Asianet Suvarna News Asianet Suvarna News

ಹುಡುಗಿ ಯಾರೇ ಇರಲಿ, ಜಡೆ ಹೆಣೆಯುತ್ತಿರಲಿ.... ಕನಸಿನ ಕನ್ಯೆ ಕುರಿತು ಡ್ರೋನ್​ ಪ್ರತಾಪ್​ ಬಾಯಲ್ಲೇ ಕೇಳಿ...

ತಾವು ಮದ್ವೆಯಾಗುವ ಹುಡುಗಿ ಹೇಗಿರಬೇಕು ಎಂಬ ಬಗ್ಗೆ ಸಾವಿರಾರು ಯುವತಿಯರ ಎದುರು ಬಿಗ್​ಬಾಸ್​ ಖ್ಯಾತಿಯ ಡ್ರೋನ್​ ಪ್ರತಾಪ್​  ಏನು ಹೇಳಿದ್ದಾರೆ ಕೇಳಿ...
 

Drone Pratap of Bigg Boss fame about his dream girl whom he should marry suc
Author
First Published Feb 24, 2024, 5:44 PM IST

ಬಣ್ಣ ಯಾವುದಿದ್ರೂ ಪರ್ವಾಗಿಲ್ಲ ಸರ್​, ಆವಾವಾಗ ಜಡೆ ಹೆಣೆದುಕೊಳ್ತಿರ್ಬೇಕು... ನೋಡಿದ ತಕ್ಷಣ ಒಳ್ಳೆಯ ಹುಡುಗಿ ಅನ್ನಿಸಬೇಕು... ಅಪ್ಪ ನೋಡಿದ ಹುಡ್ಗಿಯನ್ನೇ ಮದ್ವೆಯಾಗೋದು. ಉಳಿದವರೆಲ್ಲರೂ ನನಗೆ ದೀದೀಗಳೇ ಎನ್ನುತ್ತಲೇ ಮದ್ವೆಯಾಗುವ ಹುಡುಗಿಯ ಬಗ್ಗೆ ಮಾತನಾಡಿದ್ದಾರೆ ಬಿಗ್​ಬಾಸ್​ ರನ್ನರ್​ ಅಪ್​ ಡ್ರೋನ್​ ಪ್ರತಾಪ್​. ಅಪ್ಪ ತುಂಬಾ ಕಷ್ಟಪಟ್ಟಿದ್ದಾರೆ. ಅದಕ್ಕಾಗಿ ಅವರ ಇಚ್ಛೆ ಮೀರಿ ನಾನು ಹೋಗಲ್ಲ. ಅವರು ಯಾವ ಹುಡುಗಿಯನ್ನು ಮದ್ವೆಯಾಗು ಅಂತಾರೋ ಅವರನ್ನೇ ಮದ್ವೆಯಾಗೋದು ಅನ್ನುತ್ತಲೇ ವೇದಿಕೆಯ ಮೇಲಿದ್ದ ಹುಡುಗಿಯರನ್ನೆಲ್ಲಾ ದೀದೀ ಎಂದೇ ಕರೆದರು ಡ್ರೋನ್​ ಪ್ರತಾಪ್​. ಪ್ರತಾಪ್​ರನ್ನು ಮದ್ವೆಯಾಗುವುದಾಗಿ ತಾವು ರೆಡಿ ಎಂದು ಹಲವಾರು ಯುವತಿಯರು ಕೈಎತ್ತಿದರೂ ಅವರನ್ನೆಲ್ಲಾ ದೀದಿ ಎಂದೇ ಕರೆದರು ಡ್ರೋನ್​.

ಇದು ನಡೆದದ್ದು ಹೊಸಪೇಟೆಯಲ್ಲಿ.   ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕೆಂಡಸಂಪಿಗೆ ಸೀರಿಯಲ್​ ಜಾತ್ರೆ ಹೊಸಪೇಟೆಯಲ್ಲಿ ನಡೆದಿದ್ದು, ಅದರಲ್ಲಿ ಬಿಗ್​ಬಾಸ್​ನ ಕೆಲವು ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ ಒಬ್ಬರು ಡ್ರೋನ್​ ಪ್ರತಾಪ್​.  ಬಿಗ್​ಬಾಸ್​ನ ವಿನಯ್​, ಕಾರ್ತಿಕ್​, ಸಂಗೀತಾ ಕೂಡ ಇದೇ ವೇದಿಕೆಯ ಮೇಲೆ ಪರ್ಫಾಮ್​ ಮಾಡಿದ್ದಾರೆ. ಈ ಸಮಯದಲ್ಲಿ ಫ್ಯಾನ್ಸ್​ ಇವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದು, ನೀವೆಲ್ಲಾ ತುಂಬಾ ಇಷ್ಟ ಎಂದಿದ್ದಾರೆ. ಇದರಲ್ಲಿ ಗಮನ ಸೆಳೆದಿರುವುದು ಹೊಸಪೇಟೆಯ ಯುವತಿಯರು ಡ್ರೋನ್​ ಪ್ರತಾಪ್​ ಅವರಿಗೆ, ನೀವು ಎಂದರೆ ತುಂಬಾ ಇಷ್ಟ. ನಿಮ್ಮನ್ನು ಮದುವೆಯಾಗಲು ಬಂದಿದ್ದೇವೆ ಎಂದಿದ್ದಾರೆ. ಇದನ್ನು ಕೇಳಿ ಡ್ರೋನ್​ ಪ್ರತಾಪ್​ ನಾಚಿ ನೀರಾಗಿದ್ದಾರೆ. ಯೇ ಯೇ ಎನ್ನುತ್ತಲೇ ಯುವತಿಯರಿಂದ ದೂರ ಸರಿಸಲು ನೋಡಿದ್ದು, ಸಭಿಕರು ಬಿದ್ದೂ ಬಿದ್ದೂ ನಕ್ಕಿದ್ದಾರೆ. ಈ ಸಮಯದಲ್ಲಿ ಅವರಿಗೆ ಕನಸಿನ ಕನ್ಯೆ ಅರ್ಥಾತ್​ ಮದುವೆಯಾಗುವ ಹುಡುಗಿಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗ ಅವರು ಹೀಗೆಲ್ಲಾ ಹೇಳಿದ್ದಾರೆ. ಬಿಗ್​ಬಾಸ್​ ಮನೆಯೊಳಕ್ಕೆ ಎಲ್ಲರನ್ನೂ ದೀದೀ ದೀದೀ ಎಂದು ಕರೆಯುವ ನಿಮ್ಮ ಬೀವಿ (ಪತ್ನಿ) ಹೇಗಿರಬೇಕು ಎಂದು ಪ್ರಶ್ನಿಸಿದಾಗ ಡ್ರೋನ್​ ಈ ಉತ್ತರ ಕೊಟ್ಟಿದ್ದಾರೆ. 

ಮದ್ವೆಯಾಗ್ತೇನಂತ ಪ್ರತಾಪ್​ ಬಳಿ ಹೊಸಪೇಟೆ ಯುವತಿಯರು! ನಾಚಿ ನೀರಾದ ಡ್ರೋನ್​ ಮಾಡಿದ್ದೇನು ನೋಡಿ...

ಅಷ್ಟಕ್ಕೂ  ಈಗ ಬಿಗ್​ಬಾಸ್​​ ಖ್ಯಾತಿಯ ಡ್ರೋನ್​ ಪ್ರತಾಪ್​ದ್ದೇ ಹವಾ. ಇವರಿಗಾಗಿ ಫ್ಯಾನ್ಸ್​ ಪೇಜ್​ ಅಸಂಖ್ಯ ಹುಟ್ಟುಕೊಂಡಿದೆ. ಪ್ರತಾಪ್​ ಎಲ್ಲಿ ಹೋದರೂ ಅದರ ಬಗ್ಗೆ ಅಪ್​ಡೇಟ್​ ಕೊಡುತ್ತಲೇ ಇರುತ್ತಾರೆ. ಅದೇ ರೀತಿ ಬಿಗ್​ಬಾಸ್​ ಮನೆಗೆ ಹೋಗಿ ಬಂದ ಮೇಲೆ ಇವರ ಅಭಿಮಾನಿಗಳ ಬಳಗ ಬಹುದೊಡ್ಡದಾಗಿಯೇ ಇದೆ. ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರನ್ನು ಮಾತಿನ ಮೋಡಿಯಲ್ಲಿ ಸಿಲುಕಿಸಿ ಮೋಸ, ವಂಚನೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದ ಡ್ರೋನ್​ ಪ್ರತಾಪ್​ಗೆ, ಬಿಗ್​ಬಾಸ್​ ಕೃಪೆಯಿಂದಾಗಿ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಬಿಗ್​ಬಾಸ್​ನಲ್ಲಿ ರನ್ನರ್​ ಅಪ್​ ಆದ ಬಳಿಕ ಡ್ರೋನ್​ ಹೀರೋ ಆಗಿಬಿಟ್ಟಿದ್ದಾರೆ. ಯಾವುದೇ ಸ್ಟಾರ್​ ನಟರಿಗೂ ಕಡಿಮೆ ಇಲ್ಲದಂತೆ ಅದ್ಧೂರಿ ಸ್ವಾಗತ ಇವರಿಗೆ ಸಿಗುತ್ತಿದೆ. ಕೊನೆಯವರೆಗೂ ಬಿಗ್​ಬಾಸ್​ನಲ್ಲಿ ಇರುತ್ತೇನೆ. ಫಿನಾಲೆಯಲ್ಲಿ ಸುದೀಪ್​ ಅವರು ಎತ್ತಲು ಹಿಡಿಯುವ ಕೈಯಲ್ಲಿ ನನ್ನದೂ ಒಂದಾಗಿರುತ್ತದೆ ಎಂದು ಅಂದುಕೊಂಡಿರಲೇ ಇಲ್ಲ. ಮೊದಲ ವಾರದಲ್ಲಿಯೇ ಅಲ್ಲಿ ನಡೆದ ಕೆಲವು ಘಟನೆಗಳನ್ನು ನೋಡಿ ಶೀಘ್ರವೇ ಬಿಗ್​ಬಾಸ್​ನಿಂದ ಹೊರಕ್ಕೆ ಹೋಗುತ್ತೇನೆ ಅಂದುಕೊಂಡಿದ್ದೆ. ಆದರೆ ಎಲ್ಲರ ಆಶೀರ್ವಾದದಿಂದ ರನ್ನರ್​ ಅಪ್​ ಆದೆ ಎಂದು ಹೇಳಿಕೊಂಡಿರುವ ಡ್ರೋನ್​ ಪ್ರತಾಪ್​ ಅವರಿಗೆ ಬಿಗ್​ಬಾಸ್​ ಹೊಸದೊಂದೇ ಜೀವನ ಕೊಟ್ಟಿದೆ. 

ಈಚೆಗಷ್ಟ ಡ್ರೋನ್​ ಪ್ರತಾಪ್​ ಆಟೋ ಓಡಿಸಿದ್ದು, ಅದರ ವಿಡಿಯೋ ಅನ್ನು ಫ್ಯಾನ್ಸ್​ ಪೇಜ್​ ಶೇರ್​ ಮಾಡಿಕೊಂಡಿತ್ತು. ಆಟೋ ರಾಜ ಶಂಕರ್​ನಾಗ್​ ಅವರಿಗೆ ಜೈ ಎನ್ನುವ ಮೂಲಕ ಆಟೋ ಓಡಿಸುವ ಎಲ್ಲರಿಗೂ ಪ್ರತಾಪ್​ ಶುಭ ಹಾರೈಸಿದ್ದರು. ಇವರ ಈ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್​ ಮಾಡಿದ್ದು, ಹಲವರು ಮೆಚ್ಚುಗೆ ಸೂಚಿಸಿದ್ದರು. ನಿಮ್ಮ ಒಳ್ಳೆಯ ಗುಣ ನಿಮ್ಮನ್ನು ಕಾಪಾಡುತ್ತದೆ ಎಂದಿದ್ದರು. ಯಾರು ಏನೇ ಅಂದರೂ ಕ್ಯಾರೇ ಮಾಡಬೇಡಿ ಎಂದೆಲ್ಲಾ ಹೇಳಿದ್ದರು. ಆದರೆ ಒಂದಿಷ್ಟು ಮಂದಿ ಇವರ ಕಾಲೆಳೆದಿದ್ದರು.  ಇದಕದ್ಕೂ ಮೊದಲು  ಡ್ರೋನ್​ ಪ್ರತಾಪ್​ ಮಹಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು.  ಚಾಮರಾಜನಗರದ ಹನೂರು ತಾಲೂಕಿನಲ್ಲಿರುವ  ಮಹದೇಶ್ವರ ಬೆಟ್ಟಕ್ಕೆ  ಪ್ರತಾಪ್ ತೆರಳಿ ಆಶೀರ್ವಾದ ಪಡೆದಿದ್ದರು. ಈ ಸಂದರ್ಭದಲ್ಲಿ ಅವರು,  ಅನ್ನ ಪ್ರಸಾದವನ್ನು ಬರಿಯ ನೆಲದ ಮೇಲೆ ತಿಂದು ಹರಕೆ ತೀರಿಸಿದ್ದರು. ತಟ್ಟೆಯ ಸಹಾಯವಿಲ್ಲದೆ, ನೆಲದ ಮೇಲೆಯೇ ಸೇವಿಸಿದ್ದಾರೆ. ಇದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸೌಂಡ್​ ಮಾಡಿತ್ತು. 

ಸುಂಟರಗಾಳಿ ಪ್ರತಾಪ್​! ಒಂದ್ಸಲ ಆಗ್ಲಿಲ್ಲ... ಎರಡು ಸಲ ಆಗ್ಲಿಲ್ಲ ಎನ್ನುತ್ತಲೇ ಡ್ರೋನ್​ ಮಾಡಿದ್ರೊಂದು ಹೊಸ ಟ್ರಿಕ್ಸ್​!

Follow Us:
Download App:
  • android
  • ios