ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ಡಾಗ್ ಸತೀಶ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಗಿಲ್ಲಿಯಷ್ಟು ಕೊಳಕು ವ್ಯಕ್ತಿಯನ್ನು ನೋಡಿಲ್ಲ ಎಂದಿರುವ ಸತೀಶ್, ಗಿಲ್ಲಿ ಬೈಗುಳನ್ನು ಜನರಿಗೆ ತೋರಿಸಲ್ಲ ಎಂದು ಹೇಳಿದ್ದಾರೆ.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗಿಲ್ಲಿ ನಟ ಮಾಡುವಂತಹ ಕಾಮಿಡಿ ಮಾತುಗಳನ್ನು ಮಾತ್ರ ತೋರಿಸುತ್ತಾರೆ. ಇದರಿಂದ ಜನ ಏನು ಅನ್ಕೊಂಡಿದ್ದಾರೆ ಅಂದರೆ ಕಾಮಿಡಿ ಕಾಮಿಡಿ ಅಂತಾ ತಿಳ್ಕೊಂಡಿದ್ದಾರೆ. ಆದರೆ, ಗಿಲ್ಲಿಯಷ್ಟು ಗಲೀಜು, ಕೊಳಕ, ಕಳ್ಳ ನನ್ನ ಜೀವನದಲ್ಲೇ ನೋಡಿಲ್ಲ ಎಂದು ಡಾಗ್ ಸತೀಶ್ ಅಲಿಯಾಸ್ ಸತೀಶ್ ಕ್ಯಾಡಬೊಮ್ಸ್ (satish cadaboms) ನಾಲಿಗೆ ಹರಿಬಿಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಚೆನ್ನಾಗಿ ಆಟ ಆಡ್ತಿದ್ದಾರೆ. ಆದರೆ, ಗೆಲ್ಲುವ ಸ್ಪರ್ಧಿ ನೋಡಿದಾಗ ಗಿಲ್ಲಿ..., ಜನ ಮರಳೋ ಜಾತ್ರೆ ಮರಳೋ ಎನ್ನುವಂತೆ ಜನರು ಅಷ್ಟು ಕೆಟ್ಟವನಿದ್ದರೂ ಗಿಲ್ಲಿಗೆ ಓಟು ಹಾಕ್ತಾರೆ. ಜನರ ಓಟಿನಿಂದ ಗಿಲ್ಲಿನೇ ಗೆಲ್ಲೋದು. ಆದರೆ ಗಿಲ್ಲಿ ಗೆಲ್ಲೋದು ನಂಗೆ ಇಷ್ಟ ಇಲ್ಲ. ನನ್ನ ಪ್ರಕಾರ ಅಶ್ವಿನಿಗೌಡ, ಸ್ಪಂದನಾ ಅಥವಾ ರಕ್ಷಿತಾ ಇಂತಹ ಯಾರಾದರೂ ಒಳ್ಳೆಯವರು ಗೆಲ್ಲಬೇಕು. ಗಿಲ್ಲಿಯಷ್ಟು ಕೆಟ್ಟ ಬುದ್ಧಿ ಇರುವಷ್ಟು ವ್ಯಕ್ತಿಯನ್ನು ನಾನು ನೋಡಿಲ್ಲ. ಆದ್ರೆ, ಜನ ಬಂದು ಕಾಮಿಡಿ, ಕಾಮಿಡಿ ಅಂತಾ ಅವನಿಗೆ ಸಪೋರ್ಟ್ ಮಾಡ್ತಾರೆ.

ಗಿಲ್ಲಿ ನಟ ನಿನ್ನಕ್ಕನ್ ಎಂದಿದ್ದನ್ನ ಜನರಿಗೆ ತೋರಿಸಿಲ್ಲ:

ಗಿಲ್ಲಿ ತುಂಬಾ ಕೆಟ್ಟದಾಗಿ ಮಾಡಿದ್ದಾನೆ. ಕಾಕ್ರೋಚ್ ಸುಧಿ ಅವರು ಬಿಗ್ ಬಾಸ್ ಮನೆಯಲ್ಲಿ ಸೆಡೆ ಅಂದಿದ್ದಕ್ಕೆ ಅದನ್ನೊಂದು ಮಹಾ ಅಪರಾಧ ಎನ್ನುವಂತೆ ಸೃಷ್ಟಿ ಮಾಡಿದರು. ಅದೇ ಗಿಲ್ಲಿನಟ ಬಂದು ನಿನ್ನಕ್ಕನ್ ಅಂತಾ ಜಾನ್ವಿಗೆ ಬೈತಾರೆ. ಅಂದರೆ ಅದು ಕಾಕ್ರೋಚ್ ಸುಧಿ ಅವರ ಸೆಡೆ ಎನ್ನುವ ಮಾತಿಗಿಂತಲೂ ಕೆಟ್ಟ ಮಾತು. ಅದನ್ನು ಬಿಗ್ ಬಾಸ್ ಕಾರ್ಯಕ್ರಮದವರು ರಿಲೇ ಮಾಡಿಲ್ಲ. ಅದನ್ನ ಹೈಲೈಟ್ ಕೂಡ ಮಾಡಲಿಲ್ಲ. ಆದ್ರೆ ಅಷ್ಟು ಕಚಡವಾಗಿ ಎಲ್ಲಾರಿಗೂ ಹಲ್ಕಾ ಮಾತು ಬೈದಿದ್ದಾನೆ. ತುಂಬಾ ಕೆಟ್ಟದಾಗಿ ಬಿಹೇವಿಯರ್ ತೋರಿಸಿದ್ದಾನೆ. ಅದನ್ನೆಲ್ಲವನ್ನೂ ಬಿಗ್ ಬಾಸ್ ಸಿಬ್ಬಂದಿ ಜನರಿಗೆ ತೋರಿಸಿಲ್ಲ.

ಗಿಲ್ಲಿಯಂಥಾ ಕೊಳಕನ್ನ ಜೀವನದಲ್ಲೇ ನೋಡಿಲ್ಲ:

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗಿಲ್ಲಿ ನಟ ಮಾಡುವಂತಹ ಕಾಮಿಡಿ ಮಾತುಗಳನ್ನು ಮಾತ್ರ ತೋರಿಸುತ್ತಾರೆ. ಇದರಿಂದ ಜನ ಏನು ಅನ್ಕೊಂಡಿದ್ದಾರೆ ಅಂದರೆ ಕಾಮಿಡಿ ಕಾಮಿಡಿ ಅಂತಾ ತಿಳ್ಕೊಂಡಿದ್ದಾರೆ. ಆದರೆ, ಗಿಲ್ಲಿಯಷ್ಟು ಗಲೀಜು, ಕೊಳಕ, ಕಳ್ಳ ನನ್ನ ಜೀವನದಲ್ಲೇ ನೋಡಿಲ್ಲ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಏಂಜಲಿನಾ ಜಸ್ಟಿನ್ ಎನ್ನುವವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದು, ನಿಮ್ಮ ಅಭಿಪ್ರಾಯದಲ್ಲಿ ಬಿಗ್ ಬಾಸ್ ಫೈನಲ್ ಅನ್ನು ಯಾರು ಗೆಲ್ಲುತ್ತಾರೆ? ಇದಕ್ಕಾಗಿ ನಿಮ್ಮ ಅಭಿಪ್ರಾಯವೇನು? ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ, ನೆಟ್ಟಿಗರು ಈ ವಿಡಿಯೋ ವೀಕ್ಷಣೆ ಮಾಡಿ ಡಾಗ್ ಸತೀಶ್ ಅವರಿಗೆ ತುಂಬಾ ಕೆಟ್ಟದಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಎದ್ದೋಗಲೇ ಪುಂಗಿದ್ದು ಸಾಕು

ಡಾಗ್ ಸತೀಶ್ ಅವರ ಮಾತಿಗೆ ಒಬ್ಬ ನೆಟ್ಟಿಗರು, 'ಇನ್ನೊಬ್ಬರ ಬಗ್ಗೆ ಮಾತಾಡೋ ಮೊದಲು ನಿಂದು ನೋಡ್ಕೋ ಮೊದಲು ಹಿಂದೆ ಸೋರುತ ಇದೆ' ಎಂದು ಹೇಳಿದ್ದಾರೆ. ಮತ್ತೊಬ್ಬರು ನೀನು ಮೊದಲು ಎದ್ದೋಗಲೇ.., ಪುಂಗಿದ್ದು ಸಾಕು' ಎಂದು ಕಾಮೆಂಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಗಿಲ್ಲಿ ನಟ ಅವರ ಸಾಮಾಜಿಕ ಜಾಲತಾಣವಾದ ಇನ್ಸ್‌ಸ್ಟಾಗ್ರಾಮ್ ಫಾಲೋವರ್‌ಗಳ ಸಂಖ್ಯೆಯಲ್ಲಿ ತೀರಾ ಹೆಚ್ಚಾಗಿದೆ.

View post on Instagram