ಭಾರೀ ಸಮಸ್ಯೆಯ ಸುಳಿಯಲ್ಲಿ ಡ್ರೋನ್ ಪ್ರತಾಪ್; ಪ್ಲಾನ್‌ ಮಾಡಿದ್ರಾ ಮನೆಯ ಸದಸ್ಯರು!

ಹಾಗಿದ್ರೆ, ಗೆಲ್ಲುವ ಸದಸ್ಯ ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ ಮೂರು ಹೆಸರುಗಳು ಕಾಣಿಸುತ್ತಿವೆ. ಕಾರ್ತಿಕ್, ಸಂಗೀತಾ ಹಾಗೂ ತನಿಷಾ. ಈ ಮೂವರಲ್ಲಿ ಒಬ್ಬರು ವಿನ್ನರ್, ಇನ್ನೊಬ್ಬರು ರನ್ನರ್ ಅಪ್ ಹಾಗೂ ಮತ್ತೊಬ್ಬರು ಸಹಜವಾಗಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದ್ದಾರೆ.

Drone Prathap nominates for negative energy in bigg boss house season 10 srb

ಬಿಗ್ ಬಾಸ್ ಮನೆಯಲ್ಲಿ ನೆಗೆಟಿವ್ ಸದಸ್ಯರು ಯಾರು? ಎಂಬ ಬಗ್ಗೆ ಟಾಸ್ಕ್ ನೀಡಲಾಗಿತ್ತು. ಅಂದರೆ, ಪ್ರತಿಯೊಬ್ಬರೂ ಯಾರಾದರೊಬ್ಬರ ಹೆಸರು ಹೇಳಬೇಕು. ಅದರಂತೆ, ವಿನಯ್ ಗೌಡ (Vinay Gowda), ವರ್ತೂರು ಸಂತೋಷ್ ಹಾಗೂ ತನಿಷಾ ಎಲ್ಲರೂ ಡ್ರೋಣ್ ಪ್ರತಾಪ್ (Drone Prathap) ಹೆಸರು ಹೇಳಿದ್ದಾರೆ. ಅದಕ್ಕೆ ಪ್ರತಿಯೊಬ್ಬರೂ ಅವರವರ ಅನಿಸಿಕೆಯಂತೆ ಕಾರಣ ಕೊಟ್ಟಿದ್ದಾರೆ. ವರ್ತೂರು ಸಂತೋಷ್ (Varthur Santhosh) ಮಾತನಾಡಿ 'ಅವರಿಗೆ ಬೇಕಾದಾಗ ಬರ್ತಾರೆ, ಬೇಡ ಅಂದ್ರೆ ದೂರ ಇರ್ತಾರೆ. ಅವರಲ್ಲಿ ನಂಗೆ ನೆಗೆಟಿವ್ ಎನರ್ಜಿ ಕಾಣಿಸ್ತಿದೆ' ಎಂದಿದ್ದಾರೆ. ತನಿಷಾ ಕುಪ್ಪುಂದ (Tanisha Kuppanda) 'ಅವರಿಗೆ ಬೇಕಾದಾಗ ವೈಸ್ ರೈಸ್ ಮಾಡೋದಕ್ಕೆ ಗೊತ್ತಿದೆ ಅವ್ರಿಗೆ, ಸತ್ಯ ಮುಚ್ಚಿ ಇಡ್ತಾರೆ, ಇಲ್ಲ ಸುಳ್ಳು ಹೇಳ್ತಾರೆ' ಎಂದಿದ್ದಾರೆ. 

ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರತಾಪ್ 'ಅವರ ಮಾತುಗಳನ್ನು ಒಪ್ಕೋಳ್ಳೋಕೆ ಅವ್ರು ಯಾರೂ ಅಲ್ಲ, ಅವರ ಅನಿಸಿಕೆ ಅವ್ರದ್ದು' ಎಂದಿದ್ದಾರೆ. ಒಟ್ಟಿನಲ್ಲಿ, ಬಹಳಷ್ಟು ಸದಸ್ಯರು ನೆಗೆಟಿವ್ ಎನರ್ಜಿ ಎಂದಿದ್ದು ಬಹುಶಃ ಪ್ರತಾಪ್ ಅವರ ಗೆಲುವಿಗೆ ಅಡ್ಡಗೋಡೆ ಆಗಬಹುದು ಎಂದೇ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆ ಆಗುತ್ತಿದೆ. ಬಿಗ್ ಬಾಸ್ ಸಂಚಿಕೆಯ ಶುರುವಿನಲ್ಲಿ ಇದ್ದಷ್ಟು ಪ್ರತಾಪ್ ಬಗೆಗಿನ ಒಳ್ಳೆಯ ಒಪಿನಿಯನ್ ಈಗ ಇಲ್ಲ ಎಂಬುದನ್ನು ನಾವು ಸಾಮಜಿಕ ಮಾಧ್ಯಮಗಳ ಮೂಲಕ ಅರ್ಥ ಮಾಡಿಕೊಳ್ಳಬಹುದು. ಪ್ರತಾಪ್ ಈಗ ವಿನ್ನರ್ ಕ್ಯಾಂಡಿಡೇಟ್ ಪಟ್ಟದಿಂದ ಕೆಳಗಿಳಿದಿದ್ದಾರೆ ಎಂಬುದು ಹಲವರ ಅಭಿಮತ. 

ಬೊಂಬಾಟ್ ಭೋಜನ ಸಾವಿರದ ಸಂಚಿಕೆಗೆ ಕನಸಿನ ರಾಣಿ ಮಾಲಾಶ್ರೀ ಆಗಮನ!

ಹಾಗಿದ್ರೆ, ಗೆಲ್ಲುವ ಸದಸ್ಯ ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ ಮೂರು ಹೆಸರುಗಳು ಕಾಣಿಸುತ್ತಿವೆ. ಕಾರ್ತಿಕ್, ಸಂಗೀತಾ ಹಾಗೂ ತನಿಷಾ. ಈ ಮೂವರಲ್ಲಿ ಒಬ್ಬರು ವಿನ್ನರ್, ಇನ್ನೊಬ್ಬರು ರನ್ನರ್ ಅಪ್ ಹಾಗೂ ಮತ್ತೊಬ್ಬರು ಸಹಜವಾಗಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದ್ದಾರೆ ಎಂಬ ಮಾತು ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ಚರ್ಚೆ ಆಗುತ್ತಿದೆ. ಓಟು ಮಾಡುವವರ ಪ್ಲಾಟ್‌ಫಾರಂ ಅದೇ ಆಗಿರುವುದರಿಂದ ಅವರ ಅಭಿಪ್ರಾಯವನ್ನು ಅಲ್ಲಗಳೆಯಲಾಗದು. ಅದೇನೇ ಇರಲಿ, ಬಿಗ್ ಬಾಸ್ ಶೋ ಇನ್ನು 22 ದಿನಗಳು ಇರಲಿದ್ದು, ಅಷ್ಟರೊಳಗೆ ಅಲ್ಲಿ ಏನೇನು ಆಗಲಿದೆ ಎಂಬುದನ್ನು ಊಹಿಸಲು ಅಸಾಧ್ಯ ಎನ್ನಬಹುದು. 

ಆಕಾಶ್ ಹೇಳಿದ್ದು ಕೇಳಿ ಶಾಕ್ ಆದ್ರು ಅಜ್ಜಿ; ಮುಗ್ಧೆ ಪುಷ್ಪಾ ತಕತಕ ಕುಣಿದು ಆಗಿದ್ದೇನು ನೋಡಿ!

ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಶನ್ ಆಗಿದೆ. ಮೈಕೆಲ್ ಅಜಯ್ ಹಾಗೂ ಅವಿನಾಶ್ ಶೆಟ್ಟಿ ಮನೆಯಿಂದ ಹೊರಹೋಗಿದ್ದಾರೆ. ಉಳಿದಿರುವ ಸ್ಪರ್ಧಿಗಳಲ್ಲಿ ಗೆಲ್ಲುವವರು ಯಾರು ಎಂಬುದು ಇನ್ನಷ್ಟೇ ನಿರ್ಧಾರವಾಗಲಿದೆ. ಸದ್ಯಕ್ಕೆ ಬಿಗ್ ಬಾಸ್ ಮನೆ ವಾರ್ ಕಂಟಿನ್ಯೂ ಆಗಿದೆ. ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ  ವೀಕ್ಷಿಸಬಹುದು.

 

 

Latest Videos
Follow Us:
Download App:
  • android
  • ios