ಅತಿ ವಿಶ್ವಾಸ.. ಕಾವ್ಯಾ ಸಹವಾಸ.. ಗಿಲ್ಲಿಗೆ ಕಪ್ ಮಿಸ್? ಹೌದು ಆರಂಭದಿಂದಲೂ ಚೆನ್ನಾಗಿ ಆಡಿಕೊಂಡು ಬಂದ ಗಿಲ್ಲಿ ಕೊನೆ ಹಂತದಲ್ಲಿ ತಪ್ಪು ಹೆಜ್ಜೆ ಇಡ್ತಿದ್ದಾನಾ,.? ಖುದ್ದು ಸುದೀಪ್ ಈ ಬಗ್ಗೆ ಗಿಲ್ಲಿಗೆ ಎಚ್ಚರ ಕೊಟ್ಟಿದ್ದಾರೆ. ಅತಿಯಾದ ವಿಶ್ವಾಸ,, ಕಾವ್ಯಾ ಸಹವಾಸ.. ಗಿಲ್ಲಿಗೆ ಮುಳುವು ಆಗಬಹುದು.
ಅತಿ ವಿಶ್ವಾಸ.. ಕಾವ್ಯಾ ಸಹವಾಸ.. ಗಿಲ್ಲಿಗೆ ಕಪ್ ಮಿಸ್?
ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಮುಕ್ತಾಯಕ್ಕೆ ಉಳಿದಿರೋದು ಇನ್ನೊಂದೇ ವಾರ. ಈ ಸೀಸನ್ನ ವಿನ್ನರ್ ಆಗುವ ರೇಸ್ನಲ್ಲಿ ಗಿಲ್ಲಿ ನಟ ಟಾಪ್ ನಲ್ಲಿದ್ದಾನೆ ಅನ್ನೋದು ಗೊತ್ತೇ ಇದೆ. ಅಂತೆಯೇ ಈ ಟಾಪ್ ಸ್ಪರ್ಧಿಯನ್ನ ಹೊಡಿಬೇಕು ಅಂತ ದೊಡ್ಮೆನೆಯಲ್ಲಿ ಉಳಿದಿರೋ ಸ್ಪರ್ಧಿಗಳೆಲ್ಲಾ ಸನ್ನದ್ದವಾಗಿದ್ದಾರೆ. ಬಿಗ್ ಟಾರ್ಗೆಟ್ ಆಗಿರೋ ಗಿಲ್ಲಿ ಗೆಲ್ತಾನಾ..? ಅಥವಾ ಕೊನೆ ಕ್ಷಣದಲ್ಲಿ ಕೈ ಚೆಲ್ತಾನಾ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.
ಗಿಲ್ಲಿ ಕಣ್ಣು ಕಪ್ ಮೇಲೆ.. ಎಲ್ಲರ ಕಣ್ಣು ಗಿಲ್ಲಿ ಮೇಲೆ; ಗೆಲ್ಲಕೂಡದು ಗಿಲ್ಲಿ.. ದೊಡ್ಮನೆ ಸ್ಪರ್ಧಿಗಳ ಹಾವಳಿ..!
ಯೆಸ್ ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ದಿನಗಣನೆ ಶುರುವಾಗಿದೆ. ಉಳಿದಿರೋ 8 ಸ್ಪರ್ಧಿಗಳ ಪೈಕಿ ಈ ವಾರ ಇಬ್ಬರು ಹೊರನಡೀತಾರೆ. ಕೊನೆಯ ವಾರ ಒಬ್ರು ಕಪ್ ಎತ್ತಿ ಹಿಡಿತಾರೆ.
ಈ ವಾರ ಕ್ಯಾಪ್ಟನ್ ಧನುಷ್ ಬಿಟ್ರೆ ಉಳಿದೆಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಆದ್ರೆ ಎಲ್ಲರಿಗೂ ತಾವು ಯಾರ ಜೊತೆಗೆ ಸ್ಪರ್ಧೆ ಮಾಡಬೇಕು ಅನ್ನೋದು ಗೊತ್ತೇ ಇದೆ. ಅದು ಬೇರ್ಯಾರು ಅಲ್ಲ ಗಿಲ್ಲಿ.
ಗಿಲ್ಲಿಯ ಫಿನಾಲೆ ಟಿಕೆಟ್ ಕಿತ್ತುಕೊಂಡ ಧ್ರುವಂತ್
ಫಿನಾಲೆ ಟಿಕೆಟ್ ಪಡೆಯೋ ಟಾಸ್ಕ್ನಲ್ಲಿ ತನ್ನ ಜೊತೆ ಆಡೋದಕ್ಕೆ ಧ್ರುವಂತ್ ಗಿಲ್ಲಿಗೆ ಆಹ್ವಾನ ಕೊಟ್ಟಿದ್ರು. ಗಿಲ್ಲಿ ಟಾಸ್ಕ್ನಲ್ಲಿ ಸೊನ್ನೆ, ಯಾವಾಗಲೂ ತಪ್ಪಿಸಿಕೊಂಡು ಓಡಾಡಿಕೊಂಡಿದ್ದ ಗಿಲ್ಲಿ ಈಗ ಗೆದ್ದು ತೋರಿಸಲಿ ಅಂತ ಸವಾಲ್ ಹಾಕಿರೋ ಧ್ರುವಂತ್ ಗಿಲ್ಲಿಗೆ ಟಿಕೆಟ್ ತಪ್ಪಿಸಿದ್ದಾರೆ.
ಗಿಲ್ಲಿ ಮೇಲೆ ಅಟ್ಯಾಕ್ ಮಾಡಿದ ರಾಶಿಕಾ ಶೆಟ್ಟಿ..!
ಹೌದು ರಾಶಿಕಾ ಕೂಡ ಗಿಲ್ಲಿ ಮೇಲೆ ಹರಿಹಾಯ್ದಿದ್ದಾರೆ. ಗಿಲ್ಲಿಯದ್ದು ಅತ್ಯಂತ ಕೆಟ್ಟ ವ್ಯಕ್ತಿತ್ವ ಅಂತ ಆರೋಪ ಮಾಡಿದ್ದಾರೆ. ಗಿಲ್ಲಿ ಎಲ್ಲರನ್ನೂ ಕೆಳಗೆ ಹಾಕಿ ಮಾತನಾಡ್ತಾನೆ ಅನ್ನೋ ಆರೋಪ ಮೊದಲಿಂದಲೂ ಮಾಡ್ತಾ ಬಂದಿದ್ದವರು, ಈ ವಾರವೂ ಗಿಲ್ಲಿ ಮೇಲೆ ಆ ಗೂಬೆ ಕೂರಿಸಿದ್ದಾರೆ.
ಈ ಸಾರಿ ಬಿಗ್ ಬಾಸ್ ಸೀಸನ್ನಲ್ಲಿ ಮೊದಲಿಂದಲೂ ಹೈಲೈಟ್ ಆಗ್ತಾ ಬಂದಿದ್ದು ಗಿಲ್ಲಿ. ತನ್ನ ಕಾಮಿಡಿ ಟ್ರ್ಯಾಕ್ನಿಂದ, ಲವ್ ಟ್ರ್ಯಾಕ್ನಿಂದ , ತನ್ನ ಕಿತ್ತಾಟದಿಂದ , ಕಿತಾಪತಿಗಳಿಂದ ಸದ್ದು ಮಾಡಿದ ಗಿಲ್ಲಿ, ವೀಕ್ಷಕರ ಮನಸ್ಸಿನಲ್ಲಿ ಟಾಪ್ನಲ್ಲಿದ್ದಾನೆ.
ಕಳೆದ ವೀಕೆಂಡ್ನಲ್ಲಿ ಪ್ರಥಮ್, ಹನುಮಂತನ ಆಟವನ್ನ ಗಿಲ್ಲಿ ಫಾಲೋ ಮಾಡಿಕೊಂಡು ಬಂದಿದ್ದಾನೆ ಅನ್ನೋ ಗುಟ್ಟನ್ನ ಸುದೀಪ್ ರಿವೀಲ್ ಮಾಡಿದ್ರು. ಈತನೇ ವಿನ್ನರ್ ಅನ್ನೋ ಪರೋಕ್ಷ ಸೂಚನೆ ಕೂಡ ಕೊಟ್ಟಿದ್ರು. ಇದು ಸಹಜವಾಗೇ ಮನೆಮಂದಿಗೆ ಭಯ ತಂದಿದೆ. ಜಸ್ಟ್ ಮಿಸ್ ಆದ್ರೆ ತಮ್ಮನ್ನ ಮೀರಿಸಿ ಗಿಲ್ಲಿ ವಿನ್ನರ್ ಆಗ್ತಾನೆ ಅನ್ನೋದು ಖಚಿತವಾಗಿದೆ.
ಸೋ ಎಲ್ಲರೂ ಗಿಲ್ಲಿಯನ್ನೇ ಟಾರ್ಗೆಟ್ ಮಾಡ್ತಾ ಇದ್ದಾರೆ. ಟಾಪ್ನಲ್ಲಿರೋ ಗಿಲ್ಲಿನ ಹೊಡೆದ್ರೆ ಮಾತ್ರ ತಮಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಕ್ಕುತ್ತೆ ಅನ್ನೋದು ಎಲ್ಲರಿಗೂ ಖಚಿತವಾಗಿ ಬಿಟ್ಟಿದೆ.
ಅತಿ ವಿಶ್ವಾಸ.. ಕಾವ್ಯಾ ಸಹವಾಸ.. ಗಿಲ್ಲಿಗೆ ಕಪ್ ಮಿಸ್?
ಹೌದು ಆರಂಭದಿಂದಲೂ ಚೆನ್ನಾಗಿ ಆಡಿಕೊಂಡು ಬಂದ ಗಿಲ್ಲಿ ಕೊನೆ ಹಂತದಲ್ಲಿ ತಪ್ಪು ಹೆಜ್ಜೆ ಇಡ್ತಿದ್ದಾನಾ,.? ಖುದ್ದು ಸುದೀಪ್ ಈ ಬಗ್ಗೆ ಗಿಲ್ಲಿಗೆ ಎಚ್ಚರ ಕೊಟ್ಟಿದ್ದಾರೆ. ಅತಿಯಾದ ವಿಶ್ವಾಸ,, ಕಾವ್ಯಾ ಸಹವಾಸ.. ಗಿಲ್ಲಿಗೆ ಮುಳುವು ಆಗಬಹುದು.
ಜೊತೆಗೆ ಇಡೀ ಮನೆಯೇ ಟಾರ್ಗೆಟ್ ಮಾಡಿರೋದ್ರಿಂದ ಅದನ್ನ ಎದುರಿಸಿನೂ ಗಿಲ್ಲಿ ಗೆಲ್ಲಬೇಕಿದೆ. ಗಿಲ್ಲಿ ಈ ಸವಾಲನ್ನ ಎದುರಿಸಿ ನಿಲ್ತಾನಾ..?ಗೆಲ್ತಾನಾ.. ಕಾದುನೋಡಬೇಕಿದೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..


