Kannadathi: ಹರ್ಷನ ಅಣ್ಣ ದೇವ್ ಎಲ್ಲಿ ಹೋದ? ಹರ್ಷ ಭುವಿ ಮದ್ವೆಗೂ ಬರೋಲ್ವಾ?
ಕನ್ನಡತಿ ಸೀರಿಯಲ್‌ನಲ್ಲಿ ದೇವ್ ಅಂದ್ರೆ ಹರ್ಷನ ಅಣ್ಣ ಪಾತ್ರ ಸದ್ಯ ನಾಪತ್ತೆಯಾಗಿದೆ. ಹರ್ಷನ ಕಸಿನ್ ಆಗಿ ದೇವಣ್ಣ ಅಂತಲೇ ಕರೆಸಿಕೊಳ್ಳುತ್ತಿದ್ದ ಈ ಪಾತ್ರ ಸುಮಾರು ದಿನದಿಂದ ಸೀರಿಯಲ್‌ನಲ್ಲಿ ಕಾಣಿಸ್ತಾ ಇಲ್ಲ. ದೇವ್ ಎಲ್ಲಿ ಹೋದ, ಹರ್ಷ ಭುವಿ ಮದ್ವೆಗೂ ಬರಲ್ವಾ ಅಂತ ಸೋಷಿಯಲ್ ಮೀಡಿಯಾದಲ್ಲಿ ವೀಕ್ಷಕರು ಕಮೆಂಟ್ ಮಾಡ್ತಿದ್ದಾರೆ.
'ಕನ್ನಡತಿ'(Kannadathi) ಸೀರಿಯಲ್‌ನಲ್ಲಿ ಹರ್ಷ ಭುವಿ ಮದುವೆಯ ಚಪ್ಪರಶಾಸ್ತ್ರಗಳು ನಡೆಯುತ್ತಿವೆ. ಅಂದರೆ ಮದುವೆ (Wedding) ಶುರುವಾದ ಹಾಗೆ. ಇಷ್ಟೆಲ್ಲ ಆದ್ರೂ ಹರ್ಷನ ಕಸಿನ್ (Cousin) ದೇವ್ ಪತ್ತೆನೇ ಇಲ್ಲ. ಆದರೆ ಆತನ ಪತ್ನಿ(Wife) ಡಾ ತಾಪ್ಸಿ ಮಾತ್ರ ಎಂಗೇಜ್‌ಮೆಂಟ್(Engagement)ನಿಂದ ಹಿಡಿದು ಮದುವೆ ಕಾರ್ಯಕ್ರಮದವರೆಗೂ ಎಲ್ಲ ಸಂಭ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾಳೆ. ಹಾಗಿದ್ದರೆ ದೇವ್(Dr. Dev) ಎಲ್ಲಿ ಹೋದ, ಆತ ಹರ್ಷ ಭುವಿ ಮದುವೆಗೂ ಬರಲ್ವಾ ಅನ್ನೋ ರೀತಿಯ ಕಮೆಂಟ್‌ಗಳು(Comments) ಸೋಷಿಯಲ್ ಮೀಡಿಯಾ(Social Media) ದಲ್ಲಿ ಹೆಚ್ಚೆಚ್ಚು ಕಂಡು ಬರ್ತಿವೆ. 'ಹರ್ಷನ ಮದ್ವೆಗಾದ್ರೂ ಡಾ ದೇವ್ ಬರಬಹುದಾ?' ಅಂತ ಕೆಲವು ಫ್ಯಾನ್ಸ್ ಕಮೆಂಟ್ ಮಾಡಿದ್ರೆ, ಒಬ್ಬರು ಮಾತ್ರ, 'ಇಷ್ಟೆಲ್ಲ ಆಗುತ್ತಿದ್ದರೂ ದೇವಣ್ಣನ್ನ ಆ ಡೈರೆಕ್ಟರ್(Director) ಎಲ್ಲಿ ಸಾಯಿಸಿದ್ದಾರೋ ಗೊತ್ತಾಗ್ತಿಲ್ಲ' ಅಂತ ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್‌ಅನ್ನು ಸಾಕಷ್ಟು ಜನ ಲೈಕ್(Like) ಮಾಡಿದ್ದಾರೆ.
ದೇವ್ ಮೊದಲಿಂದಲೂ ಅಮ್ಮಮ್ಮನ್ನ ಬಹಳ ಪ್ರೀತಿಯಿಂದ ಕಂಡವನು. ಆತನ ಪತ್ನಿ ಡಾ ತಾಪ್ಸಿ ಆಸ್ತಿಯಲ್ಲಿ ಪಾಲಿಗಾಗಿ ಮನೆ ಬಿಟ್ಟು ಹೋದಾಗಲೂ ಕ್ಯಾರೇ ಅನ್ನಲಿಲ್ಲ. ಅವಳ ಯಾವ ಹಠಕ್ಕೂ ಮಣಿಯಲಿಲ್ಲ. ತನ್ನ ವೈದ್ಯ ವೃತ್ತಿಯನ್ನು ಬಹಳ ಶ್ರದ್ಧೆಯಿಂದ ಮಾಡುತ್ತಿದ್ದವನು ಒಂದು ಹಂತದಲ್ಲಿ ರೌಡಿಯೊಬ್ಬನ ಬಲೆಯಲ್ಲಿ ಸಿಕ್ಕಿ ಸಮಸ್ಯೆ ತಂದುಕೊಳ್ತಾನೆ. ಮುಂದೆ ಅದೂ ಸರಿಹೋಗುತ್ತೆ. ಹರ್ಷ ಭುವಿ ನಡುವೆ ಪ್ರೀತಿ ಶುರುವಾದಾಗ ತುಂಟತನದಿಂದ ಅದನ್ನೆಲ್ಲ ನೋಡ್ತಾ ಅವರ ಪ್ರೀತಿಗೆ ಸದ್ದಿಲ್ಲದೇ ಪ್ರೋತ್ಸಾಹ ಕೊಟ್ಟವನು ದೇವ್. ಆದರೆ ಯಾವಾಗ ಪತ್ನಿ ತಾಪ್ಸಿ ಹಠಕೊಟ್ಟು ಅಮ್ಮಮ್ಮನ ಹಣದಲ್ಲಿ ಆಸ್ಪತ್ರೆ (Hospital) ಕಟ್ಟಿಕೊಳ್ತಾಳೋ, ಅದನ್ನು ದುಡ್ಡು ಮಾಡಲೂ ಬಳಸಿಕೊಳ್ತಾಳೋ ಆಗ ಸಿಟ್ಟಲ್ಲಿ ಅವಳನ್ನು ಬಿಟ್ಟು ಹೋಗಿದ್ದಾನೆ. ಅವತ್ತಿಂದ ಇವತ್ತಿನ ವರೆಗೂ ಆತನ ಪತ್ತೆ ಇಲ್ಲ. ಆತನ ಪಾತ್ರವನ್ನು ಬೇರೆ ಯಾವ ಪಾತ್ರಗಳೂ ನೆನಪಿಸಿಲ್ಲ. ಮನೆಮಂದಿಗೆ ಸ್ವಲ್ಪ ನೋವಾದ್ರೂ ಅದಕ್ಕೆ ಸ್ಪಂದಿಸುವ ಅಮ್ಮಮ್ಮನಿಗೂ ಈ ದೇವ್ ನೆನಪಾಗ್ತಿಲ್ಲ. ಮನೆಯಲ್ಲಿ ಒಬ್ಬನಾಗಿ ಅಷ್ಟು ಕಾಲ ಜೊತೆಗಿದ್ದವನು ಮನೆಯ ಮಗ ಹರ್ಷನ ಮದುವೆಯ ದಿನ ಬಂದರೂ ಕಾಣದೇ ಇರುವುದರ ಬಗ್ಗೆ ಅವರು ಮಾತೇ ಎತ್ತಿಲ್ಲ.ಡಾ ತಾಪ್ಸಿ ಚಪ್ಪರ ಶಾಸ್ತ್ರದಲ್ಲಿ ಖುಷಿಯಿಂದ ಪಾಲ್ಗೊಂಡಿದ್ದಾಳೆ. ಈ ಹಿಂದೆ ಹರ್ಷನ ಎಂಗೇಜ್‌ಮೆಂಟ್ ಆದಾಗಲೂ ಹಸಿರುಪೇಟೆಗೆ ಹೋಗಿ ಎಂಗೇಜ್‌ಮೆಂಟ್‌ನಲ್ಲಿ ಪಾಲ್ಗೊಂಡಿದ್ದಾಳೆ. ಹರ್ಷನಿಗೆ ಅತ್ತಿಗೆ ಬಗ್ಗೆ ಗೌರವ ಇದೆ.
Kannadathi: ಹಣೆಬರಹ ಬದಲಾಯ್ಸಿ ಹರ್ಷನ ಜೊತೆ ಹಸೆಮಣೆ ಏರ್ತಾಳಂತೆ ವರೂ, ಏನ್ ಹೆದ್ರಿಸ್ತೀರಾ ಗುರೂ!
ಇನ್ನೊಂದು ಕಡೆ ಹರ್ಷನ ಚಿಕ್ಕಪ್ಪ ಸುದರ್ಶನ್ (Sudarshan) ಬಂದು ಬಹಳ ಕಾಲವಾಯ್ತು. ಆತ ಸಾನಿಯಾ ಜೊತೆಗೆ ಸೇರ್ಕೊಂಡು ಆಸ್ತಿ ಹೊಡೆಯೋದಕ್ಕೆ ಪ್ಲಾನ್ (Plan) ಮಾಡಿದರೂ ಹರ್ಷ ಭುವಿ ಎಂಗೇಜ್‌ಮೆಂಟ್‌ನಲ್ಲಿ ತಕರಾರಿಲ್ಲದೇ ಪಾಲ್ಗೊಂಡಿದ್ದಾರೆ. ಇನ್ನೊಂದು ಕಡೆ ಮದುವೆಯಲ್ಲಿ ತನಗೆ ಧಾರೆ ಎರೆಯುವವರಿಲ್ಲ ಅಂತ ಕೊರಗ್ತಿದ್ದ ಭುವಿಗೆ ತಂದೆಯ ಸ್ಥಾನದಲ್ಲಿ ಪುರುಷೋತ್ತಮ ಬಂದಿದ್ದಾರೆ. ಈ ಪುರುಷೋತ್ತಮ 'ದೊರೆಸಾನಿ' ಸೀರಿಯಲ್ (Doresani Serial)ನ ದೀಪಿಕಾ ತಂದೆ. ಹಿರಿಯರ ಆಶೀರ್ವಾದ ಪಡೆದೇ ಭುವಿ ಹರ್ಷ ಮದುವೆ ಆಗ್ತಿರೋದು ಅವರಿಗೆ ಆನಂದಭಾಷ್ಪ ತಂದಿದೆ. ಅವರು ಹಸಿರುಪೇಟೆಯ ಪ್ರತಿನಿಧಿಯಾಗಿ ಭುವಿಗೆ ತಂದೆಯ ಸ್ಥಾನದಲ್ಲಿ ನಿಂತು ಮದುವೆ ನಡೆಸಿಕೊಡಲು ಬಂದಿದ್ದಾರೆ. ಅವರ ಜೊತೆಗೆ ಮದುವೆ ಶಾಸ್ತ್ರ ಮಾಡುವ ಹೆಂಗಸರೂ ಹಸಿರು ಪೇಟೆಯಿಂದ ಬಂದಿದ್ದಾರೆ. 'ನಿಮ್ ಮಗಳು ದೀಪಿಕಾ ಮದ್ವೆ ಯಾವಾಗ ಮಾಡ್ತೀರಾ?' ಅನ್ನೋ ಪ್ರಶ್ನೆ ಈ ವೇಳೆಯಲ್ಲಿ ಪ್ರೇಕ್ಷಕರಿಂದ ಪುರುಷೋತ್ತಮ್‌ಗೆ ಎದುರಾಗಿದೆ.
ಹೀಗೆ ಅತಿಥಿಗಳೆಲ್ಲ ಬಂದರೂ ದೇವ್ ಇನ್ನೂ ಯಾಕೆ ಬಂದಿಲ್ಲ ಅನ್ನೋದು ಕನ್ನಡತಿ ಫ್ಯಾನ್ಸ್ ಪ್ರಶ್ನೆ. ವಿಜಯ್ ಕೃಷ್ಣ (Vijay Krishna) ಅವರು ಡಾ ದೇವ್ ಪಾತ್ರವನ್ನು ಈ ಸೀರಿಯಲ್‌ನಲ್ಲಿ ನಿರ್ವಹಿಸಿದ್ದರು. ಕರ್ತವ್ಯ ನಿಷ್ಠ ಡಾಕ್ಟರ್ ಪಾತ್ರದಲ್ಲಿ ಅವರ ನಟನೆ(Acting)ಯನ್ನು ಜನ ಮೆಚ್ಚಿದ್ದರು. ಆದರೆ ಇತ್ತೀಚೆಗೆ ನಾಪತ್ತೆಯಾದದ್ದು ನೋಡಿ 'ಕಾಣೆಯಾಗಿದ್ದಾರೆ' ಅಂತ ಹೇಳ್ಕೊಂಡು ಓಡಾಡ್ತಿದ್ದಾರೆ. ಈ ಮದ್ವೆಯನ್ನೂ ದೇವ್ ಇಲ್ಲದೇ ನಡೆಸ್ತಾರೋ ಅಥವಾ ಮಧ್ಯೆ ಎಲ್ಲಾದರೂ ದೇವ್ ಸರ್ಪೈಸ್(Surprise) ಎಂಟ್ರಿ ಇರುತ್ತೋ ಕಾದು ನೋಡಬೇಕು.
ಡೀಸೆಂಟ್ ಆಗಿದ್ದ ಕನ್ನಡತಿಯಲ್ಲೂ ಶುರುವಾಗಿದೆ ರೊಮ್ಯಾನ್ಸ್ ಕಚಗುಳಿ