- Home
- Entertainment
- TV Talk
- BBK 12: ಟೈಮ್ ಬಂದೇಬಿಡ್ತು, ಅಂದು ಹೊಟ್ಟೆ ಉರಿಸಿದ್ದ ರಘು; ಚಕ್ರಬಡ್ಡಿ ಸಮೇತ ವಾಪಸ್ ಕೊಟ್ಟ ಗಿಲ್ಲಿ ನಟ
BBK 12: ಟೈಮ್ ಬಂದೇಬಿಡ್ತು, ಅಂದು ಹೊಟ್ಟೆ ಉರಿಸಿದ್ದ ರಘು; ಚಕ್ರಬಡ್ಡಿ ಸಮೇತ ವಾಪಸ್ ಕೊಟ್ಟ ಗಿಲ್ಲಿ ನಟ
Bigg Boss Kannada Season 12: ಬಿಗ್ ಬಾಸ್ ಕನ್ನಡ 12 ಶೋನಲ್ಲಿ ಈ ಬಾರಿ ಗಿಲ್ಲಿ ನಟ ಅವರು ಅಡುಗೆ ಮನೆ ಸೇರಿಕೊಂಡಿದ್ದಾರೆ. ಗಿಲ್ಲಿ ನಟ ಅಡುಗೆ ಮಾಡಿದರೆ ಮಾತ್ರ ಅವರಿಗೆ ಇಡೀ ಸೀಸನ್ ಪೂರ್ತಿ ಲಕ್ಷುರಿ ಐಟಮ್ ಸಿಗುತ್ತಿತ್ತು. ಈಗ ಅವರು ಅಶ್ವಿನಿ ಜೊತೆ ಸೇರಿ ಅಡುಗೆ ಮಾಡಲು ಒಪ್ಪಿಗೆ ನೀಡಿದ್ದರು.

ಲಕ್ಷುರಿ ಐಟಮ್ ಮಿಸ್ ಆಗುತ್ತಿತ್ತು
ಪ್ರತಿ ಬಾರಿ ನಿಯಮಗಳ ಉಲ್ಲಂಘನೆ ಮಾಡೋದಕ್ಕೆ ಲಕ್ಷುರಿ ಐಟಮ್ ಮಿಸ್ ಆಗುತ್ತಿತ್ತು. ಲೆಕ್ಕ ತಪ್ಪಾಗುತ್ತಿತ್ತು ಅಥವಾ ಲೇಟ್ ಆಗಿ ಲೆಕ್ಕಾಚಾರ ಮಾಡಲಾಗುತ್ತಿತ್ತು. ಇಬ್ಬರೂ ಮೂವರೂ ಕೂಗಾಡಿ ಕಿರುಚಿ, ಬೋರ್ಡ್ ಮೇಲೆ ಬರೆಯುವವರಿಗೆ ಗೊಂದಲ ಆಗಿ ಲೆಕ್ಕವೂ ಉಲ್ಟಾ ಹೊಡೆಯುತ್ತಿತ್ತು.
ಟಾಸ್ಕ್ ಮಿಸ್ ಆಗಿತ್ತು ಎಂಬ ಬೇಸರ
ಕಳೆದ ಬಾರಿ ಲಕ್ಷುರಿ ಟಾಸ್ಕ್ ಮಿಸ್ ಆಗಿತ್ತು ಎಂಬ ಬೇಸರ ಇತ್ತು. ಚಪಾತಿ ಸಿಕ್ಕಿಲ್ಲ, ಐಸ್‌ಕ್ರೀಂ ಸಿಕ್ಕಿಲ್ಲ, ಪನೀರ್ ಇಲ್ಲ ಎಂದು ಕೆಲವರು ಬೇಸರ ಮಾಡಿಕೊಂಡಿದ್ದೂ ಇದೆ. ಹೀಗಿರುವಾಗ ಬಿಗ್ ಬಾಸ್ ಅಲ್ಲ ವಿಲನ್ ಈಗ ಗಿಲ್ಲಿ ನಟ, ಅಶ್ವಿನಿ ಗೌಡ ಮುಂದೆ ಒಂದು ಬಂಪರ್ ಆಫರ್ ಇಟ್ಟಿದ್ದರು.
ಅಶ್ವಿನಿ ಗೌಡ ಅಡುಗೆ ಮಾಡಿದರೆ ಲಕ್ಷುರಿ
ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಸೇರಿಕೊಂಡು ಅಡುಗೆ ಮಾಡಿದರೆ ಮಾತ್ರ ಲಕ್ಷುರಿ ಸಿಗುತ್ತಿತ್ತು. ಇದಕ್ಕೆ ಇವರು ಒಪ್ಪಿದ್ದರಿಂದ ಮಟನ್, ಚಿಕನ್, ಬ್ರೆಡ್, ಕಾಫಿ ಪುಡಿ, ಪನೀರ್ ಎಲ್ಲವೂ ಸಿಕ್ಕಿದೆ. ಈಗ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಅವರು ಸೇರಿಕೊಂಡು, ಅಡುಗೆ ಮಾಡಲು ರೆಡಿಯಾಗಿದ್ದಾರೆ.
ಲೆಗ್‌ಪೀಸ್ ಬೇಕು ಎಂದು ರಜತ್, ರಘು ಪಟ್ಟು
ಈಗ ಹೊಸ ಪ್ರೋಮೋವೊಂದು ರಿಲೀಸ್ ಆಗಿದೆ. ಗಿಲ್ಲಿ ನಟ, ರಜತ್, ಅಶ್ವಿನಿ ಗೌಡ ಟೀಂ ಆಗಿ ಅಡುಗೆ ಮಾಡುತ್ತಿದ್ದಾರೆ. ಲೆಗ್‌ಪೀಸ್ ಬೇಕು ಎಂದು ರಜತ್, ರಘು ಅವರು ಹೇಳಿದ್ದಾರೆ. ಆದರೆ ಗಿಲ್ಲಿ ಮಾತ್ರ ಕೊಡಲು ರೆಡಿಯಿಲ್ಲ. ಇದಕ್ಕೆ ಕಾರಣ ಏನು?
ಹಳೆ ದ್ವೇಷ ಇದೆ
ರಘು ಅವರು ಲೆಗ್ ಪೀಸ್ ಕೊಡು, ಟೀಂಗೋಸ್ಕರ ಆಡಿದ್ದೀವಿ ಎಂದಿದ್ದಾರೆ. ಆಗ ಗಿಲ್ಲಿ ನಟ ಅವರು “ಲೆಗ್ ಪೀಸ್ ಎತ್ತಿಕೊಂಡಿರ್ತೀವಿ, ಆಮೇಲೆ ನಿಮಗೆ ಕೊಡ್ತೀವಿ. ಆಲೂಗಡ್ಡೆ ಗ್ರೇವಿ ಹಾಕು ಎಂದಾಗ ಯಾವ ರೀತಿ ಆಡಿದೆ? ರಘು ಅಣ್ಣನ ಮೇಲೆ ಹಳೆ ದ್ವೇಷ ಇದೆ, ಎಷ್ಟು ಹೊಟ್ಟೆ ಉರಿಸಿದ್ದಾನೆ” ಎಂದಿದ್ದಾರೆ. ಆದರೆ ಕೊನೆಯಲ್ಲಿ ಗಿಲ್ಲಿ ಕೊಡುವ ಸಾಧ್ಯತೆ ಇದೆ. ಅಂದು ಗಿಲ್ಲಿ ಚಪಾತಿ ಕೊಡು ಎಂದು ಬೇಡಿದಾಗ, ರಘು ಕೊಟ್ಟಿರಲಿಲ್ಲ. ಈಗ ಗಿಲ್ಲಿಗೆ ಟೈಮ್ ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

