Asianet Suvarna News Asianet Suvarna News

Kannadathi: ಸುಳ್ಳುಬುರುಕಿ ಸಾನ್ಯಾ ರೆಡ್ ಹ್ಯಾಂಡ್ ಆಗಿ ಸಿಕ್ಕಾಕೊಂಡ್ಲು, ಆದ್ರೆ ಅಮ್ಮಮ್ಮ ಕತೆ?

ಕನ್ನಡತಿ ಸೀರಿಯಲ್‌ನಲ್ಲಿ ಅಮ್ಮಮ್ಮನಿಗೆ ಮರೆವಿನ ಸಮಸ್ಯೆ ಇದೆಯಾ ಇಲ್ವಾ ಅನ್ನೋದೇ ಸದ್ಯದ ಕುತೂಹಲ. ಇದನ್ನು ಟೆಸ್ಟ್ ಮಾಡಿಸೋಕೆ ಹೋದ ಸಾನಿಯಾ ರೆಡ್ ಹ್ಯಾಂಡ್ ಆಗಿ ಸಿಕ್ಕಾಕಿಕೊಳ್ಳೋ ಎಲ್ಲಾ ಸಾಧ್ಯತೆ ಇದೆ. ಆದರೆ ಅಮ್ಮಮ್ಮನ ಕತೆ ಏನು?

 

In Kannadathi serial Sanya's game revealed.
Author
First Published Sep 8, 2022, 12:16 PM IST

ಕನ್ನಡತಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ಸೀರಿಯಲ್. ಮೊನ್ನೆ ಮೊನ್ನೆವರೆಗೆ ಹರ್ಷ ಭುವಿ ಮದುವೆ, ಅಮ್ಮಮ್ಮನ ಅನಾರೋಗ್ಯದ ಮೇಲೆ ಸುತ್ತುತ್ತಿದ್ದ ಸೀರಿಯಲ್ ಈಗ ಮತ್ತೊಂದು ಹಂತಕ್ಕೆ ಜಿಗಿದಿದೆ. ಖಾಯಿಲೆಗೆ ಟ್ರೀಟ್‌ಮೆಂಟ್‌ಗೆ ಅಂತ ಅಮೆರಿಕಾಗೆ ಹೋಗಿರುವ ಅಮ್ಮಮ್ಮ ವಾಪಾಸ್ ಬರ್ತಾರಾ ಇಲ್ವಾ ಅನ್ನೋ ಪ್ರಶ್ನೆ ಇತ್ತು. ಆದರೆ ಈಗ ಅಮ್ಮಮ್ಮ ವಾಪಾಸ್ ಬಂದಿದ್ದಾರೆ. ಮನೆ ಮಂದಿಗೆ ಚೈತನ್ಯ ತುಂಬಿದ್ದಾರೆ. ಅಮ್ಮಮ್ಮನೇ ಹೇಳುವ ಹಾಗೆ ಅವರು ಕಂಪ್ಲೀಟ್ ಹುಷಾರಾಗಿದ್ದಾರೆ. ಆದರೆ ಅವರ ಕೆಲವು ಬಿಹೇವಿಯರ್ ಗಳು ಮೊದಲಿನ ಹಾಗಿಲ್ಲ. ಎತ್ತಲೋ ಧ್ಯಾನ, ಕೈಯಲ್ಲಿರೋ ಮೊಬೈಲ್ ರಿಂಗಾದರೂ ಗೊತ್ತಾಗದೇ ಇರೋದು, ಊಟ ಮಾಡಿದ್ರೂ ಮರೆತು ಹೋಗೋದು, ಈ ರೀತಿ ಎಲ್ಲ ಆಗ್ತಿದೆ. ಬಹಳ ಸೂಕ್ಷ್ಮ ಇರುವ ಭುವಿಯ ಕಣ್ಣಿಗೆ ಇದು ಮೊದಲು ಬಿದ್ದಿದೆ. ವಿಲನ್ ಸಾನ್ಯಾನೂ ಇದನ್ನು ಗಮನಿಸಿದ್ದಾಳೆ.

ಒಂದು ವೇಳೆ ಅಮ್ಮಮ್ಮಂಗೆ ಮರೆವಿನ ಕಾಯಿಲೆ ಇದೆ ಅಂತ ಪ್ರೂವ್ ಆದ್ರೆ ಅವಳು ದೊಡ್ಡ ಆಪತ್ತಿನಿಂದ ಪಾರಾದ ಹಾಗೆ. ಹೀಗಾಗಿ ತನಗೆ ಡಿಪ್ರೆಶನ್ ಬಂದಿದೆ ಅಂತ ಸುಳ್ಳು ನಾಟಕ ಮಾಡಿದ್ದಾಳೆ. ಅದರ ಟೆಸ್ಟ್ ಗೆ ಬರುವ ನೆವದಲ್ಲಿ ಮಾನಸಿಕ ತಜ್ಞರಲ್ಲಿಗೆ ಅಮ್ಮಮ್ಮನನ್ನೂ ಕರ್ಕೊಂಡು ಬಂದಿದ್ದಾಳೆ. ಆದರೆ ಈಗ ಸತ್ಯ ಬಯಲಾಗ್ತಾ ಇದೆ. ಆದರೆ ಅಮ್ಮಮ್ಮನ ಕತೆ ಏನು ಅನ್ನೋದು ಕುತೂಹಲ ಹೆಚ್ಚಿಸಿದೆ.

ಡಾಕ್ಟರ್ ಸಾನ್ಯಾ ಮಾತಿನಂತೆ ಅಮ್ಮಮ್ಮನಿಗೆ ಗೊತ್ತಾಗದ ಹಾಗೆ ಅವರ ಟೆಸ್ಟ್ ಮಾಡಿದ್ದಾರೆ. ಅದಕ್ಕೂ ಮೊದಲು ರತ್ನಮಾಲಾ ಅವರ ಸಮಸ್ಯೆಯ ವಿವರಗಳನ್ನೆಲ್ಲ ಡಾಕ್ಟರ್ ಮುಂದೆ ಹೇಳಿ ಸಾನ್ಯಾ ನಿಜಕ್ಕೂ ಅವರಿಗೆ ಸಮಸ್ಯೆ ಇದೆಯಾ ಅಂತ ಕೇಳಿದ್ದಾಳೆ. ಆದರೆ ಡಾಕ್ಟರ್ ಅದನ್ನೆಲ್ಲ ಗಮನಿಸಿ ಅವರಿಗೆ ಜ್ಞಾಪಕ ಶಕ್ತಿ ಬಂದು ಹೋಗ್ತಾ ಇರುವ ಹಾಗೆ ಕಾಣ್ತಿದೆ. ನೀವು ಅವರನ್ನು ಟೆಸ್ಟ್ ಮಾಡಿದ ಹಾಗೆ ಅವರೂ ನಿಮ್ಮನ್ನು ಟೆಸ್ಟ್ ಮಾಡಲು ಆಡ್ತಿರುವ ನಾಟಕವೂ ಆಗಿರಬಹುದು ಅನ್ನೋ ಮಾತನ್ನು ಹೇಳಿದ್ದಾರೆ. ಇದರಿಂದ ಸಾನ್ಯಾಗೆ ಶಾಕ್ ಆಗಿದೆ. ಆದರೆ ಟೆಸ್ಟ್ ರಿಪೋರ್ಟ್ ಬಂದ ಮೇಲೆ ಸತ್ಯಾಂಶ ಹೊರಬೀಳಲಿದೆ. ಇನ್ನೊಂದು ಕಡೆ ಸಾನ್ಯಾಗೆ ಡಿಪ್ರೆಶನ್ ಇದೆ ಅಂತ ಗೊತ್ತಾದ ಮೇಲೆ ಅವಳನ್ನು ಆದಿ ಹೆಚ್ಚು ಕಾಳಜಿ ಮಾಡ್ತಿದ್ದಾನೆ. ಆದರೆ ಇದೇ ಕಾಳಜಿ ಸಾನ್ಯಾ ಆಡಿರೋ ನಾಟಕ ಹೊರ ಬೀಳೋ ಹಾಗೆ ಮಾಡಿದೆ. ಆತ ಸಾನ್ಯಾಗೆ ಸರ್ಪ್ರೈಸ್ ನೀಡೋ ನೆವದಲ್ಲಿ ಆಸ್ಪತ್ರೆಗೆ ಹೋಗಿ ಸಾನ್ಯಾ ರಿಪೋರ್ಟ್ ಕೇಳಿದ್ದಾನೆ. ಆದರೆ ಅಲ್ಲಿ ಸಾನ್ಯಾ ರಿಪೋರ್ಟ್ ಬದಲಿಗೆ ರತ್ನಮಾಲಾ ರಿಪೋರ್ಟ್ ಇದೆ. ಹೆಂಡ್ತಿ ಮತ್ತೇನೋ ಮಸಲತ್ತು ಮಾಡ್ತಿದ್ದಾಳೆ ಅನ್ನೋ ಅನುಮಾನದಲ್ಲೇ ಆತ ರಿಪೋರ್ಟ್ ತಗೊಂಡು ಬಂದು ಸಾನ್ಯಾ ಮುಂದೆ ಹಿಡಿದಿದ್ದಾನೆ.

ಇದನ್ನೂ ಓದಿ: Dhruva Sarja ಪತ್ನಿ ಪ್ರೇರಣಾ ಅದ್ಧೂರಿ ಸೀಮಂತ ಶಾಸ್ತ್ರ; ಫೋಟೋ ವೈರಲ್

ಸಾನ್ಯಾ ತನ್ನ ರಿಪೋರ್ಟ್ ಎಕ್ಸ್ ಚೇಂಜ್ ಆಗಿದೆ ಅಂತಲೇ ಆದಿ ಮುಂದೆ ನಾಟ್ಕ ಆಡ್ತಿದ್ದಾಳೆ. ಆಸ್ಪತ್ರೆಗೂ ಫೋನ್ ಮಾಡಿ ಬಾಯಿಗೆ ಬಂದ ಹಾಗೆ ಬೈದಿದ್ದಾಳೆ. ಇನ್ನೊಂದೆಡೆ ಅಮ್ಮನ ಮರೆವಿನ ಸಮಸ್ಯೆ ಮತ್ತೊಮ್ಮೆ ಪ್ರೂವ್ ಆಗ್ತಿದೆ. ಭುವಿ ಹತ್ರ ಮಾತಾಡ್ತಾ ತನ್ನೆಲ್ಲ ಕೆಲಸವನ್ನು ಅವಳಿಗೆ ಕಲಿಸಿ ಕೊಡುವ ನೆವದಲ್ಲೇ ಆಕೆಗೆ ಒಂದು ಫೈಲ್ ತರಲು ಅಮ್ಮಮ್ಮ ಹೇಳಿದ್ದಾರೆ. ಅದನ್ನು ಅಮ್ಮಮ್ಮ ನೋಡುತ್ತಿರುವಾಗಲೇ ಹರ್ಷನ ಫೋನ್ ಬಂದಿದೆ. ತನ್ನ ಅಂಗಿ ಬಟನ್ ಕಿತ್ತೋಗಿರುವ ಕಾರಣ ಹೇಳಿ ಆತ ಭುವಿಯನ್ನು ಕರೆಸಿಕೊಂಡಿದ್ದಾನೆ. ಆ ನೆವದಲ್ಲಿ ಅವರಿಬ್ಬರೂ ಅಮ್ಮಮ್ಮನ ಸಮಸ್ಯೆ ಬಗ್ಗೆ ಮಾತಾಡಿದ್ದಾರೆ. ಇದೇ ಹೊತ್ತಿಗೆ ಅಮ್ಮಮ್ಮ ಫೋನ್ ಮಾಡಿ ಭುವಿ ಹತ್ರ ಫೈಲ್ ಬಗ್ಗೆ ಕೇಳಿದ್ದಾರೆ. ಭುವಿ ಅವರಿಗೆ ಫೈಲ್ ತಂದುಕೊಟ್ಟಿರುವುದೂ ಅವರಿಗೆ ಮರೆತು ಹೋಗಿದೆ. ಆದರೆ ಹರ್ಷ ಅವರಿಂದಲೇ ಫೈಲ್ ಹುಡುಕಿಸಿದ್ದಾನೆ.

ಇದನ್ನೂ ಓದಿ: BBK9; ಬಿಗ್‌ಬಾಸ್‌ ಕನ್ನಡ 9 ನೇ ಸೀಸನ್ ಶೀಘ್ರವೇ ಆರಂಭ, ವೀಕ್ಷಕರಿಗೆ ಕಿಕ್‌ ಕೊಟ್ಟ ಮೊದಲ ಪ್ರೋಮೋ

ಅಮ್ಮಮ್ಮಂಗೆ ನಿಜಕ್ಕೂ ಮರೆವಿನ ಸಮಸ್ಯೆ ಇದೆ ಅನ್ನೋದು ರಿವೀಲ್ ಆಗ್ತಿದೆ. ಜೊತೆಗೆ ಆ ರಿಪೋರ್ಟ್ ನಲ್ಲಿ ಏನಿದೆ ಅನ್ನೋ ಕುತೂಹಲವೂ ಹೆಚ್ಚಿದೆ. ಭುವಿಯಾಗಿ ರಂಜನಿ ರಾಘವನ್, ಹರ್ಷನಾಗಿ ಕಿರಣ್ ರಾಜ್ ನಟಿಸುತ್ತಿದ್ದಾರೆ. ಚಿತ್ಕಳಾ ಬಿರಾದಾರ್ ಅಮ್ಮಮ್ಮನ ಪಾತ್ರಕ್ಕೆ ಜೀವತುಂಬುತ್ತಿದ್ದಾರೆ. ಸಾನ್ಯಾ ಪಾತ್ರದಲ್ಲಿ ಆರೋಹಿ ನೈನಾ ಇದ್ದಾರೆ.

Follow Us:
Download App:
  • android
  • ios