ಬೃಂದಾವನ ಸೀರಿಯಲ್ ಹೀರೋ ಬದಲಾವಣೆ ಮೂಲಕ ಶುರುವಿನಲ್ಲೆ ಸಖತ್ ಸುದ್ದಿಯಾಗಿದ್ದು ಗೊತ್ತೇ ಇದೆ. ಆ ಬಳಿಕವಾದರೋ ನೆಟ್ಟಿಗರು ನೆಮ್ಮದಿಯಾಗಿ ಇದ್ದಾರಾ ಎಂದು ಕೇಳಿದರೆ ಅದೂ ಇಲ್ಲ.

'ನೀವು ಒಪ್ಕೋತೀರಾ ಅನ್ನೋ ನಂಬಿಕೆ ಮೇಲೆ ನಾನೊಂದು ದೊಡ್ಡ ನಿರ್ಧಾರ ಮಾಡಿದೀನಿ ಅಜ್ಜೀ' ಎನ್ನುತ್ತಾನೆ ಆಕಾಶ್. ಆದರೆ, ಆ ನಿರ್ಧಾರ ಏನು ಎಂಬುದನ್ನು ಆತ ಹೇಳುವುದಿಲ್ಲ. ಅಷ್ಟರಲ್ಲೇ ಬಾಯಿ ಹಾಕಿದ ಅಜ್ಜಿ, 'ನೀನು ಅದೇನ್ ಹೇಳ್ಬೇಕು ಅಂತಿದೀಯೋ ಅದನ್ನ ಧೈರ್ಯವಾಗಿ ಹೇಳು' ಎನ್ನುತ್ತಾಳೆ. ಅಷ್ಟರಲ್ಲೇ ಮಾತನಾಡುವ ಆಕಾಶ್ ಹೆಂಡತಿ ಪುಷ್ಪಾ 'ನೀವು ಕಟ್ಟಿಕೊಂಡಿರೋ ಎಲ್ಲ ಕನಸುಗಳು ನೆರವೇರಲಿ ಅನ್ನೋದೇ ನನ್ನಾಸೆ' ಎಂದುಬಿಡುತ್ತಾಳೆ. ಆಕಾಶ್ ಬೇಸರದಿಂದ ' ನಾನು ಕಟ್ಟಿರೋ ಕನಸು ನನಸಾಗಲೇ ಇಲ್ಲ' ಎಂದು ಬಿಡುತ್ತಾನೆ.

ಹಾಗಿದ್ರೆ ಏನ್ ಆಗ್ತಿದೆ Colors Kannadaದ ಬೃಂದಾವನ ಸೀರಿಯಲ್‌ನಲ್ಲಿ? ಹೌದು, Brundavana ಸೀರಿಯಲ್ ಹೀರೋ ಬದಲಾವಣೆ ಮೂಲಕ ಶುರುವಿನಲ್ಲೆ ಸಖತ್ ಸುದ್ದಿಯಾಗಿದ್ದು ಗೊತ್ತೇ ಇದೆ. ಆ ಬಳಿಕವಾದರೋ ನೆಟ್ಟಿಗರು ನೆಮ್ಮದಿಯಾಗಿ ಇದ್ದಾರಾ ಎಂದು ಕೇಳಿದರೆ ಅದೂ ಇಲ್ಲ ಎಂದೇ ಹೇಳಬೇಕಾಗುತ್ತದೆ. ಈ ಹೀರೋನೂ ಚೆಂಜ್ ಮಾಡಿ ಎಂದು ಸೀರಿಯಲ್‌ ಟೀಮ್‌ಗೆ ದುಂಬಾಲು ಬಿದ್ದರು. ಇವರ ಮಾತು ಕೇಳಿದರೆ ದಿನಾಲೂ ಒಬ್ಬೊಬ್ಬರು ಹೀರೋ ಕರೆಸಬೇಕಾಗುತ್ತದೆ ಎಂದು ಅರಿತ ಸೀರಿಯಲ್ ಟೀಮ್ ಸೋಷಿಯಲ್ ಮೀಡಿಯಾದ ಸೂಪರ್‌ ಸ್ಟಾರ್‌ಗಳಿಗೆ ಮಣೆ ಹಾಕುವುದನ್ನು ನಿಲ್ಲಿಸಿಬಿಟ್ಟಿದೆ. 

ವಿನಯ್ ಗೌಡ ಬಾಲ ಕಟ್‌; ತಕ್ಕ ಶಾಸ್ತಿ ಆಯ್ತು, ವಿನಯ್ ಕಥೆ ಮುಗಿತು ಅಂತಿದಾರಲ್ಲ ನೆಟ್ಟಿಗರು!

ಈಗ, ಸೀರಿಯಲ್‌ನಲ್ಲಿ ಯಾರಿಗೂ ನೆಮ್ಮದಿಯೇ ಇಲ್ಲ ಎನ್ನುವಂತಾಗಿದೆ ಎನ್ನಬಹುದು. Akash ಮದುವೆಯಿಂದ ಸ್ವತಃ ಆಕಾಶ್ ನೆಮ್ಮದಿ ಹಾಳಾಗಿದೆ. ಆಕಾಶ್‌ ಕಾರಣಕ್ಕೆ ಇನ್ಮುದೆ Pushpa ನೆಮ್ಮದಿ ಹಾಳಾಗುವುದು ನಿಶ್ಚಿತ ಎನ್ನಬಹುದು. ಇತ್ತ ಅಜ್ಜಿಯ ಬಳಿ ಆಕಾಶ್ 'ತಾನೊಂದು ನಿರ್ಧಾರ ಕೈಗೊಂಡಿದೀನಿ' ಎಂದು ಹೇಳಿದ ಮೇಲೆ ಆಕಾಶ್ ಅಜ್ಜಿ ನೆಮ್ಮದಿಯಿಂದ ಇರಲು ಹೇಗೆ ತಾನೇ ಸಾಧ್ಯ? ಇತ್ತ ಪುಷ್ಪಾ ಬಾಳು ಗೋಳಾದರೆ ಆಕೆಯ ಅಣ್ಣ-ಅತ್ತಿಗೆ ನಿಶ್ಚಿಂತೆಯಿಂದ ಇರುವುದು ದೂರದ ಮಾತು ಎನ್ನಬಹುದು. ಒಟ್ಟಿನಲ್ಲಿ, ಇನ್ಮುಂದೆ ನಾಟಕಗಳ ಪರ್ವ ಮುಗಿದು ಬೃಂದಾವನ ಗೋಳಿಕ ಕಥೆಯಾಗಿ ಬದಲಾಗುವುದು ನಿಶ್ಚಿತ ಎಂಬ ಚರ್ಚೆ ಸೋಷಿಯಲ್‌ ಮೀಡಿಯಾ (Social Media)ಗಳಲ್ಲಿ ಜೋರಾಗಿದೆ. 

ಮನೆಯಿಂದ ಇಬ್ಬರನ್ನು ಹೊರಹಾಕಲು ಬಂದ್ರು ಮಾಜಿ ಸ್ಪರ್ಧಿಗಳು; ಕಿಚ್ಚನಿಲ್ಲದ ಮನೆಯಲ್ಲಿ ಏನಾಗ್ತಿದೆ ನೋಡಿ!

ಅಂದಹಾಗೆ, ಕಲರ್ಸ್ ಕನ್ನಡದಲ್ಲಿ ಬೃಂದಾವನ ಸೀರಿಯಲ್ ಸೋಮವಾರದಿಂದ ಶನಿವಾರ ರಾತ್ರಿ 8.00ಕ್ಕೆ ಪ್ರಸಾರ ಕಾಣುತ್ತಿದೆ. ಬೃಂದಾವನ ಸೀರಿಯಲ್ ಪ್ರಿಯರು ನಾಳೆ ಎಷ್ಟು ಬೇಗ ಬಂದರೆ ಅಷ್ಟು ಒಳ್ಳೆಯದು ಎಂದು ಕಾಯುತ್ತಿದ್ದಾರೆ ಎನ್ನಬಹುದು.

ಮುಂಬೈನಲ್ಲಿ ಹೊಟೆಲ್ ವೇಟರ್ ಆಗಿದ್ದವನ ಮಗ ಬಾಲಿವುಡ್ ನಿರ್ಮಾಪಕ, ಸ್ಟಾರ್ ಡೈರೆಕ್ಟರ್!