Asianet Suvarna News Asianet Suvarna News

'ನನ್ನರಸಿ ರಾಧೆ' ಧಾರಾವಾಹಿ ಮುಕ್ತಾಯ; ಅಗಸ್ತ್ಯ ಖ್ಯಾತಿಯ ನಟ ಅಭಿನವ್ ಹೃದಯಸ್ಪರ್ಶಿ ಸಂದೇಶ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನರಸಿ ರಾಧೆ ಧಾರಾವಾಹಿ ಮುಕ್ತಾಯವಾಗಿದೆ. ಅಗಸ್ತ್ಯ ಆಗಿ ಮೊದಲ ಬಾರಿಗೆ ಕನ್ನಡಿಗರ ಮುಂದೆ ಬಂದಿದ್ದ ಅಭಿನವ್ ಈ ಧಾರಾವಾಹಿ ಮುಕ್ತಾಯವಾದ ಬಗ್ಗೆ ಭಾವುಕ ಪತ್ರ ಹಂಚಿಕೊಂಡಿದ್ದಾರೆ. 

Actor Abhinav Vishwanathan pens a gratitude message to fans after Nannarasi Radhe go off air sgk
Author
First Published Sep 28, 2022, 12:53 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನರಸಿ ರಾಧೆ ಧಾರಾವಾಹಿ ಮುಕ್ತಾಯವಾಗಿದೆ. ಪ್ರೇಕ್ಷಕರ ಹೃದಯ ಗೆದ್ದಿದ್ದ ನನ್ನರಸಿ ರಾಧೆ ಬಿಗ್ ಬಾಸ್ ಸೀಸನ್ 9 ಬರುತ್ತಿದ್ದಂತೆ ಶುಭಂ ಹೇಳಿದೆ. ಪ್ರೇಕ್ಷಕರ ಪ್ರೀತಿಯ ಅಗಸ್ತ್ಯ ಮತ್ತು ಇಂಚರಾ ಇನ್ಮುಂದೆ ಕಾಣಿಸಿಕೊಳ್ಳುವುದಿಲ್ಲ. ಅಂದಹಾಗೆ ಈ ಧಾರಾವಾಹಿಯ ಹೀರೋ ಅಭಿನವ್ ವಿಶ್ವನಾಥನ್, ಅಗಸ್ತ್ಯ ಪಾತ್ರದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಅಭಿನವ್ ಎನ್ನುವುದಕ್ಕಿಂತ ಅಗಸ್ತ್ಯ ಎಂದರೆ ಎಲ್ಲರಿಗೂ ಥಟ್ ಅಂತ ಗೊತ್ತಾಗಲಿದೆ. ಅಗಸ್ತ್ಯ ಆಗಿ ಮೊದಲ ಬಾರಿಗೆ ಕನ್ನಡಿಗರ ಮುಂದೆ ಬಂದಿದ್ದ ಅಭಿನವ್ ಈ ಧಾರಾವಾಹಿ ಮುಕ್ತಾಯವಾದ ಬಗ್ಗೆ ಭಾವುಕ ಪತ್ರ ಹಂಚಿಕೊಂಡಿದ್ದಾರೆ. 

ಮಾಡೆಲ್ ಆಗಿದ್ದ ಅಭಿನವ್ ವಿಶ್ವನಾಥನ್ ನನ್ನರಸಿ ರಾಧೆ ಧಾರಾವಾಹಿ ಮೂಲಕ ನಟನಾಗಿ ಎಂಟ್ರಿ ಕೊಟ್ಟರು. ಈ ಧಾರಾವಾಹಿ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಇದೀಗ ಮುಕ್ತಾಯವಾಗಿರುವ ಈ ಧಾರಾವಾಹಿ ಬಗ್ಗೆ ಮತ್ತು ತನಗೆ ಅಗಾಧ ಪ್ರೀತಿ ತೋರಿದ ಅಭಿಮಾನಿಗಳಿಗೆ ನಟ ಅಭಿನವ್ ಧನ್ಯವಾದ ತಿಳಿಸಿದ್ದಾರೆ.ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಅಭಿನವ್ ಕೃತಜ್ಞತೆ ತಿಳಿಸಿದ್ದಾರೆ.

'ಅನೇಕ ಸುಂದರ ಸಂಗತಿಗಳು ನೋಡಲಾಗುವುದಿಲ್ಲ ಆದರೆ ಅನುಭವಿಸಲು ಮಾತ್ರ ಸಾಧ್ಯ. ನನ್ನರಸಿ ರಾಧೆ ಒಂದು ಅದ್ಭುತವಾದ ಪಯಣ. ಇದು ಖಂಡಿತ ಕೇವಲ ಧಾರಾವಾಹಿ ಅಲ್ಲ, ಇದು ಅಂಬೆಗಾಲಿಡುವ ಅಗಸ್ತ್ಯನನ್ನು ಶಾಂತವಾದ ವಿಕಸಿತನಾದ ಅಗಸ್ತ್ಯನಿಗೆ ಆಂಗ್ರಿ ಯಂಗ್ ಮ್ಯಾನ್ ಆಗಿ ಕಲಿಸಿದ ಅನುಭವ.ನನ್ನನ್ನು ಬೆಂಬಲಿಸಿದ ಮತ್ತು ನನಗೆ ಅಗತ್ಯವಿರುವಾಗಲೆಲ್ಲಾ ಇದ್ದ ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆ. ತುಂಬಾ ಸ್ಟ್ರಾಂಗ್ ಆದ, ಆಕರ್ಷಕ ಪಾತ್ರ ಅಗಸ್ತ್ಯ ರಾಥೋಡ್‌ಗೆ ಧನ್ಯವಾದ. ಏನೇ ಆಗಲಿ ಯಾವಾಗಲೂ ಬ್ರಹ್ಮರಾಕ್ಷಸನನ್ನು ಬೆಂಬಲಿಸುತ್ತಿದ್ದ ನನ್ನ ಚೋಟ್ ಮೆಣಿಸಿಕಾಯಿ ಕೌಸ್ತುಭ ಅವರಿಗೆ ನನ್ನ ವಿಶೇಷ ಧನ್ಯವಾದಗಳು. ಈ ಅದ್ಭುತ  ಅವಕಾಶ ನೀಡಿದ ನರಹರಿ ಸರ್ ಮತ್ತು ವಿನೋದ್ ಅವರಿಗೆ ನನ್ನ ಕೃತಜ್ಞತೆಗಳು' ಎಂದು ಹೇಳಿದರು. 

ಮುಗ್ದೇ ಹೋಯ್ತು ನನ್ನರಸಿ ರಾಧೆ ಸೀರಿಯಲ್, ಆದ್ರೆ ಈ ಕ್ಯೂಟ್ ಎಂಡ್‌ನ ಮಿಸ್ ಮಾಡ್ಕೊಳ್ಳೋ ಹಾಗಿಲ್ಲ!

ನಟ ಅಭಿನವ್ ಅತೀ ಕಡಿಮೆ ಅವಧಿಯಲ್ಲಿ ತನ್ನ ಆನ್-ಸ್ಕ್ರೀನ್ ಪಾತ್ರ 'ಅಗಸ್ತ್ಯ' ಮೂಲಕ ಟಿವಿ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಸುಮಾರು ಮೂರು ವರ್ಷಗಳ ಕಾಲ, ಅಭಿನವ್ 'ಅಗಸ್ತ್ಯ' ಆಗಿ ತೆರೆಯ ಮೇಲೆ ಮಿಂಚಿದ್ದರು, ತನ್ನ ಪಾತ್ರ ಎಂಜಾಯ್ ಮಾಡಿದ್ದರು.

ನನ್ನರಸಿ ರಾಧೆ ಧಾರಾವಾಹಿ ಬಗ್ಗೆ

ಈ ಸೀರಿಯಲ್‌ನಲ್ಲಿ ಅಭಿನವ್ ವಿಶ್ವನಾಥನ್, ಕೌಸ್ತುಭ ಮಣಿ, ಹೇಮಾ ಬೆಳ್ಳೂರು, ಸಿಹಿ ಕಹಿ ಚಂದ್ರು, ಸಾರಿಕಾ ರಾಜ್ ಅರಸ್, ತೇಜಸ್ವಿನಿ ಪ್ರಕಾಶ್, ಅಮೂಲ್ಯಾ ಗೌಡ, ವಿಹಾರಿಕಾ ಸೇರಿದಂತೆ ಅನೇಕರು ನಟಿಸಿದ್ದರು.

Amoolya ಸ್ಟ್ರೈಟ್‌ ಫಾರ್ವರ್ಡ್‌: ನನ್ನರಸಿ ರಾಧೆಯ ಅಶ್ವಿನಿ ಪಾತ್ರಧಾರಿಯ ಸಂದರ್ಶನ

ಧಾರಾವಾಹಿ ಪ್ರಾರಂಭದಲ್ಲಿ ಹಾವು ಮುಂಗುಸಿ ಹಾಗೆ ಇದ್ದವರು ಅಗಸ್ತ್ಯ ಮತ್ತು ಇಂಚರಾ. ಅಗಸ್ತ್ಯ ಬಾಸ್ ಆಗಿದ್ದ ಕಂಪನಿಲಿ ಇಂಚರಾ ಉದ್ಯೋಗಿ. ಕಾಲೇಜಲ್ಲಿ ಫೇಲ್ ಆದ ಹುಡುಗಿ ಆದರೂ ಅವಳಲ್ಲಿದ್ದ ಜಾಣ್ಮೆಯನ್ನು ಕಂಡು ಅಗಸ್ತ್ಯನ ಅಪ್ಪ ಸಂತೋಷ್ ರಾಥೋಡ್ ಅವಳನ್ನು ತಮ್ಮ ಕಂಪನಿಗೆ ಸೇರಿಸಿರ್ತಾರೆ. ಶುರುವಿನಲ್ಲಿ ಶತ್ರುಗಳ ಥರ ಹೊಡೆದಾಡಿಕೊಳ್ತಿದ್ದ ಅಗಸ್ತ್ಯ, ಇಂಚರಾ ಒಂದು ಹಂತದಲ್ಲಿ ಮದುವೆ ಆಗ್ತಾರೆ. ಆಮೇಲೂ ಅವರ ನಡುವಿನ ಗುದ್ದಾಟ ನಡೆಯುತ್ತಾ ಇರುತ್ತೆ. ಇತ್ತ ಅಮ್ಮನ ಹುಡುಕಾಟದಲ್ಲಿರೋ ಅಗಸ್ತ್ಯನಿಗೆ ಇಂಚರಾ ಸಹಾಯ ಮಾಡ್ತಾಳೆ. ನಿಧಾನಕ್ಕೆ ಈ ಜೋಡಿ ಬಿಗುಮಾನ ಮರೆತು ಹತ್ತಿರವಾಗುತ್ತಾ ಹೋಗಿತ್ತಾರೆ. ಅಗಸ್ತ್ಯನ ತಾಯಿಯನ್ನು ಕೂಡಿ ಹಾಕಿದ್ದ ಇಂದ್ರಾಣಿಯ ದುಷ್ಕೃತ್ಯಗಳೂ ರಿವೀಲ್ ಆಗುತ್ತವೆ. ನಡುವೆ ಅಶ್ವಿನಿ ಅನ್ನೋ ತಂಗಿ ಬರ್ತಾಳೆ. ನೆಗೆಟಿವ್ ಶೇಡ್‌ನ ಈ ಪಾತ್ರ ಕ್ರಮೇಣ ಸತ್ಯ ಅರಿತುಕೊಂಡು ಪಾಸಿಟಿವ್ ಶೇಡ್ ಪಡೆಯುತ್ತೆ. ಅಗಸ್ತ್ಯನ ಅಪ್ಪ ಅಮ್ಮ ಒಂದಾಗ್ತಾರೆ. ಕೊನೆಯಲ್ಲಿ ಒಂದು ಲವ್ಲೀ ಸ್ಟೋರಿ ಲೈನ್‌ನೊಂದಿಗೆ ಈ ಸೀರಿಯಲ್ ಈಗ ಎಂಡ್ ಆಗಿದೆ.

Follow Us:
Download App:
  • android
  • ios