Asianet Suvarna News Asianet Suvarna News

ಅಮ್ಮನ ಜೊತೆ ಡ್ರೋನ್​ ಪ್ರತಾಪ್​ ಭರ್ಜರಿ ಡ್ಯಾನ್ಸ್​: ನಿಮ್ಗೂ ಇಂಥ ಆಸೆ ಇದ್ಯಾ ಕೇಳಿದ ವಾಹಿನಿ!

ಅಮ್ಮನ ಜೊತೆ ಡ್ರೋನ್​ ಪ್ರತಾಪ್​ ನನ್ನಮ್ಮ ಸೂಪರ್​ಸ್ಟಾರ್​ ವೇದಿಕೆ ಮೇಲೆ ಭರ್ಜರಿ ಡ್ಯಾನ್ಸ್​ ಮಾಡಿದ್ದಾರೆ. ನಿಮ್ಗೂ ಇಂಥ ಆಸೆ ಇದ್ಯಾ ಕೇಳಿದ ವಾಹಿನಿ!
 

Drone Pratap performed  dance with mother in  Nannamma Superstar stage suc
Author
First Published Mar 10, 2024, 4:46 PM IST

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ನನ್ನಮ್ಮ ಸೂಪರ್​ಸ್ಟಾರ್​ ವೇದಿಕೆ ಮೇಲೆ ಬಿಗ್​ಬಾಸ್​ ಖ್ಯಾತಿಯ ಡ್ರೋನ್​ ಪ್ರತಾಪ್​ ಅವರ ಅಮ್ಮನ ಆಗಮನವೂ ಆಗಿದೆ.  ಯಾವುದೋ ಕಾರಣಕ್ಕೆ ಮಗನ ಮೇಲೆ ಮೂರು ವರ್ಷ ಕೋಪ ಮಾಡಿಕೊಂಡು ಇದೀಗ ಮಗನೊಟ್ಟಿನ ವೈಮನಸ್ಸು ಮರೆತಿದ್ದಾರೆ ಈ ಅಮ್ಮ. ನೋಡಲು ಹಾಗೂ ಮಾತಿನಲ್ಲಿಯೂ ತುಂಬಾ ಸಿಂಪಲ್​ ಹಾಗೂ ಮೃದುವಾಗಿರೋ ಡ್ರೋನ್​ ಪ್ರತಾಪ್​ ಅಮ್ಮ ಇದಾಗಲೇ ವೀಕ್ಷಕರ ಮನಸ್ಸನ್ನು ಗೆದಿದ್ದಾರೆ. ಹಲವಾರು ಮಂದಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್​ ಪ್ರತಾಪ್​ ಮೇಲಿರುವ ಗಂಭೀರ ಆರೋಪಗಳ ನಡುವೆಯೂ ಇದೀಗ ಬಿಗ್​ಬಾಸ್​ ಸಕ್ಸಸ್​ ಬಳಿಕ ಮಗನನ್ನು ಒಪ್ಪಿಕೊಂಡಿದ್ದಾರೆ ಡ್ರೋನ್​ ಅಮ್ಮ. ಇದೀಗ ನನ್ನಮ್ಮ ಸೂಪರ್​ಸ್ಟಾರ್​ ವೇದಿಕೆ ಮೇಲೆ ಇದಾಗಲೇ ಅಮ್ಮನಿಗೆ ಮುದ್ದೆ ಮಾಡಿ ತಿನಿಸಿದ್ದಾರೆ ಡ್ರೋನ್​ ಪ್ರತಾಪ್​.

ಈಗ ಅಮ್ಮನ ಜೊತೆ ಡ್ಯಾನ್ಸ್​ ಮಾಡುವಂತೆ ನಿರೂಪಕಿ ಸುಷ್ಮಾ ಪ್ರತಾಪ್​ಗೆ ಹೇಳಿದ್ದಾರೆ. ಡ್ರೋನ್​ ಪ್ರತಾಪ್​ ಡ್ಯಾನ್ಸ್​ಗೂ ಸೈ. ಇದನ್ನು ಅವರು ಬಿಗ್​ಬಾಸ್​ನಲ್ಲಿಯೇ ನಿರೂಪಿಸಿದ್ದಾರೆ. ಆದರೆ ಅಮ್ಮ ತುಂಬಾ ನಾಚಿಕೊಂಡರು. ತಮಗೆ ಡ್ಯಾನ್ಸ್​ ಬರುವುದಿಲ್ಲ ಎಂದರು. ಕೊನೆಗೆ ಮಗನೇ ಖುದ್ದು ಅಮ್ಮನ ಕೈ ಹಿಡಿದು ಡ್ಯಾನ್ಸ್​ ಮಾಡಿದ್ದಾರೆ. ಇದನ್ನು ನೋಡಿ ಪ್ರೇಕ್ಷಕರು ಭಲೇ ಭಲೇ ಎನ್ನುತ್ತಿದ್ದಾರೆ. ಅಷ್ಟಕ್ಕೂ ಎಷ್ಟೋ ಅಮ್ಮಂದಿರಿಗೆ ಮಕ್ಕಳಂತೆಯೇ ಆಡಬೇಕು, ನರ್ತಿಸಬೇಕು, ಕುಣಿಯಬೇಕು ಎಂಬ ಆಸೆ ಇರುತ್ತದೆ. ಮಕ್ಕಳಲ್ಲಿ ಮಕ್ಕಳಾಗಿ ಇರಬೇಕು ಎಂಬ ಆಸೆ ಇರುವುದು ಸಹಜ.  ಆದರೆ ಯಾರು ಏನು ಅಂದುಕೊಳ್ಳುತ್ತಾರೋ ಎಂಬ ಹಿಂಜರಿಗೆ ಹಲವರಿಗೆ. ಅಕ್ಕ ಪಕ್ಕದವರು ಏನಂದುಕೊಂಡಾರು, ನೋಡಿದವರು ಏನಂದುಕೊಂಡಾರು ಎನ್ನುವ ಭಯ. ಇದೇ ಕಾರಣಕ್ಕೆ ಎಲ್ಲವನ್ನೂ ನುಂಗಿಕೊಂಡು ಇರುತ್ತಾರೆ. 

ಡ್ರೋನ್‌ ಪ್ರತಾಪ್‌ ಅಮ್ಮನ ಕಣ್ಣೀರು: ಕಾಗೆ ಹಾರಿಸೋದು ಇನ್ನಾದ್ರೂ ಬಿಡಪ್ಪ ಎಂದ ನೆಟ್ಟಿಗರು

ಇನ್ನು ಎಷ್ಟೋ ಮಕ್ಕಳಿಗೂ ಅಮ್ಮ ತಮ್ಮ ಜೊತೆ ಡ್ಯಾನ್ಸ್​ ಮಾಡುವ ಆಸೆ ಇರುತ್ತದೆ. ಆದರೆ ವಯಸ್ಸಿನ ಕಾರಣ ನೀಡಿ ಅಮ್ಮಂದಿರು ಅದಕ್ಕೆ ನಿರಾಕರಿಸುವುದು ಉಂಟು. ಇದೀಗ ಇದೇ ಪ್ರಶ್ನೆಯನ್ನು ಕಲರ್ಸ್​ ಕನ್ನಡ ವಾಹಿನಿ ಅಮ್ಮಂದಿರ ಮುಂದೆ ಇಟ್ಟಿದೆ. ಅವ್ವನ ಜೊತೆ ಕುಣಿಯೋ ಆಸೆ ನಿಮಗೂ ಇದ್ಯಾ ಎಂದು ಮಕ್ಕಳಿಗೆ ವಾಹಿನಿ ಪ್ರಶ್ನಿಸಿದೆ. ಇದಕ್ಕೆ ಹಲವರು ತಮಗೂ ಇಂಥ ಆಸೆಯಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ. 

 ಅಂದಹಾಗೆ, ಡ್ರೋನ್​ ಪ್ರತಾಪ್​ ಕೆಲ ವರ್ಷಗಳ ಹಿಂದೆ ತುಂಬಾ ಆರೋಪ, ಟೀಕೆಗಳಿಗೆ ಗುರಿಯಾದವರು. ತಾವೊಬ್ಬ ಯುವ ವಿಜ್ಞಾನಿ ಎಂದು ಹೇಳಿಕೊಂಡು ಹಲವರನ್ನು ಯಾಮಾರಿಸಿರುವ ಗಂಭೀರ ಆರೋಪ ಇವರ ಮೇಲಿದೆ. ಮಾತಿನಲ್ಲಿ ಎಂಥವರನ್ನೂ ಮೋಡಿ ಮಾಡಬಲ್ಲ ಚಾಣಾಕ್ಷತೆ ಇವರಿಗೆ ಇದೆ.  ಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್​ ಮಾತಿಗೆ ತಲೆದೂಗಿದರು. ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋಣ್​. ಡ್ರೋನ್​ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್​ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್​ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್​ಗಳು ದಾಖಲಾದವು. ಸ್ವಲ್ಪ ಸಮಯ ತಲೆ ಮರೆಸಿಕೊಂಡಿದ್ದ ಪ್ರತಾಪ್‌ ಬಿಗ್‌ಬಾಸ್‌ನಲ್ಲಿ ಪ್ರತ್ಯಕ್ಷ ಆಗಿ ಭಾರಿ ಅಭಿಮಾನಿಗಳನ್ನೂ ಗಳಿಸಿದರು. ಜೊತೆಗೆ ಅಚ್ಚರಿ ಎನ್ನುವಂತೆ ರನ್ನರ್‌ ಅಪ್‌ ಕೂಡ ಆದರು.

ಹುಡುಗಿ ಯಾರೇ ಇರಲಿ, ಜಡೆ ಹೆಣೆಯುತ್ತಿರಲಿ.... ಕನಸಿನ ಕನ್ಯೆ ಕುರಿತು ಡ್ರೋನ್​ ಪ್ರತಾಪ್​ ಬಾಯಲ್ಲೇ ಕೇಳಿ...
 

Follow Us:
Download App:
  • android
  • ios