ಬಿಗ್ ಬಾಸ್ ಮನೆಯಲ್ಲಿ ಯಾರನ್ನಾದರೂ ಎಡವಟ್ಟು ಚೆನ್ನಿಗರಾಯ ಅಂತ ಕರೀಬಹುದಾ? ಪ್ರಶಾಂತ್ ಸಂಬರಗಿ ಸಿಕ್ಕಸಿಕ್ಕವರನ್ನು ತಬ್ಬಿಕೊಳ್ಳೋ ರೀತಿ ನೋಡಿದ್ರೆ ಆ ಬಗ್ಗೆ ಕೆಲವರಿಗಾದರೂ ಅನುಮಾನ ಇರಲಾರದು.

ಆದ್ರೆ ಈ ಬಗ್ಗೆ ಸುದೀಪ್ ಮೊನ್ನೆ ಕೊಟ್ಟ ಖಡಕ್ ವಾರ್ನಿಂಗ್ ಮಾತ್ರ ರೇಷ್ಮೆ ಶಾಲಿನಲ್ಲಿ ಸುತ್ತಿ ಹೊಡೆದಂಗೂ ಇತ್ತು, ಸಂಬರಗಿ ಮೆತ್ತಗೆ ಉಜ್ಜಿಕೊಳೋ ಹಾಗೂ ಇತ್ತು.

ಎರಡನೇ ವಾರ ಜೈಲು ಸೇರಿದ ಶಮಂತ್; ಬೀಪ್ ಪದಗಳಿಗೇನೂ ಕಮ್ಮಿ ಇಲ್ಲ!...

ಬಿಗ್ ಬಾಸ್ ಮನೆ ದಿನಾ ಅಬ್ಸರ್ವ್ ಮಾಡುವವರು ಗಮನಿಸಿರಬಹುದು. ಈ ಮಹನೀಯ ಪ್ರಶಾಂತ ಸಂಬರಗಿಗೆ‌ ತಬ್ಬಿಕೊಳ್ಳೋದು ಎಂದರೆ ಭಯಂಕರ ಉತ್ಸಾಹ. ಅದರಲ್ಲೂ ಹೆಣ್ಣುಮಕ್ಕಳು ಎಂದರೆ ಇವರ ಮೈಯೆಲ್ಲ ಕೈಗಳೇ ಆಗಿಬಿಡುತ್ತವೆ. ಇವರ ತಬ್ಕೊಳೋ ಕೆಮಿಸ್ಟ್ರಿ ಏನು ಅಂತ ಯಾರ್ಗೂ ತಿಳಿಯದು.

ಟೈಟ್ ಆಗಿ ಹಗ್ ಮಾಡುವ ಸಂಬರಗಿ ಹಗ್ಗಿಂಗ್ ಸ್ಟಾರ್ ಎನ್ನಬಹುದು. ಇವರ ಹಗ್ಗಿಂಗ್‌ನಿಂದಾಗಿ ಬಿಗ್ ಬಾಸ್ ಮನೆಯ ಹೆಮ್ಮಕ್ಕಳೆಲ್ಲ ಕಕ್ಕಾಬಿಕ್ಕಿ ಆಗುತ್ತಿದ್ದಾರೆ. ಇಂಥ ಸಂಬರಗಗಿಗೆ ಮೊನ್ನೆ ಸುದೀಪ್ ಕೊಟ್ಟ ತಪರಾಕಿಗೆ ಸಂಬರಗಿ ಕೆಮಿಸ್ಟ್ರಿ ಫಿಸಿಕ್ಸ್ ಎಲ್ಲ ಮೇಲು ಕೆಳಗು ಆಯ್ತು. 

ಕವಿತಾ - ಚಂದನ್ ಮದ್ವೆ ಫಿಕ್ಸ್ ಆಯ್ತಂತೆ, ಹೇಗೆ ಗೊತ್ತಾಯ್ತು ಅಂತೀರಾ?! ...

ಅಷ್ಟಕ್ಕೂ ಸುದೀಪ್ ಹೇಳಿದ್ದೇನು?

ಪ್ರಶಾಂತ್ ಅವರೇ ನೀವು ಎಲ್ಲರನ್ನು ತಬ್ಬಿಕೊಳ್ಳುತ್ತೀರಿ. ಕೆಲವರನ್ನು ತುಂಬಾನೇ ಟೈಟ್ ಆಗಿ ತಬ್ಬಿಕೊಳ್ತೀರಿ. ನೀವು ತಬ್ಬಿಕೊಳ್ತೀರಲ್ಲ ಅದು ಸಮಸ್ಯೆ ಅಲ್ಲ. ಆದರೆ ತಬ್ಬಿಕೊಂಡಾಗ ಮಾತಾಡ್ತೀರಲ್ಲ ಅದು ಸಮಸ್ಯೆ. ನೀವು ತಬ್ಬಿಕೊಂಡಾಗ ಮೈಕ್ ಒತ್ತಿಕೊಂಡು ಅಪ್ಪಚ್ಚಿ ಆಗಿರುತ್ತದೆ. ಹಾಗಾಗಿ ನೀವು ಮಾತನಾಡಿದ್ದು ಬೇರೆಯದೇ ರೀತಿ ಕೇಳುತ್ತದೆ ಅಂದಿದ್ದಾರೆ ಸುದೀಪ್.

ನೀವು ಕೆಲವರನ್ನು ತುಂಬಾ ದೀರ್ಘಕಾಲ ತಬ್ಬಿಕೊಳ್ತೀರಿ. ಅದು ತಪ್ಪು ಎಂದು ನಾನು ಹೇಳ್ತಾ ಇಲ್ಲ. ತಬ್ಬಿಸಿಕೊಳ್ಳುವವರಿಗೆ ಅಭ್ಯಂತರ ಇಲ್ಲ ಎಂದ ಮೇಲೆ ನಮ್ಮದೇನು ಅಭ್ಯಂತರ? ಎರಡು ನಿಮಿಷಕ್ಕಿಂತ ಹೆಚ್ಚು ಕಾಲ ತಬ್ಬಿಕೊಳ್ಳಬಾರದು ಎಂದು ಬಿಗ್ ಬಾಸ್ ನಿಯಮ ಹಾಕಿಲ್ಲ. ಆದರೆ, ಬಿಗ್ ಬಾಸ್ ಆ ಥರ ನಿಯಮ ತರೋ ಹಾಗೆ ಮಾಡಿಕೊಳ್ಳಬೇಡಿ ಎಂದು ಸುದೀಪ್ ಎಚ್ಚರಿಕೆ ನೀಡಿದ್ದಾರೆ.

ಎಲಿಮಿನೇಟ್ ಆಗುತ್ತಿದ್ದಂತೆ, ಹೊಸ ಚಿತ್ರಕ್ಕೆ ಸಹಿ ಹಾಕಿದ ಟಿಕ್‌ಟಾಕ್ ಧನುಶ್ರೀ! ...

ಅಲ್ಲಿಗೆ ಸಂಬರಗಿ ತಬ್ಬಿಂಗ್ ಎಪಿಸೋಡ್ ಎಲ್ಲರಿಗೂ ಮುಜುಗರ ತಂದಿರುವುದು ಸ್ಪಷ್ಟ. ಅದನ್ನು ಪರೋಕ್ಷವಾಗಿ ಹೇಳಿದ್ದಾರೆ ಸುದೀಪ್ ಅಷ್ಟೇ.

ಇಷ್ಟಕ್ಕೂ ಈ ಪ್ರಶಾಂತ್ ಸಂಬರಗಿ ಯಾರು, ಬಿಗ್ ಬಾಸ್ ಮನೆಗೆ ಈತ ಬಂದದ್ದು ಹೇಗೆ ಎಂಬುದು ಕೂಡ ಈ ತಬ್ಬಿಂಗ್ ಎಪಿಸೋಡ್‌ನಷ್ಟೇ ಇಂಟರೆಸ್ಟಿಂಗ್. ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ ಸೇವನೆ ಕೇಸುಗಳು ಫಿಕ್ಸ್ ಆಗತೊಡಗಿದಾಗ ಮೇಲೆದ್ದು ಬಂದವರು ಈ ಸಂಬರಗಿ.

ಅಲ್ಲಿವರೆಗೂ ಎಲ್ಲಿದ್ದರು ಎಂಬುದೇ ನಿಗೂಢ. ಕೇಳಿದರೆ, ನಾನು ಅವರ ಜೊತೆಗಿದ್ದೆ, ಇವರ ಜೊತೆಗಿದ್ದೆ, ಅವರ ಜೊತೆ ಕೋ ಪ್ರೊಡ್ಯೂಸ್ ಮಾಡುತ್ತಿದ್ದೆ ಎಂದೆಲ್ಲ ಮಾತನಾಡುತ್ತಾರೆ. ಆದರೆ ಸಾ.ರಾ.ಗೋವಿಂದು ಅವರು ಇದರ ಬಗ್ಗೆ ರೇಗಿದ್ದರು. ಸಂಬರಗಿಯನ್ನು ಚಿತ್ರೋದ್ಯಮಿ ಎನ್ನಬೇಡಿ, ಆತ ಚಿತ್ರೋದ್ಯಮಿಯೇ ಅಲ್ಲ ಎಂದು ರೇಗಿದ್ದರು.

Biggboss ಸೀಸನ್ ಎಂಟರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಬರಗಿ ಒಬ್ಬ ಹಂದಿ ಎಂದು ನಟಿ ರಾಗಿಣಿ ಟಿವಿ ಇಂಟರ್‌ವ್ಯೂದಲ್ಲಿ ರೇಗಿದ್ದರು. ಹೀಗೆಲ್ಲ ಹೊಗಳಿಸಿಕೊಂಡಿರುವ ಸಂಬರಗಿ, ಎಲ್ಲ ಕಡೆಯೂ ಸಾಕಷ್ಟು ಮೈಲೇಜ್‌ ಗಳಿಸಿಕೊಂಡಿರುವ ರಹಸ್ಯ ಏನು ಎಂಬುದು ಮಾತ್ರ ಯಾರಿಗೂ ತಿಳಿಯದು. ಇರಲಿ, ಬಿಗ್ ಬಾಸ್ ಮನೆಯಲ್ಲಿ ಈ ಹಿಂದೆಯೂ ಹಲವರು ಪರಸ್ಪರ ತಬ್ಬಿಕೊಂಡಿದ್ದಾರೆ. ಪ್ರಶಾಂತ್ ಸಂಬರಗಿಗೆ ತಬ್ಬಿಕೊಳ್ಳುವುದು ಸಹಜವೇ ಇರಬಹುದು. ಅದು ಅಪಾರ್ಥಕ್ಕೆ ಕಾರಣವಾಗಬಾರದು ಎಂದಿದ್ದರೆ ಒಂದು ಮಿತಿಯಲ್ಲಿ ಇರಲಿ ಎಂದು ಸುದೀಪ್ ಸೂಚಿಸಿದ್ದಾರೆ ಅಷ್ಟೆ.