Asianet Suvarna News Asianet Suvarna News

ಬಿಗ್​ಬಾಸ್​ ನನಗೆ ಸ್ಪೆಷಲ್​ ಪವರ್​ ಕೊಟ್ರೆ... ಅನ್ನೋ ಪ್ರಶ್ನೆ ಕೇಳಿದ್ರೆ ನೆಟ್ಟಿಗರು ಹೀಗೆಲ್ಲಾ ಹೇಳೋದಾ?

ಬಿಗ್​ಬಾಸ್​ ನನಗೆ ಸ್ಪೆಷಲ್​ ಪವರ್​ ಕೊಟ್ರೆ ಎಂದು ಕಲರ್ಸ್​ ಕನ್ನಡ ವಾಹಿನಿ ಪ್ರಶ್ನೆ ಕೇಳಿದ್ರೆ, ಅದಕ್ಕೆ ಬಂದಿರೋ ಕಮೆಂಟ್ಸ್​ ನೋಡಿ... 
 

If Bigg Boss gave special power to them many  netizens wants to stop show suc
Author
First Published Nov 28, 2023, 4:06 PM IST

ಕಳೆದ ಅಕ್ಟೋಬರ್​ 8ರಿಂದ ಶುರುವಾಗಿರುವ ಕನ್ನಡದ ಬಿಗ್​ಬಾಸ್​ನಲ್ಲಿ ಇದಾಗಲೇ ಕೆಲವು ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಿದ್ದಾರೆ. ಇಬ್ಬರು ವೈಲ್ಡ್​ ಕಾರ್ಡ್​ ಎಂಟ್ರಿ ಮೂಲಕ ಬಿಗ್​ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ​ ದಿನದಿಂದ ದಿನಕ್ಕೆ ಬಿಗ್​ಬಾಸ್​ ವೀಕ್ಷಕರು ಹೆಚ್ಚುತ್ತಲೇ ಇದ್ದು ಟಿಆರ್​ಪಿ ರೇಟೂ ಹೆಚ್ಚುತ್ತಲೇ ಸಾಗಿದೆ. ಬಿಗ್​ಬಾಸ್​ ಮನೆಯಲ್ಲಿನ ಕಾದಾಟ, ಹುಚ್ಚಾಟಗಳೂ ಮಿತಿ ಮೀರುತ್ತಲೇ ಇದ್ದು, ಜನರು ಬೈದುಕೊಳ್ಳುತ್ತಲೇ ಈ ಷೋದ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಎರಡು ತಂಡಗಳನ್ನು ಮಾಡಲಾಗಿತ್ತು.  ಗಜಕೇಸರಿ ತಂಡ ಹಾಗೂ ಸಂಪತ್ತಿಗೆ ಸವಾಲ್ ತಂಡಗಳ ನಡುವೆ ಫೈಟಿಂಗ್​ ಭರ್ಜರಿಯಾಗಿ ನಡೆದಿತ್ತು.  ಗಜಕೇಸರಿ ತಂಡದಲ್ಲಿ ಡ್ರೋನ್ ಪ್ರತಾಪ್​, ಸಿರಿ, ಸಂಗೀತಾ, ವಿನಯ್, ಸ್ನೇಹಿತ್ ಹಾಗೂ ನಮ್ರತಾ ಇದ್ದರೆ, ಇನ್ನೊಂದು ತಂಡವಾಗಿರುವ ಸಂಪತ್ತಿಗೆ ಸವಾಲ್​ನಲ್ಲಿ ವರ್ತೂರು ಸಂತೋಷ್, ಮೈಕಲ್, ತನಿಷಾ,  ತುಕಾಲಿ ಸಂತೋಷ್,  ಕಾರ್ತಿಕ್ ಹಾಗೂ ನೀತು ಇದ್ದರು. ಬ್ರಹ್ಮಾಂಡ ಗುರೂಜಿ ಆಗಮನ ಕೂಡ ಆಗಿತ್ತು. ಅವರ ನೇತೃತ್ವದಲ್ಲಿಯೇ ಭಾರಿ ಫೈಟ್​  ಕೂಡ ನಡೆದಿತ್ತು.

ಇದೀಗ ಇಬ್ಬರು ವೈಲ್ಡ್​ ಕಾರ್ಡ್​ ಎಂಟ್ರಿ ಆಗಿದೆ. ಒಬ್ಬರು ಫ್ಯಾಷನ್‌ ಮಾಡೆಲ್‌ ಪವಿ ಪೂವಪ್ಪ ಮತ್ತೊಬ್ಬರು ಕ್ರಿಕೆಟರ್‌, ಫ್ಯಾಷನ್‌ ಮಾಡೆಲ್‌ ಅವಿನಾಶ್ ಶೆಟ್ಟಿ. ಇದರ ಬೆನ್ನಲ್ಲೇ ಬಿಗ್​ಬಾಸ್​ ಸ್ಪರ್ಧಿಗಳಿಗೆ ಆಟದ ಟಾಸ್ಕ್​ ನೀಡಿದ್ದು, ಭರ್ಜರಿ ಹೊಡೆದಾಟವೂ ನಡೆದಿದೆ. ಇದರ ನಡುವೆಯೇ ಆಗಾಗ್ಗೆ ಕಲರ್ಸ್ ಕನ್ನಡ ವಾಹಿನಿ ಸೋಷಿಯಲ್​ ಮೀಡಿಯಾದಲ್ಲಿ ಷೋನ ಹೊರತಾಗಿ ಕೆಲವೊಂದು ವಿಡಿಯೋಗಳನ್ನು ರಿಲೀಸ್​ ಮಾಡುವ ಮೂಲಕ ಬಿಗ್​ಬಾಸ್​ ಪ್ರಿಯರಿಗೆ ಎಂಟರ್​ಟೇನ್​ಮೆಂಟ್​ ನೀಡುತ್ತಿದೆ.

ಆಟದ ಹೆಸರಲ್ಲಿ ಭಾರಿ ಹೊಡೆದಾಟ! ವೈಲ್ಡ್​ ಕಾರ್ಡ್​ ಎಂಟ್ರಿ ಆಗ್ತಿದ್ದಂತೆಯೇ ಬಿಗ್​ಬಾಸ್​ ಮನೆಯಲ್ಲಿ ಇದೇನಿದು?

ಇದೀಗ ಅಂಥದ್ದೇ ಮತ್ತೊಂದು ಪ್ರಶ್ನೆಯನ್ನು ವಾಹಿನಿ ನೆಟ್ಟಿಗರ ಮುಂದೆ ಇಟ್ಟಿದೆ. ಅದೇನೆಂದರೆ, ಬಿಗ್​ಬಾಸ್​ ಒಂದು ವೇಳೆ ನನಗೆ ಸ್ಪೆಷಲ್​ ಪವರ್​ ಕೊಟ್ಟಿದ್ರೆ...? ಎನ್ನುವ ಪ್ರಶ್ನೆ. ಈ ಪ್ರಶ್ನೆ ಕೇಳಿದ ಕೆಲವೇ ನಿಮಿಷಗಳಲ್ಲಿ ಐದುವರೆ ಸಾವಿರಕ್ಕೂ ಅಧಿಕ ಮಂದಿ  ಕಮೆಂಟ್​ ಮಾಡಿದ್ದಾರೆ. ಹೆಚ್ಚಿನವರು ತಮ್ಮ ನೆಚ್ಚಿನ ಸ್ಪರ್ಧಿಯ ಹೆಸರು ಹೇಳಿ ಇವರೇ ವಿನ್ನರ್​ ಎಂದು ಘೋಷಿಸುವುದಾಗಿ ಹೇಳುತ್ತಿದ್ದಾರೆ. ಇವರ ಪೈಕಿ, ಸಂಗೀತಾ, ವಿನಯ್​ ಮತ್ತು ಪ್ರತಾಪ್​ ಅಭಿಮಾನಿಗಳ ಪಾಲು ಸ್ವಲ್ಪ ದೊಡ್ಡದ್ದೇ ಇದೆ. ಡ್ರೋನ್​ ಪ್ರತಾಪ್ ಅವರಿಗೆ ಫ್ಯಾನ್ಸ್​ ಇದ್ದಂತೆಯೇ ಅವರ ವಿರುದ್ಧವೂ ಸಾಕಷ್ಟು ಕಮೆಂಟ್​ ಬಂದಿದೆ. ಅವರ ನಾಟಕ ಎಲ್ರಿಗೂ ಗೊತ್ತಾಗೋ ತರ ಮಾಡ್ತೀನಿ ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಸಂಗೀತಾನನ್ನು ಸೀಕ್ರೇಟ್​ ರೂಮ್​ಗೆ ಕರೆಸಿ ಯಾರು ಫೇಕ್​ ಅಂತ ಹೇಳ್ತಿದ್ದೆ ಎಂದಿದ್ದಾರೆ. 

ಆದರೆ ಎಲ್ಲರ ಗಮನ ಸೆಳೆದಿರುವುದು ಏನೆಂದರೆ, ಬಿಗ್​ಬಾಸ್​ ನನಗೇನಾದ್ರೂ ಪವರ್​ ಕೊಟ್ಟಿದ್ರೆ, ಬಿಗ್​ಬಾಸ್​ ಷೋ ಅನ್ನೇ ಬ್ಯಾನ್ ಮಾಡುತ್ತಿದ್ದೆ ಎನ್ನುವುದು. ಇದಕ್ಕೆ ಹಲವಾರು ಮಂದಿ ರಿಪ್ಲೈ ಮಾಡಿದ್ದು, ನನ್ನ ಆಸೆಯೂ ಇದೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಎಲ್ಲರನ್ನೂ ಎಲಿಮಿನೇಟ್​ ಮಾಡಿ ಮನೆಗೆ ಕಳುಹಿಸಿ ಈ ಸೀಸನ್​ ಅನ್ನು ಮುಗಿಸುತ್ತಿದ್ದೆ ಎಂದಿದ್ದಾರೆ. ಆದರೆ ಅಸಲಿಯತ್ತು ಏನೆಂದರೆ, ಹೀಗೆ ದಿನವೂ ಸೋಷಿಯಲ್​ ಮೀಡಿಯಾದಲ್ಲಿ ಬೈದುಕೊಳ್ಳುತ್ತಲೇ ಬಿಗ್​ಬಾಸ್​ನ ಒಂದೂ ಕಂತನ್ನು ಮಿಸ್​ ಮಾಡದೇ ನೋಡುವವರೇ ಹೆಚ್ಚು. ಇದೇ ಕಾರಣಕ್ಕೆ ಬಿಗ್​ಬಾಸ್​ ರಿಯಾಲಿಟಿ ಷೋ, ಕನ್ನಡದಲ್ಲಿ ಮಾತ್ರವಲ್ಲದೇ ಬಹುತೇಕ ಎಲ್ಲಾ ಭಾಷೆಗಳಲ್ಲಿಯೂ ಟಿಆರ್​ಪಿ ರೇಟ್​ನಲ್ಲಿ ನಂಬರ್​ 1 ಆಗಿಯೇ ಮಿಂಚುತ್ತಿದೆ!

ನಾಮಿನೇಟ್​ ಆದವರ ಪೈಕಿ ಇಬ್ಬರನ್ನು ಸೇವ್​ ಮಾಡಲಿದ್ದಾರೆ ವೈಲ್ಡ್​ಕಾರ್ಡ್​ ಸ್ಪರ್ಧಿ: ಬಚಾವಾಗುವವರು ಯಾರು?

 

Follow Us:
Download App:
  • android
  • ios