Asianet Suvarna News Asianet Suvarna News

ಮುಂಬೈನಲ್ಲಿ ಹೊಟೆಲ್ ವೇಟರ್ ಆಗಿದ್ದವನ ಮಗ ಬಾಲಿವುಡ್ ನಿರ್ಮಾಪಕ, ಸ್ಟಾರ್ ಡೈರೆಕ್ಟರ್!

ನನ್ನ ತಂದೆ ಮುಂಬೈಗೆ ಮೊದಲ ಬಾರಿ ಬಂದಾಗ ಮಾಡುವುದಕ್ಕೆ ಯಾವುದೇ ಕೆಲಸ ಸಿಕ್ಕಿರಲಿಲ್ಲ. ಹೊಟೆಲ್ ಒಂದರಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದರಂತೆ.

My father was waiter in mumbai hotel in his early days says director Rohit Shetty srb
Author
First Published Dec 23, 2023, 7:09 PM IST

ಕರ್ನಾಟಕದ, ಮಂಗಳೂರು ಮೂಲದ ರೋಹಿತ್ ಶೆಟ್ಟಿ ಬಾಲಿವುಡ್‌ನಲ್ಲಿ ಬಹಳಷ್ಟು ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕರು. ಕಾಫೀ ವಿತ್ ಕರಣ್ ಶೋದಲ್ಲಿ ಭಾಗವಹಿಸಿದ್ದ ಅವರು ತಮ್ಮ ವೃತ್ತಿಜೀವನದ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ. ಶೋದಲ್ಲಿ ಹೋಸ್ಟ್ ಕರಣ್ ಜೋಹರ್ ಕೇಳುವ ಪ್ರಶ್ನೆಗೆ ಉತ್ತರಿಸುತ್ತ ಡೈರೆಕ್ಟರ್ ರೋಹಿತ್ ಶೆಟ್ಟಿ, ತಮ್ಮ ಬಾಲಿವುಡ್ ಸಿನಿಮಾ ಜರ್ನಿ ಹಾಗು ತಮ್ಮ ತಂದೆ ಲೈಫ್ ಸ್ಟೋರಿ ಬಗ್ಗೆ ಕೂಡ ಮಾತನಾಡಿದ್ದಾರೆ. 

ಕಾಫೀ ವಿತ್ ಕರಣ್ ಜೋಹರ್ ಶೋದಲ್ಲಿ, ಬಾಲಿವುಡ್ ನಟ ಅಜಯ್ ದೇವಗನ್ ಜತೆ ನಿರ್ದೇಶಕ ರೋಹಿತ್ ಶೆಟ್ಟಿ ಕೂಡ ಭಾಗಿಯಾಗಿದ್ದರು. ನಿರೂಪಕ ಕರಣ್ ಜೋಹರ್ ಅಜಯ್ ದೇವಗನ್ ಹಾಗೂ ರೋಹಿತ್ ಶೆಟ್ಟಿ ಅವರಿಬ್ಬರ ಬಗ್ಗೆ ಕೇಳುತ್ತಾ ಅವರ ತಂದೆ ಬಗ್ಗೆ ಕೇಳಿದ್ದಾರೆ. ನಟ ಅಜಯ್ ದೇವಗನ್ ತಮ್ಮ ತಂದೆ ಬಗ್ಗೆ ಹೇಳಿಕೊಂಡಂತೆ ರೋಹಿತ್ ಶೆಟ್ಟಿ ಕೂಡ ಹೇಳಿಕೊಂಡಿದ್ದಾರೆ. 'ನನ್ನ ತಂದೆ ಮುಂಬೈಗೆ ಮೊದಲ ಬಾರಿ ಬಂದಾಗ ಮಾಡುವುದಕ್ಕೆ ಯಾವುದೇ ಕೆಲಸ ಸಿಕ್ಕಿರಲಿಲ್ಲ. ಹೊಟೆಲ್ ಒಂದರಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದರಂತೆ' ಎಂದಿದ್ದಾರೆ ನಿರ್ದೇಶಕ ರೋಹಿತ್ ಶೆಟ್ಟಿ. 

ಕಾರ್ಪೆಂಟರ್ ಆಗಿದ್ದವ ಗ್ಯಾಂಗ್‌ಸ್ಟರ್‌, ಬಳಿಕ ಬಾಲಿವುಡ್ ಫೈಟರ್; ಮಗ ಬಾಲಿವುಡ್ ಸೂಪರ್ ಸ್ಟಾರ್!

ರೋಹಿತ್ ಶೆಟ್ಟಿಯವರ ಅಪ್ಪ ಎಂಬಿ ಶೆಟ್ಟಿಯವರು 13 ವರ್ಷದ ಹುಡುಗನಿದ್ದಾಗಲೇ ಕೆಲಸ ಹುಡುಕಿಕೊಂಡು ಮುಂಬೈಗೆ ಹೋಗಿದ್ದಾರಂತೆ. ಮುದ್ದು ಬಾಬು ಶೆಟ್ಟಿ ಅಲಿಯಾಸ್ ಎಂಬಿ ಶೆಟ್ಟಿಯವರು ಬಾಲಿವುಡ್‌ ಚಿತ್ರರಂಗದಲ್ಲಿ ಸ್ಟಂಟ್‌ ಮಾಸ್ಟರ್, ಆಕ್ಷನ್ ಕೋರಿಯೋಗ್ರಾಫರ್ ಮತ್ತು ನಟರಾಗಿ ಗುರುತಿಸಿಕೊಂಡಿದ್ದಾರೆ. ಅವರ ಮಗ ರೋಹಿತ್ ಶೆಟ್ಟಿ ಅವರು ಸ್ಟಂಟ್‌ಮ್ಯಾನ್, ರೈಟರ್ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಜತೆಗೆ ರೋಹಿತ್ ಶೆಟ್ಟಿ ಅವರು ಟಿವಿ ಶೋಗಳ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ. 

ಕೊನೆಗೂ ಮೌನ ಮುರಿದ ಶಾರುಖ್ ಖಾನ್; 4 ವರ್ಷದಿಂದ ಬಚ್ಚಿಟ್ಟಿದ್ದ ಸೀಕ್ರೆಟ್ ರಿವೀಲ್ ಆಯ್ತು!

ಅಂದಹಾಗೆ, ಎಂಬಿ ಶೆಟ್ಟಿಯವರ ಮಗ ರೋಹಿತ್ ಶೆಟ್ಟಿಯವರು ದಿಲ್‌ವಾಲೇ, ಸರ್ಕಸ್, ಸಿಂಬಾ, ಸೂರ್ಯವಂಶಿ, ಗೋಲ್‌ಮಾಲ್ 3, ಸಿಂಗಮ್, ಸಿಂಗಮ್ ರಿಟರ್ನ್ಸ್‌ ಮುಂತಾದ ಸಿನಿಮಾಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಹಲವು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದು ಕೆಲವನ್ನು ನಿರ್ದೇಶಿಸಿದ್ದಾರೆ . ರೋಹಿತ್ ಶೆಟ್ಟಿ ನಿರ್ದೇಶನದ 'ಸಿಂಗಮ್ 3' ಚಿತ್ರವು ಬಿಡುಗಡೆ ಕಾಣಬೇಕಾಗಿದೆ. 

Follow Us:
Download App:
  • android
  • ios