ಕವಿತಾ - ಚಂದನ್ ಮದ್ವೆ ಫಿಕ್ಸ್ ಆಯ್ತಂತೆ, ಹೇಗೆ ಗೊತ್ತಾಯ್ತು ಅಂತೀರಾ?!
ಸೀರಿಯಲ್ ಜೋಡಿಹಕ್ಕಿ ಚಂದನ್ ಹಾಗೂ ಕವಿತಾ ಗೌಡ ರಿಯಲ್ ಲೈಫ್‌ನಲ್ಲೂ ಒಂದಾಗುವ ಸೂಚನೆ ಸಿಕ್ಕಿದೆ. ಈ ಜೋಡಿ ಶೀಘ್ರದಲ್ಲಿ ಹಸೆಮಣೆ ಏರಲಿದ್ದಾರಾ?
'ಲಕ್ಷ್ಮೀ ಬಾರಮ್ಮ' ಸೀರಿಯಲ್‌ನಲ್ಲಿ ಒಟ್ಟಿಗಿದ್ದೂ ದೂರವಿದ್ದ ಜೋಡಿ ಚಂದನ್ ಹಾಗೂ ಚಿನ್ನು. ಅಚಾನಕ್ ಆಗಿ ದೇವಸ್ಥಾನದಲ್ಲಿ ಚಿನ್ನುಗೆ ತಾಳಿ ಕಟ್ಟೋ ಚಂದನ್ ಆಮೇಲೆ ಗೊಂಬೆ ಜೊತೆಗೆ ಮದುವೆ ಆಗ್ಬೇಕಾಗುತ್ತೆ. ಆದರೆ ಹೃದಯ ಸದಾ ಚಿನ್ನುವಿನ ಧ್ಯಾನದಲ್ಲೇ ಇರುತ್ತೆ. ಇಂಥದ್ದೊಂದು ಕಣ್ಣಾಮುಚ್ಚಾಲೆಯಲ್ಲೇ ಫುಲ್ ಟಿಆರ್ ಪಿ ಗಿಟ್ಟಿಸಿಕೊಂಡು ಕರ್ನಾಟಕದಲ್ಲೆಲ್ಲ ಹೈಪ್ ಕ್ರಿಯೇಟ್ ಮಾಡಿದ ಧಾರಾವಾಹಿ ಲಕ್ಷ್ಮೀ ಬಾರಮ್ಮ. ಈ ಸೀರಿಯಲ್ ಮುಗಿದು ವರ್ಷಗಳೇ ಕಳೆದಿದೆ. ಚಿನ್ನು ಬಿಗ್‌ಬಾಸ್ ಗೆ ಹೋಗಿ ಬಂದದ್ದೂ ಆಗಿದೆ. ಆದರೆ ಸೀರಿಯಲ್‌ನಲ್ಲಿ ಮನಸ್ಸಲ್ಲೇ ಪ್ರೀತಿಸುತ್ತಿದ್ದ ಜೋಡಿ ಅದನ್ನು ನಟನೆಯಿಂದಾಚೆಗೂ ತಗೊಂಡು ಹೋಗಿದ್ದು ಹಲವರಿಗೆ ತಿಳಿದಿರೋ ವಿಚಾರ. ಸೀರಿಯಲ್‌ನಲ್ಲಿ ಚಿನ್ನು ಚಂದನ್ ಆಗಿ ಎಲ್ಲರ ಮನಗೆದ್ದ ಜೋಡಿ ಇದೀಗ ರಿಯಲ್ ಲೈಫ್‌ನಲ್ಲೂ ಒಂದಾಗಿದ್ದಾರೆ.
ಸೀರಿಯಲ್ ನಲ್ಲಿ ಮಾತ್ರವಲ್ಲ, ಸೀರಿಯಲ್ ಸೆಟ್‌ನಲ್ಲೂ ಜೊತೆಯಾಗಿರುತ್ತಿದ್ದ ಚಂದನ್ ಕವಿತಾ ಸೀರಿಯಲ್ ಮುಗಿದ ಬಳಿಕವೂ ಜೊತೆಯಾಗಿ ಓಡಾಡುತ್ತಿದ್ದರು.
ಬಹಳ ಲೇಟೆಸ್ಟ್ ಆಗಿ ಹೇಳಬೇಕು ಅಂದರೆ ಇತ್ತೀಚೆಗೆ ಲವ್ ಮಾಕ್‌ಟೇಲ್ ಜೋಡಿ ಕೃಷ್ಣ ಹಾಗೂ ಮಿಲನಾ ಮದುವೆಗೆ ಇವರಿಬ್ಬರೂ ಜೊತೆಯಾಗಿ ಹೋಗಿ ಕ್ಯಾಮೆರಾಗೆ ಫೋಸ್ ಕೊಟ್ಟಿದ್ರು. ಮದುವೆಯಲ್ಲಿ ಇವರು ಜೊತೆಯಾಗಿ ಓಡಾಡಿಕೊಂಡಿದ್ದು, ಇವರ ಸೀರಿಯಲ್ ನೋಡುತ್ತಿದ್ದ ಹಲವರ ಮುಖದಲ್ಲಿ ಜೋಡಿ ಸಿಕ್ಕಿಬಿದ್ರು ಅನ್ನುವ ಭಾವ. ಇವರಿಬ್ಬರ ಉಡುಗೆಯೂ ಮ್ಯಾಚಿಂಗ್ ಆಗಿ ಈ ವೇಳೆ ಗಮನ ಸೆಳೆದಿತ್ತು.
ನಿಧಿ ಸುಬ್ಬಯ್ಯ ಮುಖಕ್ಕೆ ಮಸಿ ಮಸಿ.. ಯಾರೆಲ್ಲ ಸಿಂಗಲ್ ಹುಡುಗೀರು ಬಹಿರಂಗ! ...
ಹಿಂದೆ ಚಂದನ್ ಹೊಟೇಲ್ ಓಪನಿಂಗ್ ದಿನವೂ ಕವಿತಾ, ಚಂದನ್ ಜೊತೆ ಜೊತೆಯಾಗಿಯೇ ಓಡಾಡಿಕೊಂಡಿದ್ರು. ಈಗಿನ ಲೇಟೆಸ್ಟ್ ಸುದ್ದಿ ಅಂದರೆ ಚಂದನ್ ಅವರ ಸ್ಟೇಟಸ್. ಇಲ್ಲಿಯವರಗೆ ಅವರು ತೆಲುಗಿನ 'ಸಾವಿತ್ರಮ್ಮಗಾರಿಕಿ ಅಬ್ಬಾಯಿ' ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ಈಗ ಈ ಸೀರಿಯಲ್‌ನಲ್ಲಿ ಅವರ ಪಾತ್ರ ಮುಕ್ತಾಯವಾಗಿದೆ. ಐನೂರಕ್ಕೂ ಹೆಚ್ಚು ಎಪಿಸೋಡ್‌ಗಳಲ್ಲಿ ಮಿಂಚುತ್ತಿದ್ದ ಚಂದನ್ ಸಡನ್ನಾಗಿ ಯಾಕೆ ಸೀರಿಯಲ್ ಬಿಟ್ಟು ಆಚೆ ಬಂದರು ಅಂದರೆ ಅದಕ್ಕೆ ಕಾರಣ ಇವರ ಮದುವೆ. 'ಮದುವೆ, ವೈಯುಕ್ತಿಕ ಕಾರಣಗಳಿಗಾಗಿ ಸದ್ಯಕ್ಕೆ ಸೀರಿಯಲ್‌ಗೆ ಗುಡ್ ಬಾಯ್ ಹೇಳಿದ್ದೀನಿ. ಈ ಬಗ್ಗೆ ಹಿಂದೆಯೇ ತಿಳಿಸಿದ್ದೆ. ಹಾಗಾಗಿ ನನ್ನ ಪಾತ್ರ ಎಂಡ್ ಮಾಡಿದರು,' ಅಂತ ಚಂದನ್ ಅವರೇ ಹೇಳಿದ್ದಾರೆ.
ಇವ್ರು ಹೀಗೆ ಮಾಡಿದ್ರೆ 16 ಜನ ಮಣ್ಣು ತಿನ್ನಬೇಕಾಗುತ್ತೆ; ನಿರ್ಮಲಾ ವಿರುದ್ಧ ಚಂದ್ರಕಲಾ ಗರಂ! ...
ಚಂದನ್‌ಗೆ ಮದುವೆ ಅಂದಕೂಡಲೇ ಬರುವ ನೆಕ್ಸ್ಟ್ ಪ್ರಶ್ನೆ, 'ಕವಿತಾ ಜೊತೆಗಾ?' ಅನ್ನೋದು. ಇದಕ್ಕೆ ಚಂದನ್ 'ನೋ' ಅಂದಿಲ್ಲ. 'ಯೆಸ್' ಅಂತ ಹೇಳಲೂ ಅವರಿಗೆ ಭಯವಂತೆ. ಯಾಕೆಂದರೆ ಎಲ್ಲೆಡೆ ಈ ಸುದ್ದಿ ವೈರಲ್ ಆಗುತ್ತೆ ಅಂತ. ಮದುವೆಯ ಡೇಟ್ ಫಿಕ್ಸ್ ಆಗದೇ ತಮ್ಮಿಬ್ಬರ ಹೆಸರು ಓಡಾಡಿದ್ರೆ ಚೆನ್ನಾಗಿರಲ್ಲ ಅನ್ನೋದು ಅವರ ಅಭಿಪ್ರಾಯ ಇದ್ದಂತಿದೆ. ಸದ್ಯಕ್ಕೆ ಡೇಟಿಂಗ್ ಮಾಡ್ತಾ ಒಂದಿಷ್ಟು ದಿನ ಫ್ರೀಯಾಗಿ ಓಡಾಡಿಕೊಂಡಿರಬೇಕು ಅನ್ನೋದು ಇವರ ತೀರ್ಮಾನ. ಮದುವೆ ಆದ ಮೇಲೆ ಜವಾಬ್ದಾರಿ ಹೆಚ್ಚಾಗುತ್ತೆ. ಆಗ ಮನೋ ಇಚ್ಛೆ ಓಡಾಡೋದಕ್ಕೆ ಆಗಲ್ಲ. ಹೀಗಾಗಿ ಮದುವೆಗೂ ಮುನ್ನವೇ ಬ್ಯಾಚ್ಯುಲರ್ ಲೈಫ್‌ಅನ್ನು ಎನ್ ಜಾಯ್ ಮಾಡಬೇಕು ಅನ್ನೋದು ಚಂದನ್ ಅಭಿಪ್ರಾಯ. ಜೊತೆಗೆ ಸೀರಿಯಲ್, ಸಿನಿಮಾ ಮಾಡುವಾಗ ಅದಕ್ಕೆ ತಕ್ಕಂತೆ ಡ್ರೆಸ್, ಸ್ಟೈಲ್ ಎಲ್ಲ ಇರಬೇಕಾಗುತ್ತೆ. ಆ ಕಮ್ಮಿಟ್‌ಮೆಂಟ್ ಇಲ್ಲ ಅಂದರೆ ನಮಗೆ ಬೇಕಾದ ಹಾಗೆ ಸ್ಟೈಲ್ ಮಾಡ್ಕೊಂಡು ಸ್ವಲ್ಪ ಕಾಲ ಓಡಾಡಬಹುದು ಅನ್ನೋ ಮನಸ್ಥಿತಿಯಲ್ಲಿದ್ದಾರೆ ಚಂದನ್.
ಚಂದನ್ ಈ ವರ್ಷ ಹೊಟೇಲ್ ಬ್ಯುಸಿನೆಸ್‌ಗೆ ಇಳಿದಿದ್ದಾರೆ. ಅದನ್ನು ಇನ್ನಷ್ಟು ಅಭಿವೃದ್ಧಿ ಮಾಡುವುದು ಇವರ ಮತ್ತೊಂದು ಕನಸು.
ಇವರ ಪೋಸ್ಟ್ ಗೆ ಕಮೆಂಟ್ ಮಾಡುತ್ತಿರುವ ಅಭಿಮಾನಿಗಳು ಶುಭಸ್ಯ ಶೀಘ್ರಂ ಅಂದಿದ್ದಾರೆ.
ಬಿಗ್‌ಬಾಸ್ ಕನ್ನಡ-ಸೀಸನ್ 8ರಲ್ಲಿ ಇವ್ರದ್ದು 100 ಡೇಸ್ ಗ್ಯಾರಂಟಿ! ...