BBK9; ಆರ್ಯವರ್ಧನ್ ಪರ್ಸನಲ್ ಮ್ಯಾಟ್ರು ಕೆದಕಿದ ರೂಪೇಶ್: ಬಿಗ್ ಮನೆಯಲ್ಲಿ ತಾರಕಕ್ಕೇರಿದ ಜಗಳ
ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಗುರೂಜಿ ನಡುವೆ ಜಗಳ ಜೋರಾಗಿದೆ. ಪರ್ಸನಲ್ ವಿಚಾರ ಕೆದಕಿದ ರೂಪೇಶ್ ರಾಜಣ್ಣ ವಿರುದ್ಧ ಆರ್ಯವರ್ಧನ್ ಗುರೂಜಿ ಸಿಡಿದೆದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 9, 6ನೇ ವಾರಕ್ಕೆ ಕಾಲಿಟ್ಟಿದ್ದು ಯಶಸ್ವಿಯಾಗಿ ನಡೆಯುತ್ತಿದೆ. ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗುತ್ತಿದೆ ಜೊತೆಗೆ ಕಿತ್ತಾಟ, ಗಟಾಲೆ, ಜಗಳ ಕೂಡ ಜೋರಾಗಿದೆ. ಈ ಬಾರಿ ಬಿಗ್ ಬಾಸ್ ನಲ್ಲಿ ಅತೀ ಹೆಚ್ಚು ಜಗಳವಾಡಿದ್ದು ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರಗಿ ಮತ್ತು ಆರ್ಯವರ್ಧನ್ ಗುರೂಜಿ. ಇಂದು (ನವೆಂಬರ್ 10) ಆರ್ಯವರ್ಧನ್ ಮತ್ತು ರೂಪೇಶ್ ರಾಜಣ್ಣ ನಡುವೆ ದೊಡ್ಡ ಜಗಳವೆ ನಡೆದಿದೆ. ಆರ್ಯವರ್ಧನ್ ಅವರ ವಯಕ್ತಿಕ ವಿಚಾರವನ್ನು ರೂಪೇಶ್ ರಾಜಣ್ಣ ಕೆದಕಿದ್ದಾರೆ. ಇದರಿಂದ ಸಿಡಿದೆದ್ದ ಆರ್ಯವರ್ಧನ್ ಜೋರಾಗಿ ಕಿರುಚಾಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಇಬ್ಬರ ಜಗಳ ತಾರಕಕ್ಕೇರಿದೆ.
ಅಡುಗೆ ಮನೆಯಲ್ಲಿದ್ದ ಆರ್ಯವರ್ಧನ್ ಅವರ ಬಳಿ ರೂಪೇಶ್ ಎಂಟ್ರಿ ಕೊಟ್ಟರು. ರೂಪೇಶ್ ಬರ್ತಿದ್ದ ಹಾಗೆ ನಿಮ್ಮ ಕಾಲಿಗೆ ಬೀಳುತ್ತೀನಿ, ದಯವಿಟ್ಟು ನನ್ನ ವರ್ಸನಲ್ ಮ್ಯಾಟ್ರಿಗೆ ಬರಬೇಡಿ ಎಂದು ಹೇಳಿದರು. ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು. ನಿಮಗೆ ಬುದ್ದಿ ಇದಿಯಾ ಎಂದು ರೂಪೇಶ್ ರಾಜಣ್ಣ ಕಾರ್ಯವರ್ಧನ್ ವಿರುದ್ಧ ಕೂಗಾಡಿದರು. ಮಾತಾಡಿದ್ರೆ ಕೆಣಕುತ್ತೀರಲ್ಲಾ ಎಂದು ಆರ್ಯವರ್ಧನ್ ಕೂಡ ಜೋರಾಗಿ ಕಿರುಚಾಡಿದರು. ಇಬ್ಬರ ಮಧ್ಯದಲ್ಲೇ ಬಂದ ರೂಪೇಶ್ ಶೆಟ್ಟಿ ಆರ್ಯವರ್ಧನ್ ಪರ ಬ್ಯಾಟ್ ಬೀಸಿದರು. ಕಾಲು ಹಿಡಿದು ಕೇಳಿಕೊಳ್ಳುತ್ತೇನೆ ಅಂತ ಹೇಳಿದ್ರು ತಾನೆ ಬಿಡಿ ಎಂದು ರೂಪೇಶ್ ಶೆಟ್ಟಿ ಕೇಳಿಕೊಂಡರು. ಆದರೂ ಸುಮ್ಮನಾಗದ ರೂಪೇಶ್ ರಾಜಣ್ಣ ಮತ್ತಷ್ಟು ಕಿರುಚಾಡಿದರು. ಇಬ್ಬರ ಜಗಳದಿಂದ ಬೇಸತ್ತ ಉಳಿದ ಸ್ಪರ್ಧಿಗಳು ಸೈಲೆಂಟ್ ಆದರು. ಇಬ್ಬರ ಜಗಳ ತಾರಕಕ್ಕೇರಿದೆ. ಇಂದಿನ ಸಂಚಿಕೆಯಲ್ಲಿ ಇಬ್ಬರ ಕಿತ್ತಾಡಿದ್ದೇಕೆ ಎನ್ನುವ ವಿಚಾರ ಬಹಿರಂಗ ವಾಗಲಿದೆ.
BBK9: ರೂಪೇಶ್ ರಾಜಣ್ಣ ಮಾತಿಗೆ ಬಿಕ್ಕಿ ಬಿಕ್ಕ ಅತ್ತ ದಿವ್ಯಾ ಉರುಡುಗ; ಇಲ್ಲಿ ಯಾರ್ ರಿಯಲ್ ಯಾರ್ ಫೇಕ್?
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು
ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನಿ ನಕ್ಷತ್ರ ಧರಾವಾಹಿ ಖ್ಯಾತಿಯ ನಟಿ ಮಯೂರಿ, ದೀಪಿಕಾ ದಾಸ್, ನವಾಜ್, ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ, ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.
ಬದಲಾಗಲು ಸಾಧ್ಯವೇ ಇಲ್ಲ ರೂಪಿ..ನನ್ನ ರಾಕ್‌ಸ್ಟಾರ್ ನೀನು; ರೂಪೇಶ್ ಬಗ್ಗೆ ಸಾನ್ಯಾ ಪೋಸ್ಟ್
ಮನೆಯಿಂದ ಹೊರಹೋಗಿರುವ ಸ್ಪರ್ಧಿಗಳು
ಬಿಗ್ ಬಾಸ್ ಸೀಸನ್ 9ರ ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. 3ನೇ ವಾರ ದರ್ಶ್ ಚಂದ್ರಪ್ಪ ಮನೆಯಿಂದ ಹೊರ ಹೋಗಿದ್ದಾರೆ. 4ನೇ ವಾರ ಮಯೂರಿ ಹಾಗೂ 5ನೇ ವಾರ ನೇಹಾ ಗೌಡ, 6ನೇ ವಾರ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 12 ಮಂದಿ ಇದ್ದಾರೆ. 7ನೇ ವಾರ ಯಾರು ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.