Asianet Suvarna News Asianet Suvarna News

BBK9; ಚೀಪ್ ಮೆಂಟಾಲಿಟಿ ನನಗಿಲ್ಲ; ರೂಪೇಶ್‌ ಆರೋಪಕ್ಕೆ ದಿವ್ಯಾ ಉರುಡುಗ ಕಿಡಿ

ದಿವ್ಯಾ ಉರುಡುಗ ಮತ್ತು ರೂಪೇಶ್ ರಾಜಣ್ಣ ನಡುವೆ ವಾಗ್ವಾದ ಜೋರಾಗಿದೆ. ರೂಪೇಶ್ ಆರೋಪಕ್ಕೆ ದಿವ್ಯಾ ಸರಿಯಾಗಿ ತಿರುಗೇಟು ನೀಡಿದ್ದಾರೆ. 

Fighting between Divya Uruduga on Roopesh rajanna in bigg boss kannada season 9 sgk
Author
First Published Nov 11, 2022, 1:51 PM IST

ಬಿಗ್ ಬಾಸ್ ಸೀಸನ್ 9, 7ನೇ ವಾರ ನಡೆಯುತ್ತಿದೆ. ಬಿಗ್ ಬಾಸ್ ಸ್ಪರ್ಧಿಗಳಲ್ಲಿ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚಾಗುತ್ತಿದೆ. ಸ್ಪರ್ಧಿಗಳ ನಡುವೆ ಕಿತ್ತಾಟ, ಜಗಳ, ಕೂಗಾಟ ಕೂಡ ಜೋರಾಗಿದೆ. ಇತ್ತೀಚಿಗೆ ರೂಪೇಶ್ ರಾಜಣ್ಣ ವಿರುದ್ಧ ಇಡೀ ಬಿಗ್ ಮನೆ ಮುಗಿಬಿದ್ದಿದೆ. ಇದಕ್ಕೆ ಕಾರಣ ರೂಪೇಶ್ ಅವರ ಮಾತುಗಳು. ದಿವ್ಯಾ ಉರುಡುಗ ಅವರಿಗೆ ರೂಪೇಶ್ ರಾಜಣ್ಣ ಫೇಕ್ ಎಂದು ಚುಚ್ಚು ಮಾತನಾಡಿದ್ದರು. ರೂಪೇಶ್ ಮಾತಿಗೆ ದಿವ್ಯಾ ಬಿಕ್ಕಿ ಬಿಕ್ಕಿ ಇತ್ತಿದ್ದರು.  ಸ್ಪರ್ಧಿಗಳಿಗೆ ಬಿಗ್ ಬಾಸ್ ಯಾರ್ ಫೇಕ್ ಯಾರ್ ರಿಯಲ್ ಎನ್ನುವ ಟಾಸ್ಕ್ ನೀಡಿತ್ತು. ಈ ಟಾಸ್ಕ್ ಪ್ರಕಾರ ಬಿಗ್ ಮನೆಯಲ್ಲಿ ಯಾರು ಫೇಕ್ ಯಾರು ರಿಯಲ್ ಎಂದು ಹೇಳಬೇಕು. ಈ ಟಾಸ್ಕ್ ರೂಪೇಶ್ ರಾಜಣ್ಣ ಮತ್ತು ದಿವ್ಯಾ ಉರುಡುಗ ನಡುವಿನ ವಾಗ್ವಾದಕ್ಕೆ ಕಾರಣವಾಗಿತ್ತು. 

ದಿವ್ಯಾ ವಿರುದ್ಧ ರೂಪೇಶ್, 'ಒಂದು ಹಾಡು ಮಾಡಿದ್ವಿ ಅದನ್ನು ಎಲ್ಲೂ ಸಹ ರೂಪೇಶ್ ರಾಜಣ್ಣ ಮಾಡಿದ ಟ್ಯೂನ್ ಎಂದು ದಿವ್ಯಾ ಹೇಳಿಲ್ಲ, ನಾನೇ ಮಾಡಿದ್ದು ಎನ್ನುವ ಹಾಗೆ ಬಿಂಬಿಸಿದರು' ಎಂದು ಹೇಳಿದ್ದರು. ರೂಪೇಶ್ ಮಾತಿನಿಂದ ದಿವ್ಯಾ ಜೋರಾಗಿ ಅತ್ತಿದ್ದರು. ಇದೀಗ ಬಿಗ್ ಮನೆಯಲ್ಲಿ ಕಳಪೆ ಪಟ್ಟ ನೀಡುವ ಸಮಯ. ಆ ವೇಳೆ ರೂಪೇಶ್ ಹೇಳಿದ ಮಾತಿಗೆ ದಿವ್ಯಾ ಸರಿಯಾಗಿ ತಿರುಗೇಟು ನೀಡಿದರು. ಬೇರೆಯವರು ಬರೆದ ಹಾಡನ್ನು ತಾನು ಬರೆದಿದ್ದು ಎಂದು ಹೇಳಿಕೊಳ್ಳುವ ಚೀಪ್ ಮೆಂಟಾಲಿಟಿ ಇಲ್ಲ ಎಂದು ಹೇಳಿದರು. ದಿವ್ಯಾ ಮಾತಿಗೆ ಮತ್ತೇ ಉರಿದು ಬಿದ್ದ ರೂಪೇಶ್ ದಿವ್ಯಾ ವಿರುದ್ಧ ಹರಿಹಾಯ್ದರು. ಮನೆಯ ಬಹುತೇಕ ಮಂದಿ ಕಳಪೆ ಪಟ್ಟಕ್ಕೆ ರೂಪೇಶ್ ಹೆಸರನ್ನು ತೆಗೆದುಕೊಂಡಿದ್ದಾರೆ. 

ಬಿಗ್ ಮನೆಯಲ್ಲಿ ರೂಪೇಶ್ ಮಾತು ಅತಿರೇಕಕ್ಕೆ ಹೋಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ರೂಪೇಶ್ ಮಾತಿನಿಂದ ಬೇಸತ್ತಿರುವ ಉಳಿದ ಸ್ಪರ್ಧಿಗಳು ರೂಪೇಶ್ ವಿರುದ್ಧ ಮುಗಿಬಿದ್ದಿದ್ದಾರೆ. ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸುದೀಪ್  ಈ ವಿಚಾರವಾಗಿ ಏನು ಮಾತನಾಡಲಿದ್ದಾರೆ ಪ್ರೇಕ್ಷಕರು ಕಾಯುತ್ತಿದ್ದಾರೆ.

BBK9; ಆರ್ಯವರ್ಧನ್ ಪರ್ಸನಲ್ ಮ್ಯಾಟ್ರು ಕೆದಕಿದ ರೂಪೇಶ್: ಬಿಗ್ ಮನೆಯಲ್ಲಿ ತಾರಕಕ್ಕೇರಿದ ಜಗಳ

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು 

ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನಿ ನಕ್ಷತ್ರ ಧರಾವಾಹಿ ಖ್ಯಾತಿಯ ನಟಿ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.

BBK9: ರೂಪೇಶ್ ರಾಜಣ್ಣ ಮಾತಿಗೆ ಬಿಕ್ಕಿ ಬಿಕ್ಕ ಅತ್ತ ದಿವ್ಯಾ ಉರುಡುಗ; ಇಲ್ಲಿ ಯಾರ್ ರಿಯಲ್ ಯಾರ್ ಫೇಕ್?

 ಮನೆಯಿಂದ ಹೊರಹೋಗಿರುವ ಸ್ಪರ್ಧಿಗಳು

ಬಿಗ್ ಬಾಸ್ ಸೀಸನ್ 9ರ ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. 3ನೇ ವಾರ ದರ್ಶ್ ಚಂದ್ರಪ್ಪ ಮನೆಯಿಂದ ಹೊರ ಹೋಗಿದ್ದಾರೆ. 4ನೇ ವಾರ ಮಯೂರಿ ಹಾಗೂ 5ನೇ ವಾರ ನೇಹಾ ಗೌಡ, 6ನೇ ವಾರ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 12 ಮಂದಿ ಇದ್ದಾರೆ. 7ನೇ ವಾರ ಯಾರು ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ. 
 

Follow Us:
Download App:
  • android
  • ios