ಮೊದಲನೇ ವಾರ ಟಿಕ್‌ಟಾಕ್‌ ಧನುಶ್ರೀ ಎಲಿಮಿನೇಟ್ ಆದ ಬಳಿಕ ಇಡೀ ಮನೆಯ ವಾತಾವರಣವೇ ಬದಲಾಗಿದೆ. ಸೇಫ್‌ ಝೋನ್‌ನಲ್ಲಿದ್ದು, ಗೇಮ್ ಆಡುತ್ತಿದ್ದ ಶಮಂತ್ ಕ್ಯಾಪ್ಟನ್ ಸ್ಥಾನ ಕಳೆದುಕೊಂಡು, ಕಳಪೆ ಸ್ಪರ್ಧಿ ಎಂದು ಜೈಲು ಸೇರಿದ್ದಾರೆ. 

ನನ್ನ ಹುಡುಗಿ ಕುಳ್ಳಗಿರ್ಬೇಕು, ಚೆನ್ನಾಗಿರೋರು ಬೇಡ: ಶಮಂತ್ ಗರ್ಲ್‌ಫ್ರೆಂಡ್ ಸುಳಿವು! 

ಕೊರೋನಾ ವೈರಸ್ ಹಾವಳಿಯನ್ನೇ ಟಾಸ್ಕ್ ರೂಪದಲ್ಲಿ ನೀಡಲಾಗಿತ್ತು. ಮೊದಲ ದಿನ ವೈರಸ್ ತಂಡ ಆಟದಲ್ಲಿ ಜಯಶಾಲಿಯಾಗಿತ್ತು. ಎರಡನೇ ವಾರ ಮಾನವರು ಗೆದ್ದರು. ಆದರೆ ಎರಡೂ ತಂಡಗಳ ನಡುವೆ ಮನಸ್ತಾಪ ಉಂಟಾದ ಕಾರಣ ಒಬ್ಬೊಬ್ಬರೇ ಸ್ಪರ್ಧಿಯಿಂದ ಹೊರ ಬಂದರು. ಟಾಸ್ಕ್‌ ನಿಯಮಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಿಕೊಂಡ ಕಾರಣ ಬಿಗ್‌ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್ ರದ್ದು ಮಾಡಿದರು. ಯಾರಿಂದ ಈ ಟಾಸ್ಕ್‌ ರದ್ದಾಗಿತ್ತೋ ಅವರ ಮುಖಕ್ಕೆ ಮಸಿ ಬಳಿಯುವಂತೆ ಆದೇಶ ಹೊರಡಿಸಲಾಗಿತ್ತು. ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ, ಶಮಂತ್, ಅರವಿಂದ್, ದಿವ್ಯಾ ಸುರೇಶ್‌ ಹಾಗೂ ನಿರ್ಮಲಾಗೆ ಮಸಿ ಬಳಿಯಲಾಗಿತ್ತು. 

ಕ್ಯಾಪ್ಟನ್ ಬ್ರೋ ಗೌಡ ಮತ್ತು ಸಂಬರಗಿ ನಡುವೆ ಬಿಗ್ ಫೈಟ್; ಓವರ್ ಆ್ಯಕ್ಟಿಂಗ್ ಯಾರ್ ಗುರು? 

ಮಸಿ ಬಳಿಸಿಕೊಂಡ ವ್ಯಕ್ತಿ ಮುಂದೆ ನೀಡಲಾಗಿದ್ದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸ್ಪರ್ಧಿಸುವಂತಿರಲಿಲ್ಲ. ಚಂಡನ್ನು ಬುಟ್ಟಿಗೆ ಹಾಕುವುದರಲ್ಲಿ ರಾಜೀವ್ ಯಶಸ್ವಿಯಾದ ಕಾರಣ ಈ ವಾರದ ಕ್ಯಾಪ್ಟನ್ ಆದರು. ಆ ನಂತರ ಬಿಬಿ ಆದೇಶದ ಪ್ರಕಾರ ಉತ್ತಮ ಪ್ರದರ್ಶನ ಹಾಗೂ ಕಳಪೆ ಪ್ರದರ್ಶನ ಕೊಟ್ಟ ವ್ಯಕ್ತಿಯನ್ನು ಆಯ್ಕೆ ಮಾಡಬೇಕಿತ್ತು. ಉತ್ತಮ ಪ್ರದರ್ಶನಕ್ಕೆ ಲ್ಯಾಗ್ ಮಂಜು ಗೋಲ್ಡ್ ಮೆಡಲ್ ಪಡೆದರೆ, ಬ್ರೋ ಗೌಡ ಅಲಿಯಾಸ್ ಶಮಂತ್ ಕಳಪೆ ಪ್ರದರ್ಶನ ತೋರಿದ ಕಾರಣ ಜೈಲು ಸೇರಿದರು. ಈ ವಾರ ಒಬ್ಬ ವ್ಯಕ್ತಿ ಅಂತಲ್ಲ ಅನೇಕರು ಬೀಪ್ ಬೀಪ್‌ ಪದಗಳನ್ನು ಬಳಸಿದ್ದಾರೆ. ಈ ರೀತಿಯ ಮಾತು ಗೇಮ್ ಓವರ್ ಮಾಡಿತ್ತೇ?

ಶಮಂತ್ ಯಾಕೆ ಕಳಪೆ ಸ್ಪರ್ಧಿ?
ಎರಡನೇ ವಾರಕ್ಕೂ ಕ್ಯಾಪ್ಟನ್ ಆಗಿದ್ದ ಶಮಂತ್ ಅದೇ ವಾರ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಕಳಪೆ ಪ್ರದರ್ಶನ ಪಡೆದಿದ್ದಾರೆ. ಇದಕ್ಕೆ ಮನೆ ಸದಸ್ಯರು ಕೊಟ್ಟ ಕಾರಣವಿಷ್ಟೇ. ಎಲ್ಲರೂ ಗೇಮ್ ರೀತಿ ಆಡವಾಡಿದರು. ಆದರೆ ಶಮಂತ್ ಆಟವಾಡಲಿಲ್ಲ. ಕೆಟ್ಟ ಪದಗಳನ್ನು ಬಳಸಿ ಪ್ರತಿಸ್ಪರ್ಧಿಗೆ ಅವಮಾನ ಮಾಡಿದ್ದಾರೆ. ವೈಷ್ಣವಿ ಅವರ ಮೇಲೆ ಕೈ ಮಾಡಿದ್ದಾರೆ, ಎಲ್ಲರ ಜೊತೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡಿಲ್ಲ. ಅವರದ್ದೇ ಲೋಕದಲ್ಲಿದ್ದರು. ಹಾಗೂ ಹೆಣ್ಣು ಮಕ್ಕಳ ಜೊತೆ ತುಂಬಾ ರಫ್ ಆಗಿ ವರ್ತಿಸಿದ್ದಾರೆ, ಎನ್ನಲಾಗಿದೆ.