ಆಟದ ಹೆಸರಲ್ಲಿ ಭಾರಿ ಹೊಡೆದಾಟ! ವೈಲ್ಡ್​ ಕಾರ್ಡ್​ ಎಂಟ್ರಿ ಆಗ್ತಿದ್ದಂತೆಯೇ ಬಿಗ್​ಬಾಸ್​ ಮನೆಯಲ್ಲಿ ಇದೇನಿದು?

ಬಿಗ್​ಬಾಸ್​ ಮನೆಯಲ್ಲಿ ಬಕೆಟ್​ ಆಟ ಶುರುವಾಗಿದ್ದು, ಇದು ಸ್ಪರ್ಧಿಗಳ ನಡುವೆ ಹೊಡೆದಾಟಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಆಗಿದ್ದೇನು?
 

Fight between the contestants inside Bigg Boss during bucket game suc

ಬಿಗ್​ಬಾಸ್​ ಮನೆ ಎಂದರೆ ಅದರಲ್ಲಿ ಕಾದಾಟ, ಹೊಡೆದಾಟ, ಬಡಿದಾಟದ ತಾಣವೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಏನು ಬೇಕಾದರೂ ನಡೆಯುತ್ತದೆ. ಇದೇ ಕಾರಣಕ್ಕೆ ಟಿಆರ್​ಪಿ ಕೂಡ ಹೆಚ್ಚಾಗುತ್ತದೆ. ಅದೇ ರೀತಿ ಕನ್ನಡದ ಬಿಗ್​ಬಾಸ್​ನಲ್ಲಿ ಕೂಡ ಹೊಡಿಬಡಿ ಮಿತಿ ಮೀರುತ್ತಲೇ ಸಾಗಿದೆ. ಇದಾಗಲೇ ಇಬ್ಬರ ವೈಲ್ಡ್​ ಕಾರ್ಡ್​ ಎಂಟ್ರಿ ಆಗಿದೆ.  ಒಬ್ಬರು ಫ್ಯಾಷನ್‌ ಮಾಡೆಲ್‌ ಪವಿ ಪೂವಪ್ಪ ಮತ್ತೊಬ್ಬರು ಕ್ರಿಕೆಟರ್‌, ಫ್ಯಾಷನ್‌ ಮಾಡೆಲ್‌ ಅವಿನಾಶ್ ಶೆಟ್ಟಿ. ಇದರ ಬೆನ್ನಲ್ಲೇ ಬಿಗ್​ಬಾಸ್​ ಸ್ಪರ್ಧಿಗಳಿಗೆ ಆಟದ ಟಾಸ್ಕ್​ ನೀಡಿದ್ದು, ಇದು ಹೊಡೆದಾಟಕ್ಕೂ ಕಾರಣವಾಗಿದೆ! ಇದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರಿ ಕಾದಾಟವನ್ನು ನೋಡಬಹುದು. 

ಅಷ್ಟಕ್ಕೂ ಆಗಿರೋದು ಏನೆಂದರೆ, ಬಿಗ್​ಬಾಸ್​ ಕೊಟ್ಟಿರೋ ಈ ಆಟದಲ್ಲಿ,  ಒಂದು ಬಕೆಟ್​ ನೀರನ್ನು ತುಂಬಿಸಿಕೊಂಡು ನಂತರ ಅದನ್ನು ಒಂದು ಪೈಪ್​ ಮೂಲಕ ಒಳಗೆ ಹಾಕಬೇಕು. ಯಾರು ಹೆಚ್ಚು ನೀರು ಹಾಕುತ್ತಾರೋ ಅವರು ವಿನ್​ ಆದಂತೆ. ಆದರೆ ಇದೇ ವೇಳೆ ನೀರನ್ನು ಒಳಗಡೆ ಹಾಕಲು ಬರುವ ಸದಸ್ಯರನ್ನು ಉಳಿದವರು ತಡೆಯಬೇಕು. ಇದು ರೂಲ್ಸ್​. ಆದರೆ ಆಟದ ಹೆಸರಿನಲ್ಲಿ ನಡೆದಿರುವ ಈ ಆಟ ಕಾದಾಟವಾಗಿ ಮಾರ್ಪಟ್ಟಿದೆ. ಇದು ಆಟವಲ್ಲದೇ ಸ್ಪರ್ಧಿಗಳ ನಡುವೆ ಸೇಡು-ಪ್ರತಿ ಸೇಡಿಗೆ ಕಾರಣವಾಗಿದೆ. ತುಕಾಲಿ ಸಂತೋಷ್​ ಮತ್ತು ಸ್ನೇಹಿತ್​ ನಡುವೆ ಗುದ್ದಾಟ ಶುರುವಾಗಿದ್ದು,  ನಂತರ ವಿನಯ್​ ಕೂಡ ತುಕಾಲಿ ಸಂತೋಷ್​ ಜೊತೆ ಜಗಳವಾಡಿದ್ದನ್ನು ಈಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ನೋಡಬಹುದು. ಒಬ್ಬರನ್ನು ಒಬ್ಬರು ಬಲವಾಗಿ ತಳ್ಳಿದ್ದು, ಸೇಡಿಗೆ ಪ್ರತಿಸೇಡು ತೀರಿಸಿಕೊಂಡಿದ್ದಾರೆ. ಇದನ್ನು ನೋಡಿ ವೀಕ್ಷಕರು ಇಂಥ ಆಟವೆಲ್ಲಾ ಬೇಕಾ ಎನ್ನುತ್ತಲೇ ಅದನ್ನು ಎಂಜಾಯ್​ ಮಾಡಿದ್ದಾರೆ. ಜೊತೆಗೆ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಆಯ್ಕೆ ಮಾಡಲು ಮನವಿ ಮಾಡಿಕೊಳ್ಳುತ್ತಿದ್ದಾರೆ. 

ನಾಮಿನೇಟ್​ ಆದವರ ಪೈಕಿ ಇಬ್ಬರನ್ನು ಸೇವ್​ ಮಾಡಲಿದ್ದಾರೆ ವೈಲ್ಡ್​ಕಾರ್ಡ್​ ಸ್ಪರ್ಧಿ: ಬಚಾವಾಗುವವರು ಯಾರು?

ಇನ್ನು ಈ ವಾರ ಯಾರು ಮನೆಯಿಂದ ಹೊರಕ್ಕೆ ಹೋಗುತ್ತಾರೆ ಎನ್ನುವ ಕಾತರ ಇನ್ನೊಂದೆಡೆ. ಇದಾಗಲೇ, ಈ ವಾರ ಮೈಕಲ್​, ಸ್ನೇಹಿತ್​, ತನಿಷಾ, ಪ್ರತಾಪ್​, ವಿನಯ್​ ವರ್ತೂರು ಸಂತೋಷ್​, ಸಂಗೀತಾ ಮತ್ತು ನಮ್ರತಾ  ನಾಮಿನೇಟ್​ ಆಗಿದ್ದಾರೆ. ಯಾರ ಹೆಸರು ಇದೆ ಎಂದು ಬಿಗ್​ಬಾಸ್​ ಪ್ರೇಮಿಗಳ ಕಾತರದಿಂದ ಕಾಯುತ್ತಿದ್ದಾರೆ. ಇದಾಗಲೇ ಇಬ್ಬರು ಮಾಡೆಲ್​ಗಳು ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟಿದ್ದು ಬಿಗ್​ಬಾಸ್​ ಇನ್ನಷ್ಟು ರಂಗೇರುತ್ತಿದೆ. ಈ ವೈಲ್ಡ್​ ಕಾರ್ಡ್​ ಎಂಟ್ರಿ ಕುರಿತು ಹೇಳುವುದಾದರೆ,  ಪವಿ ಪೂವಪ್ಪ ಕೊಡಗು ಮೂಲದ  ರೂಪದರ್ಶಿ.   ಉನ್ನತ ಬ್ರಾಂಡ್‌ಗಳಿಗೆ ಮಾಡೆಲಿಂಗ್‌ ಮಾಡಿದ್ದಾರೆ.   ಅವರು ಸನ್‌ಲೈಫ್‌ನಲ್ಲಿ ಪ್ರಸಾರವಾಗುವ ದೂರದರ್ಶನ ರಿಯಾಲಿಟಿ ಶೋ "ಸೊಪ್ಪನ ಸುಂದರಿ" ಯ ಸ್ಪರ್ಧಿಗಳಲ್ಲಿ ಒಬ್ಬರು.  ಇವರ ಇನ್ನೊಂದು ಹೆಸರು ಪವಿತ್ರ ಪೂವಪ್ಪ. ತನ್ನ ಹಾಟ್‌ ಮಾಡೆಲಿಂಗ್ ಫೋಟೋವನ್ನು ಶೇರ್‌ ಮಾಡುವ ಈಕೆಗೆ ಇನ್ಟಾಗ್ರಾಮ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. 

ಇನ್ನು ಅವಿನಾಶ್​ ಅವರು, ಸುರತ್ಕಲ್ ಮೂಲದವರು. ಇವರು 2006ರಲ್ಲಿ ಕೋಕ್‌ ಮತ್ತು 2009ರಲ್ಲಿ  MRF ಟೈಯರ್‌ ಜಾಹೀರಾತಿಗೆ ಎಂಟ್ರಿ ಕೊಟ್ಟು ಗ್ಲಾಮರ್ ಜಗತ್ತನ್ನು ಪ್ರವೇಶಿಸಿದರು. ಅವಿನಾಶ್  2007 ರಲ್ಲಿ ಮಿಸ್ಟರ್ ಮಂಗಳೂರು ಪ್ರಶಸ್ತಿಯನ್ನು ಗೆದ್ದಿರುವುದು ಫ್ಯಾಷನ್ ಜಗತ್ತಿಗೆ ಅವರ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿತು. ಈ ಸ್ಟೈಲಿಶ್ ಹಂಕ್ 2012 ರಲ್ಲಿ ಮಾಡೆಲ್ ಹಂಟ್ ಸ್ಪರ್ಧೆಯನ್ನು ಕೂಡ ಗೆದ್ದರು. ನಾಮಿನೇಟ್​ ಆದವರ ಪೈಕಿ ಇಬ್ಬರನ್ನು ಸೇವ್​ ಮಾಡುವ ಜವಾಬ್ದಾರಿ ಈ  ವೈಲ್ಡ್​ಕಾರ್ಡ್​ ಸ್ಪರ್ಧಿಗಳ ಮೇಲಿದೆ. 

ಬಿಗ್​ಬಾಸ್​ ಮನೆಯಲ್ಲಿ ನೊಂದವರ ಸಂಘ: ಯಾರು ಯಾರಿಗೆ ಯಾವ್ಯಾವ ಪೋಸ್ಟ್? ಬಿದ್ದೂ ಬಿದ್ದೂ ನಕ್ಕ ಕಿಚ್ಚ ಸುದೀಪ್​!

Latest Videos
Follow Us:
Download App:
  • android
  • ios