'ಮನೆಯಲ್ಲಿರುವವರನ್ನು ಬೋಳಿಸಿ ಕಳುಹಿಸುತ್ತೇನೆ,' ಎಂದ್ಹೇಳಿ ಬಿಗ್ ಬಾಸ್‌ ಸೀಸನ್‌ 8ಕ್ಕೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿ ಧನುಶ್ರೀ ಮೊದಲ ವಾರವೇ ಎಲಿಮಿನೇಟ್‌ ಅಗಿ ಹೊರ ಬಂದಿದ್ದಾರೆ. ಒಂದು ವಾರ ಕಡಿಮೆ ಅವಧಿಯಾದರೂ, ಒಂದು ನಿಮಿಷದಲ್ಲಿ ಅದೆಷ್ಟೋ ಮಂದಿ ನಸೀಬ್‌ ಬದಲಾಗುತ್ತದೆ, ನಿಯಮದ ಪ್ರಕಾರ ಮಾಡಲೇ ಬೇಕು ಎಂದು ಸುದೀಪ್ ಹೇಳಿದ್ದರು.

ಇವ್ರು ಹೀಗೆ ಮಾಡಿದ್ರೆ 16 ಜನ ಮಣ್ಣು ತಿನ್ನಬೇಕಾಗುತ್ತೆ; ನಿರ್ಮಲಾ ವಿರುದ್ಧ ಚಂದ್ರಕಲಾ ಗರಂ!

ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟರ್ ಆಗಿದ್ದ ಟಿಕ್‌ಟಾಕ್‌ ಧನುಶ್ರೀ 'ಇಂಗ್ಲೀಷ್' ಹಾಡೊಂದಕ್ಕೆ ಟಿಕ್‌ಟಾಕ್‌ ಮಾಡಿ ಮಲಗಿದರೆ ರಾತ್ರಿ ಆಗುಷ್ಟರಲ್ಲಿ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿತ್ತಂತೆ. ಧನುಶ್ರೀನ ಅನೇಕರು ಅನುಕರಣೆ ಮಾಡಿದರೂ, ಕ್ಲಿಕ್ ಆಗಲಿಲ್ಲ. ಈ ಒಂದು ಕಾರಣಕ್ಕೆ ಧನುಶ್ರೀ ಬಿಗ್‌‌ಬಾಸ್‌ ಮನೆ ಪ್ರವೇಶಿಸಿದ್ದರು. 

ಮನೆಯಿಂದ ಹೊರ ಬಂದು, ಒಂದು ವಾರ ಕಳೆಯುಷ್ಟರಲ್ಲಿಯೇ  ಹೆಸರಿಡದ ಚಿತ್ರಕ್ಕೆ ಧನುಶ್ರೀ ಸಹಿ ಮಾಡಿದ್ದಾರೆ. ರೊಮ್ಯಾಂಟಿಕ್ ಲವ್ ಸ್ಟೋರಿ ಹೊಂದಿರುವ ಚಿತ್ರ ಇದಾಗಿದ್ದು, ಬಹುತೇಹ ಪ್ರೀ ಪೊಡಕ್ಷನ್ ಕೆಲಸ ನಡೆದಿದೆ. ಶೂಟಿಂಗ್ ಆರಂಭ ಮಾಡಬೇಕಿದೆ. ಚಿತ್ರದಲ್ಲಿರುವ ನಟಿ ಪಾತ್ರ ಧನುಶ್ರೀಗೆ ತುಂಬಾ ಹತ್ತಿರವಾಗಿರುವ ಕಾರಣ ಸಿನಿಮಾ ಒಪ್ಪಿಕೊಂಡಿದ್ದಾರಂತೆ.  'Something new coming up'ಎಂದು ಧನುಶ್ರೀ ಬರೆದುಕೊಂಡಿದ್ದಾರೆ. 

ನಾವು ಸೋಷಿಯಲ್ ಮೀಡಿಯಾದವರು ಟೈಂ ಬೇಕು; ರಘು ಗೌಡನನ್ನು ಸೇಫ್ ಮಾಡಿದ ಧನುಶ್ರೀ!

ಬಿಬಿ ಮನೆಯಿಂದ ಹೊರ ಬರುತ್ತಿದ್ದಂತೆ, ಧನುಶ್ರೀ ಇನ್‌ಸ್ಟಾ ರಿಲೀಸ್ ಮಾಡಿದ್ದಾರೆ. ಇನ್ನೂ ಮನೆ ಪ್ರವೇಶಿಸುವ ಮುನ್ನ ಐಷಾರಾಮಿ ಹೋಟೆಲ್‌ನಲ್ಲಿ ಕ್ವಾರಂಟೈನ್‌ ಆಗಿದ್ದಾಗ ಮಾಡಿದ ವಿಡಿಯೋಗಳನ್ನು ಈಗ ಶೇರ್ ಮಾಡಿಕೊಳ್ಳುತ್ತಿದ್ದಾರೆ.