ನಟ ಅಲ್ಲು ಅರ್ಜುನ್ ಅವರು ಹೈದರಾಬಾದ್ ಹೊರವಲಯದಲ್ಲಿರುವ ಕೋಕಾಪೇಟ್‌ನಲ್ಲಿ ಹೊಸ ಥಿಯೇಟರ್ ಕಟ್ಟಿದ್ದಾರೆ. ಸಂಕ್ರಾಂತಿಯಂದು ಇದು ಕಾರ್ಯಾರಂಭ ಮಾಡಲಿದೆ. ಅಲ್ಲು ಅರ್ಜುನ್ ಒಡೆತನದ ಈ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಇಬ್ಬರು ಕನ್ನಡದ ನಿರ್ದೇಶಕರ ಫೋಟೋ ಇದೆ. ಯಾರದು? ಈ ಸ್ಟೋರಿ ನೋಡಿ..
'ಪುಷ್ಪ' ಖ್ಯಾತಿಯ ನಟ ಅಲ್ಲು ಅರ್ಜುನ್ (Allu Arjun) ತಮ್ಮದೇ ಆದ ಮಲ್ಟಿಪ್ಲೆಕ್ಸ್ ಸಿನಿಮಾ ಥಿಯೇಟರ್‌ಗಳ ಚೈನ್ ಹೊಂದಿದ್ದಾರೆ. 'ಅಲ್ಲು ಸಿನಿಮಾಸ್' ಅನ್ನೋದು ಈ ಸರಣಿ ಥಿಯೇಟರ್‌ಗಳ ಹೆಸರು. ಹೈದರಾಬಾದ್‌ನಲ್ಲಿ (Hyderabad) ಇದು ತನ್ನ ಶಾಖೆ ಹೊಂದಿದೆ. ಅಲ್ಲ ಅರ್ಜುನ್ ಈ ಮಲ್ಟಿಪ್ಲೆಕ್ಸ್ ಚೈನ್ ಅನ್ನು ವಿಸ್ತರಿಸುವ ಪ್ರಯತ್ನದಲ್ಲಿ ಇದ್ದಾರೆ. ಇದೀಗ ಹೊಸ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.
ಸದ್ಯ ನಟ ಅಲ್ಲು ಅರ್ಜುನ್ ಅವರು ಹೈದರಾಬಾದ್ ಹೊರವಲಯದಲ್ಲಿರುವ ಕೋಕಾಪೇಟ್‌ನಲ್ಲಿ ಹೊಸ ಥಿಯೇಟರ್ ಕಟ್ಟಿದ್ದಾರೆ. ಸಂಕ್ರಾಂತಿಯಂದು ಇದು ಕಾರ್ಯಾರಂಭ ಮಾಡಲಿದೆ. ಅಲ್ಲು ಅರ್ಜುನ್ ಒಡೆತನದ ಈ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಇಬ್ಬರು ಕನ್ನಡದ ನಿರ್ದೇಶಕರ ಫೋಟೋ ಇದೆ. ಇತ್ತೀಚೆಗೆ ನಿರ್ಮಾಣ ಆಗುತ್ತಿರುವ ಮಲ್ಟಿಪ್ಲೆಕ್ಸ್‌ಗಳನ್ನು ಅಂದಗಾಣಿಸಲು ನಾನಾ ತಂತ್ರ ಬಳಸಲಾಗುತ್ತಿದೆ. ಐಕಾನಿಕ್ ಸಿನಿಮಾ ಹೆಸರುಗಳನ್ನು ಬರೆಯೋದು, ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ತೆಗೆದ ಅಪರೂಪದ ಫೋಟೋಗಳನ್ನು ಪ್ರೇಮ್ ಹಾಕಿಸೋದು ಅಥವಾ ಖ್ಯಾತ ನಿರ್ದೇಶಕರು/ನಟರ ಫೋಟೋಗಳನ್ನು ಅಲ್ಲಿ ಹಾಕೋದು ಹೀಗೆ ನಾನಾರೀತಿಯ ಬೆರಗು-ಮೆರಗು ಮಾಡಲಾಗುತ್ತಿದೆ.

ಕೋಕಾಪೇಟ್‌ನಲ್ಲಿ ನಿರ್ಮಾಣ ಆಗಿರುವ 'ಅಲ್ಲು ಸಿನಿಮಾಸ್' ಒಳಭಾಗದ ಗೋಡೆಯ ಮೇಲೆ ಹಲವು ನಿರ್ದೇಶಕರ ಫೋಟೋಗಳಿವೆ. ಇದರಲ್ಲಿ ಕನ್ನಡದ ರಿಷಬ್ ಶೆಟ್ಟಿ ಹಾಗೂ ಪ್ರಶಾಂತ್ ನೀಲ್ ಫೋಟೋ ಸಹ ಇದೆ. ತೆಲುಗು ನಿರ್ದೇಶಕರಾದ ರಾಜಮೌಳಿ, ತ್ರಿವಿಕ್ರಂ ಶ್ರೀನಿವಾಸ್ ಹಾಗೂ ಸುಕುಮಾರ್ ಫೋಟೋಗಳಿವೆ. ತಮಿಳಿನ ಮಣಿರತ್ನಂ, ವೆಟ್ರಿಮಾರನ್, ಅಟ್ಲಿ ಭಾವಚಿತ್ರ ಹಾಕಲಾಗಿದೆ. ಹಿಂದಿಯ ರಾಜ್‌ಕುಮಾರ್ ಹಿರಾನಿ, ಸಂದೀಪ್ ರೆಡ್ಡಿ ವಂಗ ಸೇರಿದಂತೆ ಇನ್ನೂ ಕೆಲವು ನಿರ್ದೇಶಕರ ಫೋಟೋಗಳು ಇವೆ. ಜೊತೆಯಲ್ಲಿ ಕನ್ನಡದ ಪ್ರಶಾಂತ್ ನೀಲ್ ಹಾಗೂ ರಿಷಬ್ ಶೆಟ್ಟಿ ಅಲ್ಲಿ ಸ್ಥಾನ ಪಡೆದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಕನ್ನಡಿಗರಿಂದ ಇದಕ್ಕೆ ಬಹಳಷ್ಟು ಮೆಚ್ಚುಗೆ ಸಿಕ್ಕಿದೆ.
ಪ್ರಶಾಂತ್ ನೀಲ್ ನಿರ್ದೇಶನ, ಯಶ್ ನಟನೆಯ ಕೆಜಿಎಫ್ ಸಿನಿಮಾ ಬಳಿಕ ಕನ್ನಡ ಚಿತ್ರರಂಗ ಮತ್ತೊಂದು ಹಂತಕ್ಕೆ ಬೆಳೆದಿದೆ. ಆ ಬಳಿಕ ಬಂದ ಕಾಂತಾರ ಸಿನಿಮಾ ಕೂಡ ಕನ್ನಡ ಚಿತ್ರರಂಗವನ್ನು ಇನ್ನೂ ಒಂದು ಹಂತ ಮೇಲಕ್ಕೆ ತೆಗೆದುಕೊಂಡು ಹೋಗಿದೆ. ರಾಜ್ ಬಿ ಶೆಟ್ಟಿ ನಟನೆಯ 'ಸು ಫ್ರಂ ಸೋ' ಚಿತ್ರವು ಸಣ್ಣ ಬಜೆಟ್‌ನ ಕನ್ನಡ ಸಿನಿಮಾ ಸಹ ಸೂಪರ್ ಹಿಟ್ ಆಗಬಹುದು ಎಂದು ತೋರಿಸಿಕೊಟ್ಟಿದೆ. ಈ ಎಲ್ಲಾ ಕಾರಣಗಳಿಂದ ಕನ್ನಡ ಚಿತ್ರರಂಗಕ್ಕೆ ಮೊದಲಿಗಿಂತ ಹೆಚ್ಚು ಬೆಲೆ ಭಾರತ ಸೇರಿದಂತೆ ವಿಶ್ವದ ಎಲ್ಲಾ ಕಡೆ ಸೃಷ್ಟಿಯಾಗಿದೆ.


