ಬಿಗ್‌ಬಾಸ್ ಕೊಟ್ಟ ಸೀಕ್ರೆಟ್ ಟಾಸ್ಕ್‌ನಲ್ಲಿ ಗಿಲ್ಲಿ ಸಖತ್ ಯಶಸ್ವಿ ಆಗಿದ್ದಾರೆ. ಆದರೆ, ಟಾಸ್ಕ್ ಗೆಲ್ಲುವ ಭರದಲ್ಲಿ ಸ್ನೇಹದಲ್ಲಿ ಸೋತ ಹಾಗೆ ಕಂಡಿದೆ.
ಫ್ರೀ ಪ್ರಾಡಕ್ಟ್, ವೇಸ್ಟ್ ಬಾಡಿ ಅಂತೆಲ್ಲಾ ಕಾವ್ಯಾಗೆ ಹೀನಾಯವಾಗಿ ಗಿಲ್ಲಿ ನಿಂದನೆ ಮಾಡಿದ್ದಾರೆ. ಆದರೆ, ಇದೆಲ್ಲವೂ ಸೀಕ್ರೆಟ್ ಟಾಸ್ಕ್‌ನ ಭಾಗವಾಗಿತ್ತು.
ಚುಚ್ಚುಮಾತುಗಳನ್ನು ಆಡುವಾಗ ಗಿಲ್ಲಿಯ ಮನಸ್ಸಲ್ಲಿ ನೋವು ಕಾಣುತ್ತಿದ್ದರೂ ಎಲ್ಲಿಯೂ ತೋರಿಸಿಕೊಳ್ಳಲು ಹೋಗಲಿಲ್ಲ.
ಜೊತೆಯಲ್ಲಿ ಇದ್ದವರನ್ನು ಹಾಳು ಬಾವಿಗೆ ತಳ್ಳೋದಲ್ಲ. ಬೆನ್ನಿಗೆ ಚೂರಿ ಹಾಕಿದ್ದೀರಿ. ನಾನು ಜಂಟಿಯಾಗಿ ಬರಬಾರದಿತ್ತು ಎಂದು ಗಿಲ್ಲಿ ಹೇಳಿದ್ದಾರೆ.
ಸಿಂಗಲ್ ಆಗಿ ಇರುತ್ತೇನೆ ಎನ್ನಬೇಕಿತ್ತು. ಯಾಕಾದರೂ ಸಹವಾಸ ಮಾಡಿದೆನೋ ಅನಿಸುತ್ತಿದೆ. ನೋಡೋಕೆ ಕಿರಿಕಿರಿ ಆಗುತ್ತಿದೆ ಎಂದು ಕಾವ್ಯಾಗೆ ಹೇಳಿದ್ದಾರೆ.
ಆ ಮುಖ ನೋಡಲು ಇಷ್ಟ ಇಲ್ಲ ನನಗೆ. ಗೊತ್ತಿರುವವರೇ ಹೀಗೆಲ್ಲ ಮಾಡೋದು ಎಂದು ಗಿಲ್ಲಿ ಕಾವ್ಯಾ ಕುರಿತಾಗಿ ಮಾತನಾಡಿದ್ದಾರೆ.
ಫ್ರೀ ಪ್ರಾಡಕ್ಟ್.. 50 ಸಲ ಕನ್ನಡಿ ನೋಡಿಕೊಳ್ಳುತ್ತಾಳೆ ಸುಂದರಿ ಥರ. ಯಾಕೆ ನನ್ನ ನಾಮಿನೇಟ್ ಮಾಡಿದೆ? ಇದನ್ನೇ ನೀನು ಕಲಿತಿರುವುದು ಎಂದು ಗಿಲ್ಲಿ ಹೇಳಿದ್ದಾರೆ.
ಸ್ಪಂದನಾ ಲಕ್ಕಿ ಅಲ್ಲ. ನೀನೇ ನಿಜವಾಗಿಯೂ ಲಕ್ಕಿ. ಸ್ಪಂದನಾಗಿಂತ ಮುಂಚೆ ನೀನೇ ಹೋಗುತ್ತೀಯ. ನೀನು ಏನೂ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಇಷ್ಟೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡಿದ್ದೀಯಾ ಅಂದರೆ ಮೊದಲೇ ಹೇಳಬೇಕಿತ್ತು. ಸೀರಿಯಸ್ ಆಗಿ ಮಾತನಾಡುತ್ತಾ ಇದ್ದೀಯಾ? ಎಂದು ಕಾವ್ಯಾ ಕೇಳಿದ್ದಾರೆ.
ನನ್ನ ಮೇಲೆ ಆಣೆ ಮಾಡಿ ಹೇಳು ಎಂದು ಗಿಲ್ಲಿಗೆ ಕಾವ್ಯಾ ಕೇಳಿದ್ದು, ಬಳಿಕ ಸ್ಪಂದನಾ ಬಳಿ ಇದೇ ವಿಚಾರವಾಗಿ ಕಣ್ಣೀರು ಹಾಕಿದ್ದಾರೆ.
ಗಿಲ್ಲಿಯ ಅದೊಂದು ವಿಡಿಯೋ ವೀಕೆಂಡ್‌ನಲ್ಲಿ ತೋರಿಸಿ, ಸುದೀಪ್‌ಗೆ ಅಭಿಮಾನಿಗಳ ಪಟ್ಟು!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ
ಗಂಡಸರನ್ನ ದ್ವೇಷಿಸುವ ಝಾನ್ಸಿಯಾಗಿ ಮನಗೆದ್ದ ನಟಿ Madhushree Byrappa Birthday
‘ಕರ್ಣ’ ತಂಡಕ್ಕೆ ಭರ್ಜರಿ ಬಾಡೂಟ ಮಾಡಿ ಬಡಿಸಿದ ನಿರ್ಮಾಪಕಿ ಶ್ರುತಿ ನಾಯ್ಡು