಲವು ಜೋಕ್ಸ್ಗಳು ಬರುತ್ತವೆ. 10-12 ವರ್ಷಗಳು ಡೇಟಿಂಗ್, ಲಿವಿ ಇನ್ ಎಂದೆಲ್ಲಾ ಸಂತೋಷದಿಂದ ಇದ್ದವರೇ ಮದುವೆಯಾದ ಒಂದು ವರ್ಷದಲ್ಲಿಯೇ ಡಿವೋರ್ಸ್ ಪಡೆದುಕೊಂಡಿರೋ ಉದಾಹರಣೆಗಳು ಸಾಕಷ್ಟಿವೆ. ಇದನ್ನೆಲ್ಲಾ ನೋಡಿಯೇ ಮದುವೆಯ ಬಗ್ಗೆ ಇನ್ನಿಲ್ಲದಷ್ಟು ಹಾಸ್ಯಗಳು ಹುಟ್ಟಿಕೊಳ್ಳುತ್ತಿವೆ.
ಇದೀಗ ಇದೇ ವಿಷಯ ಇಟ್ಟುಕೊಂಡು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್ ನಟಿಯರು ರೀಲ್ಸ್ ಮಾಡಿದ್ದಾರೆ. ಇದರಲ್ಲಿ ಮಲ್ಲಿ, ಅಪ್ಪಿ ಮತ್ತು ಅಪರ್ಣಾ ಇವರನ್ನು ನೋಡಬಹುದು. ಅಷ್ಟಕ್ಕೂ, ಸೀರಿಯಲ್ ನಟ-ನಟಿಯರು ತಮ್ಮ ಬಿಡುವಿನ ಸಂದರ್ಭಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ತಮ್ಮದೇ ಸೀರಿಯಲ್ಗ ಸಹ ನಟ-ನಟಿಯರ ಜೊತೆ ಒಂದಿಷ್ಟು ರೀಲ್ಸ್ ಮಾಡಿ ಖುಷಿ ಪಡುತ್ತಾರೆ. ಇದೀಗ ಈ ಮೂವರು ನಟಿಯರು ರೀಲ್ಸ್ ಮಾಡಿದ್ದಾರೆ. ಇದರಲ್ಲಿ ನಟಿಯರು, ಪ್ರೀತಿಸುವಾಗ ರನ್ನಾ... ಚಿನ್ನಾ ಅಂತಾರೆ. ಮದ್ವೆಯಾದ ಮೇಲೆ.... ಚಿತ್ರಾನ್ನಾ ಆಗ್ತಾರೆ ಎನ್ನುತ್ತಲೇ ಉಪೇಂದ್ರರ ಚಿತ್ರಾನ್ನ ಚಿತ್ರಾನ್ನ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಇದಕ್ಕೆ ಭರ್ಜರಿ ಕಮೆಂಟ್ಸ್ ಬಂದಿವೆ. ಸೀರಿಯಲ್ನಲ್ಲಿ ಸದ್ಯ ಮಲ್ಲಿ ಗರ್ಭಿಣಿಯಾಗಿರೋ ಕಾರಣ ಹುಷಾರಮ್ಮಾ ಅಂತಿದ್ದಾರೆ ನೆಟ್ಟಿಗರು.
'ಸೂರ್ಯವಂಶ' ಬೆಡಗಿ ಇಶಾ ಕೊಪ್ಪಿಕರ್ ಬಿಗ್ಬಾಸ್ಗೆ ಎಂಟ್ರಿ ಕನ್ಫರ್ಮ್! ನಟಿ ಹೇಳಿದ್ದೇನು?
ಅಂದಹಾಗೆ ಮಲ್ಲಿಯ ರಿಯಲ್ ಹೆಸರು ರಾಧಾ ಭಗವತಿ, ಅಪ್ಪಿಯ ಹೆಸರು ಅಮೃತಾ ಹಾಗೂ ಅಪರ್ಣಾ ಅವರ ರಿಯಲ್ ಹೆಸರು ಸ್ವಾತಿ ರಾಯಲ್. ನಟಿ ಸ್ವಾತಿ ರಾಯಲ್ ಕುರಿತು ಹೇಳುವುದಾದರೆ, ಇವರು ಅಮೃತಧಾರೆಯ ಅಪರ್ಣಾ ಅನ್ನುವುದಕ್ಕಿಂತ ಹೆಚ್ಚಾಗಿ ‘ಅಮೃತವರ್ಷಿಣಿ’ಯ ವರ್ಷ ಆಗಿ ಸಕತ್ ಫೇಮಸ್ ಆದವರು. ಈ ಸೀರಿಯಲ್ 1700 ಕಂತುಗಳನ್ನು ಪೂರೈಸಿತ್ತು. ಇದೀಗ ಭೂಮಿಕಾ ಸ್ನೇಹಿತೆಯಾಗಿ, ಆನಂದ್ ಪತ್ನಿಯಾಗಿ ಇವರ ಪಾತ್ರವನ್ನು ಅಮೃತಧಾರೆ ವೀಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. 2012ರಲ್ಲಿ ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಸ್ವಾತಿ ಅವರು, ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ಎಂಬಿಎ ಮಾಡಿ ನಾನು ಬಿಪಿಒ ಕಂಪೆನಿಯಲ್ಲಿ ಕೆಲಸ ಮಾಡಿದವರು. ಅಲ್ಲಿ ಮಾರ್ನಿಂಗ್ ಶಿಫ್ಟ್ ಸಂಜೆ ಆ್ಯಂಕರಿಂಗ್ ಮಾಡುತ್ತಿದ್ದರು. ಅಲ್ಲಿಂದಲೇ ಕಿರುತೆರೆಯ ಪರಿಚಯವಾದದ್ದು. ಇವರ ರೀಲ್ ಪತಿಯ ಹೆಸರು ಆನಂದ್ ಆದ್ರೆ, ರಿಯಲ್ ಪತಿಯ ಹೆಸರು ಅನಿಲ್.
ನಟಿ ಸ್ವಾತಿ ರಾಯಲ್ ಕುರಿತು ಹೇಳುವುದಾದರೆ, ಇವರು ಅಮೃತಧಾರೆಯ ಅಪರ್ಣಾ ಅನ್ನುವುದಕ್ಕಿಂತ ಹೆಚ್ಚಾಗಿ ‘ಅಮೃತವರ್ಷಿಣಿ’ಯ ವರ್ಷ ಆಗಿ ಸಕತ್ ಫೇಮಸ್ ಆದವರು. ಈ ಸೀರಿಯಲ್ 1700 ಕಂತುಗಳನ್ನು ಪೂರೈಸಿತ್ತು. ಇದೀಗ ಭೂಮಿಕಾ ಸ್ನೇಹಿತೆಯಾಗಿ, ಆನಂದ್ ಪತ್ನಿಯಾಗಿ ಇವರ ಪಾತ್ರವನ್ನು ಅಮೃತಧಾರೆ ವೀಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. 2012ರಲ್ಲಿ ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಸ್ವಾತಿ ಅವರು, ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ಎಂಬಿಎ ಮಾಡಿ ನಾನು ಬಿಪಿಒ ಕಂಪೆನಿಯಲ್ಲಿ ಕೆಲಸ ಮಾಡಿದವರು. ಅಲ್ಲಿ ಮಾರ್ನಿಂಗ್ ಶಿಫ್ಟ್ ಸಂಜೆ ಆ್ಯಂಕರಿಂಗ್ ಮಾಡುತ್ತಿದ್ದರು. ಅಲ್ಲಿಂದಲೇ ಕಿರುತೆರೆಯ ಪರಿಚಯವಾದದ್ದು. ಇವರ ರೀಲ್ ಪತಿಯ ಹೆಸರು ಆನಂದ್ ಆದ್ರೆ, ರಿಯಲ್ ಪತಿಯ ಹೆಸರು ಅನಿಲ್.
ಗಣೇಶ್ ಚಿತ್ರಕ್ಕೆ ನಮ್ದೂ ಒಂದಿರ್ಲಿ... ಮಗಳು ಹಿತಾ ಜೊತೆ 'ಮೀನ ಕಣ್ಣೋಳೆ...' ಎಂದ ಸಿಹಿಕಹಿ ಚಂದ್ರು