ಬಿಗ್ ಬಾಸ್ ಮನೆಯಲ್ಲಿ ಹಾವು-ಮುಂಗುಸಿಯಂತೆ ಸದಾ ಜಗಳವಾಡುತ್ತಿದ್ದ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ, ಫಿನಾಲೆಗೂ ಮುನ್ನ ತಮ್ಮೆಲ್ಲಾ ದ್ವೇಷ ಮರೆತಿದ್ದಾರೆ. ಗಿಲ್ಲಿ ಕ್ಷಮೆ ಕೇಳಿದರೆ, ಅಶ್ವಿನಿ ಅಪ್ಪಿಕೊಂಡು ಪಾಠ ಕಲಿತಿದ್ದಾಗಿ ಹೇಳುವ ಮೂಲಕ ತಮ್ಮ ವೈರತ್ವಕ್ಕೆ ಅಂತ್ಯ ಹಾಡಿದ್ದಾರೆ.

ಬಿಗ್​ ಬಾಸ್ ಮನೆಯಲ್ಲಿ ಇಷ್ಟು ದಿನ ಹಾವು-ಮುಂಗುಸಿಯಂತೆ ಇದ್ದವರು ಗಿಲ್ಲಿ ಅಂಡ್ ಅಶ್ವಿನಿ. ಇವರಿಬ್ಬರ ಜಗಳಗಳೇ ಈ ಸಾರಿಯ ಬಿಗ್​ಬಾಸ್​ನಲ್ಲಿ ಅತಿಹೆಚ್ಚು ಸುದ್ದಿಯಾಗಿತ್ತು. ಆದ್ರೆ ಫಿನಾಲೆಗೂ ಮುನ್ನ ಈ ಹಾವು ಮುಂಗುಸಿ ಒಂದಾಗಿವೆ. ಗಿಲ್ಲಿ-ಅಶ್ವಿನಿಯ ಕುಚಿಕು ಕುಚಿಕು ಕಹಾನಿ ಇಲ್ಲಿದೆ ನೋಡಿ.

ಒಂದಾದ ಬಿಗ್​ ಬಾಸ್ ಮನೆಯ ಹಾವು-ಮುಂಗುಸಿ..!

ಯೆಸ್ ಈ ಸಾರಿಯ ಬಿಗ್ ಬಾಸ್​​ ಮನೆಯಲ್ಲಿ ಹಾವು ಮುಂಗುಸಿ ಅಂತಾನೇ ಫೇಮಸ್ ಆಗಿದ್ದವರು ಗಿಲ್ಲಿ ನಟ ಅಂಡ್ ಅಶ್ವಿನಿ ಗೌಡ. ಸೀಸನ್ ಆರಂಭದಿಂದಲೂ ಈ ಇಬ್ಬರೂ ಸ್ಪರ್ಧಿಗಳ ನಡುವೆ ಜಟಾಪಟಿ ನಡೀತಾನೆ ಬಂದಿತ್ತು. ಅಶ್ವಿನಿ ಗೌಡ ಹುಟ್ಟಾ ಸಿರಿವಂತೆ. ಅವರಿಗೆ ಮೂಗಿನ ಮೇಲೆನೇ ಕೋಪ. ಎಲ್ಲರೂ ತನ್ನ ಮಾತು ಕೇಳಬೇಕು ಅನ್ನೋ ದರ್ಪ ದೌಲತ್ತು ಅವರ ಮಾತಲ್ಲಿ ಇಣುಕ್ತಾ ಇತ್ತು. ಆದ್ರೆ ಗಿಲ್ಲಿ ನಟ ಇದಕ್ಕೆ ತದ್ವಿರುದ್ದ. ಒಂದು ಬನಿಯನ್ ಹಾಕ್ಕೊಂಡು , ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಎಲ್ಲರನ್ನೂ ತಮಾಷೆ ಮಾಡಿಕೊಂಡಿದ್ದ ಹಳ್ಳಿ ಹೈದ ಗಿಲ್ಲಿ. ಇಂಥಾ ಗಿಲ್ಲಿ ಮತ್ತು ಅಶ್ವಿನಿ ನಡುವೆ ಅದೆಷ್ಟು ಬಾರಿ ಜಗಳ ಆಗಿದೆಯೋ ಲೆಕ್ಕ ಇಟ್ಟವರಿಲ್ಲ. ಒಬ್ಬರಿಗೊಬ್ಬರು ವೈಯಕ್ತಿಕ ಮಟ್ಟಕ್ಕೆ ಇಳಿದು ಜಗಳ ಆಡಿದ್ದೂ ಉಂಟು. ಅಂತೆಯೇ ಇವರನ್ನ ದೊಡ್ಮನೆ ಹಾವು ಮುಂಗುಸಿ ಅಂತ ಕರೀತಾ ಇದ್ರು.

ಫಿನಾಲೆಗೂ ಮುನ್ನ ಗಿಲ್ಲಿ-ಅಶ್ವಿನಿ ಕದನ ವಿರಾಮ!

ಹೌದು ಫಿನಾಲೆ ಇನ್ನೊಂದೇ ದಿನ ಬಾಕಿ ಇರೋವಾಗ ಗಿಲ್ಲಿ-ಅಶ್ವಿನಿ ಒಂದಾಗಿದ್ದಾರೆ. ನೀವು ವಯಸ್ಸಲ್ಲಿ ದೊಡ್ಡವರು. ಕೆಲವೊಮ್ಮೆ ನೋವು ಮಾಡಿದ್ದೀನಿ ಅಂತ ಗಿಲ್ಲಿ ಕ್ಷಮೆ ಕೇಳಿದ್ದಾನೆ. ಅತ್ತ ಅಶ್ವಿನಿ ಕೂಡ ನಿನ್ನಿಂದ ಪಾಠ ಕಲಿತಿದ್ದೀನಿ ಅಂತ ಗಿಲ್ಲಿಯನ್ನ ಬಿಗಿದಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ಆಟ ಅಂದ ಮೇಲೆ ಕಿತ್ತಾಡೋದು ಕಾಮನ್. ಒಮ್ಮೊಮ್ಮೆ ಅದು ವೈಯಕ್ತಿಕ ಮಟ್ಟಕ್ಕೂ ಇಳಿದುಬಿಡುತ್ತೆ. ಆದ್ರೆ ಬಿಗ್ ಬಾಸ್ ನಿಂದ ಹೊರಬಂದ ಮೇಲೆ ಹೊರಜಗತ್ತಿನಲ್ಲಿ ಅದನ್ನೆಲ್ಲಾ ಮರೆತು ಸ್ನೇಹದಿಂದ ಇರಲೇಬೇಕು. ಈ ಹಿಂದೆನೂ ಬಿಗ್ ಬಾಸ್​ನಲ್ಲಿ ಶರಪರ ಕಿತ್ತಾಡಿದವರು, ಹೊರಗೆ ದೋಸ್ತಿಗಳಾಗಿದ್ದನ್ನ ನೋಡಿದ್ದೀವಿ. ಅಶ್ವಿನಿ-ಗಿಲ್ಲಿ ಕೇಸ್​ನಲ್ಲಿ ಅದು ಕೊಂಚ ಬೇಗನೇ ಆಗಿದೆ. ಈ ಹಾವು-ಮುಂಗುಸಿ ಇನ್ನೂ ಬಿಗ್‌ ಬಾಸ್ ಹಾವು ಏಣಿ ಆಟ ಮುಗಿಯೋ ಮುನ್ನವೇ ಫ್ರೆಂಡ್ಸ್ ಆಗಿಬಿಟ್ಟಿವೆ!

- ಫಿಲ್ಮ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್.