- Home
- Entertainment
- TV Talk
- Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್ ಮಾಡಿದ ಅಭಿಷೇಕ್ ಶ್ರೀಕಾಂತ್
Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್ ಮಾಡಿದ ಅಭಿಷೇಕ್ ಶ್ರೀಕಾಂತ್
ಮಾಜಿ ಸ್ಪರ್ಧಿ ಅಭಿಷೇಕ್ ಶ್ರೀಕಾಂತ್ ಬಿಗ್ ಬಾಸ್ ಮನೆಯೊಳಗಿನ ಹಲವು ಗುಟ್ಟುಗಳನ್ನು ಬಹಿರಂಗಪಡಿಸಿದ್ದಾರೆ. ಸಮಯ ತಿಳಿಯದಂತೆ ಇರುವುದು, 24/7 ಲೈಟಿಂಗ್, ವಿಪರೀತ ಎಸಿ, ಸೀಮಿತ ಆಹಾರ ಮತ್ತು ಕ್ಯಾಮೆರಾದ ಮುಂದೆಯೇ ಸಮಸ್ಯೆ ಹೇಳಿಕೊಳ್ಳುವಂತಹ ನಿಯಮಗಳ ಬಗ್ಗೆ ಅವರು ವಿವರಿಸಿದ್ದಾರೆ.

ಸಿಕ್ಕಾಪಟ್ಟೆ ಪ್ರಶ್ನೆ
ಬಿಗ್ಬಾಸ್ (Bigg Boss) ಎಂದರೆ ಅದರ ಕೋಟ್ಯಂತರ ವೀಕ್ಷಕರಿಗೆ ಸಿಕ್ಕಾಪಟ್ಟೆ ಪ್ರಶ್ನೆಗಳು ಇರುವುದು ಸಹಜ. ಬಿಗ್ಬಾಸ್ ಎನ್ನುವುದು ಸ್ಕ್ರಿಪ್ಟೆಡ್, ಅಲ್ಲಿ ಏನು ಮಾಡಬೇಕು, ಏನು ಮಾತನಾಡಬೇಕು, ಹೇಗೆ ಜಗಳ ಮಾಡಬೇಕು ಎಲ್ಲವನ್ನೂ ಮೊದಲೇ ಹೇಳಿರುತ್ತಾರೆ ಎನ್ನುವ ಸಾಮಾನ್ಯ ಮಾತುಗಳು ಇದ್ದರೂ, ಅದನ್ನು ಕೆಲವು ಸ್ಪರ್ಧಿಗಳು ಅಲ್ಲಗಳೆದಿದ್ದಾರೆ. ಇದರ ಹೊರತಾಗಿಯೂ ಬಿಗ್ಬಾಸ್ ಮನೆಯ ಬಗ್ಗೆ ಹಲವಾರು ಪ್ರಶ್ನೆಗಳು ಇದ್ದೇ ಇರುತ್ತವೆ.
ಗುಟ್ಟು ಹೇಳಿದ ಅಭಿಷೇಕ್
ಇದೀಗ ಬಿಗ್ಬಾಸ್ ಮನೆಯ ಬಗ್ಗೆ ಇದುವರೆಗಿನ ಸ್ಪರ್ಧಿಗಳು ಹೆಚ್ಚಾಗಿ ಯಾರೂ ಹೇಳದ ಗುಟ್ಟುಗಳನ್ನು ಅಭಿಷೇಕ್ ಶ್ರೀಕಾಂತ್ (Bigg Boss Abhishek Shrikanth) ಹೇಳಿದ್ದಾರೆ. ಅವರು ಹೇಳಿರುವುದು ಬಿಗ್ಬಾಸ್ನಲ್ಲಿ ಸ್ಪರ್ಧಿಗಳು ಹೇಗೆ ಇರುತ್ತಾರೆ ಎನ್ನುವುದು.
ಮುಖ ನೋಡುವಂತಿಲ್ಲ
ಅಲ್ಲಿರುವ ಸ್ಪರ್ಧಿಗಳನ್ನು ಬಿಟ್ಟರೆ ಯಾರ ಮುಖವನ್ನೂ ನೋಡುವ ಅವಕಾಶ ಇರುವುದಿಲ್ಲ. ಚಿತ್ರದ ಪ್ರೊಮೋಷನ್ ಅಥವಾ ಇನ್ನಾರಾದರೂ ಬಂದರೆ ನಮಗೆ ಸಿಕ್ಕಾಪಟ್ಟೆ ಖುಷಿಯಾಗುತ್ತದೆ, ದೇವರು ಬಂದ ಹಾಗೆ ಆಗುತ್ತದೆ ಎಂದಿದ್ದಾರೆ.
ಟೈಮ್ ಕಾಣಿಸಲ್ಲ
ಬಿಗ್ಬಾಸ್ನಲ್ಲಿ ನಮಗೆ ಟೈಮ್ ನೋಡುವ ಅವಕಾಶವೂ ಇರುವುದಿಲ್ಲ. ಅದಕ್ಕಾಗಿ ರಾತ್ರಿ- ಹಗಲು ಏನೂ ಗೊತ್ತಾಗುವುದಿಲ್ಲ. ಟೈಮ್ ಎಷ್ಟಾಯಿತು ಎಂದು ನೆರಳು ನೋಡಿ ಅಂದಾಜು ಮಾಡಬೇಕು ಅಷ್ಟೇ ಎಂದಿದ್ದಾರೆ.
ಕರೆಂಟ್ ಆನ್
24 ಗಂಟೆಯೂ ಕರೆಂಟ್ ಆನ್ ಇರುತ್ತದೆ. ಆದ್ದರಿಂದ ಯಾವಾಗ ಏನು ಆಗತ್ತೆ, ಸಮಯ ಎಷ್ಟು ಏನೂ ತಿಳಿಯುವುದಿಲ್ಲ ಎಂದು ಅಭಿಷೇಕ್ ಹೇಳಿದ್ದಾರೆ. ಲಿವಿಂಗ್ ರೂಮ್ಗೆ ಕರೆದಾಗ ಮೊದಲ 20 ನಿಮಿಷ ಮೌನವಾಗಿ ಇರಬೇಕು. ಆಗ ಮಾತನಾಡುವಂತಿಲ್ಲ. ಹೀಗೆ ತುಂಬಾ ರೂಲ್ಸ್ ಇರುತ್ತವೆ ಎಂದಿದ್ದಾರೆ.
ವಿಪರೀತ ಎಸಿ
ಯಾವುದಾದರೂ ಟಾಸ್ಕ್ ಕೊಟ್ಟಾಗ ಅದನ್ನು ಸೆಟಪ್ ಮಾಡು ಮೂರ್ನಾಲ್ಕು ಗಂಟೆ ಇರುತ್ತದೆ. ವಿಪರೀತ ಎಸಿ ರೂಮ್ ಬೇರೆ. ಸಿಕ್ಕಾಪಟ್ಟೆ ಕ್ಯಾಮೆರಾ ಇರುವ ಕಾರಣ ಹೀಟ್ ಆಗಬಾರದು ಎಂದು ಎಸಿ ಇಟ್ಟಿರುತ್ತಾರೆ. ಅಂಥ ವಾತಾವರಣದಲ್ಲಿ ಸ್ಪರ್ಧಿಗಳು ಇರಬೇಕು ಎಂದಿದ್ದಾರೆ.
ಊಟ ಸಿಗಲ್ಲ- ಬಟ್ಟೆ ಹೇಗೆ
ನಮಗೆ ಬೇಕಾದಷ್ಟು ಊಟ ಎಲ್ಲಾ ಸಿಗಲ್ಲ. ವಾರಕ್ಕೆ ಆಗುವಷ್ಟು ಗ್ರಾಸರಿ ಕೊಟ್ಟಿರುತ್ತಾರೆ. ಅದರಲ್ಲಿಯೂ ಅಡ್ಜಸ್ಟ್ ಮಾಡಬೇಕು. ನಮ್ಮ ಬಟ್ಟೆಗಳನ್ನು ತೆಗೆದುಕೊಂಡು ಹೋಗಲು ನಮ್ಮ ಹೆಸರಿಗೆ ಬಾಸ್ಕೆಟ್ ಪ್ರತಿ ಶುಕ್ರವಾರ ಬರುತ್ತದೆ. ಜನರು ಬರಲ್ಲ. ನಂತರ ಸೋಮವಾರ ಬಟ್ಟೆ ವಾಪಸ್ ಬರುತ್ತದೆ ಎಂದಿದ್ದಾರೆ.
ಕ್ಯಾಮೆರಾ ಮುಂದೆ ಸಮಸ್ಯೆ
ನಮಗೆ ಏನೇ ಸಮಸ್ಯೆ ಆದರೂ ಕ್ಯಾಮೆರಾ ಮುಂದೆ ಹೇಳಬೇಕು. ಏನಾದರೂ ತುರ್ತು ಇದ್ದರೆ ಅಲ್ಲಿಯೇ ಹೇಳಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

