Asianet Suvarna News Asianet Suvarna News

Lakshana serial: ಬೊಂಬೆಯಾಟದಲ್ಲಿ ನಕ್ಷತ್ರಾ ಬದುಕನ್ನೇ ಕತೆಯಾಗಿಸಿದ ಮಯೂರಿ, ನಕ್ಷತ್ರಾ ಪರ ನಿಂತ ಭೂಪತಿ!

ಲಕ್ಷಣ ಸೀರಿಯಲ್‌ನಲ್ಲಿ ಹಬ್ಬದ ಸಂಭ್ರಮ ಒಂದು ಕಡೆಯಾದರೆ, ಬೊಂಬೆಯಾಟದಲ್ಲಿ ಸಿಕ್ಕ ತಿರುವು ಬಹಳ ರೋಚಕವಾಗಿದೆ. ಇದರಲ್ಲಿ ನಕ್ಷತ್ರಾಗಳ ಬದುಕನ್ನೇ ಕತೆಯಾಗಿ ಬೊಂಬೆಯಾಟದಲ್ಲಿ ಹೇಳಿದ್ದಾಳೆ ಅತ್ತಿಗೆ ಮಯೂರಿ. ಇನ್ನೊಂದೆಡೆ ನಕ್ಷತ್ರಾ ಮೇಲೆ ಶಕುಂತಲಾ ದೇವಿ ಮಾಡ್ತಿರೋ ಆರೋಪವನ್ನ ಭೂಪತಿ ಅಲ್ಲಗಳೆದಿದ್ದಾನೆ. ಭೂಪತಿಗೆ ನಕ್ಷತ್ರಾ ಮೇಲೆ ಪ್ರೀತಿ ಹುಟ್ಟುತ್ತಾ?

In Lakshana serial Navaratri special episodes
Author
First Published Sep 28, 2022, 1:13 PM IST

ಕಲರ್ಸ್ ಕನ್ನಡದಲ್ಲಿ ಡಿಫರೆಂಟ್ ಕತೆಯ ಮೂಲಕ ಗಮನಸೆಳೀತಿರೋ ಸೀರಿಯಲ್ 'ಲಕ್ಷಣ'. ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಸೀರಿಯಲ್ ಇದು. ನವರಾತ್ರಿ ಹಬ್ಬದಂದು ಇದರಲ್ಲಿ ಬಂದ ಬೊಂಬೆಯಾಟದ ಸೀಕ್ವೆನ್ಸ್ ಅನ್ನು ಜನ ಬಹಳ ಇಷ್ಟಪಟ್ಟಿದ್ದಾರೆ. ಇದರ ಜೊತೆಗೆ ಅತ್ತಿಗೆ ಮಯೂರಿ ನಕ್ಷತ್ರಾ ಲೈಫನ್ನೇ ಕಥೆಯಾಗಿ ಹೇಳಿದ ರೀತಿ ವೀಕ್ಷಕರಿಗೆ ಇಷ್ಟವಾಗಿದೆ. ನವರಾತ್ರಿ ನಕ್ಷತ್ರಾ ಮತ್ತು ಭೂಪತಿ ಲೈಫಲ್ಲಿ ಹೊಸ ಬೆಳಕು ತರಲಿ ಅಂತ ಅವರು ಆಶಿಸುತ್ತಿದ್ದಾರೆ. ಕೋವಿಡ್ ನಂತರ ಎಲ್ಲರ ಮನೆಯಲ್ಲೂ ಈ ಬಾರಿ ವಿಜೃಂಭಣೆಯಿಂದ ನವರಾತ್ರಿ ಹಬ್ಬ ನಡೆಯುತ್ತಿದೆ. ಅದರಂತೆ ಭೂಪತಿಯ ಮನೆಯಲ್ಲೂ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ವೇಳೆ ಅನಿರೀಕ್ಷಿತ ಅತಿಥಿಗಳಾಗಿ ನಕ್ಷತ್ರಳ ತಂದೆ ತಾಯಿ ಬಂದು ಬಿಟ್ಟಿದ್ದಾರೆ. ಅವರು ಮನೆಗೆ ಬಂದದ್ದನ್ನು ಕಂಡು ಶಕುಂತಳಾದೇವಿಗೆ ಕೋಪ ಬಂದರೂ ಕೂಡಾ ಅವರ ಬಳಿ ಬಂದು ನೀವೇನು ಇಲ್ಲಿ ಎಂದು ಮಾತನಾಡಿಸುತ್ತಾಳೆ. ಮಗಳ ಸಂತೋಷಕ್ಕಾಗಿ ಮಾತಿನ ಮಧ್ಯೆಯೆ ಹಿಂದೆ ಆದ ಕಹಿ ಘಟನೆಯನ್ನು ಮರೆತು ನಮ್ಮನ್ನು ಕ್ಷಮಿಸಿ, ನಾವು ಮೊದಲಿನಂತೆಯೇ ಸಂತೋಷದಿಂದ ಇರೋಣ ಎಂದು ನಕ್ಷತ್ರಾ ತಂದೆ ಚಂದ್ರಶೇಖರ್ ಶಕುಂತಳಾ ದೇವಿ ಬಳಿ ಅಂಗಲಾಚುತ್ತಾರೆ. ಆದರೆ ಶಕುಂತಲಾ ದೇವಿ ಮಾತ್ರ ಕ್ಷಮಿಸೋದಿಲ್ಲ. ನಮ್ಮ ಮನೆಯ ನೆಮ್ಮದಿ ಹಾಳಾಗಲು ನೀವೆ ಕಾರಣ, ಅದು ಹೇಗೆ ಅನ್ಕೋಂಡ್ರಿ ನಾನು ನಿಮ್ಮನ್ನು ಕ್ಷಮಿಸುತ್ತೇನೆ ಎಂದು ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಹೇಳಿ ದ್ವೇಷ ಮುಂದುವರಿಸುತ್ತಾರೆ.

ಶಕುಂತಳಾ ದೇವಿಯ ಮಾತಿನಿಂದ ಬೇಸರಗೊಂಡು ಚಂದ್ರಶೇಖರ್ ಮತ್ತು ಆರತಿ ಕುಳಿತುಕೊಂಡಿದ್ದ ಜಾಗಕ್ಕೆ ನಕ್ಷತ್ರ ಬಂದು ಅವರ ಆಶೀರ್ವಾದ ಪಡೆದು ಅವರನನ್ನು ಬೊಂಬೆಯಾಟ ತೋರಿಸಲು ಒಳಗೆ ಕರೆದುಕೊಂಡು ಹೋಗುತ್ತಾಳೆ. ಭೂಪತಿಯ ಅತ್ತಿಗೆ ಮಯೂರಿ ಬೊಂಬೆಯಾಟವನ್ನು ಶುರು ಮಾಡುತ್ತಾ ಭೂಪತಿ ಹಾಗೂ ನಕ್ಷತ್ರಳ ಜೀವನದ ಕಥೆಯನ್ನೇ ಹೇಳುತ್ತಾಳೆ. ನಕ್ಷತ್ರ ಹುಟ್ಟಿನಿಂದ ತಂದೆಯ ಪ್ರೀತಿ ಸಿಗದೆ ಅವರ ಕಟುವಾದ ಹೀಯಾಳಿಕೆಯ ಮಾತಿನಿಂದ ಬೆಳೆಯುತ್ತಾಳೆ, ಆಕೆಗೆ ಭೂಪತಿಯ ಸ್ನೇಹ ಹೇಗಾಯಿತು, ಶ್ವೇತಾ ಮತ್ತು ಭೂಪತಿಯ ಮದುವೆ ನಡೆಯಬೇಕಿದ್ದ ಸಂದರ್ಭದಲ್ಲಿ ಮನೆಯವರಿಗೆಲ್ಲಾ ನಕ್ಷತ್ರಳೇ ಸಿ.ಎಸ್‌ನ ನಿಜವಾದ ಮಗಳು ಎಂದು ತಿಳಿದು ಅವರ ಮಗಳ ಪ್ರೀತಿಯನ್ನು ಉಳಿಸುವ ಸಲುವಾಗಿ ನಕ್ಷತ್ರ ಹಾಗೂ ಭೂಪತಿಗೆ ಹೇಗೆ ಮದುವೆ ಮಾಡಿದ್ರು, ನಕ್ಷತ್ರಳ ಪ್ರಾಣಕ್ಕೆ ಭೂಪತಿಯ ಸ್ವಂತ ತಮ್ಮನಾದ ಮೌರ್ಯ ಹೇಗೆಲ್ಲಾ ತೊಂದರೆ ಮಾಡಿದ ಅಂತಾ ಬೊಂಬೆಯಾಟದ ಮೂಲಕ ಹೇಳುತ್ತಾಳೆ.

Kannadathi: ಪೊಲೀಸ್‌ ಸ್ಟೇಶನ್‌ನಲ್ಲಿ ಭುವಿ, ಹೊರಗೆ ಬಂದರೆ ದೊಡ್ಡ ಶಾಕ್!

ಮನೆಯವರೆಲ್ಲರಿಗೂ ಇದನ್ನು ನೋಡಿ ಶಾಕ್(Shock) ಆಗುತ್ತೆ. ಕೊನೆಯಲ್ಲಿ ಮಯೂರಿ ನಕ್ಷತ್ರಳದ್ದು ಯಾವುದೇ ತಪ್ಪಿಲ್ಲ, ಅವಳನ್ನು ಒಪ್ಪಿ ಭೂಪತಿಯು ಅವಳೊಂದಿಗೆ ಸುಖವಾಗಿ ಸಂಸಾರ ಮಾಡುತ್ತಾನೆ ಎನ್ನುವ ನಂಬಿಕೆ ನನಗಿದೆ ಎಂದು ಹೇಳುವಾಗ ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಶಕುಂತಳಾದೇವಿ ಸಿಟ್ಟಲ್ಲಿ ಗುಡುಗುತ್ತಾರೆ.

ಗಟ್ಟಿಮೇಳ: ಡುಪ್ಲಿಕೇಟ್ ವೈದೇಹಿ ಹೈ ಡ್ರಾಮಾ ಶುರು, ರಿಯಲ್ ವೈದೇಹಿ ಹೊರಟೇ ಹೋಗ್ತಾಳಾ?

ಮೌರ್ಯ ಕ್ರಿಮಿನಲ್(Criminal) ಆಗೋದಕ್ಕೆ ನಕ್ಷತ್ರಾಳೇ ಕಾರಣ ಅನ್ನೋ ಮಾತನ್ನೂ ಶಕುಂತಲಾ ದೇವಿ ಆಡುತ್ತಾರೆ. ಆದರೆ ಭೂಪತಿ ತಾಯಿಯ ಮಾತಿಗೆ ವಿರೋಧ ವ್ಯಕ್ತಪಡಿಸುತ್ತಾನೆ. ಮೌರ್ಯ ಕ್ರಿಮಿನಲ್ ಆಗೋದಕ್ಕೆ ಆತನ ನಿರ್ಧಾರ(Decision)ಗಳೇ ಕಾರಣ. ಇದಕ್ಕೆ ನಕ್ಷತ್ರಾ ಕಾರಣ ಆಗೋದಿಲ್ಲ ಅಂತ ತಾಯಿ ಮುಂದೆ ಧೈರ್ಯದಿಂದ ಮಾತಾಡ್ತಾನೆ. ಇದನ್ನು ಕೇಳಿ ಶಕುಂತಲಾ ದೇವಿ ಏನೂ ಹೇಳದೇ ತಲೆ ತಗ್ಗಿಸುತ್ತಾರೆ. ಅತ್ತ ಮಯೂರಿ ನಕ್ಷತ್ರಾ ಬಳಿ ನಿಜಕ್ಕೂ ನಿನ್ನ ಮೇಲೆ ಭೂಪತಿಗೆ ಪ್ರೀತಿ(Love) ಇದೆ ಅನ್ನೋ ಮಾತು ಹೇಳಿದರೆ ನಕ್ಷತ್ರಾಗಳಿಗೆ ಭೂಪತಿ ಹೇಳಿದ ಮಾತುಗಳೇ ನೆನಪಾಗುತ್ತವೆ. 'ಇದನ್ನು ನಾನು ನಿನ್ನ ಮೇಲಿನ ಪ್ರೀತಿಗಾಗಿ ಮಾಡಿದ್ದಲ್ಲ. ನನ್ನ ಜಾಗದಲ್ಲಿ ಯಾರೇ ಇದ್ರೂ ಹೀಗೇ ಮಾಡ್ತಿದ್ರು' ಅನ್ನೋ ಭೂಪತಿಯ ಮಾತದು. ಮುಂದೆ ಭೂಪತಿ ಮನಸ್ಸು ಬದಲಾಗುತ್ತಾ ಅನ್ನೋದು ಸದ್ಯದ ಕುತೂಹಲ(Curiosity.

Follow Us:
Download App:
  • android
  • ios