Asianet Suvarna News Asianet Suvarna News

Jothe jotheyali: ಹೊಸ ಆರ್ಯವರ್ಧನನಾಗಿ ಹರೀಶ್ ರಾಜ್! ವಿಶ್ವಾಸನೇ ಸುಭಾಷ್ ಆಗ್ತಿದ್ದಾನೆ!

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ 'ಜೊತೆ ಜೊತೆಯಲಿ' ಸೀರಿಯಲ್‌ ನಾಯಕನೇ ಬದಲಾಗ್ತಿದ್ದಾನೆ, ಈ ಹಿಂದೆ ಈ ಪಾತ್ರ ಮಾಡ್ತಿದ್ದ ಅನಿರುದ್ಧ ಬದಲಿಗೆ ಹೊಸ ನಾಯಕನಾಗಿ ಯಾರು ಬರ್ತಿದ್ದಾರೆ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಹರೀಶ್ ರಾಜ್ ಹೊಸ ಆರ್ಯವರ್ಧನ ಆಗಲಿದ್ದಾರೆ. ಇದೆಲ್ಲ ಹೇಗೆ ಸಾಧ್ಯ ಅದಕ್ಕೂ ಒಂದು ಕತೆ ಕಟ್ಟಲಾಗಿದೆ. ಆ ಕತೆ ಏನು ಗೊತ್ತಾ?

 

Harish raj new Aryavardhan in Jothe jotheyali of Zee Kannada serial
Author
First Published Sep 9, 2022, 10:55 AM IST

ಜೊತೆಜೊತೆಯಲಿ ಸೀರಿಯಲ್‌ನಲ್ಲಿ ಮಹಾ ತಿರುವು ಎದುರಾಗಿದೆ. ಆರ್ಯವರ್ಧನ್ ಪಾತ್ರದ ಬದಲಿಗೆ ಯಾರು ಈ ಸೀರಿಯಲ್ ಹೀರೋ ಆಗ್ತಾರೆ ಅನ್ನೋ ಅನುಮಾನಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಈ ನಾಯಕನ ಬದಲಾವಣೆಗೆ ಸೂಕ್ತ ದಾರಿ ಸೀರಿಯಲ್ ಟೀಮ್ ಕಂಡುಕೊಂಡಿದೆ. ಆರ್ಯವರ್ಧನನಿಗೆ ಆಕ್ಸಿಡೆಂಟ್ ಮಾಡಿ ಆತನ ಮುಖಕ್ಕೆ ಪೆಟ್ಟಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಬೇಕು ಅನ್ನೋ ಥರದ ಸನ್ನಿವೇಶ ಸೃಷ್ಟಿ ಮಾಡಿದೆ. ಅಷ್ಟೇ ಅಲ್ಲ ಈ ಹಿಂದೆ ಆರ್ಯವರ್ಧನ್ ಅಂದರೆ ನಿಜದಲ್ಲಿ ಸುಭಾಷ್ ದೇಸಾಯಿ ಆಗಿದ್ದವನ ತಮ್ಮನ ಪಾತ್ರ ಅಂದರೆ ವಿಶ್ವಾಸ್ ದೇಸಾಯಿಯಾಗಿ ಹೊಸದೊಂದು ಪಾತ್ರ ಸೃಷ್ಟಿ ಮಾಡಲಾಗಿತ್ತು. ಹರೀಶ್ ರಾಜ್ ಈ ಪಾತ್ರಕ್ಕೆ ಆಯ್ಕೆ ಆಗಿದ್ದರು. ಇಂಥ ಹೊಸ ಪಾತ್ರದ ಅಗತ್ಯ ಏನಿತ್ತು ಅಂತ ಜನ ತಲೆಗೆ ಹುಳ ಬಿಟ್ಕೊಳ್ಳೋ ಹೊತ್ತಿಗೆ ಈ ಪಾತ್ರ ಬಂದಷ್ಟೇ ಫಾಸ್ಟಾಗಿ ಆತ್ಮಹತ್ಯೆ ಮಾಡಿಕೊಳ್ಳೋ ಹಾಗೆ ಮಾಡಲಾಯ್ತು. ಹೀಗೆ ಆತ್ಮಹತ್ಯೆ ಮಾಡಿಕೊಂಡ ವಿಶ್ವಾಸ್ ದೇಸಾಯಿ ಮತ್ತು ಆತನ ಸಹೋದರ ಸುಭಾಷ್ ದೇಸಾಯಿ ಅಂದರೆ ಆರ್ಯವರ್ಧನ ಒಂದು ಆಸ್ಪತ್ರೆಯಲ್ಲಿದ್ದಾರೆ. ಇವರಿಬ್ಬರ ತಾಯಿಯೂ ಅಲ್ಲೇ ಇದ್ದಾರೆ. ತಮಗೇ ಅರಿವಿಲ್ಲದ ಹಾಗೆ ಅವರು ತಮ್ಮ ಮಗ ಸುಭಾಷ್ ದೇಸಾಯಿಗೆ ರಕ್ತ ನೀಡಿದ್ದಾರೆ.

ಹೀಗೆ ರಕ್ತ ನೀಡಿದ ತಾಯಿ ತನ್ನ ಮಗನ ಮುಖ ತೋರಿಸುವಂತೆ ಪರಿ ಪರಿಯಾಗಿ ಕೇಳಿಕೊಂಡರೂ ಆಸ್ಪತ್ರೆಯವ್ರು ಒಪ್ಪಿಲ್ಲ. ಬದಲಾಗಿ ಆತನ ಮುಖ ಅಪಘಾತದಲ್ಲಿ ಸಂಪೂರ್ಣ ಹಾಳಾಗಿ ಹೋಗಿದೆ. ಪ್ಲಾಸ್ಟಿಕ್ ಸರ್ಜರಿ ಆಗಬೇಕಿದೆ ಅನ್ನೋ ಮಾತನ್ನು ಹೇಳುತ್ತಿದ್ದಾರೆ. ಅಷ್ಟೊತ್ತಿಗೆ ಇನ್ನೊಂದು ಕಡೆ ಆತ್ಮಹತ್ಯೆ ಮಾಡಿಕೊಂಡ ವಿಶ್ವಾಸ್ ದೇಸಾಯಿ ಬದುಕುಳಿದಿಲ್ಲ ಅನ್ನೋ ಸತ್ಯ ಹೊರಗೆ ಬರುತ್ತದೆ. ಒಂದು ಕಡೆ ಮುಖವಿಲ್ಲದ ಮಗ, ಇನ್ನೊಂದು ಕಡೆ ನಿರ್ಜೀವವಾಗಿರುವ ಇನ್ನೊಬ್ಬ ಮಗನ ದೇಹ. ತಾಯಿ ಏನೂ ತೋಚದೇ ಅಳುತ್ತಾ ಕೂತಿದ್ದಾಳೆ. ಇಂಥಾ ಟೈಮಲ್ಲಿ ಆಸ್ಪತ್ರೆಯ ವೈದ್ಯರು ಆ ತಾಯಿಗೆ ಒಂದು ಸೂಚನೆ ಕೊಡ್ತಿದ್ದಾರೆ. ಇತ್ತೀಚೆಗೆ ತನ್ನ ಮಗ ವಿಶ್ವಾಸನ ರೂಪದಲ್ಲೇ ಸುಭಾಷನನ್ನು ನೋಡುವ ಮಹಾ ಅವಕಾಶವಿದು. ನಿರ್ದೇಶಕರು ಈ ಸನ್ನಿವೇಶವನ್ನು ಮಹಾ ತಿರುವು ಅಂದಿದ್ದಾರೆ. ಆದರೆ ವಿಶ್ವಾಸನೇ ಸುಭಾಷ್ ಆಗ್ತಾನೆ ಅನ್ನೋದನ್ನಂತೂ ಹೆಚ್ಚಿನವರು ಊಹಿಸಿರಲಿಲ್ಲ.

Jothe jotheyali: ಕಾರ್ ಆಕ್ಸಿಡೆಂಟ್‌ನಲ್ಲಿ ಆರ್ಯವರ್ಧನ್ ಖಲಾಸ್, ಉಗಿದು ಉಪ್ಪಿನಕಾಯಿ ಹಾಕ್ತಿರೋ ವೀಕ್ಷಕರು!

ವೈದ್ಯಕೀಯದ ಹೊಸ ಸಂಶೋಧನೆಯನ್ನಿಟ್ಟುಕೊಂಡು ಡಾಕ್ಟರ್ ಇದೀಗ ವಿಶ್ವಾಸನನ್ನೇ ಆರ್ಯವರ್ಧನನ್ನಾಗಿ ಮಾಡಲು ಹೊರಟಿದ್ದಾರೆ. ಸಹೋದರರ ಮುಖವನ್ನೇ ಪರಸ್ಪರ ಬದಲಿಸುವ ಅಪರೂಪದ ಟೆಕ್ನಾಲಜಿ ಇದು. ಈಗಾಗಲೇ ವಿದೇಶಗಳಲ್ಲೆಲ್ಲ ಇದು ಬಹಳ ಜನಪ್ರಿಯವಾಗಿದೆ. ಈ ಫೇಸ್ ಟ್ರಾನ್ಸ್‌ಪ್ಲಾಂಟ್‌ನಿಂದ ವಿಶ್ವಾಸನ ಮುಖವೇ ಆರ್ಯವರ್ಧನನಿಗೆ ಬರುತ್ತದೆ. ತಾಯಿ ಒಪ್ಪಿಗೆ ನೀಡಿದರೆ ಮುಂದೆ ವಿಶ್ವಾಸನೇ ಆರ್ಯವರ್ಧನನಾಗಿ ಬದಲಾಗಬಹುದು ಅನ್ನೋ ಮಾತನ್ನು ಡಾಕ್ಟರ್ ಹೇಳಿದ್ದಾರೆ. ತಾಯಿಗೆ ಮಗನದ್ದೇ ಚಿಂತೆ. ಆತನ ಒಳ್ಳೆಯದಕ್ಕೆ ಆಕೆ ಇದಕ್ಕೆಲ್ಲ ಒಪ್ಪಿಗೆ ನೀಡಿದ್ದಾಳೆ. ಅಷ್ಟೊತ್ತಿಗೆ 'ಹಿಟ್ಲರ್ ಕಲ್ಯಾಣ' ಸೀರಿಯಲ್ ಹೀರೋ ಏಜೆ, 'ಗಟ್ಟಿಮೇಳ'ದ ವೇದಾಂತ್ ಹಾಗೂ ಇನ್ನೊಂದು ಸೀರಿಯಲ್ ಹೀರೋ ಆಸ್ಪತ್ರೆಗೆ ಬರುತ್ತಾರೆ. ಅವರು ಈ ಬಗ್ಗೆ ವಿಚಾರಿಸಿದಾಗ ತಾಯಿ ಅವರಿಗೆ ಸತ್ಯವನ್ನೇ ಹೇಳಿದ್ದಾಳೆ.

Kannadathi: ಸುಳ್ಳುಬುರುಕಿ ಸಾನ್ಯಾ ರೆಡ್ ಹ್ಯಾಂಡ್ ಆಗಿ ಸಿಕ್ಕಾಕೊಂಡ್ಲು, ಆದ್ರೆ ಅಮ್ಮಮ್ಮ ಕತೆ?

ಮುಖವನ್ನೇನೋ ಬದಲಾಯಿಸಿ ಆರ್ಯನ ದೇಹಕ್ಕೆ ವಿಶ್ವಾಸನ ಮುಖ ಅಂದುಕೊಳ್ಳಬಹುದು. ಆದರೆ ಆ ಎತ್ತರ, ದೈಹದಾರ್ಢ್ಯ, ಮ್ಯಾನರಿಸಂ ಇದನ್ನೆಲ್ಲ ರಾಜಿ ಮಾಡಿಕೊಳ್ಳಲೇ ಬೇಕು. ಇದಕ್ಕೆ ಅನು ಪ್ರತಿಕ್ರಿಯೆ ಹೇಗಿರುತ್ತದೆ? ಇನ್ನೊಂದು ಮುಖದಲ್ಲಿ ಅವಳು ಗಂಡನನ್ನು ಸ್ವೀಕರಿಸುತ್ತಾಳಾ? ವೀಕ್ಷಕರಂತೂ ಸದ್ಯಕ್ಕೆ ಈ ಬದಲಾವಣೆ ಒಪ್ಪಿಲ್ಲ. ಮುಂದೆ ಕತೆ ಕುತೂಹಲ ಹೆಚ್ಚಿಸುತ್ತಾ ಹೋದರೆ ಜನರೂ ಇಷ್ಟಪಡಬಹುದೇನೋ.

 

Follow Us:
Download App:
  • android
  • ios